Tuesday, March 1, 2011

ಹುಟ್ಟುಹಬ್ಬ

ಸಾವಿರದೊಂಬೈನೂರರುವತ್ಮೂರು
ಹೇಳೀ ಇಸವಿಲಿ ಹುಟ್ಟಿದ್ದ್ಯಾರ್ಯಾರು ?
ಇವರೆಲ್ಲ ಸೇರಿಸಿರೆ ಅಕ್ಕಯ್ಯ ದೋಸ್ತಿ
ಸಮಾನವ್ಯಸನಿಗೊ ಮಾಡ್ಳಕ್ಕು ಕುಸ್ತಿ
 
ವರ್ಷ ಇಷ್ಟಾತನ್ನೆ, ಮಾಡಿದ್ದು ಎಂತ ?
ದೇವರಾಣೆಗು ಹೇಳ್ತೆ ಗೊಂತಿಲ್ಲೆ ಆತ
ಹುಟ್ಟು-ಸಾವು ನಡುವೆ ಬದುಕಿನ ಓಟ
ಕಲಿತ್ತಾ ಹೋಪದು ದಿನದಿನವು ಪಾಠ
 
ಕೊಟ್ಟದು ದೇವರು ನೂರಷ್ಟೆ ವರುಷ
ಮಾಡ್ತರೆ ಇದ್ದನ್ನೆ ಎಷ್ಟೊಂದು ಕೆಲಸ
ಕಾರ್ಯವೆಲ್ಲದರ  ಸುರುವಿಲ್ಲಿ ಕನಸು
ಕೈಗೂಡಿ ಬಂದರೆ ಅದೆಷ್ಟು ಸೊಗಸು
 
ದೊಡ್ಡವು ಹೇಳಿದ್ದು ಮನೆಕಟ್ಟಿ ನೋಡು
ಶ್ರೀಗಂಧದ ಊರಿಲ್ಲಿ  ಬಿಡಾರ ಹೂಡು
ಎಂದಿಂಗೂ ಇರಲಿ ಸುಜನ ಸಹವಾಸ
ಅನುಭವಿಸಿ ನೋಡು ಸಂಸಾರ ಸರಸ
 
ಬದುಕು ಗೊಂತಿದ್ದನ್ನೆ ಜಟಕದಾ ಬಂಡಿ
ತಲೆ ತಲೆಮಾರಿನ ಸೇರಿಸುವಾ ಕೊಂಡಿ
ಮಾಡುತ್ತೆ ಪ್ರಣಾಮ ಕೇಚಜ್ಜ ಭಾಗೋತ
ಮಡುಗುತ್ತೆ  ಸಮೀರನ  ಕೈಲೆನ್ನ ಕಡತ
 
 
-ಬಾಪಿ
 
 
 
 
 

Thursday, January 13, 2011

ಪ್ರಾರ್ಥನೆ

ಎಂತ ಬೇಡಲಿ ದೇವ ಕಾವು ಶಾಸ್ತಾವು
ಸ್ವಾಭಿಮಾನದ ಬದುಕು ನರಳದ್ದೆ ಸಾವು
ಉದೆಕಾಲ ಏಳುವಗ ಇರಲಿ ಉತ್ಸಾಹ
ಸ್ಪೂರ್ತಿಯಾಗಲಿ ಜನರ ತುಂಬು ಸ್ನೇಹ
 
ಖರ್ಚಿಂದ ಹೆಚ್ಚಿಗೆ ಇರಲಿ ವರಮಾನ
ದೊಡ್ದವರ ಎದುರು ಮಡುಗೆನ್ನ ಸಣ್ಣ
ಮಾಡುವ ಬಲಕ್ಕೆ ಸಾಧಿಸುವ ಛಲವು
ಸಮತೋಲನಲ್ಲಿರಲಿ ಸೋಲು ಗೆಲುವು
 
ನಿನ್ನೆ ನಾಳೆಯ ಮಧ್ಯಲ್ಲಿಪ್ಪದೀ ಸುದಿನ
ಚಕ್ರ ತಿರುಗಿಸಲೆನ್ನ ಅನುಭವದ ಗಾಣ
ಗುರಿಯತ್ತ ಹೋಪಲೆ ಹೆದ್ದಾರಿ ವಿರಳ
ಸರಣಿ ವಿಘ್ನಂಗಳ ಮಾಡೆನಗೆ ಸರಳ
 
ಬತ್ತದ್ದೆ ಬದುಕಿರಲಿ ಜ್ಞಾನದ ಹಸಿವು
ಅನುದಿನದ ಕೆಲಸಕ್ಕೆ ಇಲ್ಲದ್ದೆ ದಣಿವು
ಎಷ್ಟು ಬೇಡಲಿ ನಿನ್ನ ತಳದತ್ತು ಬಳಪ
ಕೈ ಎತ್ತಿ ಹರಸೆನ್ನ ಮದವೂರ ಗಣಪ
 
-ಬಾಪಿ
 
 
 
 
 

ಸ್ವಾತಂತ್ರ್ಯ

ಸ್ವಾತಂತ್ರ್ಯ ಬಂದಾತು ೬೦ ವರುಷ
ಜನಮಾನಸಲ್ಲಿಲ್ಲೇಕೆ ಯಾವ ಹರುಷ
ಸರ್ಕಾರ ಹೇಂಗಾತು ಖಾಲಿ ಖಜಾನೆ
ಮಂತ್ರಿಗೊಕ್ಕೆಂತಕೆ ದೊಡ್ಡ ಅರಮನೆ
 
ಪವಾರಿನ ಮರುಳು ದಿನಾ ಕ್ರಿಕೆಟ್ಟು
ಬೇರೆ ಕೆಲಸಕ್ಕೆ ಎಲ್ಲಿ ಪುರುಸೊತ್ತು 
ಆತು ನೀರುಳ್ಳಿ  ದಿನದಿನ ದುಬಾರಿ
ಪಾಪದವಕ್ಕಿದ್ದು ಅವರವರ ದಾರಿ
 
ಮಾಡೇ ಇಲ್ಲದ್ದ ಶಾಲೆಗಳೇ ಎಲ್ಲ 
ಕಲಿಶುವವು ಆರು ದೇವರೇ ಬಲ್ಲ
ಪಾಸಪ್ಪಲೆ ಸಾಕು ೩೫ ಮಾರ್ಕು
ಆಫೀಸಿಲ್ಲೆಲ್ಲ ಮೀಸಲಾತಿ ಸರಕು
 
ಅಲ್ಪರ ತುಷ್ಟಿಗೆ ಸದಾ ಕಟಿಬದ್ಧ
ಹೇಳಿದವಡ ಹಿಂದು ಉಗ್ರವಾದ 
ಎಲ್ಲೆಂದರಲ್ಲಿ ಹೊಟ್ಟುತ್ತು ಬಾಂಬು
ಬದುಕ್ಕಿ ಒಳುದರೆ ಹರ್ಕಟೆ ದಿಂಬು
 
ಖಂಡಿತ ರಾಹುಲ್ ಇನ್ನು ಪ್ರಧಾನಿ
ಭಾರತ ಆವುತ್ತಯ್ಯ  ಚಿನ್ನದಾ ಗಣಿ
ಎಲ್ಲೋರ ಮನೆಲಿ ಮೊಬೈಲು ಟೀವಿ
ನೀರು ಬಾರದ್ರೆ ಇರಲೊಂದು ಬಾವಿ
 
-ಬಾಪಿ
 
 
 
 
 

Wednesday, January 5, 2011

ಶಾಯರಿ

ಇದೆಂತ ಹಗರಣ ಗೊಂತಿದ್ದಾ -2ಜಿ ?
ಸೋನಿಯಾಜಿ ಮತ್ತೆ  ರಾಹುಲ್  ಜಿ !!
ಕೋಂಗ್ರೇಸಿನವೆಲ್ಲಾ ಸದಾ  ಪರತಂತ್ರ
ಲಂಚ ಭ್ರಷ್ಟಾಚಾರವೇ ಮೂಲ ಮಂತ್ರ
 
ಸಮಾಜವಾದವೇ ಇವರ ಪುರುಷಾರ್ಥ
ನೆಹರೂ ಶಂಖಂದ ಬಂದದೇ ತೀರ್ಥ
ರೋಟಿ ಕಪಡಾದೊಟ್ಟಿಂಗೆ ಮಕಾನು
ಹೇಳುದೊಂದೇ   ಪೊಟ್ಟು ಸ್ಲೋಗನು 
 
ಕೋಟಿಗಟ್ಳೆ ತಿಂದನಡಾ ಕೋತ್ರೋಕಿ 
ಇವ ಸೋನಿಯಾನ ಖಾಸಾ ಪೈಕಿ
ಸ್ವಿಸ್ ಬೇಂಕಿಲ್ಲಿದ್ದು ಇವರದ್ದು ಗೆಂಟು
ಪೈಲೆಟ್ಟಿಂಗಷ್ಟು ಎಲ್ಲಿಂದ ಬಂತು ?

ರಾಹುಲಂಗೇ ಎಂತಕಿವು ಶರಣಾಗತಿ ?
ಕೆಪ್ಪಟೆಯ ಗುಳಿ ಕೂಸುಗೊಕ್ಕೆ ಪ್ರೀತಿ
ಬೆಳಿಚರ್ಮ ಇದ್ದರೆ ಬೇರೆಂತ ಬೇಕು ?
ಭಾರತಮಾತೆಯ ಬೆನ್ನಿಂಗೆ ಚಾಕು    
 
-ಬಾಪಿ
 
 
 
 
 

Sunday, January 2, 2011

ಹೊಸವರುಷ

ಹೊಸವರುಷಲ್ಲಿ ಪ್ರತಿದಿನ
ಇರಲಿ ಸೇಮಿಗೆ ರಸಾಯನ
ಮನೆಗೆ ಬಂದಪ್ಪಗ ನೆಂಟರು
ವಿಶೇಷ ಪಾಯಸ ಸಾಂಬಾರು 
 
ಆಗಲಿ ಬೇಗನೆ ಮನೆ ಒಕ್ಕಲು
ಉಂಬಲೆ ಹೋಳಿಗೆ ಕಾಯಾಲು
ಚಾಯ ಬೇಕಪ್ಪಗ ದಾಸಪ್ರಕಾಶ
ಕಿಸೆಲಿರಲಿ ಸದಾ ಮಾತ್ರೆ ಸಮರಸ
 
 
-ಬಾಪಿ