Thursday, April 2, 2009

ರಾಮನಾ ? ಕೃಷ್ಣನಾ ?

ಕೆಲವು ಸರ್ತಿ ನೋಡುವಗ, ಭಾಜಪಲ್ಲಿ ಹಿಂದೆಂದೂ ಇಲ್ಲದ್ದಷ್ಟು ಅಂತಃಕಲಹ, ಗೊಂದಲ ಇಪ್ಪ ಹಾಂಗೆ ಕಾಣ್ತು.  ಬಹುಷಃ ಪಕ್ಷದ ನಾಯಕರ  ಮತ್ತು  ಕಾರ್ಯಕರ್ತರ ಮಧ್ಯೆ ಸಂವಹನದ ಕೊರತೆ ತುಂಬಾ ಇದ್ದು ಹೇಳಿರೆ ತಪ್ಪಾಗ.     

ಕರ್ನಾಟಕಲ್ಲಿ ಭಾಜಪದ ಸರಕಾರ ಇನ್ನೂ ೬ ತಿಂಗಳು ಪೂರೈಸುತ್ತಷ್ಟೆ. ಅದರ ಮೊದಲೆ ಎಷ್ಟೊಂದು  ಬೀದಿ ರಂಪ ನಡೆವಲೆ ಸುರು ಆಯಿದು.  ಒಂದು ಕಡೆ ಸ್ವಾಭಿಮಾನಿಗಳ ಬಂಡಾಯ.  ಇನ್ನೊಂದು ಕಡೆ ಶಿವಪ್ಪ, ಯತ್ನಾಳ್  ಹಾಂಗಿಪ್ಪವರ ಬೊಬ್ಬೆ. ಪ್ರತಿಪಕ್ಷದವರಿಂದಲೂ ಹೆಚ್ಚು ವಿರೋಧ ಮಾಡ್ತಾ ಇಪ್ಪವು ಸ್ವಪಕ್ಷೀಯರೇ ! ಬೇರೆ ಪಕ್ಷಂಗಳ ಶಾಸಕರ ತಥಾ-ಕಥಿತ "ಖರೀದಿ"ಯೇ ಮೊದಲಾದ ಭಾಜಪದ ಕೆಲವು ಈ ಶತಮಾನದ ರಾಜಕೀಯದ ಹೊಸ ವಿದ್ಯಮಾನಂಗೊಕ್ಕೆ ತೃಣಮೂಲ ಕಾರ್ಯಕರ್ತರ ಮನಃಪೂರ್ವಕ ಬೆಂಬಲ ಇಲ್ಲೆ.  ಅಭಿಪ್ರಾಯವ ಮುಕ್ತವಾಗಿ ವ್ಯಕ್ತಪಡಿಸುವ ವಾತಾವರಣ ಇಪ್ಪದು ಅರೋಗ್ಯಕರ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣವಾದರೂ ಭಾಜಪದ ಸಿದ್ಧಾಂತಕ್ಕೆ, ಮೌಲ್ಯಂಗೊಕ್ಕೆ ವಿರುದ್ಧ ಹೇಳಿ ಕಾಂಬ, ಹೀಂಗೆ ಮಾಡಿರೆ ಬೇರೆಯವಕ್ಕೂ ಭಾಜಪಕ್ಕೂ ಎಂತ ವ್ಯತ್ಯಾಸ ಹೇಳಿ  ಹಿತೈಶಿಗಳ ಮನಸ್ಸಿನ ಕಾಡುವ ಪ್ರಶ್ನೆಗಳ ವಿಷಯಲ್ಲಿ ಸಂಬಂಧಪಟ್ಟ ಎಲ್ಲೋರನ್ನೂ  ವಿಶ್ವಾಸಕ್ಕೆ ತೆಕ್ಕೊಳೆಕ್ಕಾದ್ದು ಅಗತ್ಯ.  ಯಾವುದು ಸರಿ, ಯಾವುದು ತಪ್ಪು ಹೇಳಿ ಜನಕ್ಕೆ ಅರ್ಥ ಮಾಡುಸುದಾದರೂ ಹೇಂಗೆ?

ಅವಾಸ್ತವಿಕವಾದರೂ ಪ್ರಸ್ತುತವಾದ ಈ ಪ್ರಶ್ನೆಗೆ ಉತ್ತರ ಹುಡುಕ್ಕುವೊ  - ಈ ಚುನಾವಣೆಲಿ ಪುರಾಣದ ರಾಮ ಮತ್ತು ಕೃಷ್ಣ ಎದುರೆದುರು ನಿಂದಿದ್ದರೆ, ಆರಿಂಗೆ ಮತ ಹಾಕುದು ? ಈ ಅಪರೂಪದ ದ್ವಂದ್ವಕ್ಕೆ ಎಂತ ಪರಿಹಾರ ?  ಹೇಳಿರೆ,  ಸದ್ಯದ ಪರಿಸ್ಥಿತಿಗೆ ಆರು ಹೆಚ್ಚು ಸೂಕ್ತ ಹೇಳುದು ಚೋದ್ಯದ ತಾತ್ಪರ್ಯ. ರಾಮ ತ್ರೇತಾಯುಗಲ್ಲಿಯೂ, ಕೃಷ್ಣ ದ್ವಾಪರಾಯುಗಲ್ಲಿಯೂ ಅವತರಿಸಿದ್ದೆಂತಕೆ ? ಇವರ ಪಾತ್ರ ಅದಲು ಬದಲಾಗಿದ್ದರೆ ?  ಬಹುಷಃ ಇಬ್ಬರಿಂಗೂ ತಮ್ಮ ಕರ್ತವ್ಯಂಗಳ ಪೂರೈಸುಲೆ ಎಡಿಯದ್ದೆ,  ಇಬ್ಬರೂ ಅವರವರ ಅವತಾರಂಗಳ ಸಂಪೂರ್ಣ ವೈಫಲ್ಯಂದ ಕೊನೆಗೊಳಿಸೆಕ್ಕಾಗಿ ಬತ್ತೀತೋ ಏನೋ !  ರಾಮನ ಜೀವನ ಶೈಲಿ, ಕಾರ್ಯ ವಿಧಾನಂಗೊಕ್ಕೂ ಕೃಷ್ಣಂದಕ್ಕೂ ಅಜಗಜಾಂತರ.  ಆದರೆ, ಆಯಾಯ ಯುಗಂಗೊಕ್ಕೆ ಅವರ ಧೋರಣೆಗೊ ಸರಿಯಾಗಿತ್ತು.  ಹಾಂಗಾರೆ, ಸರಿ ತಪ್ಪುಗಳ ವಿಮರ್ಶೆ ಪರಿಸ್ಥಿತಿಯ ಅವಲಂಬಿಸಿಗೊಂಡಿಪ್ಪದಲ್ಲದೋ ? ಮರ್ಲು ನಾಯಿಯ ಕೊಲ್ಲೆಕ್ಕಾದರೆ ತ್ರೇತಾಯುಗದ ಕ್ರಮಲ್ಲಿ  ಶಂಖನಾದ ಮಾಡಿ  ಧರ್ಮ ಯುದ್ಧ ಸಾರಿರೆ ಪ್ರಯೋಜನ ಇದ್ದೋ ? ಪುದೆಲಿನ ಹಿಂದೆ ಹುಗ್ಗಿ ನಿಂದು ಬಡಿದು ಸಾಯಿಸುದೇ ಪರಿಹಾರ.  ರಾಮನ ಆದರ್ಶದ ಮಟ್ಟಕ್ಕೆ, ಗೊಂತಿಪ್ಪ ಸತ್ಯವ  ಹೇಳದ್ದೆ ಮೌನವಾಗಿಪ್ಪದೂ ಲೊಟ್ಟೆ ಹೇಳಿದ ಹಾಂಗೇ.  ಆದರೆ ಕೃಷ್ಣಂಗೆ ಹಾಂಗಿಪ್ಪ ಖಡ್ಡಾಯದ ಮಡಿವಂತಿಕೆಯ ಗೊಂದಲ ಇಲ್ಲೆ.   ಒಳ್ಳೆಯತನ ಇದ್ದರೆ ಸಾಲ, ಆರತ್ರೆ ಮತ್ತು ಯಾವ ಪರಿಸ್ಥಿತಿಲಿ ಎಷ್ಟು ಒಳ್ಳೆಯತನವ ಉಪಯೋಗಿಸೆಕ್ಕು ಹೇಳುವ ಜಾಣ್ಮೆ ಮತ್ತು ವಿವೇಕಂಗಳೂ ಅಷ್ಟೇ ಮುಖ್ಯ ಹೇಳಿ ಕೃಷ್ಣ ತೋರಿಸಿ ಕೊಟ್ಟ.  ಅಲ್ಲಿಗೆ, ಈ  ಕಾಲಕ್ಕೆ ಅತ್ಯಂತ ಹತ್ತಿರದ ಯುಗದ ರಾಜಕಾರಣಿಯಾದ ಕೃಷ್ಣಂಗೆ ಎನ್ನ ಮತ ಹೇಳಿ ಪ್ರತ್ಯೇಕ ಹೇಳೆಕ್ಕೋ ?

ಈಗ ಕಲ್ಪನಾ ಲೋಕಂದ ಕಲಿಯುಗದ ಯೆಡ್ಯೂರಪ್ಪನ ವಿಷಯಕ್ಕೆ ಬಂದರೆ,  ಹುಚ್ಚು ನಾಯಿಗಳ ಸ್ಥಾನಲ್ಲಿಪ್ಪ ಪ್ರತಿಪಕ್ಷಂಗಳ (ಹೆಸರು ಹೇಳಿಸಿಗೊಂಬಲೂ ಅನರ್ಹರಾದವು, ಏಕೆ ಹೇಳಿರೆ ಅವರ ಪಾಪ ನವಗೆ ಅಂಟುಗು !) ಹಣಿಸುಲೆ ತಕ್ಕಮಟ್ಟಿಂಗೆ ಅವರದ್ದೇ ಶೈಲಿಯ ಪ್ರತಿತಂತ್ರದ ಅವಶ್ಯಕತೆ ಇದ್ದು.  ಇದು ತೀರಾ ಅತಿಯಾಗದ್ದ  ಹಾಂಗೆ ಜಾಗರೂಕರಾಗಿದ್ದುಗೊಂಡು ೫ ವರ್ಷದ ಜನಪರ ಆಢಳಿತವ ಯಶಸ್ವಿಯಾಗಿ ನಡೆಶಲಿ ಹೇಳಿ ಪ್ರಾರ್ಥಿಸುತ್ತೆ.   ಅಲ್ಲಿ ವರೆಗೆ ಭಾಜಪದ ಎಲ್ಲಾ ಹಿತೈಶಿಗೊಕ್ಕೂ ಭಗವಂತ  ತಾಳ್ಮೆಯ ಕರುಣಿಸಲಿ ! 

- ಬಾಪಿ        

1 comment:

Ranjana H said...

Nice writing skill. Nimma blag nanage ishtavayitu. heege bareyuttiri. samayaviddaga nanna putta blag gu bheti koduttiri.

ranjanah.blogspot.com
ranjanahegde.wordpress.com