Tuesday, March 31, 2009

ಯಥಾ ರಾಜಾ ತಥಾ ಪ್ರಜಾ

ನಿನ್ನೆ ಒಬ್ಬ ಪರಿಚಯದವನತ್ರೆ  ಮಾತಾಡ್ತಾ ಇಪ್ಪಗ ಚುನಾವಣೆಯ ವಿಷಯ ಬಂತು. ಅವ,  ಎನ್ನತ್ರೆ ಪರಿಚಯ ಪತ್ರ ಇದ್ದು, ಆದರೆ ಎಲ್ಲರೂ ಸಮಾನವಾಗಿ ಭ್ರಷ್ಟರೇ ಆದ ಕಾರಣ ಆರಿಂಗೂ ಮತ ಹಾಕುತ್ತಿಲ್ಲೆ ಹೇಳಿ ಹೇಳಿದ. ಅವನ ಮಾತಿಲ್ಲಿ ತನ್ನ ನಿರ್ಧಾರದ ಬಗ್ಗೆ  ಅತಿಯಾದ ಹೆಮ್ಮೆ ಎದ್ದು ಕಾಣ್ತಾ ಇತ್ತು !  ಹೀಂಗೆ ಭ್ರಮ ನಿರಸನಗೊಂಡವು, ಅತಿ ಬುದ್ಧಿವಂತರು,  ವಿಚಿತ್ರ ತರ್ಕ ಹಾಗೂ ವಿತಂಡ ವಾದ ಮಾಡುವವರಲ್ಲಿ ಕೆಲವರಿಂಗಾದರೂ ಮುಸ್ಲಿಮರಾಗಿ ಹುಟ್ಟಲಾವುತ್ತೀತಿಲ್ಯಾ ಅಥವಾ ಈಗದರೂ ಮತಾಂತರ ಮಾಡಿಗೊಂಬಲಕ್ಕನ್ನೆ  ಹೇಳಿ ಅನ್ನಿಸುತ್ತು.  Friends of BJPಯವರ  ಸಭೆಲಿ ಒಬ್ಬೊಬ್ಬನೂ ಕನಿಷ್ಟ ೧೦೦ ಜನರ ಹುರಿದುಂಬಿಸೆಕ್ಕು ಹೇಳಿ ತೆಕ್ಕೊಂಡ ಪ್ರತಿಜ್ಞೆ ನೆಂಪಾಗಿ ಅವಂಗೆ ರಜ ಭಾಷಣ ಮಾಡಿದೆ. ಅವನ ಮನಸ್ಸು ಪೂರ್ತಿ ಪರಿವರ್ತನೆ ಆಯಿದೋ ಹೇಳಿ ಗೊಂತಾಯೆಕ್ಕಾದರೆ, ಇನ್ನೂ ಕೆಲವು ಸರ್ತಿ ದೂರವಾಣಿ ಕರೆ ಮಾಡೆಕ್ಕಕ್ಕು !
   
ಕೋಳಿ ಮೊದಲೊ ಅಥವಾ ಮೊಟ್ಟೆ ಮೊದಲೋ ಹೇಳುವ ನಮುನೆಯ ಸಮಸ್ಯೆ  ಬಂದಪ್ಪಗ  ಬೇರೆ ರೀತಿಲಿ ವಿಮರ್ಶೆ ಮಾಡೆಕ್ಕಾವುತ್ತು.  ಪ್ರಪಂಚದ ಕಣ್ಣಿಂಗೆ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಆದರೂ, ಇಲ್ಲಿಯ ಪ್ರತಿಯೊಂದು ವ್ಯವಸ್ಥೆಯೂ  ಹಾಸ್ಯಾಸ್ಪದವಾಗಿಪ್ಪಲೆ ಆರು ಕಾರಣ ? ಬೇರೆ ದೇಶಕ್ಕೆ ಹೋದ ಭಾರತೀಯರು  ಒಳ್ಳೆಯ ನಾಗರಿಕರಾಗಿ ಬದುಕ್ಕುತ್ತಾ ಇಪ್ಪದರ ನೋಡಿದರೆ, ಇಲ್ಲಿಯ  ನಿಜವಾದ ಕೊರತೆ ಸರಿಯಾದ ನಾಯಕತ್ವ ಇಲ್ಲದ್ದದು ಹೇಳಿ ಸ್ಪಷ್ಟ ಆವುತ್ತು. ಹಾಂಗಾರೆ, ಒಳ್ಳೆಯ ನಾಯಕನ ಗುಣಂಗೊ  ಎಂತದು ? ದೂರದರ್ಶಿತ್ವ ಮತ್ತು ನಿಸ್ಪೃಹತೆ ಹೇಳುವ ಎರಡು ಗುಣಂಗೊ ಸ್ವಂತವಾಗಿ ಇದ್ದರೆ, ಬಾಕಿ ಎಲ್ಲ ಬಾಡಿಗೆಗೆ ಸಿಕ್ಕುತ್ತು. ನಮ್ಮ ನಾಯಕರು ಹೇಳಿಸಿಗೊಂಬವಕ್ಕೆ ಈ ಎರಡು ಬಿಟ್ಟು ಬಾಕಿ ಎಲ್ಲಾ ಧಾರಾಳ ಇದ್ದು. ಗುಜರಾತ್ ಇಂದು ಮಾದರಿ ರಾಜ್ಯವಾಗಿ ಮುಂದೆ ಬಂದಿದ್ದರೆ, ಅದಕ್ಕೆ ಮೋದಿಯ ಆ ಎರಡು ಗುಣಂಗಳೇ ಕಾರಣ. ವ್ಯವಸ್ಥೆಯ ಮೇಲೆ ನಂಬಿಕೆ ಕಳಕ್ಕೊಂಡವಕ್ಕೂ ಅವನೇ ಸ್ಪೂರ್ತಿ ಮತ್ತು ಆಶಾದೀಪ.  

ಇದೇ ವಾದಲ್ಲಿ ಭಾಜಪವೇ ಯಾಕೆ ಹೇಳುವ ಪ್ರಶ್ನೆಗೆ ಉತ್ತರವೂ ಸಿಕ್ಕುತ್ತು. ಆರೆಸ್ಸೆಸ್ ನ ಹಿನ್ನೆಲೆಂದ ಬಂದವಕ್ಕೆ ಮಾತ್ರ ನಿಸ್ವಾರ್ಥ, ಸಮಾಜ ಸೇವೆಯ ದೃಷ್ಟಿಕೋಣ ಇಪ್ಪಲೆ ಸಾಧ್ಯ.  ತಮ್ಮದೇ ಆದ ವಿಶೇಷ ಸಿದ್ಧಾಂತದ   ಎಡಪಂಥೀಯ ರಾಜಕಾರಣ ಇದ್ದು. ಆದರೆ, ಅವರದ್ದು ಹಳಸಲು ತತ್ವ. ಇನ್ನು ಕಾಂಗ್ರೆಸಿಂದು ಎಡೆಬಿಡಂಗಿ ತತ್ವ.   ಧರ್ಮ ನಿರಪೇಕ್ಷತೆ ಹೇಳುವ ಘೋಷವಾಕ್ಯದೊಟ್ಟಿಂಗೆ,  ಅಲ್ಪಸಂಖ್ಯಾತರ ನಿರ್ಲಜ್ಜೆಂದ  ಓಲೈಕೆ  ಮಾಡುವ ಪ್ರಾಣಿಗೊ.   ಭಾಜಪದ ಪ್ರತಿಯೊಂದು ಸಿದ್ಧಾಂತವೂ ರಾಷ್ಟ್ರೀಯವಾದದ ಉತ್ಕಟ ಪ್ರಕಟಣೆ. 

ವಾಜಪೇಯಿ ಇಪ್ಪಗ ಮಾಡಿದ ಸಾಧನೆಗಳ ಸರಿಯಾದ ವಿಮರ್ಶೆ  ಆಯೆಕ್ಕಾದರೆ, ಅವನ ಪ್ರತಿ ನಿರ್ಧಾರವನ್ನೂ  ಎಷ್ಟು ನಮುನೆಯ ಪಕ್ಷಂಗಳ ಸಮತೋಲನವ ಕಾಪಾಡಿಗೊಂಡು ಮಾಡೆಕ್ಕಾಗಿತ್ತು  ಹೇಳುವ ಸತ್ಯವ ನೆಂಪು ಮಾಡಿಗೊಂಬದು ಒಳ್ಳೆದು.  ಅವಂಗೆ ೫ ವರ್ಷದ  ಪ್ರತಿದಿನವೂ ಮುಳ್ಳಿನ ಹಾಸಿಗೆಲಿ ಮನಿಗಿದ ಅನುಭವ ಆಗಿಕ್ಕು.   ಎಂತದೇ  ಮಾಡೆಕ್ಕಾದರೂ ಸ್ವಂತ ಬಹುಮತ ಬೇಕು. ಅಥವಾ,ಸರಕಾರಲ್ಲಿ ಶಿವಸೇನೆಯ ಹಾಂಗಿಪ್ಪ ಆಪ್ತರಾದ  ಮಿತ್ರಪಕ್ಷಂಗಳ ಸಹಭಾಗಿತ್ವ ಮಾತ್ರ ಇರೆಕು. ಹೀಂಗೆ ಆಯೆಕ್ಕಾದರೆ, ಜನರಲ್ಲಿಪ್ಪ ಸಿನಿಕತನ ಹೋಯೆಕ್ಕು. ಭಾಜಪದ ಹಿತೈಷಿಗೊ ಎಲ್ಲೋರೂ ಸಕಾರಾತ್ಮಕವಾಗಿಯೂ ಸಕ್ರಿಯರಾಗಿಯೂ ಇರೆಕು.  ಹೀಂಗೆ ಮಾಡಿದರೆ ಮಾಂತ್ರ, ನಮ್ಮ ಅತಿ ಹತ್ತಿರದ ಬಂಧುಗಳಾಗಿದ್ದು, ರಾಷ್ಟ್ರೀಯವಾದದ ಪ್ರತಿಪಾದನೆಗಾಗಿ ಪ್ರಾಣಕೊಟ್ಟ ಸಾಮೆತ್ತಡ್ಕ ಮಾವನ ಹಾಂಗಿಪ್ಪವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಹಾಂಗೆ ಅಕ್ಕು. 

- ಬಾಪಿ        

Monday, March 30, 2009

Re: ಜಾಗೋರೇ..

ನೀನು ಹೇಳುವ ಈ ಮೂಲಭೂತ ಪ್ರಶ್ನೆ ಮೇಲು ನೋಟಕ್ಕೆ ಸರಿ ಹೇಳಿ ಕಂಡರೂ, ಕಾರ್ಯರೂಪಕ್ಕೆ ತಪ್ಪದು ಅಷ್ಟೇ ಕಷ್ಟಸಾಧ್ಯ. ಅವರ ಇವರ ಬಗ್ಗೆ, ಅವು ಇವಕ್ಕೆ ಕೊಡುಸುವ ಬಗ್ಗೆ ನಾವು ಎಷ್ಟೇ ಮಾತನಾಡ್ಲೆ ಎಡೆ ಇದ್ದರೂ ಎಂತಕೆ ಆಯಿದಿಲ್ಲೆ, ಹೇಂಗೆ ಕಾರ್ಯರೂಪಕ್ಕೆ ತಪ್ಪಲಕ್ಕು ಹೇಳಿ ಆಲೋಚನೆ ಮಾಡುದು ಸೂಕ್ತ ಹೇಳಿ ಎನ್ನ ಅಭಿಪ್ರಾಯ.

೧. ಈ ಕಾರ್ಡು ಓಟು ಬಪ್ಪಗ ಮಾತ್ರ ನೆನಪ್ಪಾವ್ತಷ್ಟೇ.., ಮತ್ತೆ ಇಪ್ಪ ಸಮಯಲ್ಲಿ ಚುನಾವಣೆ ಸಮಿತಿ ವರಗುತ್ತು.
೨. ವರಗದ್ರೂ, ಎಷ್ಟು ಜನಕ್ಕೆ ಅವರದ್ದೇ ಆದ ಸ್ವಂತ ವಿಳಾಸ ಇದ್ದು?
೩. ಒಬ್ಬ ಪ್ರಜೆ ಆಗಿ ಅವನ ಸವಲತ್ತು ಅವಂಗೆ ಗೊಂತಿರೆಡೆದಾ?
೪. ಒಬ್ಬಂಗೆ ಎಷ್ಟು ಕಾರ್ಡ್ ಬೇಕು? ರೇಷನ್, ಪಾನ್, ವೋಟ್... ಇನ್ನೆಂತ..?

ಹೇಳಿದ ಹಾಂಗೆ ವಾಜಪೇಯಿ ಇಪ್ಪಗ ಇದರ ಬಗ್ಗೆ ಎಷ್ಟು ಕೆಲಸ ಆತು? ಯಾವುದಾದಾರೂ ತುಲನೆ ಇದ್ದಾ?

-ರಾಜಣ್ಣ

Saturday, March 28, 2009

ಜಾಗೋರೇ..

೬೦ ವರ್ಷಗಳಿಂದ ಸ್ವತಂತ್ರ ದೇಶವಾಗಿದ್ದುಕೊಂಡು ತನ್ನ ದೇಶದ ಪ್ರಜೆಗಳ ಒಂದು ಪಟ್ಟಿಯಾಗಲೀ, ಪ್ರಜೆಗೊಕ್ಕೆ ಒಂದು ಖಾಯಂ ಗುರುತಿನ ಚೀಟಿಯಾಗಲೀ ಇಲ್ಲದ್ದಿಪ್ಪ ಅಸಹ್ಯ,ಅನಾಗರಿಕ, ದಗಲ್ ಬಾಜಿ ಪ್ರಜಾಪ್ರಭುತ್ವಕ್ಕೆ ಭಾರತ ಹೇಳಿ ಹೆಸರು.  ತಲೆತಲಾಂತರಂದ ಈ ದೇಶಲ್ಲಿಪ್ಪವಕ್ಕೆ  ಸಾವಿರ ಬಗೆಯ,  ವಾಕರಿಕೆ ಬಪ್ಪಷ್ಟು ಕೊಳಕ್ಕು ಸರಕಾರಿ ಅರ್ಜಿ  ನಮೂನೆಗಳ ಭರ್ತಿ ಮಾಡಿದರೂ ವರ್ಷಗಟ್ಳೆ ಮತದಾರರ ಪಟ್ಟಿಲಿ ಹೆಸರು ಸೇರಿಸಿಗೊಂಬಲೆ ಎಡಿಯದ್ದೆ ಒದ್ದಾಡುವ ಪರಿಸ್ಥಿತಿ ಇದ್ದರೆ, ನಡುರಾತ್ರೆ ಬಾಂಗ್ಲಾದೇಶಂದ ಬೇಲಿನುಸುಳಿ ಬಂದವಕ್ಕೆ ಅವು ಮರುದಿನ ಉದಿಯಪ್ಪಗ ಎದ್ದು ಚಾಯ ಕುಡಿವಂದ ಮೊದಲೇ ಅವಿಪ್ಪ  ಕೊಳಚೆಪ್ರದೇಶಕ್ಕೆ  ಹುಡುಕ್ಕಿಗೊಂಡು ಹೋಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತ್ಯಾದಿ ಸಕಲ ಸವಲತ್ತುಗಳನ್ನೂ   ಕೊಡುದಲ್ಲದ್ದೆ, ಕಾಲು ಹಿಡುದು ನಮಸ್ಕಾರ ಮಾಡಿ ಅಲ್ಲಾಹುವಿನ ಆಶೀರ್ವಾದಕ್ಕೆ ಪಾತ್ರರಪ್ಪ  ಅಸಾಮಾನ್ಯ ಸಾಮಾಜಿಕ ಸೇವೆಯ ದೃಶ್ಯ ಭಾರತ ಬಿಟ್ಟು ಬೇರೆಲ್ಲಿ ನೋಡ್ಳೆ ಸಿಕ್ಕುಗು ?  ಇಂತ ಸೇವೆಯ ಸ್ವೀಕರಿಸುವ  ಬಾಂಗ್ಲಾದೇಶೀ ಅಕ್ರಮ ವಲಸಿಗರು  ಅದೆಂತ ಪುಣ್ಯ ಮಾಡಿರೆಕು !

ಹೀಂಗೆ ನುಸುಳಿ ಬಂದ "ನಿವಾಸಿ ಅ-ಭಾರತೀಯ"ರ ಸಂಖ್ಯೆ  ಈಗಾಗಲೇ ೨ ಕೋಟಿಯಷ್ಟಕ್ಕಡ.  ಗುಂಪಿನಲ್ಲಿ ಗೋವಿಂದ ಹೇಳಿ ನಮ್ಮೊಳಗೊಂದಾದ ಇವು ನಮ್ಮ ವ್ಯವಸ್ಥೆ ಮೇಲೆ ಎಷ್ಟು ಹೊರೆ ಹೇಳುದರ ವಿವರಿಸುದು ಕಷ್ಟ.  ಯಾವುದೇ ವಿದ್ಯಾಭ್ಯಾಸ, ಅರ್ಹತೆ  ಇಲ್ಲದ್ದ ಇವರ ಕೊಡುಗೆ ಆದರೂ ಎಂತದು ?   ಅಂದಂದಿನ ಊಟಕ್ಕೇ ಗತಿ ಇಲ್ಲದ್ದಿಪ್ಪಗ, ಒಂದು ಸಣ್ಣ ಆಮಿಷ ತೋರಿಸಿದರೂ ಭೂಗತದೊರೆಗಳ ಅಥವಾ ಭಯೋತ್ಪಾದಕರ ಸಹವರ್ತಿಗಳಾಗಿ ಸೇರಿಗೊಂಬಲೆ ಒಪ್ಪಿಗೊಂಗು.   "ಬಡವರಾದ ಮುಸ್ಲಿಮರು"  ಹೇಳುವ ಇವರ ಪರಿಚಯವೇ ಒಂದು ಸ್ಪೋಟಕ ವಸ್ತುವಿನ ಹಾಂಗೆ ಕಾಣ್ತು.  ಇನ್ನು,  ಈ ಕಾಟು ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು  ಇಪ್ಪಲ್ಲಿ ವರೆಗೆ ಹೀಂಗಿಪ್ಪವರ ದೇಶಂದ ಹೆರಹಾಕುದು ಅಸಾಧ್ಯ.

ಭಾರತೀಯ ಪ್ರಜೆಗೊಕ್ಕೆಲ್ಲಾ  ಖಾಯಂ ಗುರುತಿನ ಚೀಟಿ ಮತ್ತು ಬೇಲಿ ನುಗ್ಗಿ ಬಪ್ಪವರ  ಮೇಲೆ ಕಠಿಣ ಕ್ರಮಂಗಳ ಬಗ್ಗೆ ಅಡ್ವಾಣಿ  ಹೇಳಿಕೆ ಕೊಟ್ಟದು ಸ್ವಾಗತಾರ್ಹ. ನಮ್ಮ ನಿರ್ಧಾರಂಗೊ ಯಾವತ್ತೂ ನಿರ್ಣಾಯಕವಾಗಿರಲಿ.  ಯಾವುದೋ ಇಟಲಿ ದೇಶಲ್ಲಿ ತಿಂಬಲೆ ಗತಿ ಇಲ್ಲದ್ದೆ  ತಿರಿಗಿಗೊಂಡಿದ್ದು   ಇಲ್ಲಿಗೆ ಬಂದು ಅನಿರೀಕ್ಷಿತವಾಗಿ ದೊಡ್ಡ ರಾಣಿಯಾದ ವ್ಯಕ್ತಿಯ ಸೂತ್ರದ ಗೊಂಬೆಗಳ ಹಾಂಗೆ ವ್ಯವಹರಿಸುವ ಸ್ವಾಭಿಮಾನ-ಶೂನ್ಯ ಕಾಂಗ್ರೆಸಿಗರಿಂದ ಎಂತ ಅಪೇಕ್ಷೆ ಮಾಡ್ಳೆಡಿಗು ? ಇವು ೬೦ ವರ್ಷ ಮಾಡಿದ ಅನಾಹುತ ಸಾಕು.  ಜಾಗೋರೇ ಇಂಡಿಯಾ !!
-ಬಾಪಿ

Friday, March 27, 2009

ಯುಗಾದಿ

ನಿಮಗೆಲ್ಲ ತರಲಿ ಈ ಸಂವತ್ಸರ ವಿರೋಧಿ
ಸಂಪತ್ತು, ಆಯುರಾರೋಗ್ಯ,ನೆಮ್ಮದಿ
ಇದಾಗಲಿ ಬದಲಾವಣೆಯ ಯುಗಾದಿ
ಸುಗಮವಾಗಿಸಲಿ ಭಾಜಪದ ಹಾದಿ
ಅಡ್ವಾಣಿಯಾಗಲಿ ನಮ್ಮ ಪ್ರವಾದಿ
ಜೊತೆಜೊತೆಗಿರಲಿ ನರೇಂದ್ರ ಮೋದಿ
ಹಾಕಲಿ ಭವಿಷ್ಯದ ಭದ್ರ ಬುನಾದಿ
ಮತಚಲಾವಣೆಯೇ ಎಲ್ಲಕ್ಕೂ ನಾಂದಿ

Saturday, March 21, 2009

Friends of BJP

ಇಂದು  Friends of BJP ಯವು ಆಯೋಜಿಸಿದ ಚುನಾವಣಾ ಸಭೆಗೆ ಹೋಗಿತ್ತಿದ್ದೆ. ಈ ಸಂಸ್ಥೆ  Times of India ದವರ Lead India  campaignಲ್ಲಿ ಪ್ರಥಮ ಸ್ಥಾನ ಗೆದ್ದ   ಆರ್.ಕೆ.ಮಿಶ್ರಾ ಹೇಳುವವನ ಕಲ್ಪನೆಯ ಕೂಸು. ಇಂದು ಅವ ಭಾಜಪಕ್ಕೆ  ಅಧಿಕೃತವಾಗಿ ಸೇರಿದ.   ಇಂದಿನ ಸಭೆಗೆ ಅರುಣ್ ಜೇಟ್ಲಿಯೇ ಮೊದಲಾದ ಭಾಜಪದ ಘಟಾನುಘಟಿಗೊ ಬಂದಿತ್ತಿದ್ದವು. ಸಾವಿರಾರು ಸಂಖ್ಯೆಲಿ ಯುವಕರು ಬಂದು ಸೇರಿದ್ದು ನೋಡಿ  ಖುಷಿ ಆತು.  

Friends of BJPಯವು ಚುನಾವಣೆಂದ ಮೊದಲು ದೇಶದ ಎಲ್ಲಾ ಮುಖ್ಯ ಪಟ್ಟಣಂಗಳಲ್ಲಿಯೂ ಇಂತಹ ಸಭೆ ಆಯೋಜಿಸಿ ಸಾಮಾನ್ಯವಾಗಿ ರಾಜಕೀಯದ ವಿಷಯಲ್ಲಿ ನಿರ್ಲಿಪ್ತವಾಗಿಪ್ಪ ಯುವ ಮತದಾರರ ಬಡಿದೆಬ್ಬಿಸಿ (ಭಾಜಪಕ್ಕೆ) ಮತ ಚಲಾಯಿಸುವ ಪ್ರಜೆಗಳ ಆದ್ಯ ಕರ್ತವ್ಯದ ಬಗ್ಗೆ ನೆನಪಿಸುವ, ಪ್ರಚೋದಿಸುವ, ಹುರಿದುಂಬಿಸುವ ಕೆಲಸವ ಹಮ್ಮಿಗೊಂಡಿದವು.

ಕಾರ್ಯಕ್ರಮ ಲತಾ ಮಂಗೇಶ್ಕರ್ ಹಾಡಿದ "ಏ ಮೇರೆ ವತನ್ ಕೇ ಲೋಗೊ" ಭಕ್ತಿಗೀತೆಯ ಪ್ರಾರ್ಥನೆಂದ ಸುರು ಆಗಿ, ವಂದೇ ಮಾತರಂಲ್ಲಿ ಕೊನೆಗೊಂಡದು ರೋಮಾಂಚನದ ಅನುಭವ ಕೊಟ್ಟತ್ತು.   ಇವರ  ದೇಶಭಕ್ತಿಯ  ಘನ ಕಾರ್ಯ ಸಂಪೂರ್ಣ  ಯಶಸ್ವಿಯಾಗಲಿ ಹೇಳಿ ಹಾರೈಸುವೊ.

-ಬಾಪಿ                   

Thursday, March 19, 2009

ತತ್ವ-ನಿಷ್ಠೆ

ತತ್ವ, ನಿಷ್ಠೆ ಸಮಾಜದ ಎಲ್ಲ ವರ್ಗಂಗೊಕ್ಕೂ ಸಮಾನವಾಗಿ ಅನ್ವಯಿಸೆಕ್ಕಾದ ವಿಷಯ ಹೇಳಿ ಎನ್ನ ನಂಬಿಕೆ. ಜೀವನದ ಮೌಲ್ಯಂಗೊ ಕಾಲ ಕ್ರಮೇಣ ಕಮ್ಮಿ ಆವುತ್ತಾ ಬಂದು ಎಂತ ಮಾಡಿರೂ ಆವುತ್ತು ಹೇಳುವ ಭಾವನೆ ಜನರಲ್ಲಿ ಬಂದು ಹೋಯಿದು. ಇದು ವಿಷಾದನೀಯವೇ ಸರಿ. ವಿಪ್ರೋ / ಇನ್ಫೋಸಿಸ್ ಇತ್ಯಾದಿಯವಕ್ಕೂ ಸತ್ಯಂ, ರಿಲಯೆನ್ಸ್ ಹಾಂಗಿಪ್ಪವಕ್ಕೂ ವ್ಯತ್ಯಾಸ ಇಲ್ಲೆಯೋ ? ಆದರೆ ತಪ್ಪು-ಸರಿಗಳ ವಿವೇಚನೆಯ ಕ್ರಮ ಸಾವಿರ ವರ್ಷ ಮೊದಲು ಹೇಂಗಿತ್ತೋ ಈಗಳೂ ಹಾಂಗೆಯೇ ಇದ್ದು. ಒಳ್ಳೆಯವು ಕೆಟ್ಟವರ ಸಂಖ್ಯೆ ಮತ್ತು ಪ್ರಮಾಣ ಹೆಚ್ಚು- ಕಮ್ಮಿ ಆಗಿಪ್ಪಲೂ ಸಾಕು.
ಗಮನಿಸೆಕ್ಕಾದ ಸಂಗತಿ ಎಂತ ಹೇಳಿರೆ, ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವಗ ತತ್ವ-ನಿಷ್ಠೆಯ ವಿಷಯ ಬಾಯಿ ಬಿಟ್ಟು ಕೇಳದ್ದೆ ಇಪ್ಪಲೂ ಸಾಕು. ಪ್ರತಿ ಹೊಸ ವ್ಯಕ್ತಿಯ ಕೆಲಸಕ್ಕೆ ತೆಕ್ಕೊಂಬಗಳೂ ಅವನ ಚರಿತ್ರೆಯ ಗುಪ್ತವಾಗಿ ವಿಚಾರಿಸುವ ಕ್ರಮ ಇದ್ದು - ಸತ್ಯಂನ ಹಾಂಗಿಪ್ಪ ಕಂಪೆನಿಗಳಲ್ಲಿಯೂ ! ಕಂಪೆನಿ ಹೇಳುವ ನಿರ್ಜೀವ ವಸ್ತುವಿನ ಅಸ್ತಿತ್ವ, ಪರಿಚಯ, ಬೆಳವಣಿಗೆ ಅಪ್ಪದು ಅದರ ಗುರಿ, ನಿರ್ದೇಶಕರ ಕ್ಷಮತೆ, ಕೆಲಸಗಾರರ ಶ್ರಮಂಗಳಿಂದ. ವಿಪ್ರೊ ಕಂಪೆನಿಲಿ ಯಾವುದೇ ಗೋಲು-ಮಾಲು ಮಾಡಿರೆ ಸಹಿಸುತ್ತಿಲ್ಲೆ ಹೇಳುವ ಧ್ಯೇಯ ವಾಕ್ಯ ಎಲ್ಲೊರಿಂಗೂ ಸ್ಪಷ್ಟವಾಗಿ ಗೊಂತಿಪ್ಪ ಕಾರಣ, ಅಲ್ಲಿ ಅತ್ಯಂತ ಹೆಚ್ಚಿನ ಪಾರದರ್ಶಕ ವ್ಯವಸ್ಥೆ ಇದ್ದು. ಅಲ್ಲದ್ದೆ, ಆ ಕಂಪೆನಿಗೆ ಹಾಗೂ ಪ್ರೇಮ್ ಜಿಗೆ ಸಮಾಜಲ್ಲಿ ಸ್ಥಾನ ಇದ್ದು. ಇಷ್ಟು ಗೌರವ ಅಂಬಾನಿಗೊಕ್ಕೆ ಇಲ್ಲೆ ಏಕೆ ?

ಎನ್ನ ದೊಂಡೆ ಒಣಗಿದ ಕಾರಣ, ಸದ್ಯಕ್ಕೆ ಎನ್ನ ವಾದ ನಿಲ್ಸುತ್ತೆ ! ಮತ್ತು ಹೆರಾಣ ಕೋಣೆಲಿ ಗುರಿಕ್ಕಾರನ ಹಾಂಗೆ ಕಾಲಿನ ಮೇಲೆ ಕಾಲು ಹಾಕಿ ಕೂದುಗೊಂಡು ದೊಡ್ಡಸ್ವರಲ್ಲಿ "ಒಂದು ಚಾಯ" ಹೇಳಿಕ್ಕಿ ಮೆಲ್ಲಂಗೆ ಒಳ ಹೋಗಿ ಆನೇ ಮಾಡಿ ಕುಡಿತ್ತೆ !
-ಬಾಪಿ