ಎಂತ ಬೇಡಲಿ ದೇವ ಕಾವು ಶಾಸ್ತಾವು
ಸ್ವಾಭಿಮಾನದ ಬದುಕು ನರಳದ್ದೆ ಸಾವು
ಉದೆಕಾಲ ಏಳುವಗ ಇರಲಿ ಉತ್ಸಾಹ
ಸ್ಪೂರ್ತಿಯಾಗಲಿ ಜನರ ತುಂಬು ಸ್ನೇಹ
ಸ್ವಾಭಿಮಾನದ ಬದುಕು ನರಳದ್ದೆ ಸಾವು
ಉದೆಕಾಲ ಏಳುವಗ ಇರಲಿ ಉತ್ಸಾಹ
ಸ್ಪೂರ್ತಿಯಾಗಲಿ ಜನರ ತುಂಬು ಸ್ನೇಹ
ಖರ್ಚಿಂದ ಹೆಚ್ಚಿಗೆ ಇರಲಿ ವರಮಾನ
ದೊಡ್ದವರ ಎದುರು ಮಡುಗೆನ್ನ ಸಣ್ಣ
ದೊಡ್ದವರ ಎದುರು ಮಡುಗೆನ್ನ ಸಣ್ಣ
ಮಾಡುವ ಬಲಕ್ಕೆ ಸಾಧಿಸುವ ಛಲವು
ಸಮತೋಲನಲ್ಲಿರಲಿ ಸೋಲು ಗೆಲುವು
ಸಮತೋಲನಲ್ಲಿರಲಿ ಸೋಲು ಗೆಲುವು
ನಿನ್ನೆ ನಾಳೆಯ ಮಧ್ಯಲ್ಲಿಪ್ಪದೀ ಸುದಿನ
ಚಕ್ರ ತಿರುಗಿಸಲೆನ್ನ ಅನುಭವದ ಗಾಣ
ಗುರಿಯತ್ತ ಹೋಪಲೆ ಹೆದ್ದಾರಿ ವಿರಳ
ಸರಣಿ ವಿಘ್ನಂಗಳ ಮಾಡೆನಗೆ ಸರಳ
ಚಕ್ರ ತಿರುಗಿಸಲೆನ್ನ ಅನುಭವದ ಗಾಣ
ಗುರಿಯತ್ತ ಹೋಪಲೆ ಹೆದ್ದಾರಿ ವಿರಳ
ಸರಣಿ ವಿಘ್ನಂಗಳ ಮಾಡೆನಗೆ ಸರಳ
ಬತ್ತದ್ದೆ ಬದುಕಿರಲಿ ಜ್ಞಾನದ ಹಸಿವು
ಅನುದಿನದ ಕೆಲಸಕ್ಕೆ ಇಲ್ಲದ್ದೆ ದಣಿವು
ಅನುದಿನದ ಕೆಲಸಕ್ಕೆ ಇಲ್ಲದ್ದೆ ದಣಿವು
ಎಷ್ಟು ಬೇಡಲಿ ನಿನ್ನ ತಳದತ್ತು ಬಳಪ
ಕೈ ಎತ್ತಿ ಹರಸೆನ್ನ ಮದವೂರ ಗಣಪ
ಕೈ ಎತ್ತಿ ಹರಸೆನ್ನ ಮದವೂರ ಗಣಪ
-ಬಾಪಿ
No comments:
Post a Comment