Sunday, April 5, 2009

Hindu vote bank

ಹಿಂದೂ ಮತ ಬ್ಯಾಂಕ್  ಹೇಳುವ ಶಬ್ದವ ಹುಟ್ಟು ಹಾಕುವ ಧೈರ್ಯ ಮಾಡಿದ್ದು ಪೇಜಾವರ ಸ್ವಾಮೀಜಿ.  ಇದು ತೀರಾ ಇತ್ತೀಚಿನ ಬೆಳವಣಿಗೆ.   ಹಿಂದೂ ಧರ್ಮ ಜಾಗರಣೆ ಹೇಳುವ ಅಭಿಯಾನವ ಬೇರೆ ಬೇರೆ ಜಾಗೆಗಳಲ್ಲಿ ಆಯೋಜಿಸಿ ನಮ್ಮಲ್ಲಿ ಸುಪ್ತವಾಗಿಪ್ಪ ಹಿಂದುತ್ವದ ಭಾವನೆಯ ಜಾಗೃತಿಗೊಳಿಸುವ ವಿಶೇಷ, ನಿಃಸ್ವಾರ್ಥ  ಕಾರ್ಯ. ಯಾವಾಗಲೋ ಆಯೆಕ್ಕಾಗಿತ್ತದು ತಡವಾಗಿಯಾದರೂ ಶುರು ಆದ್ದದು  ತುಂಬಾ ಖುಷಿಯ ಸಂಗತಿ.    ಹಾಂಗಾರೆ ಮೊದಲು,  ಈಗಾಗಲೇ ಜಗಜ್ಜಾಹೀರಾಗಿಪ್ಪ ಮುಸ್ಲಿಮ್ ಮತ ಬ್ಯಾಂಕ್ ನ ಬಗ್ಗೆ ರಜ ಮಾಹಿತಿ ಕಲೆ ಹಾಕುವೊ.

ಭಾರತದ ಜನಸಂಖ್ಯೆಲಿ  ಮುಸ್ಲಿಮರು ೧೨ ಪ್ರತಿಶತ ಇದ್ದವಡ.  (ಇದರಲ್ಲಿ ಬಾಂಗ್ಲಾದೇಶಂದ ಬೇಲಿನುಸುಳಿ ಬಂದವರ ತಲೆಲೆಕ್ಕ ಸೇರಿದ್ದೋ ಇಲ್ಯೋ ಹೇಳುದು ಗೊಂತಿಲ್ಲೆ).  ಅಲ್ಪ ಸಂಖ್ಯಾತರು, ಧರ್ಮ ನಿರಪೇಕ್ಷತೆ, ಮೂಲಭೂತವಾದ - ಹೀಂಗೆ  ಶಾಲೆಲಿ ಕಲಿಶದ್ದ ಕೆಲವು ಭಯಂಕರ  ದೊಡ್ಡ ಶಬ್ದಂಗಳ ಆನು ರಾಜಕಾರಣಿಗಳ ಭಾಷಣಂದ ಕೇಳಿ  ಕಲ್ತು ಧನ್ಯನಾದ ವಿಷಯ ದೇವರಾಣೆಗೂ  ಸತ್ಯ.  ಸಣ್ಣಾದಿಪ್ಪಗ ಈ ಶಬ್ದಂಗಳ ಉಪಯೋಗಿಸುವವರ ಭಾಷಾ ಪಾಂಡಿತ್ಯಕ್ಕೆ ತಲೆದೂಗಿಗೊಂಡಿತ್ತ ಆನು, ಕ್ರಮೇಣ ರಾಜಕಾರಣಿಗೊ  ಇದೆಲ್ಲ ನಿಜವಾದ ಅರ್ಥ ಗೊಂತಿಲ್ಲದ್ದೆ ಕೇವಲ ಬಾಯಿಪಾಠ ಮಾಡಿ ಹೇಳುವ  ಶಬ್ದಂಗೊ ಹೇಳಿ ಗೊಂತಾದ ಮೇಲೆ, ಎನ್ನ "ಬಾಲ" ಮುಗ್ಧತೆಗೆ ಆನೇ ಮರುಕ ಪಟ್ಟುಗೊಂಡದಿದ್ದು.  

ಮುಸ್ಲಿಮ್ ಸಮುದಾಯದ ಓತಪ್ರೋತ ಜನಸಂಖ್ಯಾ ಸ್ಫೋಟಕ್ಕೆ ಈ ಕೆಳಾಣ  ಕಾರಣಂಗಳ ಹುಡುಕ್ಕುಲಕ್ಕು  :  

(ಅ) ಬಹುಪತ್ನಿತ್ವ
(ಕ) ಮುಸ್ಲಿಮ್ ಮಹಿಳೆಯರ ಅವಿದ್ಯಾವಂತ ಸ್ಥಿತಿ 
(ಚ) ಮಕ್ಕಳ ಬಗ್ಗೆ ಭಾವನಾತ್ಮಕ ಸಂಬಂಧ ಇಲ್ಲದ್ದೆ "ದುಡಿಯುವ ಕೈಗೊ" ಹೇಳುವ ಧೋರಣೆ
(ಟ) ಹಿಂದೂಗಳ ಸಂಖ್ಯೆಯ ಮೀರಿ ಈ ದೇಶಲ್ಲಿ ತಾವೇ ಬಹುಸಂಖ್ಯಾತರಾಯೆಕ್ಕು ಹೇಳುವ  ಅವರ ಧರ್ಮಗುರುಗಳ ಆಜ್ಞೆ
(ತ) ಅಕ್ರಮ ವಲಸೆ ಮತ್ತು ಮತಾಂತರ
(ಪ) ರಾಜಕಾರಣಿಗೊ ಮಾಡುವ ಮಿತಿಮೀರಿದ ಓಲೈಕೆ 

ದೌರ್ಭಾಗ್ಯದ ಸಂಗತಿ ಎಂತ ಹೇಳಿರೆ,  ಹಿಂದೂಗೊ ಈಗಾಗಲೇ  ಅಲ್ಪ ಸಂಖ್ಯಾತರಾಗಿ  ಆಯಿದು ಹೇಳುವ  ವಾಸ್ತವದ  ಗಾಂಭೀರ್ಯವ  ಅರ್ಥ ಮಾಡಿಗೊಂಬಲೆ ಮತ್ತು ಒಪ್ಪಿಗೊಂಬಲೆ ನಾವು ತಯಾರಿಲ್ಲೆ.  ಹಿಂದೂ ರಾಜಕಾರಣಿಗೊ ನಮ್ಮ ಸಮಾಜಲ್ಲಿಪ್ಪ ಜಾತಿ ಪದ್ಧತಿಯ ಸ್ವಾರ್ಥಕ್ಕೆ ಉಪಯೋಗಿಸಿಗೊಂಡವು. ದೇವೇಗೌಡ ಒಕ್ಕಲಿಗರ, ಸಿದ್ದರಾಮಯ್ಯ ಕುರುಬರ, ಬಂಗಾರಪ್ಪ ಈಡಿಗರ, ಲಾಲೂಪ್ರಸಾದ್ ಯಾದವರ,  ಮಾಯಾವತಿ ದಲಿತರ, ಶರದ್ ಪವಾರ್ ಮರಾಠರ, ಕರುಣಾನಿಧಿ ದ್ರಾವಿಡರ ಪಂಗಡಂಗಳ ನಾಯಕರು ಹೇಳಿ ಹೇಳಿಸಿಗೊಂಬಲೆ ಬೇಕಾದ ಕೆಲಸವ ಮಾಡಿದವು.  ಹೀಂಗೆ ಒಬ್ಬೊಬ್ಬನೂ ಆಯಾಯ  ಗುಂಪಿನ ಅಧಿಪತಿಯಾಗಿ ತಮ್ಮ  ರಾಜಕೀಯ ಜೀವನವ ಭದ್ರ ಪಡಿಸಿಗೊಂಡವು.   ಹಿಂದೂ ಗುಂಪುಗೊ ಪರಂಪರಾಗತವಾದ ತಮ್ಮ ಪರಸ್ಪರ ವೈಷಮ್ಯದ ಭಾವನೆಯ ತೀರಿಸಿಗೊಂಬಲೆ ಒಳಂದ ಒಳ ಕತ್ತಿ ಮಸೆತ್ತಾ ಇದ್ದರೆ, ಆಯಾಯ ಗುಂಪಿನ ರಾಜಕಾರಣಿಗೊ ಆ ಕಿಚ್ಚಿಂಗೆ  ತುಪ್ಪ ಎರದು ಕೃತಾರ್ಥರಾದವು.  ಹೀಂಗೆ ಹೆಚ್ಚಿನ ರಾಜಕಾರಣಿಗೊ ಹಿಂದೂಗಳಲ್ಲಿ ಮೊದಲೇ ಇದ್ದ  ಒಡಕು ಖಾಯಂ ಆಗಿ ಇಪ್ಪ ಹಾಂಗೆ ಖಾತ್ರಿಪಡಿಸಿಗೊಂಬಲೆ ತಮ್ಮ ಜೀವನವ ಧಾರೆ ಎರದರೆ, ಮುಲಾಯಂ ಸಿಂಗ್ ನ ಹಾಂಗಿಪ್ಪ ಕೆಲವು ಧೂರ್ತರು ಇದು ಸಾಲ ಹೇಳಿ  ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಟ್ಟಿಂಗೆ ಮುಸ್ಲಿಮರ ಓಲೈಕೆಯನ್ನೂ ತಮ್ಮ  ದಿವ್ಯ ಕರ್ತವ್ಯದ ಪಟ್ಟಿಗೆ ಸೇರಿಸಿಗೊಂಡವು.  ಸದಾ ಅವರ ಸೇವೆಗೆ ಕಟಿಬದ್ಧರಾಗಿ ನಿಂದು, ಸ್ವಯಂ-ಪ್ರೇರಣೆಂದ ಬೆಳಿ ಟೊಪ್ಪಿ ಹಾಕಿಗೊಂಡು ಪ್ರತಿ ಮುಸ್ಲಿಂ ಹಬ್ಬಂಗಳಲ್ಲಿಯೂ ತಪ್ಪದ್ದೆ  ಭಾಗವಹಿಸಿ ಬಿರ್ಯಾನಿಯ ಚಪ್ಪರಿಸಿ ತಿಂದು, ತಾವು ಅಲ್ಪಸಂಖ್ಯಾತರ ನಮ್ರ  ಸೇವಕರು ಹೇಳುದರ ಸಾರ್ವಜನಿಕವಾಗಿ ಪ್ರಕಟಪಡಿಸುಲೆ ಎಲ್ಲಾ  ಅವಕಾಶವನ್ನೂ ಉಪಯೋಗಿಸಿಗೊಂಡವು.

ಈ ದೃಷ್ಟಿಂದ ನೋಡಿದರೆ, ಹಿಂದೂಗಳ ಒಟ್ಟು ಮಾಡುವಲ್ಲಿ ಅಡ್ವಾಣಿಯ ರಾಮಜನ್ಮಭೂಮಿ ಆಂದೋಳನದ ರಥ ಯಾತ್ರೆಯ ಚಾರಿತ್ರಿಕ ಕೊಡುಗೆ ಎಂತದು ಹೇಳಿ ಅರ್ಥ ಆವುತ್ತು.  ಆದರೆ, ಅದರ ಪ್ರಭಾವ ಕೇವಲ ತಾತ್ಕಾಲಿಕ.  ತಿರುಗ, ರಾಮ ಸೇತುವೆಯ ವಿಷಯಲ್ಲಿ ಹೋರಾಟ ಮಾಡಿರೆ ಅಷ್ಟೇ ಪರಿಣಾಮಕಾರಿ ಅಕ್ಕು ಹೇಳ್ಳೆಡಿಯ.  ಈ ಉದ್ದೇಶ ಮುಂದುವರಿಯೆಕ್ಕಾದರೆ,  ಎಲ್ಲಾ ಹಿಂದೂಗಳ  ಒಂದು ಲಾಂಛನದ ಅಡಿಲಿ ತಂದು, ಹಿಂದೂಗಳ ಮತಂಗೊ ಹಿಡಿತಲ್ಲಿ ಇಪ್ಪ ಹಾಂಗೆ ಮಾಡಿರೆ ದುಷ್ಟ, ಸ್ವಾರ್ಥಿ ರಾಜಕಾರಣಿಗೊ ದಾರಿಗೆ ಬಂದು,   ಅಲ್ಪ ಸಂಖ್ಯಾತರ ಓಲೈಕೆ ತಾನಾಗಿ ಕಮ್ಮಿ ಅಕ್ಕು.  ಈ ಕೆಲಸ  ನಿರಂತರವಾಗಿ ಸಾಗುವ ಹಾಂಗೆ ಮಾಡ್ಳೆ  ಸಾಮರ್ಥ್ಯ ಇಪ್ಪದು ಮಠಾಧಿಪತಿಗೊಕ್ಕೆ ಮಾತ್ರ ಹೇಳಿ ಎನ್ನ ಅಭಿಪ್ರಾಯ.  ಸಮಾಜದ ಎಲ್ಲಾ ವರ್ಗಂಗಳ ಗೌರವಕ್ಕೆ ಪ್ರಾಪ್ತರಾದ ಪೇಜಾವರ ಸ್ವಾಮೀಜಿಯ ಹಾಂಗಿಪ್ಪವು ಇದರ ಮುಂದಾಳುತ್ವ ವಹಿಸಿದ್ದದು ನಿಜಕ್ಕೂ ಸ್ವಾಗತಾರ್ಹ.   ನಮ್ಮ ಹಾಂಗಿಪ್ಪ ವಿದ್ಯಾವಂತರು ನಮ್ಮ ನಿರ್ಲಿಪ್ತ ಮತ್ತು ನಿರ್ಲಕ್ಷ್ಯದ ಧೋರಣೆಯ ಬಿಟ್ಟು, ಈ ಗಂಭೀರ ವಿಷಯದ ಬಗ್ಗೆ ಹೆಚ್ಚು ಜನಕ್ಕೆ ತಿಳುವಳಿಕೆ ಬಪ್ಪ ಹಾಂಗೆ ಮಾಡಿ,  ಹಿಂದೂ ಸಮಾಜಲ್ಲಿ ಸಮಾನ ಅಭಿಪ್ರಾಯ ಮೂಡಿಸಿದರೆ, ನಮ್ಮ ಮುಂದಿನ ತಲೆಮಾರಿನವು ರಜ ನೆಮ್ಮದಿಲಿ ಬದುಕ್ಕುಲೆ ನಮ್ಮ ಅಳಿಲ ಸೇವೆ ಸಲ್ಲಿಸಿದ ಹಾಂಗೆ ಅಕ್ಕು. 

- ಬಾಪಿ

No comments: