(...ಮುಂದುವರುದ್ದು)..
೫. ಶಾಲೆಯ ಸಮಾಜ ಪಾಠಲ್ಲಿ ನಮ್ಮ ಸಂವಿಧಾನದ ಬಗ್ಗೆ ಕಲಿವಗ ಜಾತ್ಯತೀತ ಹೇಳುವ ಶಬ್ದ ಇತ್ತದು ನೆಂಪಿದ್ದು. ಅಂಬಗ, ಈ ಶಬ್ದ ಯಣ್ ಸಂಧಿಗೆ ಒಂದು ಒಳ್ಳೆಯ ಉದಾಹರಣೆ ಹೇಳಿ ಗ್ರೇಶಿಗೊಂಡಿತ್ತದಷ್ಟೇ ಹೊರತು, ಕೋಂಗೇಸಿನವಕ್ಕೆ (ಮತ್ತೆ ದೇವೇಗೌಡನ ಹಾಂಗಿಪ್ಪವಕ್ಕೂ) ಉಪಯೋಗ ಅಪ್ಪಷ್ಟು ದೊಡ್ಡ ಅರ್ಥವ್ಯಾಪ್ತಿ ಇದಕ್ಕೆ ಇದ್ದು ಹೇಳುವ ಕಲ್ಪನೆಯೇ ಬಂದಿತ್ತಿಲ್ಲೆ ! ಈ ಶಬ್ದದ ವ್ಯಾಖ್ಯಾನ ನೋಡಿರೆ, ಜಾತಿಗಳ ಮೀರಿದ ನಡವಳಿಕೆ ಹೇಳುವ ಅರ್ಥ ಇಪ್ಪದು ಗೊಂತಾವುತ್ತು. ಇಂದ್ರಾಣ ಕೋಂಗ್ರೇಸಿನ ಹಿಂದೂ ರಾಜಕಾರಣಿಗೊ ಈ ಅರ್ಥವ ಚಾಚೂ ತಪ್ಪದ್ದೆ ತಮ್ಮ ಜೀವನಲ್ಲಿ ಅನುಷ್ಠಾನ ಮಾಡ್ತಾ ಇಪ್ಪದರ ಕಂಡು ಇವರ ಬೋದಾಳತನದ ಬಗ್ಗೆ ಕನಿಕರ ಹುಟ್ಟುತ್ತು. ಇವೆಲ್ಲಾ ತಮ್ಮ ಸ್ವಂತ ಹಿಂದೂತ್ವವ ಮರದು ಮುಸ್ಲಿಮರ, ಕ್ರಿಶ್ಚಿಯನ್ನರ ಖುಶಿ ಪಡುಸುಲೆ ಇರುಳು ಹಗಲು ಶ್ರಮಿಸುವ ಹೃದಯ ವೈಶಾಲ್ಯ ಪ್ರದರ್ಶಿಸುತ್ತಾ ಇಪ್ಪದರ ನೋಡಿರೆ ಹೇಸಿಗೆ ಆವುತ್ತು. ಮತ್ತೆ, ಇಂತಹ ಉದಾರ ಹೃದಯ ಹಿಂದೂಗೊಕ್ಕೆ ಮಾತ್ರ ಇಪ್ಪದು, ಆಚ ಹೊಡೆಂದ ಇದಕ್ಕೆ ಯಾವ ಪ್ರತಿಕ್ರಿಯೆಯಾಗಲಿ, ಕೃತಜ್ಞತೆಯಾಗಲಿ ಇಲ್ಲೆ ಹೇಳುವ ಮೂಲಭೂತ ಸತ್ಯವ ತಿಳುಕ್ಕೊಂಬ ಗೋಜಿಂಗೆ ಹೋಗದ್ದ ಮುಗ್ಧತೆ ಕಂಡು ಮರುಕ ಆವುತ್ತು. ಅಪ್ಪಟ ಬ್ಯಾರಿಗಳ ಪಕ್ಷವಾದ ಮುಸ್ಲಿಮ್ ಲೀಗಿಂಗೂ ಜಾತ್ಯತೀತ ಹೇಳುವ ಬಿರುದು ಕೊಟ್ಟು ಅವರ ಹೆಗಲಿಂಗೆ ಕೈ ಹಾಕಿಗೊಂಡು ಓಡಾಡುದರ ನೋಡಿರೆ ಜಿಗುಪ್ಸೆ ಹುಟ್ಟುತ್ತು.
ಕೋಂಗ್ರೇಸಿನ ಹೀಂಗಿಪ್ಪ ಆಷಾಢಭೂತಿ ರಾಜಕಾರಣಿಗೊ ಇಷ್ಟು ವರ್ಷ ಮಾಡಿದ ಅಮೋಘ ಸಮಾಜ ಸೇವೆಯ ಕಾಣಿಕೆ ಎಂತ ಹೇಳಿರೆ, ನಮ್ಮ ದೇಶಲ್ಲಿ ಅಲ್ಪ ಸಂಖ್ಯಾತರ ಹಿಂದೂಗಳ ಭವಿಷ್ಯವನ್ನೇ ನಿರ್ಧಾರ ಮಾಡುವಷ್ಟು ನಿರ್ಣಾಯಕರಾಗಿ ಬೆಳೆಶಿ ನಿಲ್ಸಿದ್ದದು. ನಮ್ಮ ದೇಶಲ್ಲಿಪ್ಪ ಜೈನರು, ಬೌದ್ಧರು, ಪಾರ್ಸಿಗೊ, ಸಿಖ್ ಇತ್ಯಾದಿಯವಕ್ಕೆ ಸಮಾಜಲ್ಲಿ ಸಹಜೀವನದ ಧರ್ಮವ ಪಾಲಿಸಿಗೊಂಡು ಶಾಂತಿಂದ ಬದುಕ್ಕುಲೆ ಎಡಿಗಪ್ಪಗ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಂದು ಮಾತ್ರ ಎಂತಕೆ ಯಾವಾಗಳೂ ತಕರಾರು ? ಇವರ ಅಸಲು ಕುಟಿಲ ಕಾರ್ಯತಂತ್ರವ ಅರ್ಥ ಮಾಡಿಗೊಂಡು ಅವರ ಸರಿಯಾದ ಜಾಗೆಲಿ ಕೂರುಸುಲೆ ನವಗೆ ಏಕೆ ಎಡಿತ್ತಿಲ್ಲೆ ? ಧರ್ಮದ್ರೋಹಿಗಳಾದ ಕೋಂಗ್ರೇಸಿನವು ಕಿರೀಟ ಕಟ್ಟಿಗೊಂಡು ತಿರುಗಿಗೊಂಡಿಪ್ಪಗ, ಭಾಜಪ ಮತ್ತು ಶಿವಸೇನೆ ಹಾಂಗಿಪ್ಪ ನಿಜವಾಗಿ ಅರ್ಥಲ್ಲಿ ಜಾತ್ಯತೀತರಾಗಿದ್ದು ದೇಶಪ್ರೇಮ ಮೆರೆವ ಪಕ್ಷಂಗೊ ಜಾತಿವಾದಿ ಹೇಳುವ ಹಣೆಪಟ್ಟಿ ಕಟ್ಟಿಗೊಳೆಕ್ಕಾಗಿ ಬಂದಿಪ್ಪದು ಇಂದ್ರಾಣ ರಾಜಕೀಯದ ವಿಪರ್ಯಾಸ ಅಲ್ಲದೋ ?
೬. ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಲಿ ಸ್ವಿಝರ್ಲ್ಯಾಂಡಿನ ನಿಯತಕಾಲಿಕ ಒಂದರಲ್ಲಿ ಮೊದಲೇ (೧೯೯೧ಲ್ಲಿ) ಪ್ರಕಟವಾದ ಸುದ್ದಿಯ ಉದ್ಧರಿಸಿ ಒಂದು ಲೇಖನ ಬಂದಿತ್ತು. ಇದಲ್ಲಿ ಜಗತ್ತಿನ ಬೇರೆ ಬೇರೆ ದೇಶಂಗಳ ಕುಖ್ಯಾತ ರಾಜಕಾರಣಿಗಳದ್ದು ಸ್ವಿಸ್ ಬ್ಯಾಂಕಿನ ಖಾತೆಗಳಲ್ಲಿ ಎಷ್ಟು ಹಣ ಇದ್ದು ಹೇಳುವ ವಿವರ ಇತ್ತು. ಈ ಪಟ್ಟಿಲಿ ನಮ್ಮ ದೇಶವ ಪ್ರತಿನಿಧಿಸಿದ ಹೆಗ್ಗಳಿಕೆ ರಾಜೀವ್ ಗಾಂಧಿದು. ವಿಮಾನದ ಪೈಲೆಟ್ ಆಗಿತ್ತವಂಗೆ ಇಷ್ಟು ಪೈಸೆ ಎಲ್ಲಿಂದ ಬಂತು ? ಅಕಸ್ಮಾತ್ ಈ ಶುದ್ದಿ ಸುಳ್ಳಾಗಿದ್ದರೆ, ಅದರ ಖಂಡಿಸುದಾಗಲಿ, ಆ ಪತ್ರಿಕೆಯ ಮೇಲೆ ಯಾವುದಾದರೂ ಕಾನೂನು ಕ್ರಮ ತೆಕ್ಕೊಂಬದಾಗಲಿ ಏಕೆ ಮಾಡಿದ್ದವಿಲ್ಲೆ ? ಮರ್ಯಾದೆ ಇದ್ದರಲ್ದಾ ಹೋಪದು ಹೇಳುವ ಮಿಜಾರು ಅಣ್ಣಪ್ಪನ ತರ್ಕಕ್ಕೆ ಇವರಷ್ಟು ಒಳ್ಳೆ ಉದಾಹರಣೆ ಬೇರೆ ಸಿಕ್ಕ. ಚುನಾವಣಾ ಪ್ರಚಾರಲ್ಲಿ ಭಾಜಪ ಈ ವಿಷಯವ ಪ್ರಸ್ತಾಪ ಮಾಡಿತ್ತು. ಭ್ರಷ್ಟಾಚಾರ ಹೇಳುದು ಜೀವನ ಶೈಲಿಯೇ ಆಗಿಪ್ಪ ನಮ್ಮ ದೇಶಲ್ಲಿ ಇದೊಂದು ದೊಡ್ಡ ವಿಷಯ ಆಯಿದೇ ಇಲ್ಲೆ. ಈಗ ಭಾಜಪದ ಬೇಡಿಕೆಗೆ ಸ್ಪಂದಿಸಿ ಇದೇ ರಾಜೀವ್ ಗಾಂಧಿಯ ಸುಪುತ್ರ ಈ ವಿಷಯವ ತನಿಖೆ ಮಾಡ್ಸುತ್ತೆ ಹೇಳಿದ್ದ. ಕಳ್ಳನ ಮಗ ಸುಳ್ಳ ಹೇಳುದರ ನೆಂಪು ಮಾಡಿಗೊಂಡರೆ ಈ ಭರವಸೆಗೆ ಎಷ್ಟು ಮಹತ್ವ ಕೊಡ್ಳಕ್ಕು ಹೇಳುದು ಗೊಂತಾವುತ್ತು.
(ಇನ್ನೂ ಇದ್ದು...) - ಬಾಪಿ
No comments:
Post a Comment