ಸದ್ಯಕ್ಕೆ ಊರಿಲ್ಲಿ ಎಲ್ಲಿ ಹೋದರೂ ಸ್ವಾಭಿಮಾನಿ ವೇದಿಕೆಯ ವಿಷಯದ್ದೇ ಬಿಸಿ ಚರ್ಚೆ. ದಕ್ಷಿಣಕನ್ನಡ ಜಿಲ್ಲೆಲಿ ಭಾಜಪದ ಟಿಕೇಟು ಹಂಚಿಕೆಯ ವಿಷಯಲ್ಲಿ ಸಂಬಂಧಪಟ್ಟ ನಾಯಕರ ಸರ್ವಾಧಿಕಾರಿ ಧೋರಣೆಯ ವಿರುದ್ಧದ ಬಂಡಾಯವೇ ಸ್ವಾಭಿಮಾನಿ ವೇದಿಕೆಯ ಮೂಲಮಂತ್ರ ಹೇಳುದು ಜೆಂಬ್ರಂಗಳಲ್ಲಿ ಮಾತುಕತೆಯ ಸಾಮಾನ್ಯ ವಿಷಯ. ರಾಮಜ್ಜ ಈಗ ಜನಸಂಘವ ತಿರುಗ ಸುರು ಮಾಡಿ ಅದರ ದೀಪದ ಚಿಹ್ನೆಲಿ ಸ್ಪರ್ಧಿಸುವ ಅಂದಾಜಿ ಮಾಡ್ತಾ ಇದ್ದ ಹೇಳಿ ಕಾಣ್ತು. ಮತ್ತೆ, ರಾಮಜ್ಜನುದೇ ಅಡ್ವಾಣಿಯುದೇ ಜೈಲಿಲ್ಲಿ ಒಡನಾಡಿಗಳಾಗಿದ್ದವಾದ್ದರಿಂದ ಅಡ್ವಾಣಿ ಪ್ರಧಾನಿ ಅಪ್ಪಲೆ ರಾಮಜ್ಜಂದು ಯಾವುದೇ ತಕರಾರು ಇಲ್ಲದ್ದ ಕಾರಣ ರಾಮಜ್ಜ ಸ್ಪರ್ಧಿಸಿ ಗೆಲ್ಲುವುದರಿಂದ ಭಾಜಪಕ್ಕೆ ಯಾವುದೇ ಹಾನಿ ಇಲ್ಲೆ, ಒಟ್ಟಿಂಗೆ ಭಾಜಪದ ತಪ್ಪುಗಳ ವಿರುದ್ಧ ಹೋರಾಡಿ ಬುದ್ಧಿ ಕಲಿಸಿದ ಹಾಂಗೆ ಆವುತ್ತು ಹೇಳುವ ವಾದ ಕೇಳಿ ಬತ್ತು. ಅದರೊಟ್ಟಿಂಗೆ, ಕ್ಷೇತ್ರದ ಒಟ್ಟಾರೆ ಸ್ವಾಭಿಮಾನಿ ಹೋರಾಟಗಾರರ ಅಂದಾಜು ಸಂಖ್ಯೆ ೨೦೦೦೦ ಹೇಳಿ ಅಂದಾಜಿಯಡ. ಅಲ್ಲಿಗೆ, ರಾಮಜ್ಜಂಗೆ ಸೋಲು ನಿಶ್ಚಯ ಹೇಳಿಯೂ, ಹೋರಾಟದ ಲಾಭ ಸಿಕ್ಕುದು ಜನಾರ್ಧನ ಪೂಜಾರಿಗೆ ಹೇಳುದುದೇ ಸ್ಪಷ್ಟ ಆವುತ್ತು.
ದೇಶ ಮೊದಲು-ಪಕ್ಷ ನಂತರ-ವ್ಯಕ್ತಿ ಕೊನೆಗೆ ಹೇಳುವ ಧೋರಣೆಗೆ ಅಚಲವಾದ ಬದ್ಧತೆ ಇರೆಕ್ಕಾದ ಆರೆಸ್ಸೆಸ್ ಮತ್ತು ಜನಸಂಘದ ಮೂಲದವಕ್ಕೆ ರಾಷ್ಟ್ರೀಯ ದೃಷ್ಟಿಕೋಣ ಇಲ್ಲದ್ದ ಇಂತಹ ನಡವಳಿಕೆ ಎಷ್ಟು ಶೋಭೆ ತಕ್ಕು ಹೇಳುದು ಚಿಂತಿಸೆಕ್ಕಾದ ವಿಷಯವೇ ಸರಿ. ಜನಸಂಘವ ಪುನಃ ಸ್ಥಾಪನೆ ಮಾಡುವ ಈ ಸ್ವಾಭಿಮಾನಿಗಳ ವ್ಯರ್ಥ ಪ್ರಯತ್ನವ ನೋಡಿ ಶ್ಯಾಮ ಪ್ರಸಾದ ಮುಖರ್ಜಿಯ ಆತ್ಮ ಅದೆಷ್ಟು ಅಸಹಾಯಕತೆಯ ಕಣ್ಣೀರು ಹಾಕಿಗೊಂಡಿದ್ದೋ ? ಸ್ವಾಭಿಮಾನದ ಗುಂಗಿಲ್ಲಿಪ್ಪವಕ್ಕೆ ಈ ಸೂಕ್ಷ್ಮ ವಿಷಯವ ಗಮನಕ್ಕೆ ತೆಕ್ಕೊಂಬಲೆ ಪುರುಸೊತ್ತು ಬೇಕನ್ನೆ ?

- ಬಾಪಿ
No comments:
Post a Comment