ರಜ ಸಮಯ ಮದಲು ಹೀಂಗಿಪ್ಪ ಹೆಸರಿನ ಒಂದು ಸಿನೆಮಾ ಬಂದಿತ್ತು ಹೇಳಿ ಶುದ್ದಿ. ಅಲ್ಲಿಲ್ಲಿ ಕೇಳಿ ತಿಳುದ ಮಟ್ಟಿಂಗೆ "ಮುಸ್ಲಿಮರೆಲ್ಲೋರೂ ಆತಂಕವಾದಿಗೊ ಅಲ್ಲ" ಹೇಳುವ ಹಳಸಲು ವಾದವ ಮಂಡಿಸುವ ಪ್ರಯತ್ನ ಮಾಡಿದ ಹಾಂಗೆ ಕಾಣ್ತು. ಅಲ್ಲಾಹುವಿನ ಲೀಲೆಯೋ ಏನೋ, ಈ ಸಿನೆಮಾ ಬಿಡುಗಡೆ ಆದ ಶುಭ ಸಂದರ್ಭಲ್ಲಿಯೇ ಪೂನಾದ ಓಶೋ ಆಶ್ರಮದ ಹತ್ತರೆ ಇಪ್ಪ ಜರ್ಮನ್ ಬೇಕರಿಲಿ ಒಂದು ವಿಧ್ವಂಸಕ ಕೃತ್ಯ ನಡದತ್ತು. ಇದು ತಿರುಗ ಯಥಾಪ್ರಕಾರ, ಮುಸ್ಲಿಮ್ ಆತಂಕವಾದಿಗಳದ್ದೇ ದುಷ್ಕೃತ್ಯ ಹೇಳಿಯೂ ಈಗಾಗಲೇ ಗೊಂತಾಯಿದು.
ಅಮೇರಿಕಕ್ಕೆ ಹೋಗಿಪ್ಪಗ ಶೂ ಕಳಚ್ಚುಲೆ ಹೇಳಿ ತಪಾಸಣೆ ಮಾಡಿದ್ದಲ್ಲದ್ದೆ ಪ್ರತ್ಯೇಕ ವಿಚಾರಣೆಗೆ ಒಳಪಡಿಸಿದ್ದದು ಶಾರುಖ್ ಖಾನಿಂಗೆ ಭಾರೀ ಅವಮಾನದ ಸಂಗತಿ ಆಗಿ ಹೋತು ಹೇಳಿ ಕಾಣ್ತು. ಇದರ ಹಿಡ್ಕೊಂಡು ಅವನ ಆಪ್ತ ಸ್ನೇಹಿತರಲ್ಲಿ ಒಬ್ಬನಾದ ಕರಣ್ ಜೋಹರ್ ಹೇಳುವವ ದೊಡ್ಡ ಸಿನೆಮಾವನ್ನೇ ಮಾಡಿ ಬಿಟ್ಟ. ಸಾವಿರಾರು ಹಿಂದುಗೊ ಮುಸ್ಲಿಮರ ಉಗ್ರವಾದಂದಾಗಿ ಸತ್ತದು, ಲಕ್ಷಾಂತರ ಜನ ಹಿಂದೂಗೊ ಜಮ್ಮೂವಿಂದ ಜೀವಭಯಂದ ಓಡಿ ಹೋಗಿ ನಿರಾಶ್ರಿತರಾಗಿ ಬದುಕ್ಕೆಕ್ಕಾಗಿ ಬಂದದು ಇತ್ಯಾದಿಗಳ ಬಗ್ಗೆ ಇಷ್ಟರವರೆಗೆ ಯಾರಿಂಗೂ ಸಿನೆಮಾ ಮಾಡೆಕ್ಕು ಹೇಳಿ ಕಂಡಿದಿಲ್ಲೆ !
ಅಮೇರಿಕ ಮತ್ತು ಭಾರತ ದೇಶಂಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಧೋರಣೆಗಳ ತುಲನೆ ಮಾಡಿರೆ, ಈ ಗಂಭೀರ ವಿಷಯಕ್ಕೆ ಸಂಬಂಧಿಸಿ ನಮ್ಮ ಮನೋಸ್ಥಿತಿಲಿಪ್ಪ ಇಪ್ಪ ವ್ಯತ್ಯಾಸ ಸ್ಪಷ್ಟವಾಗಿ ಗೊಂತಾವುತ್ತು. ೯/೧೧ ಘಟನೆಯ ನಂತರ ಅಮೇರಿಕಲ್ಲಿ ಒಂದುದೇ ಹಾಂಗಿಪ್ಪ ದುಷ್ಕೃತ್ಯ ಮರುಕಳಿಸಿದ್ದಿಲ್ಲೆ. ಅದೇ ನಮ್ಮಲ್ಲಿ ೨೬/೧೧ ರ ಮೊದಲೂ, ಮತ್ತೆಯೂ ಯಥಾಪ್ರಕಾರ ಬಾಂಬುಗೊ ಹೊಟ್ಟುತ್ತಲೇ ಇದ್ದು. ಅಲ್ಲಿ ಸಂಶಯ ಇಪ್ಪವರ ನಿರ್ದಾಕ್ಷಿಣ್ಯವಾಗಿ ತಪಾಸಣೆ ಮಾಡ್ತವು. ಇಲ್ಲಿ ಭಯೊತ್ಪಾದನೆಗೆ ಸಂಬಂಧಿಸಿದ ವಿಷಯಲ್ಲಿ ನ್ಯಾಯಾಲಯಲ್ಲಿ ಶಿಕ್ಷೆ ಘೋಷಣೆ ಆದವರ ಮೇಲುದೇ - ಅವು ಮುಸ್ಲಿಮರಾಗಿದ್ದರೆ - ಯಾವ ಕಾರ್ಯಾಚರಣೆಯುದೇ ಆವುತ್ತಿಲ್ಲೆ. ಹೀಂಗಿಪ್ಪ ಘಟನೆಗೊ ಆದ ನಂತ್ರ ಇದರ ಮಾಡಿದವು ಮುಸ್ಲಿಮ್ ಉಗ್ರವಾದಿಗೊ ಹೇಳಿ ಗೊಂತಾದ ಮೇಲುದೇ, ಮುಸ್ಲಿಮ್ ಧರ್ಮ ಮತ್ತು ಆತಂಕವಾದಕ್ಕೆ ಯಾವುದೇ ಶಾಶ್ವತವಾದ ಕೊಂಡಿಯ ಗೆಂಟು ಬೀಳದ್ದ ಹಾಂಗೆ ಕೋಂಗ್ರೇಸು ಸರ್ಕಾರ ಮತ್ತು ಅವರ ಕೃಪಾಪೋಷಿತ ಮಾಧ್ಯಮದವು ಭಾರೀ ಜಾಗ್ರತೆ ಮಾಡ್ತವು. ನಮ್ಮ ದೇಶಲ್ಲಿ ಇಷ್ಟು ಸರ್ತಿ ಬಾಂಬು ಹೊಟ್ಟುಸಿದ ಮುಸ್ಲಿಮ್ ಉಗ್ರವಾದಿಗಳ ಹಿಡಿವ ಕೆಲಸಲ್ಲಿ ಆಗಲೀ, ಕಾಶ್ಮೀರಲ್ಲಿ ನುಸುಳಿ ಬಪ್ಪವರ ತಡವ ವಿಷಯಲ್ಲಿ ಆಗಲೀ ಕೇಂದ್ರ ಸರಕಾರಕ್ಕೆ ಯಾವ ಆಸಕ್ತಿಯುದೇ ಇಪ್ಪ ಹಾಂಗೆ ಕಾಣ್ತಿಲ್ಲೆ. ಸದ್ಯಕ್ಕೆ ಸರಕಾರದ ವತಿಂದ ಅತಿ ಅಂಬ್ರೆಪ್ಪಿಲ್ಲಿ ಆವುತ್ತಾ ಇಪ್ಪ ಕೆಲಸ ಎಂತ ಹೇಳಿರೆ, ಗುಜರಾತಿಲ್ಲಿ ಪೋಲೀಸರ ಗುಂಡಿಂಗೆ ಬಲಿಯಾಗಿ ಸತ್ತ ಸೋರಾಬುದ್ದೀನ್ ಹೇಳುವ ಬ್ಯಾರಿ ಭಾರೀ ಒಳ್ಳೆ ಜನ, ಅವನ ಮೋದಿ ಸರಕಾರದವು ಕೊಲೆ ಮಾಡಿಸಿದ್ದದು ಹೇಳುದಕ್ಕೆ ಸಾಕ್ಷಿ ತಯಾರು ಮಾಡುದು !
ಪ್ರಶ್ನಾತೀತ ರಾಷ್ಟ್ರ ಪ್ರೇಮ ಮತ್ತು ದೇಶದ ವಿಷಯಲ್ಲಿ ಸಂಪೂರ್ಣ ಬದ್ಧತೆ ಇಪ್ಪ ಅಬ್ದುಲ್ ಕಲಾಂ ನ ಹಾಂಗಿಪ್ಪ ಎಷ್ಟು ಜನ ಮುಸ್ಲಿಮರು ಎಣುಸಲೆ ಸಿಕ್ಕುಗು ? ಜನಸಂಖ್ಯೆಯ ೨೦%ದಷ್ಟು ಇಪ್ಪ ಮುಸ್ಲಿಮರಲ್ಲಿ ಎಷ್ಟು ಜನ ವರಮಾನ ತೆರಿಗೆ ಕಟ್ಟುತ್ತವು ? ಎಷ್ಟು ಜನ ಸೈನ್ಯಲ್ಲಿ ಸೇವೆ ಸಲ್ಲಿಸುತ್ತವು ? ಎಷ್ಟು ಜನ ಶಿಕ್ಷಕರಾಗಿ ಕೆಲಸ ಮಾಡ್ಳೆ ಹೋವುತ್ತವು ? ಮುಸ್ಲಿಮ್ ಜನಾಂಗದ ಹೆಚ್ಚಿನವು ಕೋಕದ ಕಚ್ಚೋಡ, ಮೀನು ವ್ಯಾಪಾರ, ಪಂಕ್ಚರ್ ಅಂಗಡಿ, ಹಳೇ ಪೇಪರ್-ಖಾಲಿ ಸೀಸ ಇತ್ಯಾದಿ ನಗದು ವ್ಯಾಪಾರಲ್ಲಿಯೇ ಇಪ್ಪವು. ಇದಕ್ಕೆ ಅವು ಅಶಿಕ್ಷಿತರಾಗಿಪ್ಪದಷ್ಟೇ ಕಾರಣ ಅಲ್ಲ. ಅವಕ್ಕುದೇ ಇಂತ ನೋಡ್ಳೆ "ಪಾಪದವ" ಹೇಳಿ ಕಾಣ್ಸಿಗೊಂಬ, ಆದರೆ ಹೆಚ್ಚು ಕಮಾಯಿ ಇಪ್ಪ, ತೆರಿಗೆ ಲೆಕ್ಕ ಹಾಕ್ಲೆಡಿಯದ್ದ ಹಾಂಗಿಪ್ಪ ಕೆಲಸಂಗಳೇ ಬೇಕು.
ಮುಸ್ಲಿಮ್ ಹುಡುಗಿಯರಿಂಗೆ ವಿದ್ಯಾಭ್ಯಾಸ ಖಡ್ಡಾಯ ಹೇಳಿ ಮಾಡಿದರೆ ಆ ಜನಾಂಗದ ಧೋರಣೆ ಕ್ರಮೇಣ ಬದಲಪ್ಪಲೂ ಸಾಕು. ಸುಶಿಕ್ಷಿತ ಮುಸ್ಲಿಮ್ ಮಹಿಳೆ ತನ್ನ ಕುಟುಂಬವನ್ನೂ, ಮುಂದಿನ ತಲೆಮಾರನ್ನೂ ಸರಿಯಾಗಿ ನಡೆಶುಗು. ಆದರೆ ಇದಕ್ಕೆ ಮುಸ್ಲಿಮರ ಧರ್ಮಗುರುಗಳ ಆಕ್ಷೇಪ ಬಕ್ಕು- ಜನರಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಾದಷ್ಟೂ ತಮ್ಮ ಕಾರುಬಾರು ಕಮ್ಮಿ ಅಕ್ಕು ಹೇಳುವ ಹೆದರಿಕೆಂದ ! ಹಾಂಗಾಗಿ ಸರಕಾರಕ್ಕೆ ಈ ಕೆಲಸವ ಭಾರೀ ಜಾಣತನಂದ ಮಾಡೆಕ್ಕಾಗಿ ಬಕ್ಕು. ಉದಾಹರಣೆಗೆ, ಪದವಿ ಹಂತದ ಪರೀಕ್ಷೆ ಮುಗುಶುವ ಮುಸ್ಲಿಮ್ ಹುಡುಗಿಯರಿಂಗೆ ಸರಕಾರದವು ಎಂತಾರು ಒಳ್ಳೆ ಮೊತ್ತದ ಬಹುಮಾನ ಘೋಷಣೆ ಮಾಡಿರೆ, ಸ್ವಪ್ರೇರಣೆಂದ ಹೆಚ್ಚು ಜನ ಉನ್ನತ ವಿದ್ಯಾಭ್ಯಾಸಕ್ಕೆ ಹೋಕು. ಕೋಂಗ್ರೇಸಿನವಕ್ಕೆ ೬೦ ವರ್ಷಲ್ಲಿ ಹೀಂಗಿಪ್ಪ ಸಮಾಜವ ಉದ್ಧಾರ ಮಾಡುವ ಕೆಲಸ ಮಾಡ್ಳೆ ಎಡಿಗಾಯಿದಿಲ್ಲೆ. ಇನ್ನುದೇ ಮಾಡುಗು ಹೇಳುವ ಆಶೆ ಖಂಡಿತಾ ಬೇಡ. ಭಾಜಪ ಅಧಿಕಾರಲ್ಲಿಪ್ಪ ರಾಜ್ಯಂಗಳಲ್ಲಿ ಆದರೂ ಇಂತಹ ದೂರಗಾಮಿ ಯೋಜನೆಗೊ ಜ್ಯಾರಿಗೆ ಬರಲಿ ಹೇಳಿ ಆಶಿಸುತ್ತೆ.
-ಬಾಪಿ