ಸ್ವಾತಂತ್ರ್ಯ ಬಂದಾತು ೬೦ ವರುಷ
ಜನಮಾನಸಲ್ಲಿಲ್ಲೇಕೆ ಯಾವ ಹರುಷ
ಸರ್ಕಾರ ಹೇಂಗಾತು ಖಾಲಿ ಖಜಾನೆ
ಮಂತ್ರಿಗೊಕ್ಕೆಂತಕೆ ದೊಡ್ಡ ಅರಮನೆ
ಜನಮಾನಸಲ್ಲಿಲ್ಲೇಕೆ ಯಾವ ಹರುಷ
ಸರ್ಕಾರ ಹೇಂಗಾತು ಖಾಲಿ ಖಜಾನೆ
ಮಂತ್ರಿಗೊಕ್ಕೆಂತಕೆ ದೊಡ್ಡ ಅರಮನೆ
ಪವಾರಿನ ಮರುಳು ದಿನಾ ಕ್ರಿಕೆಟ್ಟು
ಬೇರೆ ಕೆಲಸಕ್ಕೆ ಎಲ್ಲಿ ಪುರುಸೊತ್ತು
ಆತು ನೀರುಳ್ಳಿ ದಿನದಿನ ದುಬಾರಿ
ಪಾಪದವಕ್ಕಿದ್ದು ಅವರವರ ದಾರಿ
ಬೇರೆ ಕೆಲಸಕ್ಕೆ ಎಲ್ಲಿ ಪುರುಸೊತ್ತು
ಆತು ನೀರುಳ್ಳಿ ದಿನದಿನ ದುಬಾರಿ
ಪಾಪದವಕ್ಕಿದ್ದು ಅವರವರ ದಾರಿ
ಮಾಡೇ ಇಲ್ಲದ್ದ ಶಾಲೆಗಳೇ ಎಲ್ಲ
ಕಲಿಶುವವು ಆರು ದೇವರೇ ಬಲ್ಲ
ಪಾಸಪ್ಪಲೆ ಸಾಕು ೩೫ ಮಾರ್ಕು
ಆಫೀಸಿಲ್ಲೆಲ್ಲ ಮೀಸಲಾತಿ ಸರಕು
ಕಲಿಶುವವು ಆರು ದೇವರೇ ಬಲ್ಲ
ಪಾಸಪ್ಪಲೆ ಸಾಕು ೩೫ ಮಾರ್ಕು
ಆಫೀಸಿಲ್ಲೆಲ್ಲ ಮೀಸಲಾತಿ ಸರಕು
ಅಲ್ಪರ ತುಷ್ಟಿಗೆ ಸದಾ ಕಟಿಬದ್ಧ
ಹೇಳಿದವಡ ಹಿಂದು ಉಗ್ರವಾದ
ಎಲ್ಲೆಂದರಲ್ಲಿ ಹೊಟ್ಟುತ್ತು ಬಾಂಬು
ಬದುಕ್ಕಿ ಒಳುದರೆ ಹರ್ಕಟೆ ದಿಂಬು
ಹೇಳಿದವಡ ಹಿಂದು ಉಗ್ರವಾದ
ಎಲ್ಲೆಂದರಲ್ಲಿ ಹೊಟ್ಟುತ್ತು ಬಾಂಬು
ಬದುಕ್ಕಿ ಒಳುದರೆ ಹರ್ಕಟೆ ದಿಂಬು
ಖಂಡಿತ ರಾಹುಲ್ ಇನ್ನು ಪ್ರಧಾನಿ
ಭಾರತ ಆವುತ್ತಯ್ಯ ಚಿನ್ನದಾ ಗಣಿ
ಎಲ್ಲೋರ ಮನೆಲಿ ಮೊಬೈಲು ಟೀವಿ
ನೀರು ಬಾರದ್ರೆ ಇರಲೊಂದು ಬಾವಿ
ಭಾರತ ಆವುತ್ತಯ್ಯ ಚಿನ್ನದಾ ಗಣಿ
ಎಲ್ಲೋರ ಮನೆಲಿ ಮೊಬೈಲು ಟೀವಿ
ನೀರು ಬಾರದ್ರೆ ಇರಲೊಂದು ಬಾವಿ
-ಬಾಪಿ
No comments:
Post a Comment