ಸಾವಿರದೊಂಬೈನೂರರುವತ್ಮೂರು
ಹೇಳೀ ಇಸವಿಲಿ ಹುಟ್ಟಿದ್ದ್ಯಾರ್ಯಾರು ?
ಇವರೆಲ್ಲ ಸೇರಿಸಿರೆ ಅಕ್ಕಯ್ಯ ದೋಸ್ತಿ
ಸಮಾನವ್ಯಸನಿಗೊ ಮಾಡ್ಳಕ್ಕು ಕುಸ್ತಿ
ಹೇಳೀ ಇಸವಿಲಿ ಹುಟ್ಟಿದ್ದ್ಯಾರ್ಯಾರು ?
ಇವರೆಲ್ಲ ಸೇರಿಸಿರೆ ಅಕ್ಕಯ್ಯ ದೋಸ್ತಿ
ಸಮಾನವ್ಯಸನಿಗೊ ಮಾಡ್ಳಕ್ಕು ಕುಸ್ತಿ
ವರ್ಷ ಇಷ್ಟಾತನ್ನೆ, ಮಾಡಿದ್ದು ಎಂತ ?
ದೇವರಾಣೆಗು ಹೇಳ್ತೆ ಗೊಂತಿಲ್ಲೆ ಆತ
ಹುಟ್ಟು-ಸಾವು ನಡುವೆ ಬದುಕಿನ ಓಟ
ಕಲಿತ್ತಾ ಹೋಪದು ದಿನದಿನವು ಪಾಠ
ದೇವರಾಣೆಗು ಹೇಳ್ತೆ ಗೊಂತಿಲ್ಲೆ ಆತ
ಹುಟ್ಟು-ಸಾವು ನಡುವೆ ಬದುಕಿನ ಓಟ
ಕಲಿತ್ತಾ ಹೋಪದು ದಿನದಿನವು ಪಾಠ
ಕೊಟ್ಟದು ದೇವರು ನೂರಷ್ಟೆ ವರುಷ
ಮಾಡ್ತರೆ ಇದ್ದನ್ನೆ ಎಷ್ಟೊಂದು ಕೆಲಸ
ಕಾರ್ಯವೆಲ್ಲದರ ಸುರುವಿಲ್ಲಿ ಕನಸು
ಕೈಗೂಡಿ ಬಂದರೆ ಅದೆಷ್ಟು ಸೊಗಸು
ಮಾಡ್ತರೆ ಇದ್ದನ್ನೆ ಎಷ್ಟೊಂದು ಕೆಲಸ
ಕಾರ್ಯವೆಲ್ಲದರ ಸುರುವಿಲ್ಲಿ ಕನಸು
ಕೈಗೂಡಿ ಬಂದರೆ ಅದೆಷ್ಟು ಸೊಗಸು
ದೊಡ್ಡವು ಹೇಳಿದ್ದು ಮನೆಕಟ್ಟಿ ನೋಡು
ಶ್ರೀಗಂಧದ ಊರಿಲ್ಲಿ ಬಿಡಾರ ಹೂಡು
ಎಂದಿಂಗೂ ಇರಲಿ ಸುಜನ ಸಹವಾಸ
ಅನುಭವಿಸಿ ನೋಡು ಸಂಸಾರ ಸರಸ
ಶ್ರೀಗಂಧದ ಊರಿಲ್ಲಿ ಬಿಡಾರ ಹೂಡು
ಎಂದಿಂಗೂ ಇರಲಿ ಸುಜನ ಸಹವಾಸ
ಅನುಭವಿಸಿ ನೋಡು ಸಂಸಾರ ಸರಸ
ಬದುಕು ಗೊಂತಿದ್ದನ್ನೆ ಜಟಕದಾ ಬಂಡಿ
ತಲೆ ತಲೆಮಾರಿನ ಸೇರಿಸುವಾ ಕೊಂಡಿ
ಮಾಡುತ್ತೆ ಪ್ರಣಾಮ ಕೇಚಜ್ಜ ಭಾಗೋತ
ಮಡುಗುತ್ತೆ ಸಮೀರನ ಕೈಲೆನ್ನ ಕಡತ
ತಲೆ ತಲೆಮಾರಿನ ಸೇರಿಸುವಾ ಕೊಂಡಿ
ಮಾಡುತ್ತೆ ಪ್ರಣಾಮ ಕೇಚಜ್ಜ ಭಾಗೋತ
ಮಡುಗುತ್ತೆ ಸಮೀರನ ಕೈಲೆನ್ನ ಕಡತ
-ಬಾಪಿ
No comments:
Post a Comment