Tuesday, March 31, 2009

ಯಥಾ ರಾಜಾ ತಥಾ ಪ್ರಜಾ

ನಿನ್ನೆ ಒಬ್ಬ ಪರಿಚಯದವನತ್ರೆ  ಮಾತಾಡ್ತಾ ಇಪ್ಪಗ ಚುನಾವಣೆಯ ವಿಷಯ ಬಂತು. ಅವ,  ಎನ್ನತ್ರೆ ಪರಿಚಯ ಪತ್ರ ಇದ್ದು, ಆದರೆ ಎಲ್ಲರೂ ಸಮಾನವಾಗಿ ಭ್ರಷ್ಟರೇ ಆದ ಕಾರಣ ಆರಿಂಗೂ ಮತ ಹಾಕುತ್ತಿಲ್ಲೆ ಹೇಳಿ ಹೇಳಿದ. ಅವನ ಮಾತಿಲ್ಲಿ ತನ್ನ ನಿರ್ಧಾರದ ಬಗ್ಗೆ  ಅತಿಯಾದ ಹೆಮ್ಮೆ ಎದ್ದು ಕಾಣ್ತಾ ಇತ್ತು !  ಹೀಂಗೆ ಭ್ರಮ ನಿರಸನಗೊಂಡವು, ಅತಿ ಬುದ್ಧಿವಂತರು,  ವಿಚಿತ್ರ ತರ್ಕ ಹಾಗೂ ವಿತಂಡ ವಾದ ಮಾಡುವವರಲ್ಲಿ ಕೆಲವರಿಂಗಾದರೂ ಮುಸ್ಲಿಮರಾಗಿ ಹುಟ್ಟಲಾವುತ್ತೀತಿಲ್ಯಾ ಅಥವಾ ಈಗದರೂ ಮತಾಂತರ ಮಾಡಿಗೊಂಬಲಕ್ಕನ್ನೆ  ಹೇಳಿ ಅನ್ನಿಸುತ್ತು.  Friends of BJPಯವರ  ಸಭೆಲಿ ಒಬ್ಬೊಬ್ಬನೂ ಕನಿಷ್ಟ ೧೦೦ ಜನರ ಹುರಿದುಂಬಿಸೆಕ್ಕು ಹೇಳಿ ತೆಕ್ಕೊಂಡ ಪ್ರತಿಜ್ಞೆ ನೆಂಪಾಗಿ ಅವಂಗೆ ರಜ ಭಾಷಣ ಮಾಡಿದೆ. ಅವನ ಮನಸ್ಸು ಪೂರ್ತಿ ಪರಿವರ್ತನೆ ಆಯಿದೋ ಹೇಳಿ ಗೊಂತಾಯೆಕ್ಕಾದರೆ, ಇನ್ನೂ ಕೆಲವು ಸರ್ತಿ ದೂರವಾಣಿ ಕರೆ ಮಾಡೆಕ್ಕಕ್ಕು !
   
ಕೋಳಿ ಮೊದಲೊ ಅಥವಾ ಮೊಟ್ಟೆ ಮೊದಲೋ ಹೇಳುವ ನಮುನೆಯ ಸಮಸ್ಯೆ  ಬಂದಪ್ಪಗ  ಬೇರೆ ರೀತಿಲಿ ವಿಮರ್ಶೆ ಮಾಡೆಕ್ಕಾವುತ್ತು.  ಪ್ರಪಂಚದ ಕಣ್ಣಿಂಗೆ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಆದರೂ, ಇಲ್ಲಿಯ ಪ್ರತಿಯೊಂದು ವ್ಯವಸ್ಥೆಯೂ  ಹಾಸ್ಯಾಸ್ಪದವಾಗಿಪ್ಪಲೆ ಆರು ಕಾರಣ ? ಬೇರೆ ದೇಶಕ್ಕೆ ಹೋದ ಭಾರತೀಯರು  ಒಳ್ಳೆಯ ನಾಗರಿಕರಾಗಿ ಬದುಕ್ಕುತ್ತಾ ಇಪ್ಪದರ ನೋಡಿದರೆ, ಇಲ್ಲಿಯ  ನಿಜವಾದ ಕೊರತೆ ಸರಿಯಾದ ನಾಯಕತ್ವ ಇಲ್ಲದ್ದದು ಹೇಳಿ ಸ್ಪಷ್ಟ ಆವುತ್ತು. ಹಾಂಗಾರೆ, ಒಳ್ಳೆಯ ನಾಯಕನ ಗುಣಂಗೊ  ಎಂತದು ? ದೂರದರ್ಶಿತ್ವ ಮತ್ತು ನಿಸ್ಪೃಹತೆ ಹೇಳುವ ಎರಡು ಗುಣಂಗೊ ಸ್ವಂತವಾಗಿ ಇದ್ದರೆ, ಬಾಕಿ ಎಲ್ಲ ಬಾಡಿಗೆಗೆ ಸಿಕ್ಕುತ್ತು. ನಮ್ಮ ನಾಯಕರು ಹೇಳಿಸಿಗೊಂಬವಕ್ಕೆ ಈ ಎರಡು ಬಿಟ್ಟು ಬಾಕಿ ಎಲ್ಲಾ ಧಾರಾಳ ಇದ್ದು. ಗುಜರಾತ್ ಇಂದು ಮಾದರಿ ರಾಜ್ಯವಾಗಿ ಮುಂದೆ ಬಂದಿದ್ದರೆ, ಅದಕ್ಕೆ ಮೋದಿಯ ಆ ಎರಡು ಗುಣಂಗಳೇ ಕಾರಣ. ವ್ಯವಸ್ಥೆಯ ಮೇಲೆ ನಂಬಿಕೆ ಕಳಕ್ಕೊಂಡವಕ್ಕೂ ಅವನೇ ಸ್ಪೂರ್ತಿ ಮತ್ತು ಆಶಾದೀಪ.  

ಇದೇ ವಾದಲ್ಲಿ ಭಾಜಪವೇ ಯಾಕೆ ಹೇಳುವ ಪ್ರಶ್ನೆಗೆ ಉತ್ತರವೂ ಸಿಕ್ಕುತ್ತು. ಆರೆಸ್ಸೆಸ್ ನ ಹಿನ್ನೆಲೆಂದ ಬಂದವಕ್ಕೆ ಮಾತ್ರ ನಿಸ್ವಾರ್ಥ, ಸಮಾಜ ಸೇವೆಯ ದೃಷ್ಟಿಕೋಣ ಇಪ್ಪಲೆ ಸಾಧ್ಯ.  ತಮ್ಮದೇ ಆದ ವಿಶೇಷ ಸಿದ್ಧಾಂತದ   ಎಡಪಂಥೀಯ ರಾಜಕಾರಣ ಇದ್ದು. ಆದರೆ, ಅವರದ್ದು ಹಳಸಲು ತತ್ವ. ಇನ್ನು ಕಾಂಗ್ರೆಸಿಂದು ಎಡೆಬಿಡಂಗಿ ತತ್ವ.   ಧರ್ಮ ನಿರಪೇಕ್ಷತೆ ಹೇಳುವ ಘೋಷವಾಕ್ಯದೊಟ್ಟಿಂಗೆ,  ಅಲ್ಪಸಂಖ್ಯಾತರ ನಿರ್ಲಜ್ಜೆಂದ  ಓಲೈಕೆ  ಮಾಡುವ ಪ್ರಾಣಿಗೊ.   ಭಾಜಪದ ಪ್ರತಿಯೊಂದು ಸಿದ್ಧಾಂತವೂ ರಾಷ್ಟ್ರೀಯವಾದದ ಉತ್ಕಟ ಪ್ರಕಟಣೆ. 

ವಾಜಪೇಯಿ ಇಪ್ಪಗ ಮಾಡಿದ ಸಾಧನೆಗಳ ಸರಿಯಾದ ವಿಮರ್ಶೆ  ಆಯೆಕ್ಕಾದರೆ, ಅವನ ಪ್ರತಿ ನಿರ್ಧಾರವನ್ನೂ  ಎಷ್ಟು ನಮುನೆಯ ಪಕ್ಷಂಗಳ ಸಮತೋಲನವ ಕಾಪಾಡಿಗೊಂಡು ಮಾಡೆಕ್ಕಾಗಿತ್ತು  ಹೇಳುವ ಸತ್ಯವ ನೆಂಪು ಮಾಡಿಗೊಂಬದು ಒಳ್ಳೆದು.  ಅವಂಗೆ ೫ ವರ್ಷದ  ಪ್ರತಿದಿನವೂ ಮುಳ್ಳಿನ ಹಾಸಿಗೆಲಿ ಮನಿಗಿದ ಅನುಭವ ಆಗಿಕ್ಕು.   ಎಂತದೇ  ಮಾಡೆಕ್ಕಾದರೂ ಸ್ವಂತ ಬಹುಮತ ಬೇಕು. ಅಥವಾ,ಸರಕಾರಲ್ಲಿ ಶಿವಸೇನೆಯ ಹಾಂಗಿಪ್ಪ ಆಪ್ತರಾದ  ಮಿತ್ರಪಕ್ಷಂಗಳ ಸಹಭಾಗಿತ್ವ ಮಾತ್ರ ಇರೆಕು. ಹೀಂಗೆ ಆಯೆಕ್ಕಾದರೆ, ಜನರಲ್ಲಿಪ್ಪ ಸಿನಿಕತನ ಹೋಯೆಕ್ಕು. ಭಾಜಪದ ಹಿತೈಷಿಗೊ ಎಲ್ಲೋರೂ ಸಕಾರಾತ್ಮಕವಾಗಿಯೂ ಸಕ್ರಿಯರಾಗಿಯೂ ಇರೆಕು.  ಹೀಂಗೆ ಮಾಡಿದರೆ ಮಾಂತ್ರ, ನಮ್ಮ ಅತಿ ಹತ್ತಿರದ ಬಂಧುಗಳಾಗಿದ್ದು, ರಾಷ್ಟ್ರೀಯವಾದದ ಪ್ರತಿಪಾದನೆಗಾಗಿ ಪ್ರಾಣಕೊಟ್ಟ ಸಾಮೆತ್ತಡ್ಕ ಮಾವನ ಹಾಂಗಿಪ್ಪವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಹಾಂಗೆ ಅಕ್ಕು. 

- ಬಾಪಿ        

No comments: