ನಮ್ಮವು ಸ್ವಿಝರ್ ಲ್ಯಾಂಡ್ ನ ಬ್ಯಾಂಕುಗಳಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಕಾಳಧನದ ಲೆಕ್ಕಾಚಾರದ ವಿವರಂಗಳ ತರಿಸಿ ಪ್ರಕಟ ಮಾಡ್ತೆಯೊ ಹೇಳುವ ಭಾಜಪ ವಲಯದ ಘೋಷಣೆ ಪ್ರಕೃತ ಬಿಸಿ ಸುದ್ದಿ. ಹೀಂಗೆ ಕ್ರೋಢೀಕರಿಸಿದ ಅಕ್ರಮ ಸಂಪತ್ತು ೫೦೦ ರಿಂದ ೧೫೦೦ ಬಿಲಿಯ ಡಾಲರು ಅಕ್ಕು ಹೇಳುವ ಅಂದಾಜು. ಈ ಮೊತ್ತ ಸುಮಾರು ೨೦ ವರ್ಷ ಪ್ರಜೆಗಳ ಮೇಲೆ ಯಾವುದೇ ತೆರಿಗೆ ಹೇರದ್ದೆ ಭಾರತ ದೇಶವ ನಡೆಸಿಗೊಂಡು ಹೋಪಲೆ ಸಾಕಡ ! ಈ ಕೆಲಸ ಕಾರ್ಯಸಾಧ್ಯವೋ ಅಲ್ಲದೋ ಹೇಳಿ ಈಗಳೇ ಹೇಳುದು ಕಷ್ಟ. ಆದರೆ, ಭಾಜಪ ಇದರ ಪ್ರಸ್ತಾಪ ಮಾಡುವ ಜಾಣ್ಮೆ ತೋರಿಸಿದ್ದದು ಸಂತೋಶದ ಸಂಗತಿ. ಇದರ ಬಗ್ಗೆ ಕಾಂಗ್ರೆಸಿನವರ ಜಾಣಮೌನವೂ ಅಷ್ಟೇ ನಿರೀಕ್ಷಿತ.
ತ್ಯಾಗ, ಬಲಿದಾನ, ಬದ್ಧತೆ, ಶಿಸ್ತು, ರಾಷ್ಟ್ರಪ್ರೇಮ ಇತ್ಯಾದಿ ಉನ್ನತ ಮೌಲ್ಯಂಗಳ ಬೆಳೆಶಿದ ಹೆಮ್ಮೆಯ ಚರಿತ್ರೆ ನಮ್ಮದು. ಸ್ವಾತಂತ್ರ್ಯದ ನಿಕಟ ಭವಿಷ್ಯಲ್ಲಿಯೂ ಇದೇ ಆದರ್ಶಂಗಳ ಪ್ರತಿಪಾದಿಸಿ ದೇಶವ ಮುನ್ನಡೆಸಿದ ನಾಯಕರನ್ನೂ ನಾವು ಧಾರಾಳ ಕಂಡಿದು (ಅಥವಾ, ಕೇಳಿದ್ದು). ಇಂತವು ಹೋಗಿ ಇನ್ನೊಂದು ತಲೆಮಾರಿನವು ಬಂದ ಕೂಡ್ಳೇ ಸಾಮಾಜಿಕ ಮೌಲ್ಯಂಗಳ ಅತಿ ಶೀಘ್ರ ಅಧಃಪತನ ಹೇಂಗಾತು ? ವಿಶ್ವದ ಅತ್ಯಂತ ಭ್ರಷ್ಟ ದೇಶಂಗಳ ಪಟ್ಟಿಲಿ ಮೊತ್ತ ಮೊದಲ ಸ್ಥಾನಕ್ಕೆ ಇಥಿಯೋಪಿಯಾದ ಹಾಂಗಿಪ್ಪ ತಲೆಹೋಕ ರಾಷ್ತ್ರಂಗಳೊಟ್ಟಿಂಗೆ ಪೈಪೋಟಿ ಮಾಡುವ ಅನಪೇಕ್ಷಣೀಯ ಹೆಗ್ಗಳಿಕೆ ಯಾಕೆ ನಮ್ಮದಾಗಿ ಹೋತು ? ಇಂದಿರಾ ಗಾಂಧಿ ಹೇಳುವ ಹೆಂಗಸು ರೂಪದ ರಾಕ್ಷಸಿ ನಮ್ಮ ದೇಶಲ್ಲಿ ಭ್ರಷ್ಟಾಚಾರ, ಮೋಸ, ರಾಜಕೀಯ ಸೋಗಲಾಡಿತನ ಇತ್ಯಾದಿಗಳ ವಿಷ ಬೀಜ ಬಿತ್ತಿರೆ, ದೇವರಾಜ ಅರಸಿನ ಹಾಂಗಿಪ್ಪ ಪಾಳಯಗಾರರು ಇವುಗಳ ರಾಜ್ಯಮಟ್ಟಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಚಪ್ಪಾಳೆ ಗಿಟ್ಟಿಸಿಗೊಂಡವು. ಇದು ಜೀವನಕ್ರಮವೇ ಆಗಿ ಹೋತು. "ಹುಶಾರಿ" ಹೇಳುದಕ್ಕೆ "ಹೇಂಗೆ ಕೆಲಸ ಮಾಡಿಸಿಗೊಂಬದು ಹೇಳಿ ಗೊಂತಿಪ್ಪವ" ಹೇಳುವ ಪರ್ಯಾಯ ಅರ್ಥ ಆಡುಭಾಷೆಯ ಶಬ್ದಭಂಡಾರಲ್ಲಿ ಸೇರಿಗೊಂಡತ್ತು.
ಸ್ವಾತಂತ್ರ್ಯಾನಂತರದ ಅತಿ ಹೆಚ್ಚಿನ ಅವಧಿ (ಹೇಳಿರೆ ಸುಮಾರು ೫೦ ವರ್ಷ) ಅಧಿಕಾರ ಮಾಡಿದ ಪಕ್ಷ ಕಾಂಗ್ರೆಸ್. ಇದರಲ್ಲಿ ಸುರುವಾಣ ೨೦ ವರ್ಷ ಬಿಟ್ಟರೆ, ಉಳಿದ ಅವಧಿ ಎಲ್ಲಾ ಗೋಲುಮಾಲು ರಾಜಕೀಯವೇ. ಮತ್ತೆ, ನಿಕಟಪೂರ್ವದ ಒಂದು ಸರ್ತಿ ಬಿಟ್ಟರೆ, ಕಾಂಗ್ರೆಸ್ ಯಾವಾಗಲೂ ಏಕಪಕ್ಷೀಯ ಆಢಳಿತ ನಡೆಶಿಗೊಂದು ಬೈಂದು. ಹಾಂಗಾಗಿ, ಈ ಕಾಳಧನದ ಅತಿ ಹೆಚ್ಚಿನ ಪಾಲು ಯಾರಿಂಗೆ ಸೇರಿದ್ದು ಹೇಳಿ ಊಹಿಸಿದವಕ್ಕೆ ಯಾವ ಬಹುಮಾನವೂ ಕೊಡೆಕು ಹೇಳಿ ಇಲ್ಲೆ ! ಈ ವಿಷಯ ಇನ್ನೂ ಹೆಚ್ಚು ಚರ್ಚೆಯ ವಸ್ತು ಆಗಲಿ ಹೇಳಿಯೂ, ಈ ಚುನಾವಣೆಲಿ ಮತದಾರರು ಯಾರ ಆರಿಸೆಕ್ಕು ಹೇಳುವ ಬಗ್ಗೆ ತೆಕ್ಕೊಂಬ ತೀರ್ಮಾನಲ್ಲಿ ನಿರ್ಣಾಯಕ ಪಾತ್ರ ವಹಿಸಲಿ ಹೇಳಿಯೂ ಹಾರೈಸುತ್ತೆ.

- ಬಾಪಿ
No comments:
Post a Comment