(...ಮುಂದುವರುದ್ದು)..
೩. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೬೨ ವರ್ಷ ಆತು. ಇಷ್ಟೇ ಕಾಲಾವಧಿಲಿ ೨ನೇ ಜಾಗತಿಕ ಯುದ್ಧಲ್ಲಿ ಸಂಪೂರ್ಣ ಸೋತು ಸುಣ್ಣ ಆಗಿತ್ತ ದಯನೀಯ ಪರಿಸ್ಥಿತಿಂದ ಜರ್ಮನಿ, ಜಪಾನಿನ ಹಾಂಗಿಪ್ಪವು ತಮ್ಮ ದೇಶಂಗಳ ಸಂಪೂರ್ಣ ಪುನರ್ನಿಮಾಣ ಮಾಡಿ ತೋರಿಸಿದವು. ಆದರೆ, ನಮ್ಮ ದೇಶಲ್ಲಿ ಇನ್ನೂ ಏಕೆ ಇಷ್ಟು ಬಡತನ ಇದ್ದು ? ಎಂತಕೆ ಇಷ್ಟು ದೊಡ್ಡ ಪ್ರಮಾಣದ ಅನಕ್ಷರತೆ ಇದ್ದು ? ಭಾರತೀಯರು ಹೇಳಿರೆ ಭ್ರಷ್ಟಾಚಾರ, ಅದಕ್ಷತೆಗಳ ಅಪರಾವತಾರ ಹೇಳಿ ಬೇರೆ ದೇಶದವರಿಂದ ಅಪಹಾಸ್ಯ ಮಾಡಿಸಿಗೊಂಬಷ್ಟು ನಮ್ಮ ಸಾಮಾಜಿಕ ಅವನತಿ ಹೇಂಗಾತು ? ನರೇಂದ್ರ ಮೋದಿಗೆ ಕೇವಲ ೫ ವರ್ಷಲ್ಲಿ ಗುಜರಾತಿನ ನಂಬರ್ ೧ ಸ್ಥಾನಕ್ಕೆ ತೆಕ್ಕೊಂಡು ಹೋಪಲೆ ಎಡಿಗಾದಿಪ್ಪಗ, ಸ್ವಾತಂತ್ರ್ಯಾನಂತರ ೫೦ ವರ್ಷದಷ್ಟು ಕಾಲವೂ ಕೇಂದ್ರಲ್ಲಿ ಮತ್ತು ವಿವಿಧ ಪ್ರಮುಖ ರಾಜ್ಯಂಗಳಲ್ಲಿ ಆಢಳಿತ ಮಾಡಿಗೊಂಡಿತ್ತ ಕೋಂಗ್ರೇಸಿನ ಸಾಧನೆ ಎಂತದು ? .ಈ ೫೦ ವರ್ಷಂಗಳಲ್ಲಿ ನಮ್ಮ ದೇಶದ ಎರಡು ತಲೆಮಾರಿನವು ತಮ್ಮ ಅಮೂಲ್ಯ ಜೀವನವ ನರಕ್ಕ ಬಂದು ಅಂಧಕಾರಲ್ಲಿ ಕಳೆವ ಹಾಂಗಾದ್ದಕ್ಕೆ ಆರು ಹೊಣೆ ? ಈ ಅದಕ್ಷ ಮತ್ತು ದುರಾಢಳಿತದ ನೈತಿಕ ಜವಾಬ್ದಾರಿಯ ಕೋಂಗ್ರೇಸು ಪಕ್ಷಕ್ಕಲ್ಲದ್ದೆ ಇನ್ಯಾರಿಂಗೆ ವಹಿಸೆಕ್ಕು ?
೪. ಪ್ರಪಂಚದ ಎಲ್ಲಾ ದೇಶಂಗಳಲ್ಲಿಯೂ ಉನ್ನತ ರಾಜನೈತಿಕ ಹುದ್ದೆಗೊ ಆಯಾ ದೇಶಂಗಳಲ್ಲಿ ಜನಿಸಿದ ಮೂಲ ನಾಗರಿಕರಿಂಗೆ ಮಾತ್ರ ಮೀಸಲಾಗಿಪ್ಪದು ಸಾಮಾನ್ಯ ವಿಷಯ. ಯಾವಗಾಣ ಹಾಂಗೆ, ಭಾರತ ಮಾಂತ್ರ ಇದಕ್ಕೆ ಅಪವಾದ ! ಎಷ್ಟಾದರೂ ಅತಿಥಿ ದೇವೋ ಭವ ಹೇಳುವ ನಮ್ಮ ಸಂಸ್ಕೃತಿಯ ಧ್ಯೇಯ ವಾಕ್ಯವ ಪಾಲಿಸದ್ದೆ ಇಪ್ಪದು ಹೇಂಗೆ ? ಇದು ಆರ ಬಗ್ಗೆ ಹೇಳುಲೆ ಮಾಡ್ತಾ ಇಪ್ಪ ಪೀಠಿಕೆ ಹೇಳಿ ಇರುಳು ಒರಕ್ಕಿಂದ ಎಬ್ಬಿಸಿ ಕೇಳಿರೂ ಆರು ಬೇಕಾರೂ ಹೇಳುಗು. ಸೋನಿಯಾ ಗಾಂಧಿ ಕೈಗೆ ಬಂದ ಪ್ರಧಾನ ಮಂತ್ರಿ ಹುದ್ದೆಯ ತಿರಸ್ಕರಿಸಿದ್ದೆ ಹೇಳಿ ಮೇಲ್ನೋಟಕ್ಕೆ ತಪ್ಪಿಸಿಗೊಂಬಲಕ್ಕು. ಆದರೆ, ಕೋಂಗ್ರೇಸಿಲ್ಲಿ ಮತ್ತು UPAಲಿ ನಿರ್ಧಾರ ತೆಕ್ಕೊಂಬದು ಆರು ಹೇಳುದು ಕುಂಙಿ ಮಕ್ಕೊಗೂ ಗೊಂತಿಪ್ಪ ವಿಷಯ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಇಷ್ಟು ಮುಖ್ಯ ಸ್ಥಾನವ ವಹಿಸಿಗೊಂಬಲೆ ಸೋನಿಯಾ ಗಾಂಧಿಯ ಯೋಗ್ಯತೆ ಎಂತದು ? ತನ್ನ ಮೂರ್ಖತನದ ನಿರ್ಧಾರಂಗಳಿಂದ ಸೃಷ್ಟಿಯಾದ ಸಮಸ್ಯೆಗಳ ಫಲವಾಗಿ ಹೊಟ್ಟಿದ ಬಾಂಬಿಂಗೆ ಬಲಿಯಾದ ಗೆಂಡನ ವಿಧವೆ ಆಗಿಪ್ಪದೊಂದೇ ದೊಡ್ಡ ಅರ್ಹತೆಯೋ ? ಅಥವಾ ಸ್ವಿಝರ್ಲ್ಯಾಂಡಿಲ್ಲಿ ಹುಗ್ಗಿಸಿ ಮಡುಗಿದ ಕಪ್ಪು ಹಣ ಇಪ್ಪ ಪೆಟ್ಟಿಗೆಯ ಬೀಗದ ಕೈ ಇದರತ್ರೆ ಇಪ್ಪ ಕಾರಣವೋ ? ಮದುವೆ ಆಗಿ ಎಷ್ಟೋ ವರ್ಷ ವರೆಗೂ ಭಾರತದ ಪೌರತ್ವವನ್ನೇ ತೆಕ್ಕೊಳದ್ದೆ ಇತ್ತ ಈ ವ್ಯಕ್ತಿಯ ದೇಶ ನಿಷ್ಠೆ ಎಂತದು ? ಇವರ ಕುಟುಂಬಕ್ಕೂ ಇಟೆಲಿಯ ಕೋತ್ರೋಕಿ ಹೇಳುವ ಕುಖ್ಯಾತ ಮಧ್ಯವರ್ತಿಗೂ ಇಪ್ಪ ಸಂಬಂಧ ಎಂತದು ? ಎಲ್ಲಾ ವಿಷಯಂಗಳಲ್ಲಿಯೂ ಜಾಣ ಮೌನ, ಗೌಪ್ಯತೆ ಮತ್ತು ಸಂಶಯಾತ್ಮಕ ನಡವಳಿಕೆಯೇ ಚಾಳಿ ಆಗಿಪ್ಪ ಕೋಂಗ್ರೇಸಿನ ಸದ್ಯದ ಅಧ್ಯಕ್ಷೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬಪ್ಪದಾದರೂ ಹೇಂಗೆ ?
(ಇನ್ನೂ ಇದ್ದು...) - ಬಾಪಿ
No comments:
Post a Comment