ರಾಜಕಾರಣ ಹೇಳುದು ಸಮಾಜಸೇವೆ ಮಾಡ್ಳಿಪ್ಪ ಕ್ಷೇತ್ರ ಹೇಳುವ ಕಾಲ ಒಂದಿತ್ತು ಹೇಳುದರ ನವಗೆ ಕೇಳಿ ಗೊಂತಿಕ್ಕು. ನಮ್ಮ ಕಾಲಕ್ಕಪ್ಪಗ ರಾಜಕೀಯ ಒಂದು ದಂಧೆಯಾಗಿ ಬದಲಾಯಿದು. ಯಾಕೆ ಹೀಂಗಾತು ಹೇಳುದರ ಗಹನವಾಗಿ ವಿಮರ್ಶೆ ಮಾಡುವ ಅಗತ್ಯ ಇದ್ದು. ನಾವೇ ಚುನಾವಣೆಲಿ ಒಂದು ಕೈ ನೋಡುವೋ ಹೇಳಿ ಸ್ಪರ್ಧಿಸಿ ಪ್ರಯತ್ನ ಮಾಡ್ಳುದೇ ಅಕ್ಕು. ಆದರೆ, ಇದು ತುಂಬಾ ದೀರ್ಘ ಪಯಣ ಮತ್ತು ಕಠಿಣ ಹಾದಿ. ಹಾಂಗಾಗಿ, ಪರಿಸ್ಥಿತಿಯ ಬದಲಾಯಿಸುವ ಹಂಬಲ ಇದ್ದರೆ, ಸುಲಭ ವಿಧಾನ ಹೇಳಿರೆ ಚುನಾವಣೆಲಿ ತಪ್ಪದ್ದೆ ಮತ ಹಾಕುದು. ಇಷ್ಟು ಪರ್ಯಾಯಂಗೊ ಇಪ್ಪಗ, ಯಾವ ಪಕ್ಷವ ಬೆಂಬಲಿಸುದು ಹೇಳುವ ಪ್ರಶ್ನೆ ಸ್ವಾಭಾವಿಕ. ಇಂದ್ರಾಣ ಪರಿಸ್ಥಿತಿಲಿ ಪೂರ್ಣ ಪ್ರಮಾಣದ ಆದರ್ಶವ ಪ್ರತಿಪಾದಿಸುವ ಪಕ್ಷ ಆಗಲಿ, ಅಭ್ಯರ್ಥಿ ಆಗಲೀ ಸಿಕ್ಕುದು ಕಷ್ಟ. ಮತ್ತೆ, ಬದಲಾದ ಜಾಗತಿಕ ವ್ಯವಸ್ಥೆಲಿ ಪಕ್ಷಂಗಳ ಮಧ್ಯೆ ಇಪ್ಪ ಸೈದ್ಧಾಂತಿಕ ವ್ಯತ್ಯಾಸ (ಬಹು ಮುಖ್ಯವಾದ ಆರ್ಥವ್ಯವಸ್ಥೆಗೆ ಸಂಬಂಧಿಸಿದ) ಕಮ್ಮಿ ಆವುತ್ತಾ ಇದ್ದು. ಹಾಂಗಾರೆ, ಹೆಚ್ಚು ಸರ್ತಿಯೂ "ಕುರುಡಂದ ಕೋಸು ಕಣ್ಣ ಅಕ್ಕು" ಹೇಳುವ ಗಾದೆಯ ಮೊರೆ ಹೋಯೆಕ್ಕಾವುತ್ತು. ಆದರುದೇ ಕೋಂಗ್ರೇಸು ಪಕ್ಷ ಎಷ್ಟಕ್ಕೂ ಅಪಥ್ಯ ಹೇಳುವ ಮನಃಸ್ಥಿತಿಯ ಯಾಕೋ ಬದಲಾಯಿಸುಲೆ ಎಡಿತ್ತೇ ಇಲ್ಲೆ. ಇದಕ್ಕೆ ಕಾರಣಂಗಳ ಹುಡುಕ್ಕಿ ವಿವರಿಸದ್ರೆ ಪೂರ್ವಾಗ್ರಹದ ಚಿಂತನೆ ಹೇಳಿ ಕಾಂಗು. ಎನ್ನ ತಲೆಮಾರಿನವು ವಿದ್ಯಾರ್ಥಿ ಜೀವನಲ್ಲಿಪ್ಪಗಾಣ ಸಮಕಾಲೀನ ಕೋಂಗ್ರೇಸಿನ ಚರಿತ್ರೆಯ ಭೂತದ ಛಾಯೆ ಮನಸ್ಸಿನ ಮೇಲೆ ಗಾಢವಾಗಿಪ್ಪದು ಒಂದು ಬಹು ಮುಖ್ಯ ವಿಷಯ. ಈಗ, ಈ ಅಪಥ್ಯಕ್ಕೆ ಕಾರಣವಾದ ಸಂಗತಿಗಳ ಒಂದೊಂದಾಗಿ ನೋಡುವೋ.
೧ ಕೋಂಗ್ರೇಸು ಹೇಳುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಹಾಕಿದ ಒಂದು ಸಂಸ್ಥೆಯ ಹೆಸರು. ಗಾಂಧೀಜಿಯ ನೇತೃತ್ವಲ್ಲಿ ಇದು ಒಂದು ಜನಾಂದೋಲನವಾಗಿ, ಹೋರಾಟದ ಕೇಂದ್ರ ಬಿಂದುವಾಗಿ ರೂಪುಗೊಂಡತ್ತು. ಉದ್ದೇಶ ಸಾಧನೆ ಆದ ಮೇಲೆ ಈ ಸಂಸ್ಥೆಯ ವಿಸರ್ಜಿಸಿದವಡ. ಸ್ವಾತಂತ್ರ್ಯಾನಂತರ ಗಾಂಧೀಜಿಯೇ ಮೊದಲಾದವು ನಿವೃತ್ತರಾದರೆ, ನೆಹರೂ ಹಾಂಗಿಪ್ಪ ಸುಮಾರು ಜನ ನವಭಾರತದ ರಾಜಕಾರಣಲ್ಲಿ ಸಕ್ರಿಯರಾದವು. ಕೋಂಗ್ರೇಸು ಹೇಳುವ ಹೆಸರಿಲ್ಲಿ ಒಂದು ರಾಜಕೀಯ ಪಕ್ಷ ಮುಂದುವರಿಕ್ಕೊಂಡು ಬಂತು.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಂದ ರಾಜಕಾರಣಿಗಳಾದ ಜನಂಗೊ ಜೀವಲ್ಲಿ ಇಪ್ಪವರೆಗೆ ಕೋಂಗ್ರೇಸು ಪಕ್ಷ ಆದರ್ಶ, ಸಿದ್ಧಾಂತ, ರಾಷ್ಟ್ರಪ್ರೇಮ ಇತ್ಯಾದಿಗಳ ಎತ್ತಿಹಿಡುದ ಹೆಗ್ಗಳಿಕೆ ಪಡಕ್ಕೊಂಡಿತ್ತು. ಆದರೆ, ಸದ್ಯಕ್ಕೆ ಈ ಪಕ್ಷ ಇದರ ಪೂರ್ವಾಶ್ರಮದ ಲಕ್ಷಣಂಗೊಕ್ಕೆ ಯಾವುದೇ ಸಾಮ್ಯ ಇಲ್ಲದ್ದ ಒಂದು ಸ್ವಾರ್ಥಿಗಳ ಗುಂಪಾಗಿ ಕಾಣ್ತು. ವಿಶೇಷತಃ, ಇದು ಇಂದಿರಾ ಗಾಂಧಿಯ ಆಗಮನದ ನಂತರ ಆದ ಪರಿವರ್ತನೆ. ಯಾವ ಸ್ವಾತಂತ್ರ್ಯಕ್ಕಾಗಿ ಹಳೆ ತಲೆಮಾರಿನವು ಹೋರಾಟ ಮಾಡಿದವೋ, ಅದೇ ಅಮೂಲ್ಯ ಸ್ವಾತಂತ್ರ್ಯವ ಪ್ರಜೆಗಳಿಂಗೆ ಇಲ್ಲದ್ದ ಹಾಂಗೆ ಮಾಡಿದ ತುರ್ತು ಪರಿಸ್ಥಿತಿಯ ಕರಾಳ ಶಾಸನವ ದೇಶದ ಮೇಲೆ ವಿಧಿಸಿದ ಕ್ರೂರಿಗಳ ಪಕ್ಷ ಇಂದ್ರಾಣ ಕೋಂಗ್ರೇಸು.
೨.೦ ಈ ಪಕ್ಷ ಕೊಂಗ್ರೇಸು (ಐ) ಹೇಳಿ ಪುನರ್ನಾಮಕರಣಗೊಂಡದು ಅತ್ಯಂತ ಹಾಸ್ಯಾಸ್ಪದ ವಿಷಯ. ಈ ಬೆಳವಣಿಗೆಯ ಇಂದಿರಾ ಗಾಂಧಿ ಹೇಳುವ ದುಷ್ಟ ಮಹಿಳೆಯ ದುರ್ಬುದ್ಧಿಯ, ದುರಹಂಕಾರದ ಸಂಕೇತವಾಗಿ ಮತ್ತು ಸಾವಿರಾರು ಜನ ನಿಃಸ್ವಾರ್ಥಿಗೊ ಕಟ್ಟಿಬೆಳೆಶಿದ ಪಕ್ಷವ ತನ್ನ ಅಪ್ಪನ ಮನೆಯ ಆಸ್ತಿಯೋ ಹೇಳುವ ಹಾಂಗೆ ಸರ್ವಾಧಿಕಾರಿ ಧೋರಣೆಲಿ ನಡೆಶಿಗೊಂಡ ಪ್ರವೃತ್ತಿಯ ಪ್ರತೀಕವಾಗಿ ಜನ ನೆಂಪು ಮಾಡಿಗೊಳ್ತವು. ನೆಹರೂವಿನ ವಂಶದ ನಾಲ್ಕನೇ ತಲೆಮಾರಿನವರ ವಂಶಪಾರಂಪರ್ಯದ ಆಢಳಿತ ನಡೆತ್ತಾ ಇಪ್ಪ ಸದ್ಯದ ಪರಿಸ್ಥಿತಿಲಿ, ಪಕ್ಷದ ಹೆಸರಿನ ಇಟೆಲಿಯ ಹೊಸ ನೆಂಟಸ್ತನದ ಕೊಡುಗೆಯುದೇ ನೆಂಪು ಉಳಿವ ಹಾಂಗೆ ಇನ್ನೊಂದು ಸರ್ತಿ ಬದಲಿಸಿರೆ ಸಮರ್ಪಕ ಅಕ್ಕೋ ಹೇಳುವ ಆಲೋಚನೆ ಬತ್ತಾ ಇದ್ದು. ಹಾಂಗಾರೆ, "ಐ" ಬದಲು "ವಿ" ಹೇಳಿ (we ಹೇಳಿರೆ ಎಂಗೊಗೆ ಮಾತ್ರ ಸೇರಿದ್ದು ಹೇಳುವ ಅರ್ಥಲ್ಲಿ) ಬದಲಿಸಿದರೆ ಸರಿ ಅಕ್ಕೋ ?
(ಇನ್ನೂ ಇದ್ದು...) - ಬಾಪಿ
No comments:
Post a Comment