ರಾಜಕೀಯ ಸಿದ್ಧಾಂತದ ವಿರೋಧಂಗಳ ಮರದು, ಇಂದು ಪೂರ್ಣ ಪ್ರಮಾಣಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಕೇಂದ್ರ ಸಚಿವ ಸಂಪುಟಕ್ಕೆ ಶುಭ ಹಾರೈಸುತ್ತೆ. ಮೊದಲೇ ಹೇಳಿ ಬಿಡ್ತೆ, ಇಂದ್ರಾಣ ಶೈಲಿ ರಜ ಬೇರೆ - ಯಾವಾಗಳೂ ಕೌರವನ ಅರ್ಥ ಹೇಳುವ ಪ್ರಭಾಕರ ಜೋಷಿಯ ರಾಮನ ಪಾತ್ರದ ಅರ್ಥ ಕೇಳಿ ಅಪ್ಪಗ ಯಾಕೋ ಇದು ಒಂಬುತ್ತಿಲ್ಲೆನ್ನೇ ಹೇಳಿದ ಹಾಂಗೆ ಕಾಂಬಲೂ ಸಾಕು ! ಸಂಗತಿಯೇ ಹಾಗಿದ್ದು. ಇಂದಿನ ಬದಲಾದ ಪರಿಸ್ಥಿತಿಲಿ, ರಾಷ್ಟ್ರೀಯವಾದದ ಹಾಂಗಿಪ್ಪ ಕೆಲವು ಸೂಕ್ಷ್ಮ ವಿಷಯಂಗಳ ಬಿಟ್ಟರೆ, ಕೋಂಗ್ರೇಸಿಂಗೂ ಭಾಜಪಕ್ಕೂ ಎಂತ ವ್ಯತ್ಯಾಸವೂ ಕಾಣ್ತಿಲ್ಲೆ. ಸಮಾಜವಾದದ ಮಂತ್ರ ಹೇಳಿಗೊಂಡಿತ್ತ ಕೋಂಗ್ರೇಸು ಇಂದು ಭಾಜಪದಷ್ಟೇ ಅಪ್ಪಟ ಬಲಪಂಥೀಯ ಪಕ್ಷ. ಹಾಂಗಾಗಿ, ಎನ್ನ ಒಳ ಹುಗ್ಗಿ ಕೂದುಗೊಂಡಿಪ್ಪ ಕೈಗಾರಿಕೋದ್ಯಮಿಗೆ ಕೋಂಗ್ರೇಸು ಪಕ್ಷ - ಕಮ್ಯುನಿಷ್ಟರ ರಹಿತವಾಗಿ - ಅಧಿಕಾರ ಮಾಡಿರೆ, ಯಾವ ತಕರಾರೂ ಇಲ್ಲೆ. (ಆದರೆ, ಎನ್ನ ಒಳವೇ ಇನ್ನೊಂದು ಹೊಡೆಲಿಪ್ಪ ಸ್ವಾಭಿಮಾನಿ ಭಾರತೀಯಂಗೆ ಇವರ ಸಹಿಸಿಗೊಂಬಲೆ ಕಷ್ಟ ಆವುತ್ತು.)
ಸಮ್ಮಿಶ್ರ ಸರಕಾರಲ್ಲಿ ಪ್ರಧಾನಿ ಆಗಿತ್ತರೂ ವಾಜಪೇಯಿಗೆ ಸ್ವಂತ ವರ್ಚಸ್ಸಿನ ಬಲಲ್ಲಿ ಕೆಲವು ಮುಖ್ಯ ನಿರ್ಧಾರಂಗಳ ತೆಕ್ಕೊಂಬ ಸಾಮರ್ಥ್ಯ ಇತ್ತು. ಹೆಚ್ಚು ಕಮ್ಮಿ ಇದೇ ಪರಿಸ್ಥಿತಿಲಿತ್ತ ಈ ಮೊದಲಿನ ಸರಕಾರದ ಮುಖ್ಯಸ್ಥನಾಗಿ ಮನಮೋಹನ ಸಿಂಗಂಗೆ ಸೋನಿಯಾ ಗಾಂಧಿಯ ಸೆರಗು ಹಿಡುದು ನೇಲದ್ದೆ ಯಾವ ನಿರ್ಧಾರ ತೆಕ್ಕೊಂಬಲೂ ಸಾಧ್ಯ ಆಯಿದಿಲ್ಲೆ. ಈ ಕಾರಣಂದ ಮನಮೋಹನಂಗೆ ದುರ್ಬಲ ಪ್ರಧಾನಿ ಹೇಳುವ ಬಿರುದು ಅಂಟಿತ್ತು. ಆದರೆ, ಮನಮೋಹನಂಗೆ ವಾಜಪೇಯಿಯಷ್ಟು ರಾಜಕೀಯ ಅನುಭವ ಇಲ್ಲದ್ರೂ ಆಢಳಿತಾನುಭವ ಬೇಕಾದಷ್ಟಿದ್ದು. ಮತ್ತೆ ಈ ಸಂಸತ್ತಿಲ್ಲಿ ಸದಸ್ಯರ ಸಂಖ್ಯೆ ಕೋಂಗ್ರೇಸಿನ ಪರವಾಗಿಪ್ಪ ಕಾರಣ, ಇವನ ಹೆಗಲು ಮೊದಲಿಂದ ಎತ್ತರ ಆದ ಹಾಂಗೆ ಕಾಣ್ತು. ಹೊಸ ಸಂಪುಟ ರಚನೆಯ ಸರ್ಕಸ್ಸಿಲ್ಲಿಯೇ ಇವ ಈಗ ಮೊದಲಿನ ಹಾಂಗಲ್ಲ, ರಜ ಉಷಾರಿ ಆಯಿದ ಹೇಳಿ ಗೊಂತಾವುತ್ತು.
ಬೆನ್ನಿಂಗೆ ಸಲಕ್ಕೆ ಕಟ್ಟಿರೂ ಎದ್ದು ನಿಂಬಲೆಡಿಯದ್ದಷ್ಟು ಪ್ರಾಯ ಆದರೂ ಕುರ್ಚಿ ಬಿಡುವ ಆಲೋಚನೆಲಿಲ್ಲದ್ದ ಕೆಲವು ಮುದುಕರ, ಮತ್ತೆ ಕೆಲವು ಮಹಾ ಪೆದಂಬಂಗಳ ಹಾಂಗೂ ಅದಕ್ಷರ ಸಚಿವ ಸಂಪುಟಂದ ಕೈಬಿಟ್ಟದು ಮೆಚ್ಚೆಕ್ಕಾದ ನಿರ್ಧಾರ. ಹೀಂಗೆ ಮಂತ್ರಿ ಸ್ಥಾನ ಕಳಕ್ಕೊಂಡವರ ಬಗ್ಗೆ ರಜ ಮಾತಾಡದ್ದೆ ಇಂದ್ರಾಣ ಮಂತ್ರ ಪಠನ ಮುಗಿಶುಲೆಡಿಯ. ಇವರಲ್ಲಿ ಒಬ್ಬ ಶಿವರಾಜ್ ಪಾಟೀಲ್ ಹೇಳುವ ಸನ್ಮಾನ್ಯ ಮಾಜಿ ಗೃಹ ಮಂತ್ರಿ. ಮುಂಬೈಯ ತಾಜ್ ಹೋಟೇಲಿಲ್ಲಿ ಉಗ್ರಗಾಮಿಗೊ ಹೊಕ್ಕು ದಾಂಧಲೆ ಮಾಡ್ತಾ ಇಪ್ಪಗ ಪಿಟೀಲು ಬಾರಿಸಿಗೊಂಡಿತ್ತ ೨೧ನೇ ಶತಮಾನದ ನೀರೋ. ಗುಜರಾತಿನ ಸ್ಫೋಟ ಆದ ಮೇಲೆ ನರೇಂದ್ರ ಮೋದಿ ಘಟನೆಗಳ ವಿವರ ಕೊಡ್ಳೆ ಹೇಳಿ ಈ ಅಸಾಮಿಯ ಹತ್ರೆ ಹೋದರೆ, "ಎನಗೆ ಉಂಬಲೆ ಹೋಪಲೆ ಇದ್ದು, ಎಂತ ಹೇಳ್ತರೂ ೫ ನಿಮಿಷಲ್ಲಿ ಹೇಳಿ ಮುಗಿಶು" ಹೇಳಿದ ತಿಮ್ರಾಂಡಿ. ಅಮಿತಾಭ್ ಬಚ್ಚನಿಂಗೂ ನಾಚಿಕೆ ಅಪ್ಪ ಹಾಂಗೆ ದಿನಕ್ಕೆ ಹತ್ತು ಸರ್ತಿ ಡ್ರೆಸ್ಸು ಬದಲಿಸಿಗೊಂಬ ಅಭ್ಯಾಸದ ಶೋಕಿಲಾಲ. ಇನ್ನೊಬ್ಬ, ಭಾರತ ದೇಶದ ಮಾನವ ಸಂಪನ್ಮೂಲವ ಲಗಾಡಿ ತೆಗವಲೆ ಹೇಳಿ ಮಾಡಿಸಿದ ಹಾಂಗಿಪ್ಪ ಅರ್ಜುನ ಸಿಂಗ್ ಹೇಳುವ ಕೇಂದ್ರ ಮಂತ್ರಿಮಂಡಲದ ಖಾಯಂ ಗಿರಾಕಿ. ಜಗತ್ತಿಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಯುವಪೀಳಿಗೆಯ ಜನ ಇಪ್ಪದು ನಮ್ಮ ದೇಶಲ್ಲಿ ಹೇಳುವ ಅತಿ ಮುಖ್ಯ ವಿಷಯ ಕುಂಭಕರ್ಣ ಗೋತ್ರದ ಮಂತ್ರಿಗೊ ಇಪ್ಪ ನಮ್ಮ ಘನ ಸರಕಾರದ ಗಮನಕ್ಕೆ ಬಂದಿಪ್ಪದು ಸಂಶಯ ! ಯುವಜನರ ಭವಿಷ್ಯವ ರೂಪಿಸಿ, ಅವರ ಆಶೋತ್ತರಂಗಳ ಈಡೇರಿಸಿ, ಜಾಗತಿಕ ಪೈಪೋಟಿಲಿ ಬೇರೆ ದೇಶಂಗಳಿಂದ ಸ್ಪರ್ಧಾತ್ಮಕ ಮುನ್ನಡೆ ಪಡಕ್ಕೊಂಬ ಅಪುರ್ವ ಅವಕಾಶ ಈಗ ನಮ್ಮ ದೇಶಕ್ಕಿದ್ದು. ಈ ಹೊಣೆ ಮಾನವ ಸಂಪನ್ಮೂಲ ಮಂತ್ರಾಲಯದ್ದು. ವಿಪರ್ಯಾಸ ಹೇಳಿರೆ, ಈ ಮಂತ್ರಾಲಯದ ಜವಾಬ್ದಾರಿಯ ಇಷ್ಟು ದಿನ ಅರ್ಜುನ್ ಸಿಂಗನ ಹಾಂಗಿಪ್ಪ ಗಾಲಿಕುರ್ಚಿಲಿ ಓಡಾಡುವ ಪರಬ್ಬಂಗೆ ವಹಿಸಿದ್ದದು. ಇವ ತೊಲಗಿದ್ದದು ನಮ್ಮ ದೇಶದ ದೊಡ್ಡ ಸೌಭಾಗ್ಯವೇ ಸರಿ. ಇನ್ನು, ಬಾಲು ಹೇಳುವ ಸಾರಿಗೆ ಮಂತ್ರಿಯ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಕಾರಣಕ್ಕಾಗಿ ತಿರುಗ ಮಂತ್ರಿ ಮಾಡಿದ್ದವಿಲ್ಲೆಡ. ಮತ್ತೊಬ್ಬ ಸೈಫುದ್ದೀನ್ ಸೋಜ್ ಹೇಳುವ ಉಗ್ರಗಾಮಿಯೋ ಹೇಳಿ ಸಂಶಯ ಬಪ್ಪ ಹಾಂಗಿಪ್ಪ ಕಾಶ್ಮೀರದ ಬಾಯಿ ಬಡುಕ.
ಹಾಂಗಾಗಿ ಕಳೆದ ಸರ್ತಿಲಿ ದುರ್ಬಲ ಪ್ರಧಾನಿ ಹೇಳಿಯೇ ಹೆಚ್ಚು ಪ್ರಸಿದ್ಧಿ ಪಡೆದ ಮನಮೋಹನ ಸಿಂಗ್ ರಜ್ಜ ಮಟ್ಟಿಂಗೆ ಸಬಲ ಆದ್ದದು ಈ ಚುನಾವಣೆಯ ಒಂದು ಧನಾತ್ಮಕ ಅಂಶ ಹೇಳಿ ಧಾರಾಳ ಹೇಳ್ಳಕ್ಕು. ಹೊಸ ಸಂಪುಟಲ್ಲಿ ಆದಷ್ಟು ಹೊಸ ಮುಖಂಗಳ ಪರಿಚಯಿಸುವ ಪ್ರಯತ್ನ ಮಾಡಿದ್ದ. ರಾಹುಲ್ ಗಾಂಧಿಯ ಯುವಪಡೆಯ ಸದಸ್ಯರಾದ ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್, ಸಚಿನ್ ಪೈಲೆಟ್ , ಜಿತೇನ್ ಪ್ರಸಾದ್ ಮುಂತಾದವು ರಾಜ್ಯ ಮಂತ್ರಿಗಳಾದರೂ ಸಂಪುಟಲ್ಲಿಪ್ಪದು ಭವಿಷ್ಯದ ದೃಷ್ಟಿಂದ ಉತ್ತಮ. ಬೆಂಗ್ಳೂರಿಲ್ಲಿ ಕೃಷ್ನಬೈರೇಗೌಡ ಚುನಾವಣೆಲಿ ಸೋತ ಕಾರಣ ಅವಕಾಶ ಕಳಕ್ಕೊಂಡ. ಈ ಸರ್ತಿ ಸಂಪುಟಲ್ಲಿಪ್ಪ ಮಂತ್ರಿಗಳ ಸರಾಸರಿ ಪ್ರಾಯ ೫೭ ವರ್ಷ ಹೇಳಿ ವರದಿ ಆಯಿದು. ಹೊಸ ಚಿಗುರು, ಹಳೆ ಬೇರುಗೊ ಸೇರಿ ದೇಶದ ಸೊಬಗಿನ ಹೆಚ್ಚು ಮಾಡುವ ಸುವರ್ಣ ಅವಕಾಶ. ಇದರಲ್ಲಿ ಅತಿ ಸಣ್ಣ ಪ್ರಾಯದ ೨೮ರ ಅಗಥಾ ಸಂಗ್ಮಾಂದ ಹಿಡುದು ೭೭ ವರ್ಷ ಪ್ರಾಯದ ಎಸ್ಸೆಂ ಕೃಷ್ಣನ ವರೆಗೆ ೩ ತಲೆಮಾರಿನ ವ್ಯಕ್ತಿಗೊ ಇಪ್ಪದು ನೋಡಿರೆ ನಮ್ಮ ಅಪ್ಪಟ ಭಾರತೀಯ ಶೈಲಿಯ ದೊಡ್ಡ ಅವಿಭಕ್ತ ಕುಟುಂಬವ ನೋಡಿದ ಹಾಂಗಾವುತ್ತು.
ಆದರೂ ನಮ್ಮ ದೇಶಲ್ಲಿ ಬೊಬ್ಬೆ ಹಾಕುವವೇ ಬೇರೆ, ವೋಟು ಹಾಕುವವೇ ಬೇರೆ ಹೇಳುವ ಸಾಮಾಜಿಕ ದ್ವಂದ್ವ ಇಪ್ಪ ಕಾರಣ, ಹೊಸ ಸರಕಾರದ ಕಾರ್ಯಕ್ರಮಂಗೊ ಹೇಂಗಿಕ್ಕು ಹೇಳುವ ಬಗ್ಗೆ ತೀವ್ರ ಕುತೂಹಲ ಇದ್ದು. ಸಂಸತ್ತಿಲ್ಲಿ ಮತ್ತು ಮಂತ್ರಿಮಂಡಲಲ್ಲಿ ತರುಣರ ಸೇರ್ಪಡೆಂದ ಸಮಾಜದ ಯುವಜನರು ಇನ್ನು ಮುಂದೆ ಮತದಾನದ ಪ್ರಕ್ರಿಯೆಲಿ ಹೆಚ್ಚು ಸಕ್ರಿಯರಾಗಿ ಭಾಗವಹಿಸುಲೆ ಪ್ರೇರಣೆ ಸಿಕ್ಕುವ ಹಾಂಗಾದರೆ, ರಾಹುಲ್ ಗಾಂಧಿಯ ರಾಜಕೀಯ ಪ್ರವೇಶ ಮತ್ತು ಪ್ರಯತ್ನ ಸಾರ್ಥಕ.

- ಬಾಪಿ
1 comment:
ಸಕಾರಾತ್ಮಕ ಬರಹ ಓದಿ ಖುಷೀ ಆತು. ಹೊಸ ಬಲಂಗಳ ಬೆಂಬಲಲ್ಲಿ ’ಭಲಿರೇ..’ ಹೇಳಿ ಹೇಂಗೆ ಮಾಡ್ತವು ಹೇಳಿ ನೋಡ್ಲಿದ್ದು. ನಾವು ಆಶಾವಾದಿಗಳಾದರೂ ಹೆಚ್ಚಿನ ಅಪೇಕ್ಷೆ ಇಲ್ಲದ್ದ್ರೆ ಇದ್ದರೆ ಹೆಚ್ಚಿನ ನಿರಾಶೆ ಆಗ ಹೇಳಿ ಗ್ರೇಶುತ್ತೆ. ಈ ಮಧ್ಯೆ ’ಶೇರು ಮಾರುಕಟ್ಟೆ’ ಮೇಲೆ ಹೋವ್ತಾ ಇಪ್ಪದು ಶುಭ ಸಂಕೇತ. ಹಾಂಗೆಯೇ ದೇಶದ ಬೆಳವಣಿಗೆಯೂ ಮುಂದುವರಿಯಲಿ ಹೇಳಿ ಆಶಿಸುವನಾ..
Post a Comment