Sunday, October 3, 2010

ಕವಲು

ಇಂದ್ರಾಣ ಕಾಲಲ್ಲಿ  ಸಾಹಿತ್ಯ ಕ್ಷೇತ್ರಲ್ಲಿ ಹೆಸರು ಮಾಡ್ಳೆ ಅಥವಾ ಪ್ರಶಸ್ತಿ ಪಡಕ್ಕೊಂಬಲೆ  ಬರವಣಿಗೆಲಿಪ್ಪ ತಿರುಳು ಮತ್ತು ಮೌಲ್ಯಕ್ಕಿಂತ ತಥಾ ಕಥಿತ ಸಾಹಿತಿಗೆ ಇಪ್ಪ ರಾಜಕೀಯ ಸಂಪರ್ಕ ಹೆಚ್ಚು ಮುಖ್ಯ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯವೇ.  ಆದರೆ ನಮ್ಮ ಪುಣ್ಯ, ದೇವರು ಎಲ್ಲದರಲ್ಲಿಯೂ ಒಂದು ಸಮತೋಲನವ ಕಾಪಾಡುತ್ತ.   ಗಡ್ಡ ಬಿಟ್ಟು, ಖದ್ದರ್ ಅಂಗಿ ಹಾಕಿ, ಬಂಡಾಯ ಶೈಲಿಯ ಸರಕುಗಳಿಂದಲೇ ಪ್ರಚಾರ ಗಿಟ್ಟಿಸಿಗೊಂಬವು ಒಂದು ಕಡೆ ಇದ್ದರೆ,   ಬಿಡುಗಡೆ ಆದ ಕೆಲವೇ ದಿನದ ಒಳ   ಪುಸ್ತಕದ ಸಾವಿರಗಟ್ಳೆ ಪ್ರತಿಗೊ  ಮಾರಾಟ ಆಗಿ, ತಿರುಗ ತಿರುಗ ಮುದ್ರಣ ಕಾಂಬ ಒಳ್ಳೆ ಸಾಹಿತ್ಯಕೃತಿಗಳ  ರಚನೆ ಮಾಡುವವೂ ಇದ್ದವು.   ಕೃತಿಚೌರ್ಯದ ಆರೋಪ ಹೊತ್ತುಗೊಂಡಿಪ್ಪ   ಒಬ್ಬ ಕನ್ನಡ "ಸಾಹಿತಿ"ಗೂ  ಜ್ಞಾನಪೀಠ ಪ್ರಶಸ್ತಿ  ಬಂದದು ಒಂದು ದುರಂತ ಆದರೆ,   ಅಂತಹ ಪ್ರತಿಷ್ಠೆಯ ಪ್ರಶಸ್ತಿಗೊ ಬಾರದ್ದೆ ಇದ್ದರೂ    ಜನಮನ್ನಣೆಯ ಮಾನದಂಡಲ್ಲಿ ಅತ್ಯಂತ ಎತ್ತರಲ್ಲಿಪ್ಪ  ಭೈರಪ್ಪನ ಹಾಂಗಿಪ್ಪ ಮೇರು ಸಾಹಿತಿಗಳೂ ನಮ್ಮ ಮಧ್ಯೆ ಇಪ್ಪದು ಸುದೈವ.      ಭೈರಪ್ಪನ ಹಾಂಗಿಪ್ಪ ಸಾರಸ್ವತ ಲೋಕದ ಋಷಿಗಳಿಂದಾಗಿ  ಕನ್ನಡ ಸಾಹಿತ್ಯ ಶ್ರೀಮಂತ ಆದ್ದದು ಮಾಂತ್ರ ಅಲ್ಲ, ಇಂದ್ರಾಣ ಗಣಕಯಂತ್ರದ ಯುಗಲ್ಲಿಯೂ ಕನ್ನಡದ ಜನರಲ್ಲಿ ಓದುವ ಹವ್ಯಾಸ ಜೀವಂತವಾಗಿ ಒಳುಕ್ಕೊಂಡಿದು.  
 
ಭೈರಪ್ಪ ಎಂತದೇ ಬರದರೂ ಸಾಮಾಜಿಕ ಚರ್ಚೆಯ ವಿಷಯ ಅಪ್ಪದು ಸಾಮಾನ್ಯ ಸಂಗತಿ.   ವಿಜಯ ಕರ್ನಾಟಕದವು ನಡೆಶಿದ ಮತಾಂತರದ ಬಗ್ಗೆ ನಡೆದ ಲೇಖನ ಸರಣಿಗಳಲ್ಲಿಯೂ,  ಇದೇ ಅನುಭವ ಆತು.  ಅವನ ಕೃತಿಗಳ ಸರಿಯಾದ ಮೌಲ್ಯಮಾಪನ ಮಾಡುದರ  ಬದಲು ಹೆಚ್ಚಿನ ವಿಮರ್ಶಕರು  ಪೂರ್ವಗ್ರಹಂದ ಅವನ ಕೃತಿಗಳಲ್ಲಿ ಬಪ್ಪ ವಿಷಯಂಗಳ ಅವನ ಸೈದ್ಧಾಂತಿಕ ನಿಲುವು ಹೇಳಿ ಆರೋಪಿಸಿ ವೈಯಕ್ತಿಕ ನಿಂದನೆಗೆ ತೊಡಗುದು ಮಾತ್ರ ವಿಷಾದನೀಯ.   ಇತ್ತೀಚೆಗೆ ಭೈರಪ್ಪ ಬರೆದ "ಕವಲು" ಕಾದಂಬರಿಯ ಬಗ್ಗೆ ಇತ್ತ   ವಿಮರ್ಶೆಯ ಕಾರ್ಯಕ್ರಮಕ್ಕೆ ಹೋಗಿಪ್ಪಗ  ಶತಾವಧಾನಿ ಗಣೇಶ್  ಹೇಳಿದ ವಿಷಯ ಇಂದಿನ   ವಿಮರ್ಶಕರ ಒಟ್ಟಾರೆ ದೃಷ್ಟಿಕೋಣ ಮತ್ತು (ಅ)ಪ್ರಬುದ್ಧತೆಗಳ ಎತ್ತಿ ತೋರಿಸುವ ಹಾಂಗಿತ್ತು.  ಹೆಚ್ಚಿನವು ಮಾಡುದು  ಪ್ರಚಾರ  ಮತ್ತು ಮನರಂಜನೆಗಾಗಿಪ್ಪ ಚರ್ಚೆಯೇ ಹೊರತು ವಿಷಯದ ಮೇಲೆ ಇಪ್ಪ ಆಸಕ್ತಿಂದಾಗಿ ಅಲ್ಲ.   
 
ಹಿಂದಾಣ ಕಾಲದ ವಿಷಯಂಗಳ ಬಗ್ಗೆ ಸಂಶೋಧನೆ ಮಾಡಿ ಅಂಬಗಾಣ ಕಾಲಲ್ಲಿ   ಹೀಂಗಿದ್ದತ್ತು ಹೇಳಿ ತಿಳಿಶುವವು  ಚರಿತ್ರೆಕಾರರು. ತಮ್ಮ ಜೀವನಕಾಲಲ್ಲೇ ಆದ, ಅವುತ್ತಾ ಇಪ್ಪ   ಬದಲಾವಣೆಗಳ ದಾಖಲಿಸಿ ಮುಂದಿನ ಪೀಳಿಗೆಯವಕ್ಕೆ ಉಪಕಾರ ಮಾಡುವವು  ಸಮಾಜಶಾಸ್ತ್ರಜ್ಞರು.   ವರ್ತಮಾನದ ಬರವಣಿಗೆಗೊ ಭವಿಷ್ಯಲ್ಲಿ ಚರಿತ್ರೆಯ ಟಿಪ್ಪಣಿಗಳಾಗಿ ಉಪಯೋಗ ಆವುತ್ತು.   ಸಾಹಿತ್ಯ ಮತ್ತು ಪತ್ರಿಕೋದ್ಯಮ - ಈ ಎರಡು ಕ್ಷೇತ್ರಲ್ಲಿಯೂ ಸಮಾಜಕ್ಕೆ  ಇಂತಹ ಒಂದು  ಅಪೂರ್ವ ಕಾಣಿಕೆ ಕೊಡುವ ಅವಕಾಶ ಇದ್ದು.  ಈ ದೃಷ್ಟಿಂದ ನೋಡಿರೆ ಭೈರಪ್ಪ ತನ್ನ ಬರಹಂಗಳ ಮೂಲಕ ಮುಂದಾಣ ಚರಿತ್ರೆಕಾರರ ಕೆಲಸದ ಹೊರೆಯ ಕಮ್ಮಿ ಮಾಡಿದ್ದ ಹೇಳ್ಳಕ್ಕು. 
 
ಭೈರಪ್ಪನ ಕಾದಂಬರಿಯ ಹಿನ್ನೆಲೆಲಿ  ೨೦ನೇ ಶತಮಾನದ ಉತ್ತರಾರ್ಧದ ಜೀವನ ಕಾಲವ ಅವಲೋಕನ ಮಾಡಿರೆ, ಸಮಾಜಲ್ಲಿ ಪುರುಷ-ಮಹಿಳೆಯರ ಸ್ಥಾನಮಾನ  ವಿಪರೀತ  ಬದಲಾವಣೆ ಆದ್ದದು ಕಂಡು ಬತ್ತು.  ಅರ್ಹತೆ ಇದ್ದರೂ ಬಡತನಂದಾಗಿಯೋ, ಸಂಪ್ರದಾಯಂದಾಗಿಯೋ ವಿದ್ಯಾಭ್ಯಾಸ ಮುಂದುವರಿಸದ್ದೆ ಬಾಲ್ಯಲ್ಲಿಯೇ ಮದುವೆ ಆಗಿ ಸಂಸಾರದ  ಹೊರೆ ಹೊತ್ತು, ಪುರುಷ ಪ್ರಾಧಾನ್ಯವ ಪ್ರಶ್ನಿಸದ್ದೆ  ಜೀವನ ಸಾಗಿಸಿದ ಹಳೆ ತಲೆಮಾರಿನ ಹೆಮ್ಮಕ್ಕೊಗೂ   ಮಾಣ್ಯಂಗಳಷ್ಟೇ ಕಲಿವಕೆ ಮಾಡ್ಯೊಂಡು ಗಂಡು-ಹೆಣ್ಣುಗಳ ಸಮಾನತೆಯ  ಪ್ರತಿಪಾದಿಸುವ,  ಭೌದ್ಧಿಕ  ಸ್ವಾಯತ್ತತೆ  ಮತ್ತು ಆರ್ಥಿಕ ಸ್ವಾವಲಂಬನೆಗಳೊಟ್ಟಿಂಗೆ  ಸ್ವಾಭಿಮಾನಂದ ಬದುಕ್ಕುಲೆ  ಇಚ್ಛಿಸುವ ಇಂದಿನ ತಲೆಮಾರಿನ  ಹುಡುಗಿಯರಿಂಗೂ ಅಜಗಜಾಂತರ. ಇಪ್ಪದರನ್ನೇ ಆದಷ್ಟು ಪ್ರೀತಿಂದ ಮಕ್ಕೊಗೆ ಹಂಚಿ ಕೊಟ್ಟು, ಮಕ್ಕಳ ಭವಿಷ್ಯಲ್ಲಿಯೇ ತಮ್ಮ ಜೀವನದ ಪರಿಪೂರ್ಣತೆ ಕಂಡ  ಮೊದಲಾಣವರನ್ನೂ  ಆಧುನಿಕ ಬದುಕಿನ ಓಟಲ್ಲಿ  ಗೆಲ್ಲುವ  ಆಶೆಯೊಟ್ಟಿಂಗೇ  ತಾವು ಬಾಲ್ಯಲ್ಲಿ   ವಂಚಿತರಾದ  ಸುಖ-ಸೌಲಭ್ಯಂಗಳ ಎಲ್ಲಾ   ಮಕ್ಕೊಗೆ ಒದಗಿಸೆಕ್ಕು  ಹೇಳುವ ಹುಮ್ಮಸ್ಸಿನ ಇಂದ್ರಾಣವರನ್ನೂ ಹೋಲಿಕೆ ಮಾಡುದು ಎಷ್ಟು ಸರಿ   ಹೇಳಿ ಗೊಂತಿಲ್ಲೆ.  ಅಷ್ಟಾಗಿ ಕಲಿವಿಕೆಯೂ ಇಲ್ಲದ್ದೆ, ಹೊರ ಪ್ರಪಂಚದ ಜ್ಞಾನವೂ ಇಲ್ಲದ್ದ ಅಬ್ಬೆಪ್ಪಂದ್ರ ನೆರಳಿಲ್ಲಿ ಬೆಳದ್ದರಿಂದಾಗಿ  ಹಳೆ ತಲೆಮಾರಿನ  ಮಕ್ಕೊಗೆ ಮಾರ್ಗದರ್ಶನದ ಕೊರತೆ ಇದ್ದಿಕ್ಕಾದರೂ ಪ್ರತಿಭೆ ಇಪ್ಪವು ಮತ್ತು  ಸ್ವಪ್ರೇರಣೆಂದ ಧುಮುಕಿದವು ಆರೂ ಸಾಮಾನ್ಯವಾಗಿ ಅವಕಾಶಂದ ವಂಚಿತರಾಯಿದವಿಲ್ಲೆ ಹೇಳಿ ಧಾರಾಳ ಹೇಳ್ಳಕ್ಕು.   ಅದೇ, ಸಂವಹನ ಮಾಧ್ಯಮಂಗಳ ಬಾಹುಳ್ಯದ  ಇಂದ್ರಾಣ ಯುಗಲ್ಲಿ  ಎಂತ ಬೇಕಾರೂ ಕೈಮುಷ್ಟಿ ಒಳವೇ ತಯಾರು  ಸಿಕ್ಯೊಂಡಿಪ್ಪಗ  ಮಕ್ಕೊಗೆ  ಅಗತ್ಯಕ್ಕಿಂತ ಹೆಚ್ಚಿನ  ಮಾರ್ಗದರ್ಶನ ಸಿಕ್ಕುತ್ತು ಹೇಳುವ ಪರಿಸ್ಥಿತಿ ಇದ್ದು.  ಆದರೆ, ಸವಲತ್ತು ಮತ್ತು ಅವಕಾಶಂಗೊ ಇಪ್ಪ ಪ್ರಮಾಣಲ್ಲಿ ಇಂದ್ರಾಣ ಮಕ್ಕಳ ಭವಿಷ್ಯ ಹೆಚ್ಚು ಉಜ್ವಲ ಮಾಡ್ಳೆಡಿಗು ಹೇಳ್ಳೆ ಎಡಿಯ.  ಕರ್ತವ್ಯ ನಿರ್ವಹಣೆಲಿ  ಅತಿಮುಖ್ಯವಾದ ನಿಃಸ್ವಾರ್ಥ ತ್ಯಾಗ ಮತ್ತು ಸಮರ್ಪಣಾ ಭಾವಂಗಳೇ  ಹಳೆ ಮತ್ತು ಹೊಸ ತಲೆಮಾರಿನ  ಅಬ್ಬೆಪ್ಪಂದ್ರ ಮಧ್ಯೆ  ಇಪ್ಪ ವ್ಯತ್ಯಾಸದ ಸಾರಾಂಶ ಹೇಳಿ ಎನ್ನ ಅಭಿಪ್ರಾಯ.
 
ಇನ್ನು ಕೊನೆಯದಾಗಿ,  ಉಪಸಂಹಾರ.  ಘೋಷಣೆ ಕೂಗಿ, ಬೊಬ್ಬೆ ಹಾಕಿಯೇ ತಮ್ಮ ಅಸ್ತಿತ್ವವ ಲೋಕಕ್ಕೆ ತೋರಿಸಿಗೊಂಬ  ಸ್ತ್ರೀವಾದಿಗಳ ಮತ್ತು ಸ್ತ್ರೀ-ಪುರುಷ ಸಮಾನತಾ ವಾದಿಗಳ  ಮಧ್ಯೆಯೂ ಸಮಾಜಲ್ಲಿ ಎದ್ದು ಕಾಂಬ ಹಾಂಗಿಪ್ಪ ಕೆಲಸ ಮಾಡಿದ ಕೆಲವು ಮಹಿಳಾಮಣಿಗಳ ಹೆಸರು ಉಲ್ಲೇಖಿಸದ್ರೆ ಅಪಚಾರ ಅಕ್ಕು.  ಧಾರ್ಷ್ಟ್ಯ, ದರ್ಪ, ಅಹಂಕಾರಂಗಳೇ ತಾಂಡವವಾಡುವ ಪುರುಷ ಪ್ರಧಾನ  ಆರಕ್ಷಕ ಇಲಾಖೆಯನ್ನೇ ತನ್ನ ಕಾರ್ಯಕ್ಷೇತ್ರವಾಗಿ ಆರಿಸಿ ಕೆಲಸಲ್ಲಿ ಗಮನಾರ್ಹ ಸಾಧನೆ ಮಾಡಿದ ಕಿರಣ್ ಬೇಡಿ, ವೃತ್ತಿ ಕ್ಷೇತ್ರಲ್ಲಿ ದುಡಿವಗ  ಬೇಕಾದಷ್ಟು ಹೆಸರು ಮಾಡಿ   ಜನಪ್ರಿಯತೆಯ ಉತ್ತುಂಗಲ್ಲಿಪ್ಪಗಳೇ  ನಿವೃತ್ತರಪ್ಪ  ಕಷ್ಟದ ನಿರ್ಧಾರ ತೆಕ್ಕೊಂಡು  ಸಂಸಾರಸ್ಥರಾಗಿ ತಮ್ಮ ಕರ್ತವ್ಯವ ಯಶಸ್ವಿಯಾಗಿ ನಿರ್ವಹಿಸಿದ  ಮಾಧುರಿ  ದೀಕ್ಷಿತ್,  ಶರ್ಮಿಳಾ ಟಾಗೋರ್  ರಂತಹ ಚಲನಚಿತ್ರನಟಿಯರು,  ಸ್ವತಃ ಬೇಕಾದಷ್ಟು ಪ್ರತಿಭೆ ಹೊಂದಿದ್ದರೂ ಗೆಂಡನ  ಕೆಲಸಕ್ಕೆ ಸದಾ ಒತ್ತಾಸೆಯಾಗಿ ನಿಂದು ತೆರೆಮರೆಯ ಪಾತ್ರಲ್ಲಿಯೇ ಧನ್ಯತೆ ಕಂಡ  ಸುಧಾ ಮೂರ್ತಿ - ಇಂತಹ ಕೆಲವು ಅಪರೂಪದ ವ್ಯಕ್ತಿಗೊ.  ಎಷ್ಟು ಜನ ಆಧುನಿಕ ಹುಡುಗಿಯರಿಂಗೆ ಇಂತಹವರ ಬದುಕು ಮತ್ತು  ಸಾಧನೆಗೊ ಅನುಕರಣೀಯವಾಗಿ ಕಾಣ್ತು  ಹೇಳುದರ ಮೇಲೆ ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ನಿರ್ಧಾರ ಅಕ್ಕು.  ಇಂದ್ರಾಣ ಪೀಳಿಗೆಯ ಬಹುತೇಕರಿಂಗೆ  ರಾಖೀ ಸಾವಂತ್ ಅಥವಾ  ಮಲ್ಲಿಕಾ ಶೆರಾವತ್  ನ ಹಾಂಗಿಪ್ಪವು ಆದರ್ಶಪ್ರಾಯರಾಗಿ ಕಂಡರೆ ದೇವರೇ ಗತಿ !
 
-ಬಾಪಿ
 
 
 
 
 

Sunday, September 12, 2010

ತಿಂಗಳ ಚರ್ಚೆ

ಕೆಲವು ಸರ್ತಿ ಬಾಲ್ಯದ ದಿನಂಗೊ ನೆಂಪಪ್ಪಗ  ಅದರ ಸುಮ್ಮನೆ ಮೆಲುಕು ಹಾಕಿಗೊಂಡೇ ಕೂಪೊ ಹೇಳಿ ಕಾಣ್ತು.   "ಆ ದಿನಂಗಳ" ಸವಿನೆನಪಿನ ಜಾಡಿಲ್ಲಿ ಹೋದರೆ ಎಷ್ಟು ಹೊತ್ತಾದರೂ  ಬೊಡಿತ್ತಿಲ್ಲೆ. ಇದೇ ವಿಷಯವ  ವೋ ಕಾಗಝ್  ಕಿ ಕಷ್ಟಿ, ವೋ ಬಾರಿಶ್  ಕಾ ಪಾನಿ  ಹೇಳುವ ಜಗಜೀತ್ ಸಿಂಗ್ ನ ಗಝಲ್ ಲ್ಲಿ, ಸುಶ್ರಾವ್ಯವಾದ ಪದ್ಯರೂಪಲ್ಲಿ  ಅನುಭವಿಸಲಕ್ಕು.
 
ಶಾಲೆಯ ದಿನಂಗಳಲ್ಲಿ ಕ್ಲಾಸಿಲ್ಲಿ ತಿಂಗಳಿಂಗೊಂದು ಚರ್ಚಾಕೂಟ  ನಡಕ್ಕೊಂಡಿತ್ತದು ಹೀಂಗಿಪ್ಪ ಒಂದು ನೆನಪುಗಳಲ್ಲಿ ಒಂದು.  ಹೆಚ್ಚಾಗಿ "ಹಳ್ಳಿ ಮೇಲೋ ಪಟ್ಟಣ ಮೇಲೋ", "ಚಿನ್ನ ಮೇಲೋ ಕಬ್ಬಿಣ ಮೇಲೋ" ಇತ್ಯಾದಿ ವಿದ್ಯಾರ್ಥಿಗಳ ಮಟ್ಟಿಂಗೆ "ಗಹನ" ಹೇಳಿ ಕಾಂಬ ವಿಷಯಂಗಳ ಮೇಲೆ ಚರ್ಚೆ ಮಾಡೆಕ್ಕಾಗಿತ್ತು.   ಕೆಲವು ಮಕ್ಕೊ ಪರ, ಇನ್ನು ಉಳಿದವು ವಿರೋಧವಾಗಿ ಮಾತಾಡೆಕ್ಕಾಗಿತ್ತು.   ವಾದ ಮಾಡ್ಳೆ ಉಶಾರಿಪ್ಪ ಕೆಲವು ಮಕ್ಕೊಗೆ  "ವಕೀಲ"  ಹೇಳುವ ಧರ್ಮದ ಬಿರುದುದೇ ಸಿಕ್ಕಿಗೊಂಡಿತ್ತು!   ಎಲ್ಲಾ  ಮಕ್ಕಳ ಪರ-ವಿರೋಧ ವಾದ ಮಂಡನೆ  ಆದ ಮೇಲೆ ಅಖೇರಿಗೆ ಆ ದಿನದ ಮುಖ್ಯ ಅತಿಥಿ ಆಗಿ ಬಂದ ಮಾಷ್ಟ್ರ ಭಾಷಣ ಮಾಡಿ  ಚರ್ಚೆ ಮುಗುಶುವ ಕ್ರಮ.   ಮಕ್ಕೊಗೆ ಎರಡರಲ್ಲಿ ಯಾವುದಾದರೊಂದರ ಹಿಡುದು ಸಮರ್ಥಿಸುವ ಕೆಲಸ ಆದರೆ, ಮಾಷ್ಟ್ರಂಗೆ  ಎರಡರನ್ನೂ ಸಮರ್ಥಿಸಿ,  "ಸಂದರ್ಭಕ್ಕನುಗುಣವಾಗಿ ಎರಡೂ ಮೇಲು" ಹೇಳಿ ವಿವರಿಸಿ ತೀರ್ಮಾನ ಕೊಡುವ ಸವಾಲಿನ ಕೆಲಸ.  ಅಂಬಗ ವಿದ್ಯಾರ್ಥಿಗಳ ಆಯಾಯ ಗುಂಪಿನವು "ಮಾಷ್ಟ್ರ ಎಂಗಳ ವಿಷಯವ ಹೆಚ್ಚು ಸಮರ್ಥಿಸಿ  ಮಾತಾಡಿದ" ಹೇಳಿ  ತಮ್ಮದೇ ಬೆನ್ನು ತಟ್ಟಿಗೊಂಡ್ರೂ,   ಮುಂದೆ  ಜೀವನದ ಅನುಭವ ಆವುತ್ತಾ ಬಂದ ಹಾಂಗೇ, ನಾವು ಎದುರಿಸುವ  ಯಾವ ವಿಷಯಾಧಾರಿತ ದ್ವಂದ್ವಂಗಳಲ್ಲಿಯೇ ಆದರೂ ಮಧ್ಯ ಮಾರ್ಗವೇ ಸದಾ ಸ್ಥಿರವಾದ್ದು ಹೇಳುವ ಪಾಠವ ಕಲಿತ್ತವು.   ಹೇಳಿರೆ, ಯಾವುದೇ ಎರಡು ವಿಪರೀತ ಧೋರಣೆಗಳ ಮಧ್ಯೆ ಒಂದು ಪಕ್ವವಾದ,   ಎಲ್ಲೋರಿಂಗೂ ಹಿತವಾದ ಮಾರ್ಗ  ಇದ್ದು ಹೇಳುವ ಸಂಗತಿ ಮನವರಿಕೆ ಆವುತ್ತು.  ಇದರೊಟ್ಟಿಂಗೇ,  ಪರಸ್ಪರ ಸಹಕಾರ, ಎಲ್ಲೋರೊಟ್ಟಿಂಗೆ ಅನುಸರಿಸಿಗೊಂಡು ಹೋಯೆಕ್ಕಾದ ಅನಿವಾರ್ಯತೆ ಇತ್ಯಾದಿಗಳ ದರ್ಶನ ಆವುತ್ತು.
 
ಸದ್ಯದ ವಿಷಯಕ್ಕೆ ಪ್ರಸ್ತುತ ಹೇಳಿ ಗ್ರೇಶಿಗೊಂಡು ಒಂದು  ಸಣ್ಣ ಹಾಸ್ಯ ಚಟಾಕಿಯ ಹಂಚಿಗೊಳ್ತೆ.  ಅದು ದೇವರು ತನ್ನ ಕರ್ತವ್ಯದಂತೆ, ಬೇರೆ ಬೇರೆ ಪ್ರಾಣಿಗಳ ಜೀವನಾವಧಿಯ ತೀರ್ಮಾನ ಮಾಡಿ ಆದೇಶ ಹೊರಡಿಸಿದ ಕಾಲ. ಈ ಆದೇಶದ ಪ್ರಕಾರ  ಮನುಷ್ಯರಿಂಗೆ ಕೇವಲ ೨೫ ವರ್ಷ ಆಯುಸ್ಸು  ತೀರ್ಮಾನ ಆಗಿತ್ತಡ. ನಾಯಿಗಳ ಹಾಂಗಿಪ್ಪ ಯಃಕಶ್ಚಿತ್ ಪ್ರಾಣಿಗೊಕ್ಕುದೇ ೫೦ ವರ್ಷದಷ್ಟು ಆಯುಷ್ಯ ದಯಪಾಲಿಸಿತ್ತಿದ್ದಡ.  ಇದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸುಲೆ ಹೇಳಿ  ಮನುಷ್ಯರ  ಕೆಲವು ಪ್ರತಿನಿಧಿಗೊ ದೇವರ ಸನ್ನಿಧಾನಕ್ಕೆ ಹೋದವಡ. ಅವರ ಪ್ರತಿಭಟನೆಯ ವಾದವ ಆಲಿಸಿದ ದೇವರು ಅಖೇರಿಗೆ ಬೇರೆ ಬೇರೆ ಪ್ರಾಣಿಗಳ ಆಯುಷ್ಯವ ಕಮ್ಮಿ ಮಾಡಿ  ಮನುಷ್ಯರಿಂಗೆ ೧೦೦ ವರ್ಷದ ಪೂರ್ಣಯುಷ್ಯವ ಕೊಟ್ಟಾಡ.  "ಇದಾ, ಆನು ಕೊಡುದು ಕೊಟ್ಟಿದೆ, ಇನ್ನು ಇದರ ಫಲವ ಅನುಭವಿಸುದು ನಿಂಗೊಗೆ ಬಿಟ್ಟ ವಿಚಾರ" ಹೇಳಿಯೂ ಒಂದು ಎಚ್ಚರಿಕೆಯ ಮಾತು ಹೇಳಿ ಕಳುಸಿದಡ.   ಹೀಂಗೆ ಪೂರ್ಣಾಯುಷ್ಯದ ವರ ಪಡೆದ  ಮನುಷ್ಯರ ಜೀವನವ ಅವಲೋಕಿಸಿದರೆ ಎಂತ ಕಾಣ್ತು ? ಎಲ್ಲೋರೂ ೨೫ ವರ್ಷ ಕಾಲ ವಿದ್ಯಾಭ್ಯಾಸ ಮಾಡ್ಯೊಂಡು, ಸಿನೆಮಾ ನೋಡ್ಯೊಂಡು, ಸ್ನೇಹಿತರೊಟ್ಟಿಂಗೆ ತಿರಿಗ್ಯೊಂಡು  ಗಮ್ಮತಿಲ್ಲಿ ಇರ್ತವು. ದೇವರು ಸುರುವಿಂಗೆ ಕೊಟ್ಟ ಆಯುಷ್ಯ ಅಲ್ಲಿಗೆ ಮುಗುದಿರ್ತು. ಮತ್ತೆ  ಕೆಲಸಕ್ಕೆ ಸೇರಿ, ವೃತ್ತಿ ಜೀವನ ಸುರು ಆದ ಮೇಲೆ ಮದುವೆ ಆವುತ್ತು.  ಮತ್ತಾಣ ಸುಮಾರು ೨೦ ವರ್ಷ ಕತ್ತೆಯ ಆಯುಷ್ಯವ ಕತ್ತರಿಸಿ ತೆಗೆಶಿಗೊಂಡ ಕಾರಣ ತತ್ಸಮಾನ ಬದುಕು - ಮನೆಗೆ ಬಪ್ಪದು ತಡವಾದರೆ ಬೈಶಿಗೊಂಬದು, ೫೦ ಕಿಲೋ ತೂಕದ ರೇಶನಿನ ಚೀಲವನ್ನೂ ಚಿಮಿಣಿ ಎಣ್ಣೆ ಡಬ್ಬಿಯನ್ನೂ ಹೊತ್ತು  ತಪ್ಪದು, ತೊಟ್ಟಿಕ್ಕುವ ನೀರಿನ ನಲ್ಲಿಯ ರಿಪೇರಿ ಮಾಡ್ಸುದು, ಸರತಿ ಸಾಲಿಲ್ಲಿ ನಿಂದು ಕರೆಂಟಿನ ಬಿಲ್ಲು ಕಟ್ಟುದು ಇತ್ಯಾದಿ..   ಇದಾದ ಮೇಲೆ, ನಿವೃತ್ತಿ ಅಪ್ಪಂದ ಮದಲು ಒಂದು ಭದ್ರತೆ ಇರಲಿ    ಹೇಳಿ ಅಂದಾಜಿ ಮಾಡಿ ಸಾಲ ಗೀಲ ಮಾಡಿ  ಮನೆ ಕಟ್ಸುತ್ತ.  ಅಲ್ಲಿಂದ  ಮತ್ತೆ ಸುಮಾರು ೧೫ ವರ್ಷ ನಾಯಿ ಜೀವನ.  ಅಖೇರಿಗೆ ನಿವೃತ್ತನಾಗಿ ಸಾವನ್ನಾರ ಸರಿಯಾಗಿ ಕಣ್ಣು ಕಾಣದ್ದೆ, ಹಲ್ಲೆಲ್ಲ ಉದುರಿ ಚಕ್ಕುಲಿ ತಿಂಬಲೆಡಿಯದ್ದೆ, ಜಂಬ್ರಕ್ಕೆ ಹೋದರೂ ಸಿಹಿತಿಂಡಿ ತಿಂಬಲೆಡಿಯದ್ದೆ  ನರಕ್ಕ ಬಪ್ಪ ಗೂಬೆಯ ಜೀವನ ಸುರು ಆವುತ್ತು . 
 
ಹಾಂಗಾರೆ, ಆ ಬಾಲ್ಯದ ದಿನಂಗಳ ಎನಗೆ ಹಿಂದಿರುಗಿಸು ಹೇಳಿ ಜಗಜೀತ್ ಸಿಂಗ್  ಬೇಡಿಗೊಂಡದು ಎಂತಕೆ ಹೇಳಿ ಗೊಂತಾತನ್ನೆ ? ದೇವರಿಂಗೇ ಬುದ್ಧಿವಂತಿಕೆ ಹೇಳಿ ಕೊಟ್ರೆ ಇನ್ನೆಂತಕ್ಕು ?
-ಬಾಪಿ
 
 
 
 
 

Friday, September 10, 2010

ಮಾಧ್ಯಮಗಳ ಪ್ರಭಾವ

ಇತ್ತೀಚೆಗೆ ನಮ್ಮ ಸಮಾಜಲ್ಲಿ ಮಾಧ್ಯಮದ ಮಹತ್ವ  ಯಾವಗಂದಲೂ ಹೆಚ್ಚಾವುತ್ತಾ ಇಪ್ಪದರ  ನಾವು ಗಮನಿಸಿಕ್ಕು.  ಸಮಾಜದ ಮೇಲೆ ಮಾಧ್ಯಮಂಗಳ ಪ್ರಭಾವ  ಯಾವಾಗಲೂ ಸಕಾರಾತ್ಮಕವಾಗಿಯೇ ಇರ್ತಿಲ್ಲೆ. ಹಾಂಗಾಗಿ  ಈ ಬಗ್ಗೆ ಒಂದು ಅಭಿಪ್ರಾಯ  ವ್ಯಕ್ತಪಡಿಸುದು ಅಗತ್ಯ ಹೇಳಿ ಕಾಣ್ತು.
 
ಮಾಧ್ಯಮಂಗಳ ಪ್ರಯತ್ನಂದಾಗಿ  ಸುಮಾರು ಸಾಮಾಜಿಕ  ಮಹತ್ವದ ವಿಷಯಂಗೊ ಗಮನಾರ್ಹ ಪ್ರಾಧಾನ್ಯ ಪಡದು ಸುಖಾಂತ ಕಂಡದು ಸಮಾಧಾನಕರ ಬೆಳವಣಿಗೆ.    ಪ್ರಭಾವಿ ವ್ಯಕ್ತಿಗಳ ಕೈವಾಡಂದ ನಡೆದ ಕೆಲವು ಕೊಲೆ ಪ್ರಕರಣಂಗೊ ಮಾಧ್ಯಮಂಗಳ ಒತ್ತಡಂದಾಗಿ ನ್ಯಾಯಾಲಯಂಗಳಲ್ಲಿ ಹೊಸ ತಿರುವು  ಪಡದು ನಿಜವಾದ ಅಪರಾಧಿಗೊಕ್ಕೆ ಶಿಕ್ಷೆ ಆಗಿ ನ್ಯಾಯ ಸಿಕ್ಕುವ ಹಾಂಗೆ ಆದ್ದದೂ ಸಕಾರಾತ್ಮಕ ಪ್ರಭಾವ.   ಇಷ್ಟೆಲ್ಲಾ ಧನಾತ್ಮಕ ಬೆಳವಣಿಗೆಗಳೊಟ್ಟಿಂಗೇ,  ಮಾಧ್ಯಮ ಸಮೂಹದ  ವಾಹಿನಿಗಳ  ಮಧ್ಯೆ  ಮೇಲಾಟದ ಕುಚೇಷ್ಟೆಯನ್ನೂ ನೋಡ್ತಾ  ಇದ್ದು.  ಕೇವಲ ಸಾಧಾರಣ ಸುದ್ದಿಗಳನ್ನೂ  "ಸ್ಪೋಟಕ ವಾರ್ತೆ"ಗಳಾಗಿ ಪ್ರಸಾರ  ಮಾಡಿ ವೀಕ್ಷಕರ ಸಂಖ್ಯೆಯ  ಹೆಚ್ಚುಮಾಡಿಗೊಂಬ  ಹುನ್ನಾರದ  ಬಗ್ಗೆಯೂ ಬೇಕಾದಷ್ಟು ಚರ್ಚೆ ನಡದ್ದು. ಮುಂಬೈಲಿ   ನಡದ ಭಯೋತ್ಪಾದಕರ  ಧಾಳಿಯಂತಹ  ಗಂಭೀರ ಸಂದರ್ಭಲ್ಲಿ  ಘಟನಾ ಸ್ಥಳಂದಲೇ  ನೇರ ಪ್ರಸಾರ ಮಾಡಿ   ರಾಷ್ಟ್ರೀಯ  ಹಿತವ ಕಡೆಗಣಿಸಿದ ವಾಹಿನಿಗಳ ಅಪಚಾರವನ್ನೂ ಸಾರ್ವಜನಿಕರು ಖಂಡಿಸಿದ್ದವು.  ಸರಿಯಾದ ವಾರ್ತೆಯ ಸಮಾಜಕ್ಕೆ ಒದಗಿಸುವ   ಪ್ರಾಥಮಿಕ  ಕರ್ತವ್ಯವ ಬದಿಗೊತ್ತಿ, ಮಾಧ್ಯಮದ ಪ್ರಭಾವವನ್ನೇ  ವ್ಯವಹಾರದ ಭಂಡವಾಳವಾಗಿ ಉಪಯೋಗಿಸುದು  ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ರೆ,  ಅದು ಸಮಾಜಕ್ಕೆ ಹಾನಿಕಾರಕವೇ ಸರಿ.  ಇಂತ ಸಂದರ್ಭಲ್ಲಿ  ಮಾಧ್ಯಮದ ಪ್ರಾಮಾಣಿಕತೆ ಪ್ರಶ್ನಾರ್ಹ ಆವುತ್ತು.   ಅಮಿತಾಭ್  ಬಚ್ಚನ್  ನಟಿಸಿದ್ದ  ರಣ್ ಚಿತ್ರ ಇದೇ ಸಂದೇಶವ ಒಳಗೊಂಡಿತ್ತು.  ಹಾಂಗಾರೆ ಮಾಧ್ಯಮಂಗೊ ತಮ್ಮ ಪ್ರಭಾವಂದ  ಸಮಾಜದ ಚಿಂತನೆಲಿ ಧನಾತ್ಮಕತೆಯನ್ನೂ ದೇಶಪ್ರೇಮವನ್ನೂ  ಹೆಚ್ಚಿಸುಲೆ ಎಡಿಗೋ ?
 
ಕೊಲೆ, ಸುಲಿಗೆ, ಭಯೋತ್ಪಾದನೆ, ಸಂಸತ್ತು - ವಿಧಾನ ಮಂಡಲಂಗಳಲ್ಲಿ  ಕೋಲಾಹಲ, ಡೆಂಗು, ಅತ್ಯಾಚಾರ, ನಕ್ಷಲ್ ವಾದ ಇತ್ಯಾದಿಗಳೇ ಮುಖಪುಟದ ಸಾಮಾನ್ಯ  ಸುದ್ದಿಗಳಾಗಿಪ್ಪಗ  ಉದಿಯಪ್ಪಗ ಎದ್ದು ಪತ್ರಿಕೆ ಓದುದೇ ಬೇಡ ಹೇಳಿ ಆವುತ್ತಿಲ್ಯೋ ?   ಈ ಸಮಸ್ಯೆ ತಪ್ಪುಸಲೆ  ಹೇಳಿಯೇ  ಪತ್ರಿಕೆಗಳ  ಹಿಂದಾಣ ಪುಟಂದ ಓದುವ ಅಭ್ಯಾಸ ಬೆಳೆಸಿಗೊಂಡ ಎಷ್ಟೋ ಜನ ವಾಚಕರಿರವೋ ?  ಆ  ಪುಟಗಳಲ್ಯಾದರೂ  ಒಬ್ಬ ಕ್ರೀಡಾಪಟುವೋ, ಕೈಗಾರಿಕೋದ್ಯಮಿಯೋ, ಸಂಗೀತಗಾರನೋ  ಮಾಡಿದ ಸಾಧನೆಯ ಸುದ್ದಿಯ ಓದಿ  ಸ್ಪೂರ್ತಿ  ಪಡವ ಅವಕಾಶ ಸಿಕ್ಕಲಿ ಹೇಳಿ ಹಂಬಲಿಸಿದರೆ ಎಂತ ತಪ್ಪು ?  ನಕಾರಾತ್ಮಕ ಪ್ರಭಾವಂಗಳೇ ಹೆಚ್ಚಾಗಿಪ್ಪ ಇಂದ್ರಾಣ  ಸಮಾಜಲ್ಲಿ  ಸ್ಪೂರ್ತಿದಾಯಕ ವಾತಾವರಣದ ಸೃಷ್ಟಿ ಮಾಡುದು ಹೇಂಗೆ ? ಮಾಧ್ಯಮಂಗೊ ಸಾಮೂಹಿಕವಾಗಿ ದೃಢ ಮನಸ್ಸು ಮಾಡಿರೆ ಈ ವಿಷಯಲ್ಲಿ ಖಂಡಿತವಾಗಿ ಅಪಾರ ಕೊಡುಗೆ  ಕೊಡ್ಳೆಡಿಗು.
ದುಷ್ಟ ರಾಜಕಾರಣಿಗೊ, ಭ್ರಷ್ಟ ವ್ಯವಸ್ಥೆ, ಕುಲಗೆಟ್ಟ ಮಾರ್ಗಂಗೊ, ವಾಹನ ದಟ್ಟಣೆ, ಪರಿಸರ ಮಾಲಿನ್ಯ, ವಿದ್ಯುತ್  ಕಡಿತ ಇತ್ಯಾದಿ   ಹೊಲಸುಗಳ ಹೊರತಾಗಿಯೂ   ಸ್ವಂತ ಜೀವನ ಸಂಗ್ರಾಮಲ್ಲಿ   ವಿಜಯಿಗಳಾಗಿ  ಇತರರಿಗೆ ಮಾರ್ಗದರ್ಶಿಗ ಹಾಂಗಿಪ್ಪ    ವ್ಯಕ್ತಿಗೊ    ನಮ್ಮ ಮಧ್ಯೆ ಬೇಕಾದಷ್ಟಿದ್ದವು. ಇಂತ ವ್ಯಕ್ತಿಗಳ ಭಾವಂಚಿತ್ರಂಗೊ ನಮ್ಮ ಪತ್ರಿಕೆಗಳಲ್ಲಿ ರಾರಾಜಿಸುವ  ಹಾಂಗಾಗಲಿ.  ಒಳ್ಳೆ ಕೆಲಸ ಮಾಡುವ ಮಂತ್ರಿಗಳ ಹೆಸರು ಮಾಂತ್ರ ಎದುರಾಣ ಪುಟಲ್ಲಿ ಬರಲಿ.  ಹೀಂಗೆ  ಧನಾತ್ಮಕ ವಾರ್ತೆಗಳ ಮುಖಪುಟಲ್ಲಿ ಓದುವ ಅವಕಾಶ ಹೆಚ್ಚು ಸಿಕ್ಕುವ ಹಾಂಗಾದರೆ, ಕರ್ನಾಟಕದ ಮುಕ್ಕೋಟಿ ಜನರಿಂಗೆ  ಅತ್ಯಗತ್ಯವಾದ  ಹೊಸ ಸುಪ್ರಭಾತ  ಕೇಳಿಸಿದ ಪುಣ್ಯ  ಬಕ್ಕು.  ಮತ್ತೆ, ಕೇವಲ ಮುಖಪುಟಲ್ಲಿ ಶುದ್ದಿ ಮಾಡುದಕ್ಕಾಗಿಯೇ ಬಡಬಡಿಸಿ, ಗುಲ್ಲು ಎಬ್ಬಿಸುವ ರೌಡಿ ರಾಜಕಾರಣಿಗೊಕ್ಕೆ  ಸಂಬಂಧಿಸಿದ ವಾರ್ತೆಗಳ ಹಿಂದಿನ ಪುಟಂಗೊಕ್ಕೆ ವರ್ಗಾವಣೆ ಮಾಡಿರೆ ಅಂತಹವಕ್ಕೆ  ಪಾಠ ಕಲಿಸಿದ ಹಾಂಗಕ್ಕು.
 
ಆದರೆ, ಪುಚ್ಚೆಯ ಕೊರಳಿಂಗೆ ಘಂಟೆ ಕಟ್ಟುವ ಕೆಲಸ ಮಾಡುದು ಆರು ? ಸುದ್ದಿ ಮಾಧ್ಯಮ ವ್ಯವಹಾರದ ಸಂತೆ ಆಗಿಪ್ಪಗ ಎಲ್ಲೋರಿಂಗೂ ಸ್ಪರ್ಧೆಲಿ ಮುಂದೆ ಹೋಪ ಚಾಳಿಯೇ ಹೊರತು, ಸಮಾಜದ  ಚಿಂತೆ ಇಪ್ಪ ಹಾಂಗೆ ಕಾಣ್ತಿಲ್ಲೆ.  ಆದಷ್ಟು ಬೇಗ ಇನ್ನೊಬ್ಬ ರಾಮನಾಥ ಗೋಯೆಂಕ ಹುಟ್ಟಿ ಬರಲಿ.
 
-ಬಾಪಿ
 
 
 
 
 

Saturday, July 31, 2010

ಮೈ ನೇಮ್ ಈಸ್ ಖಾನ್

ರಜ ಸಮಯ ಮದಲು ಹೀಂಗಿಪ್ಪ ಹೆಸರಿನ ಒಂದು ಸಿನೆಮಾ ಬಂದಿತ್ತು ಹೇಳಿ ಶುದ್ದಿ.  ಅಲ್ಲಿಲ್ಲಿ ಕೇಳಿ ತಿಳುದ ಮಟ್ಟಿಂಗೆ "ಮುಸ್ಲಿಮರೆಲ್ಲೋರೂ ಆತಂಕವಾದಿಗೊ ಅಲ್ಲ" ಹೇಳುವ ಹಳಸಲು ವಾದವ ಮಂಡಿಸುವ ಪ್ರಯತ್ನ ಮಾಡಿದ ಹಾಂಗೆ ಕಾಣ್ತು.  ಅಲ್ಲಾಹುವಿನ ಲೀಲೆಯೋ ಏನೋ, ಈ ಸಿನೆಮಾ ಬಿಡುಗಡೆ ಆದ ಶುಭ ಸಂದರ್ಭಲ್ಲಿಯೇ ಪೂನಾದ ಓಶೋ ಆಶ್ರಮದ ಹತ್ತರೆ ಇಪ್ಪ ಜರ್ಮನ್ ಬೇಕರಿಲಿ  ಒಂದು  ವಿಧ್ವಂಸಕ ಕೃತ್ಯ ನಡದತ್ತು.  ಇದು ತಿರುಗ ಯಥಾಪ್ರಕಾರ, ಮುಸ್ಲಿಮ್  ಆತಂಕವಾದಿಗಳದ್ದೇ ದುಷ್ಕೃತ್ಯ ಹೇಳಿಯೂ ಈಗಾಗಲೇ ಗೊಂತಾಯಿದು.
 
ಅಮೇರಿಕಕ್ಕೆ ಹೋಗಿಪ್ಪಗ ಶೂ ಕಳಚ್ಚುಲೆ ಹೇಳಿ ತಪಾಸಣೆ ಮಾಡಿದ್ದಲ್ಲದ್ದೆ ಪ್ರತ್ಯೇಕ  ವಿಚಾರಣೆಗೆ ಒಳಪಡಿಸಿದ್ದದು  ಶಾರುಖ್  ಖಾನಿಂಗೆ ಭಾರೀ ಅವಮಾನದ ಸಂಗತಿ ಆಗಿ ಹೋತು ಹೇಳಿ ಕಾಣ್ತು.  ಇದರ ಹಿಡ್ಕೊಂಡು ಅವನ ಆಪ್ತ ಸ್ನೇಹಿತರಲ್ಲಿ ಒಬ್ಬನಾದ ಕರಣ್  ಜೋಹರ್ ಹೇಳುವವ ದೊಡ್ಡ ಸಿನೆಮಾವನ್ನೇ ಮಾಡಿ ಬಿಟ್ಟ.  ಸಾವಿರಾರು ಹಿಂದುಗೊ  ಮುಸ್ಲಿಮರ ಉಗ್ರವಾದಂದಾಗಿ ಸತ್ತದು, ಲಕ್ಷಾಂತರ ಜನ ಹಿಂದೂಗೊ ಜಮ್ಮೂವಿಂದ ಜೀವಭಯಂದ ಓಡಿ ಹೋಗಿ ನಿರಾಶ್ರಿತರಾಗಿ ಬದುಕ್ಕೆಕ್ಕಾಗಿ ಬಂದದು ಇತ್ಯಾದಿಗಳ ಬಗ್ಗೆ ಇಷ್ಟರವರೆಗೆ ಯಾರಿಂಗೂ ಸಿನೆಮಾ ಮಾಡೆಕ್ಕು ಹೇಳಿ ಕಂಡಿದಿಲ್ಲೆ !
 
ಅಮೇರಿಕ ಮತ್ತು ಭಾರತ ದೇಶಂಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಧೋರಣೆಗಳ ತುಲನೆ ಮಾಡಿರೆ, ಈ ಗಂಭೀರ ವಿಷಯಕ್ಕೆ  ಸಂಬಂಧಿಸಿ ನಮ್ಮ ಮನೋಸ್ಥಿತಿಲಿಪ್ಪ ಇಪ್ಪ ವ್ಯತ್ಯಾಸ  ಸ್ಪಷ್ಟವಾಗಿ ಗೊಂತಾವುತ್ತು.  ೯/೧೧ ಘಟನೆಯ ನಂತರ ಅಮೇರಿಕಲ್ಲಿ ಒಂದುದೇ ಹಾಂಗಿಪ್ಪ ದುಷ್ಕೃತ್ಯ ಮರುಕಳಿಸಿದ್ದಿಲ್ಲೆ.  ಅದೇ ನಮ್ಮಲ್ಲಿ ೨೬/೧೧ ರ ಮೊದಲೂ, ಮತ್ತೆಯೂ ಯಥಾಪ್ರಕಾರ  ಬಾಂಬುಗೊ ಹೊಟ್ಟುತ್ತಲೇ ಇದ್ದು.  ಅಲ್ಲಿ ಸಂಶಯ ಇಪ್ಪವರ ನಿರ್ದಾಕ್ಷಿಣ್ಯವಾಗಿ ತಪಾಸಣೆ ಮಾಡ್ತವು.  ಇಲ್ಲಿ ಭಯೊತ್ಪಾದನೆಗೆ ಸಂಬಂಧಿಸಿದ ವಿಷಯಲ್ಲಿ ನ್ಯಾಯಾಲಯಲ್ಲಿ ಶಿಕ್ಷೆ ಘೋಷಣೆ ಆದವರ ಮೇಲುದೇ - ಅವು ಮುಸ್ಲಿಮರಾಗಿದ್ದರೆ - ಯಾವ  ಕಾರ್ಯಾಚರಣೆಯುದೇ ಆವುತ್ತಿಲ್ಲೆ.   ಹೀಂಗಿಪ್ಪ ಘಟನೆಗೊ ಆದ ನಂತ್ರ ಇದರ ಮಾಡಿದವು ಮುಸ್ಲಿಮ್  ಉಗ್ರವಾದಿಗೊ ಹೇಳಿ ಗೊಂತಾದ ಮೇಲುದೇ, ಮುಸ್ಲಿಮ್  ಧರ್ಮ ಮತ್ತು ಆತಂಕವಾದಕ್ಕೆ ಯಾವುದೇ ಶಾಶ್ವತವಾದ ಕೊಂಡಿಯ ಗೆಂಟು ಬೀಳದ್ದ ಹಾಂಗೆ ಕೋಂಗ್ರೇಸು ಸರ್ಕಾರ ಮತ್ತು ಅವರ ಕೃಪಾಪೋಷಿತ ಮಾಧ್ಯಮದವು ಭಾರೀ ಜಾಗ್ರತೆ ಮಾಡ್ತವು.  ನಮ್ಮ ದೇಶಲ್ಲಿ ಇಷ್ಟು ಸರ್ತಿ ಬಾಂಬು ಹೊಟ್ಟುಸಿದ  ಮುಸ್ಲಿಮ್  ಉಗ್ರವಾದಿಗಳ   ಹಿಡಿವ ಕೆಲಸಲ್ಲಿ ಆಗಲೀ, ಕಾಶ್ಮೀರಲ್ಲಿ ನುಸುಳಿ ಬಪ್ಪವರ ತಡವ ವಿಷಯಲ್ಲಿ  ಆಗಲೀ ಕೇಂದ್ರ ಸರಕಾರಕ್ಕೆ ಯಾವ   ಆಸಕ್ತಿಯುದೇ ಇಪ್ಪ ಹಾಂಗೆ  ಕಾಣ್ತಿಲ್ಲೆ.  ಸದ್ಯಕ್ಕೆ ಸರಕಾರದ ವತಿಂದ ಅತಿ ಅಂಬ್ರೆಪ್ಪಿಲ್ಲಿ ಆವುತ್ತಾ ಇಪ್ಪ ಕೆಲಸ ಎಂತ ಹೇಳಿರೆ, ಗುಜರಾತಿಲ್ಲಿ ಪೋಲೀಸರ ಗುಂಡಿಂಗೆ ಬಲಿಯಾಗಿ ಸತ್ತ ಸೋರಾಬುದ್ದೀನ್  ಹೇಳುವ ಬ್ಯಾರಿ ಭಾರೀ ಒಳ್ಳೆ ಜನ, ಅವನ ಮೋದಿ ಸರಕಾರದವು ಕೊಲೆ ಮಾಡಿಸಿದ್ದದು ಹೇಳುದಕ್ಕೆ  ಸಾಕ್ಷಿ  ತಯಾರು ಮಾಡುದು !   
 
ಪ್ರಶ್ನಾತೀತ ರಾಷ್ಟ್ರ ಪ್ರೇಮ ಮತ್ತು  ದೇಶದ ವಿಷಯಲ್ಲಿ ಸಂಪೂರ್ಣ ಬದ್ಧತೆ ಇಪ್ಪ ಅಬ್ದುಲ್ ಕಲಾಂ ನ ಹಾಂಗಿಪ್ಪ ಎಷ್ಟು ಜನ ಮುಸ್ಲಿಮರು ಎಣುಸಲೆ ಸಿಕ್ಕುಗು ?  ಜನಸಂಖ್ಯೆಯ ೨೦%ದಷ್ಟು ಇಪ್ಪ ಮುಸ್ಲಿಮರಲ್ಲಿ ಎಷ್ಟು ಜನ  ವರಮಾನ ತೆರಿಗೆ ಕಟ್ಟುತ್ತವು ?  ಎಷ್ಟು ಜನ   ಸೈನ್ಯಲ್ಲಿ ಸೇವೆ ಸಲ್ಲಿಸುತ್ತವು ? ಎಷ್ಟು ಜನ  ಶಿಕ್ಷಕರಾಗಿ ಕೆಲಸ ಮಾಡ್ಳೆ  ಹೋವುತ್ತವು ? ಮುಸ್ಲಿಮ್  ಜನಾಂಗದ ಹೆಚ್ಚಿನವು ಕೋಕದ ಕಚ್ಚೋಡ, ಮೀನು ವ್ಯಾಪಾರ, ಪಂಕ್ಚರ್  ಅಂಗಡಿ, ಹಳೇ ಪೇಪರ್-ಖಾಲಿ ಸೀಸ  ಇತ್ಯಾದಿ ನಗದು ವ್ಯಾಪಾರಲ್ಲಿಯೇ ಇಪ್ಪವು.   ಇದಕ್ಕೆ ಅವು ಅಶಿಕ್ಷಿತರಾಗಿಪ್ಪದಷ್ಟೇ ಕಾರಣ ಅಲ್ಲ. ಅವಕ್ಕುದೇ ಇಂತ ನೋಡ್ಳೆ "ಪಾಪದವ" ಹೇಳಿ ಕಾಣ್ಸಿಗೊಂಬ,  ಆದರೆ ಹೆಚ್ಚು ಕಮಾಯಿ ಇಪ್ಪ, ತೆರಿಗೆ ಲೆಕ್ಕ ಹಾಕ್ಲೆಡಿಯದ್ದ ಹಾಂಗಿಪ್ಪ  ಕೆಲಸಂಗಳೇ ಬೇಕು.   
 
ಮುಸ್ಲಿಮ್ ಹುಡುಗಿಯರಿಂಗೆ  ವಿದ್ಯಾಭ್ಯಾಸ  ಖಡ್ಡಾಯ ಹೇಳಿ ಮಾಡಿದರೆ   ಆ  ಜನಾಂಗದ  ಧೋರಣೆ ಕ್ರಮೇಣ ಬದಲಪ್ಪಲೂ ಸಾಕು.  ಸುಶಿಕ್ಷಿತ ಮುಸ್ಲಿಮ್ ಮಹಿಳೆ ತನ್ನ ಕುಟುಂಬವನ್ನೂ, ಮುಂದಿನ ತಲೆಮಾರನ್ನೂ ಸರಿಯಾಗಿ ನಡೆಶುಗು.  ಆದರೆ ಇದಕ್ಕೆ ಮುಸ್ಲಿಮರ ಧರ್ಮಗುರುಗಳ ಆಕ್ಷೇಪ ಬಕ್ಕು-  ಜನರಲ್ಲಿ  ವೈಜ್ಞಾನಿಕ  ಚಿಂತನೆ  ಹೆಚ್ಚಾದಷ್ಟೂ   ತಮ್ಮ  ಕಾರುಬಾರು ಕಮ್ಮಿ ಅಕ್ಕು ಹೇಳುವ ಹೆದರಿಕೆಂದ ! ಹಾಂಗಾಗಿ ಸರಕಾರಕ್ಕೆ ಈ ಕೆಲಸವ   ಭಾರೀ ಜಾಣತನಂದ ಮಾಡೆಕ್ಕಾಗಿ ಬಕ್ಕು. ಉದಾಹರಣೆಗೆ, ಪದವಿ ಹಂತದ ಪರೀಕ್ಷೆ     ಮುಗುಶುವ ಮುಸ್ಲಿಮ್  ಹುಡುಗಿಯರಿಂಗೆ  ಸರಕಾರದವು  ಎಂತಾರು ಒಳ್ಳೆ ಮೊತ್ತದ ಬಹುಮಾನ ಘೋಷಣೆ  ಮಾಡಿರೆ, ಸ್ವಪ್ರೇರಣೆಂದ ಹೆಚ್ಚು ಜನ  ಉನ್ನತ ವಿದ್ಯಾಭ್ಯಾಸಕ್ಕೆ ಹೋಕು.    ಕೋಂಗ್ರೇಸಿನವಕ್ಕೆ ೬೦ ವರ್ಷಲ್ಲಿ   ಹೀಂಗಿಪ್ಪ ಸಮಾಜವ ಉದ್ಧಾರ ಮಾಡುವ ಕೆಲಸ ಮಾಡ್ಳೆ ಎಡಿಗಾಯಿದಿಲ್ಲೆ.   ಇನ್ನುದೇ  ಮಾಡುಗು ಹೇಳುವ ಆಶೆ ಖಂಡಿತಾ ಬೇಡ.   ಭಾಜಪ ಅಧಿಕಾರಲ್ಲಿಪ್ಪ ರಾಜ್ಯಂಗಳಲ್ಲಿ ಆದರೂ  ಇಂತಹ  ದೂರಗಾಮಿ ಯೋಜನೆಗೊ  ಜ್ಯಾರಿಗೆ ಬರಲಿ ಹೇಳಿ ಆಶಿಸುತ್ತೆ.

-ಬಾಪಿ
 
 
 
 
 

Tuesday, January 26, 2010

ನೆರೆಕರೆ

"ಸ್ನೇಹಿತರ ಬೇಕಾರೆ ಬದಲುಸಲಕ್ಕು ಆದರೆ ನೆರೆಕರೆಯವರ ಬದಲುಸುಲೆಡಿಯ" ಹೇಳುದು ವಾಜಪೇಯಿಯ ಪ್ರಸಿದ್ಧ ಹೇಳಿಕೆಗಳಲ್ಲಿ ಒಂದು. ಇದು ರಜ ಅನುಸರಿಸಿಗೊಂಡು ಹೋಯೆಕ್ಕು ಹೇಳುವ ಧೋರಣೆ. ಆದರೆ, ಪಾಕಿಸ್ತಾನದ ವಿಷಯಲ್ಲಿ "ಶಠಂ ಪ್ರತಿ ಶಾಠ್ಯಂ" ಹೇಳುದು ಆರೆಸ್ಸೆಸ್ಸಿನ ಸಿದ್ಧಾಂತ.  ಈ ಎರಡು ದೃಷ್ಟಿಕೋಣಂಗಳ ಸಮತೋಲನಕ್ಕಾಗಿ ವಾಜಪೇಯಿ  ಯಾವಾಗಳೂ ಬಾಯಿಲಿ "ನ ದೈನ್ಯಂ ನ ಪಲಾಯನಂ" ಹೇಳುವ ವೀರಮಂತ್ರವ ಹೇಳಿಗೊಂಡೇ ಲಾಹೋರಿಂಗೆ ಐತಿಹಾಸಿಕ  ಬಸ್ಸು ಯಾತ್ರೆ ಮಾಡಿ ಶಾಂತಿ ಪ್ರಸ್ತಾಪ ಮಾಡಿದ.   (ಇದರೆಡೆಲಿ ಜಿನ್ನಾನ ಹೊಗಳುಲೆ ಹೋಗಿ ಭಾಜಪದ ಅವಕೃಪೆಗೆ ಒಳಗಾದ ಜಸ್ವಂತ ಸಿಂಗ್  ಈ ಬಸ್ ಯಾತ್ರೆ ಎನ್ನದೇ ಯೋಚನೆ ಹೇಳಿ ಇತ್ತೀಚೆಗೆ ತನ್ನ  ಬೆನ್ನು ತಾನೇ ತಟ್ಟಿಗೊಂಡ).   ವಾಜಪೇಯಿ ಅಲ್ಲಿಪ್ಪಗ  ನವಾಜ್  ಶರೀಫ್  ಲಾಯಿಕ ಶರ್ಬತ್ತು, ಬಿರ್ಯಾನಿ ಎಲ್ಲಾ ಕೊಟ್ಟು ಸತ್ಕಾರ ಮಾಡಿಕ್ಕು. ಆದರೆ, ವಾಜಪೇಯಿಗೆ ಅಲ್ಲಿಗೆ ಹೋಗಿ ಬಂದ ಬಚ್ಚೆಲು ತಣಿವಂದ ಮೊದಲೇ   ಪಾಕಿಸ್ತಾನದ ದ್ವಂದ್ವ ನೀತಿ ಅರ್ಥ ಅಪ್ಪ ಹಾಂಗಿಪ್ಪ ಘಟನೆ ನಡದತ್ತು.  ಶಾಂತಿಯ ವಾತಾವರಣ ಇದ್ದರೆ ತಾನು ಖುದ್ದು ಚಲಾವಣೆಲಿ ಇಪ್ಪಲೆ ಎಡಿತ್ತಿಲ್ಲೆ ಹೇಳಿ ಯೋಚನೆ ಮಾಡಿದ ಮುಶಾರಫ್  ಕಾರ್ಗಿಲಿನ ಅಧ್ಯಾಯಕ್ಕೆ ನಾಂದಿ ಹಾಡಿದ. 

ಊರಿಲ್ಲಿ ಅವರವರ ತೋಟದ ಕರೆಲಿ ಬ್ಯಾರಿಗಳ ಮನೆ ಇದ್ದು ಅನುಭವಿಸಿದವಕ್ಕೆ ಇದು ದೊಡ್ಡ ಸಂಗತಿ ಹೇಳಿಯೇ ಕಾಣ.  ದಿನ ನಿತ್ಯ ಬೇಲಿ ನುಗ್ಗಿ ತೋಟಕ್ಕೆ ಬಪ್ಪ ಏಡುಗೊ,  ಹೊಳೆಲಿ ಹೊಯಿಗೆ ತೋಡಿ ಸಿಕ್ಕಿದ  ತತ್ವಾರದ ನೀರಿನ  ಕಷ್ಟಪಟ್ಟು ತೋಕಿ ಬೆಳೆಶಿದ ಬಾಳೆ, ಮುಂಡಿಸೆಸಿ ಇತ್ಯಾದಿಗಳ ಲಗಾಡಿ ಕೊಟ್ಟುಗೊಂಡಿತ್ತದರ ಸಹಿಸಿಗೊಂಡವಕ್ಕೆ  "ಏಡು ಮುಟ್ಟದ್ದ ಸೊಪ್ಪಿಲ್ಲೆ" ಹೇಳುವ ಗಾದೆಯ ಯಾವಗಂಗೂ ಮರವಲೆ ಸಾಧ್ಯ ಇಲ್ಲೆ.    ಉಪದ್ರ ಕೊಡುದು ಬ್ಯಾರಿಗಳ ಹುಟ್ಟು ಗುಣ.  ಹಾಂಗಾರೆ, ನಾವು ಯಾವಗಂಗೂ ಉಪದ್ರವ ಸಹಿಸಿಗೊಂಡೇ ಬದುಕ್ಕೆಕ್ಕೋ ? ಸಹಿಸುದಾದರೆ, ಎಷ್ಟರವರೆಗೆ ಸಹಿಸೆಕ್ಕು ?  ಉಪದ್ರ ತಡೆತ್ತಿಲ್ಲೆ ಹೇಳಿ ಆಸ್ತಿಯನ್ನೇ ಮಾರಾಟ ಮಾಡುದೋ ?  ಅಥವಾ ಬ್ಯಾರಿಯ ದರ್ಖಾಸ್ತಿನ  ಕ್ರಯಕ್ಕೆ ತೆಕ್ಕೊಂಡು  ಉಪದ್ರ ಇಲ್ಲದ್ದ ಹಾಂಗೆ ಮಾಡಿಗೊಂಬದೋ ? ಏಡುಗಳ ಕಟ್ಟಿ ಹಾಕಿರೆ ಅಥವಾ ವಿಷ ಕೊಟ್ಟು ಸಾಯಿಸಿರೆ ಹೇಂಗೆ ? ಇಲ್ಲವೇ, ಏಡುಗಳಿಂದ ಪೀಡೆ ಅನುಭವಿಸುತ್ತಾ ಇಪ್ಪ ಸಮಾನ ದುಃಖಿಗಳ ಎಲ್ಲಾ  ಒಟ್ಟುಗೂಡಿಸಿ ಸಂಘಟನೆಯ ಬಲಲ್ಲಿ ಅವರ ಬಗ್ಗುಬಡಿವದೋ ?  ಅಂತೂ, ಜೀವನಲ್ಲಿ ಈ ರೀತಿಯ  ಅನುಭವಂಗೊಕ್ಕೆ ಬೆಲೆ ಕಟ್ಟುಲೆಡಿಯ. ಒಟ್ಟಿಲ್ಲಿ, ಹೀಂಗಿಪ್ಪ ಏಡುಗಳ ಪೀಡೆಯ ಸಮರ್ಥವಾಗಿ ಎದುರಿಸಿ ಗೆದ್ದ  ಹಿನ್ನೆಲೆ ಇಪ್ಪ ಹವ್ಯಕ ಬ್ರಾಹ್ಮಣರಲ್ಲಿ ಯಾರಾರೂ ಒಬ್ಬ ಭಾರತದ ಪ್ರಧಾನ ಮಂತ್ರಿ ಅಪ್ಪಲ್ಲಿ ವರೆಗೆ ಪಾಕಿಸ್ತಾನದ ಸಮಸ್ಯೆ ಪರಿಹಾರ ಆಗ ಹೇಳುವ ಖಡಾಖಂಡಿತ ನಂಬಿಕೆ ಎನ್ನದು. 

ಪಾಕಿಸ್ತಾನದವು ಕಾಶ್ಮೀರದ ವಿಷಯವ ದೊಡ್ಡ ಸಮಸ್ಯೆಯಾಗಿ ಬಿಂಬಿಸಿ ಅಂತರರಾಷ್ಟ್ರೀಯ ಮಟ್ಟಲ್ಲಿ ಯಾವಾಗಲೂ ಶುದ್ದಿ ಮಾಡಿಗೊಂಡಿಪ್ಪವು. ಮತ್ತೆ  ಚೀನಾದಂತಹ ನಮ್ಮ ವೈರಿಗಳೊಟ್ಟಿಂಗೆ ಸೇರಿ ಕುತಂತ್ರ ಮಾಡಿಗೊಂಡಿಪ್ಪವು.  ದುರದೃಷ್ಟ ಎಂತ ಹೇಳಿರೆ,  ನಮ್ಮ ರಾಜಕಾರಣಿಗೊಕ್ಕೆ  ಪಾಕಿಸ್ತಾನದವು ಹೇಳಿದ್ದಕ್ಕೆ, ಮಾಡಿದ್ದಕ್ಕೆಲ್ಲಾ ಉತ್ತರ, ಪ್ರತಿತಂತ್ರ ಮಾಡುದೇ ಉದ್ಯೋಗ ಆಗಿ ಹೋಯಿದು.  ವಾಸ್ತವ ಎಂತ ಹೇಳಿರೆ, ಪಾಕಿಸ್ತಾನ್  ಒಂದು ಯಕಃಶ್ಚಿತ್  ದೇಶ.   ವಿಸ್ತೀರ್ಣಲ್ಲಿ ನಮ್ಮ ೨೫% ಇದ್ದುಗೊಂಡು (ಭಾರತ : ೩.೩ ಮಿಲಿಯ ಚದರ ಕಿ.ಮಿ, ಪಾಕಿಸ್ತಾನ :  ೮ ಲಕ್ಷ ಚದರ ಕಿ.ಮಿ.),   ಜನಸಂಖ್ಯೆಲಿ ಕೇವಲ ೧೬% (ನಮ್ಮದು ೧೦೮ ಕೋಟಿ, ಅವರದ್ದು ೧೬ ಕೋಟಿ) ಇಪ್ಪ ಸಣ್ಣ ದೇಶ.  ಹೇಳಿರೆ, ನಮ್ಮ  ಕಾಶ್ಮೀರ, ಉತ್ತರಪ್ರದೇಶ ಮತ್ತು ಬಿಹಾರಂಗಳ ಸೇರಿಸಿರೆ ಅಪ್ಪಷ್ಟು ದೊಡ್ಡ  ಅಷ್ಟೇ ! ಇನ್ನು ಜನಸಂಖ್ಯೆಲಿ ಭಾರತದ ಉತ್ತರಪ್ರದೇಶ ಒಂದೇ ಇಡೀ ಪಾಕಿಸ್ತಾನಕ್ಕೆ ಸಮ ! ನಾವು ಪಾಕಿಸ್ತಾನವ ಗಣ್ಯ ಮಾಡದ್ದರೆ ಅಲ್ಯಾಣವರ ಹೇಳಿಕೆಗೊ ವಿಶೇಷ ದೊಡ್ಡ ಶುದ್ದಿ ಅಪ್ಪಲೆ ಸಾಧ್ಯವೇ ಇಲ್ಲೆ. ಎಷ್ಟೋ ಸರ್ತಿ ನಾವೇ ಅವರ ದೊಡ್ಡ ಮಾಡುದು. ನೇಪಾಳ, ಅಫ್ಘಾನಿಸ್ತಾನ್,  ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ್  ಎಲ್ಲಾ ಇಪ್ಪ ಹಾಂಗೆ ಪಾಕಿಸ್ತಾನವುದೇ ನಮ್ಮ ಒಂದು ಸಣ್ಣ ನೆರೆಕರೆಯ ದೇಶ ಅಷ್ಟೇ ಹೇಳುವ ಧೋರಣೆ ತಾಳಿದರೆ,  ಅವರ ಹಾಂಕಾರ ರಜ ಕಮ್ಮಿ ಅಕ್ಕು.  ಈ ವಿಷಯವ ರಾಹುಲ್  ಗಾಂಧಿ ಅತ್ಯಂತ ಸಮರ್ಪಕವಾಗಿ ಪ್ರಸ್ತಾಪ ಮಾಡಿದ್ದ. ಇದು ಅವ ರಾಜಕೀಯವಾಗಿ ಪ್ರಬುದ್ಧ ಆವುತ್ತಾ ಇಪ್ಪದಕ್ಕೆ ಸಾಕ್ಷಿ.

ಸ್ವಾತಂತ್ರ್ಯಾನಂತರ ನೆಹರೂವಿನ ವಿದೇಶ ನೀತಿಯ ಫಲವಾಗಿ ಭಾರತಕ್ಕೆ ಅಮೇರಿಕಾದ ಸ್ನೇಹದ ಲಾಭ ಸಿಕ್ಕಿತ್ತಿಲ್ಲೆ. ಇದರ ಪಾಕಿಸ್ತಾನದವು ಲಾಯಿಕಲ್ಲಿ ಉಪಯೋಗಿಸಿಗೊಂಡವು.   ನಮ್ಮದು ತಟಸ್ಥ ಧೋರಣೆ ಹೇಳಿ ಲೆಕ್ಕ ಆದರೂ, ಯಾವಾಗಲೂ ರಶ್ಯಾದ ಹೊಡೆಂಗೆ ಮಾಲಿಗೊಂಡಿತ್ತ  ರಾಜಕೀಯ, ಸಾಮಾಜಿಕ  ವ್ಯವಸ್ಥೆ.  ಹಾಂಗಾಗಿ  ನವಗೆ ಆದರ್ಶಪ್ರಾಯರಾಗಿತ್ತ  ರಶ್ಯಾದ ಹಾಂಗೇ,  ದೇಶಲ್ಲಿ ಸಂಪತ್ತಿನ ಸೃಷ್ಟಿ ಮಾಡುವ ಬದಲು ಬಡತನವನ್ನೇ ಹಂಚಿಗೊಂಬ ಹಾಂಗಾತು.  ಅವರ ಹಾಂಗೇ  ನಮ್ಮದೂ ಅವ್ಯವಸ್ಥೆಯ ದಾರಿಲೇ ಹೋತು.  ಕೈಗಾರಿಕೆ ಮತ್ತು ವ್ಯಾಪಾರ-ವ್ಯವಹಾರ ಸರಕಾರದ ಬಿಗಿಮುಷ್ಟಿಲಿ ಇಪ್ಪವರೆಗೆ,  ನಮ್ಮ ವಾರ್ಷಿಕ ಬೆಳವಣಿಗೆ ೩% ದಾಂಟಿತ್ತಿದ್ದಿಲ್ಲೆ.  ಈ ಧೋರಣೆಯ ಸಡಿಲಿಸಿ ಖಾಸಗಿಯವಕ್ಕೆ ಹೆಚ್ಚಿನ ಅವಕಾಶ, ಆದ್ಯತೆ ಸಿಕ್ಕಿದ ಮೇಲೆಯೇ  ಈ ಸಂಖ್ಯೆ ೮ - ೧೦% ವರೆಗೆ ಬಂದು ನಿಂದದು. ನಮ್ಮ ಕಣ್ಣ ಮುಂದೆಯೇ ಹಾಂಕಾಂಗ್, ಸಿಂಗಾಪುರ, ಮಾಲ್ಡೀವ್ಸ್  ಇತ್ಯಾದಿ ದ್ವೀಪ-ದೇಶಂಗೊ ಅಭಿವೃದ್ಧಿ ಆವುತ್ತಾ ಇಪ್ಪಗ, ಪ್ರಾಯೋಗಿಕವಾಗಿಯಾದರೂ, ನಮ್ಮ ಅಂಡಮಾನ ಅಥವಾ ಲಕ್ಷದ್ವೀಪವ ಒಂದು ಮುಕ್ತ ಮಾರುಕಟ್ಟೆಯಾಗಿ ಮಾಡಿ ನೋಡುವೋ ಹೇಳಿ ನಮ್ಮ ರಾಜಕೀಯ, ಆರ್ಥಿಕ ನೇತಾರರಿಂಗೆ ಇಷ್ಟು ವರ್ಷಲ್ಲಿ ಕಾಣದ್ದದು ಭಯಂಕರ ಆಶ್ಚರ್ಯದ ಸಂಗತಿ.  ಇಲ್ಲದ್ರೆ ಇಷ್ಟು ಹೊತ್ತಿಂಗೆ ನಮ್ಮ ದೇಶದ ಸ್ವಾಧೀನಲ್ಲಿಯೇ ಇಪ್ಪ ಒಂದು ದುಬೈ ಅಥವಾ ಸಿಂಗಾಪುರವ ಸೃಷ್ಟಿ ಮಾಡ್ಳೆ ಎಡಿತ್ತೀತು.  ಒಟ್ಟಿಲ್ಲಿ, ಸಮೃದ್ಧ ಅಮೇರಿಕಾದ ಗೆಳೆತನಂದಾಗಿ ಪಾಕಿಸ್ತಾನದವು ಉದ್ಧಾರ ಆಗದ್ದದು ಮಾತ್ರ ದೇವರ ದಯೆ ! ಸದ್ಯಕ್ಕೆ ಇದೊಂದೇ ಸಮಾಧಾನ.

-ಬಾಪಿ





Wednesday, January 6, 2010

ಮತದಾನ

ಜಗತ್ತಿನ ಬೇರೆ ಬೇರೆ ದೇಶಂಗಳಲ್ಲಿಪ್ಪ ವಿವಿಧ ರಾಜಕೀಯ ವ್ಯವಸ್ಥೆಗಳಲ್ಲಿ ಪ್ರಜಾಪ್ರಭುತ್ವವೇ ಶ್ರೇಷ್ಠ ಹೇಳುದು ಸಾಮಾನ್ಯ ನಂಬಿಕೆ. ಇಲ್ಲಿ ಪ್ರಜೆಗಳೇ ಅವರವರ ಪ್ರತಿನಿಧಿಗಳ ಆಯ್ಕೆ ಮಾಡುವ ಕಾರಣ ತಮಗೆ ತಾವೇ ಧನಿಗೊ ಹೇಳುವ ವಾದ. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೇಳುವ ಹೆಗ್ಗಳಿಕೆ ಬೇರೆ ಭಾರತೀಯರಾದ ನವಗಿದ್ದು.


ಪ್ರಜಾಪ್ರಭುತ್ವ ಹೇಳುದು ಬಹುಮತದ ಆಧಾರದ ಮೇಲೆ ನಡವ ವ್ಯವಸ್ಥೆ ಆದ ಕಾರಣ, ಇಲ್ಲಿ ಚುನಾವಣೆ ಒಂದು ಮಾಮೂಲು ಪ್ರಕ್ರಿಯೆ. ಇದರಿಂದಾಗಿ ಮತದಾನಕ್ಕೆ ಅಮೂಲ್ಯವಾದ ಮೂಲಭೂತ ಹಕ್ಕು ಹೇಳುವ ಹೆಸರು ಬಂತು. ಚುನಾವಣೆಲಿ ನಮ್ಮ ಮತಂಗಳ ಅತಿ ಯೋಗ್ಯ (ಇಪ್ಪವರಲ್ಲಿ) ಪ್ರತಿನಿಧಿಗೆ ಕೊಡೆಕ್ಕಾದ್ದು ಪ್ರಜೆಗಳ ಕರ್ತವ್ಯ. ಆದರೆ, ಮತಂಗಳ ಮಾರಾಟ ಅಥವಾ ಖರೀದಿ ಆದರೆ, ಪ್ರಜಾಪ್ರಭುತ್ವ ಕಂಗಾಲಾವುತ್ತು. ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಹೀಂಗಿಪ್ಪ ಒಂದು ಕಪ್ಪು ಚುಕ್ಕೆ ಇದ್ದು. ಸಮಾಜಲ್ಲಿ ವ್ಯಾಪಕವಾಗಿಪ್ಪ ಭ್ರಷ್ಟಾಚಾರದ ಪಿಡುಗು ಚುನಾವಣೆಯನ್ನೂ ಬಿಟ್ಟಿದಿಲ್ಲೆ. ಕಾಲಕ್ರಮೇಣ ಚುನಾವಣೆಗೆ ಒಂದು "ವ್ಯವಹಾರದ" ದೃಷ್ಟಿಕೋನ ಬಂತು. "ಎಷ್ಟು ಪೈಸೆ ಭಂಡವಾಳ ಹಾಕಿರೆ ಎಷ್ಟು ತೆಗವಲಕ್ಕು" ಹೇಳುವ ಲೆಕ್ಕಾಚಾರ ಸುರುವಾತು. ಮತದಾರರ ಮುಗ್ಧತೆಯ ದುರುಪಯೋಗ ಪಡಿಸಿಗೊಂಡು ರಾಜಕಾರಣಿಗೊ ಬರೀ ಆಶ್ವಾಸನೆ ಮಾತ್ರ ಕೊಟ್ಟು ಬದುಕ್ಕುದು ಕಲ್ತುಗೊಂಡವು. ತಿರುಗ ಚುನಾವಣೆ ಬಪ್ಪಗ ಇನ್ನೊಂದೆಂತಾರೂ ನಾಟಕ ಮಾಡುವ ಅಥವಾ ಪಕ್ಷ ಬದಲಿಸಿ ಚುನಾವಣೆಯ ಕಣಕ್ಕಿಳಿವ ವಿದ್ಯೆಲಿ ಪಳಗಿದವು. ಎಷ್ಟೋ ವರ್ಷ "ಪೆತ್ತ ಕಂಜಿ" ಚುನಾವಣಾ ಚಿಹ್ನೆ ಆಗಿತ್ತ ಒಂದು ಪಕ್ಷದವು ಮಾಡಿಗೊಂಡು ಬಂದದು ಇದನ್ನೇ. ಒಟ್ಟಾರೆ ಗೆದ್ದರೆ ಆತನ್ನೆ ? ನಿಜವಾಗಿ ಹೇಳ್ತರೆ, ನಮ್ಮ ಸಂಸತ್ತಿಲ್ಲಿ ಅರ್ಹ ಪ್ರತಿನಿಧಿಗೊ ಹೇಳಿಸಿಗೊಂಬವು ಕಾಂಬಲೆ ಸಿಕ್ಕುದು ಅಪರೂಪ. ಒಟ್ಟಾರೆ, ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆಯಕ್ಕಾದರೆ ಅಲ್ಲಿಯ ಪ್ರಜೆಗೊ ಪ್ರಬುದ್ಧರಾಗಿರೆಕು. ಇದಕ್ಕೆ ಕನಿಷ್ಠ ವಿದ್ಯಾಭ್ಯಾಸ ಹೊಂದಿಪ್ಪ ಸಂಪೂರ್ಣ ಸಾಕ್ಷರ ಸಮಾಜ ಇರೆಕು.

ಹೀಂಗಿದ್ದರೂ ನಮ್ಮಲ್ಲಿ ಪ್ರಜಾಪ್ರಭುತ್ವ ಬೆಳೆಯದ್ರೂ ಉಳುಕ್ಕೊಂಡು ಬೈಂದು. ಇದಕ್ಕೆ ಒಂದು ಮುಖ್ಯ ಕಾರಣ ಹೇಳಿರೆ, ಸಂವಿಧಾನದ ಉಳಿದ ಎರಡು ಅಂಗಂಗೊ - ನ್ಯಾಯಾಂಗ ಮತ್ತು ಕಾರ್ಯಾಂಗ - ರಜ ಆದರೂ ಸರಿಯಾಗಿ ಕೆಲಸ ಮಾಡ್ತಾ ಇಪ್ಪದು. ಇನ್ನೊಂದು ಕಾರಣ ಹೇಳಿರೆ, ನಮ್ಮ ಸೈನ್ಯದವರ ವಿಧೇಯತೆ. ಅವು ತಮ್ಮ ಕೆಲಸದ ಹೊರತಾಗಿ ರಾಜಕೀಯ ಅಧಿಕಾರದ ಕುರ್ಚಿಗೆ ಕಣ್ಣು ಹಾಕಿದ್ದವಿಲ್ಲೆ. ಇಲ್ಲದ್ರೆ, ನಮ್ಮಲ್ಲಿಪ್ಪ ಅವ್ಯವಸ್ಥೆಯ ನೋಡಿರೆ ನಮ್ಮ ನೆರೆಕರೆಯವರ ಹಾಂಗೆ ಇಲ್ಲಿಯೂ ಯಾವಾಗಳೇ ಮಿಲಿಟ್ರಿ ಆಢಳಿತ ಬರೆಕಾಗಿತ್ತು. ನಾವೇ ಸುಮಾರು ಸರ್ತಿ ಹತಾಶರಾಗಿ ನಮ್ಮೊಳಾಣ ಅಸಹಾಯಕತೆಯ ಹೆರಹಾಕುಲೆ "ನವಗೆ ಮಿಲಿಟ್ರಿ ಆಢಳಿತವೇ ಸರಿ" ಅಥವಾ "ಬ್ರಿಟಿಷರ ಆಳ್ವಿಕೆಯ ಕಾಲವೇ ಎಷ್ಟೋ ವಾಸಿ ಇತ್ತಡ" ಇತ್ಯಾದಿಯಾಗಿ ಹೇಳಿಗೊಂಡಿಕ್ಕು. ಅಂಬಗಾಣ ಸೇನಾಧಿಪತಿಯಾಗಿತ್ತ ಮಾಣಿಕ್ ಶಾಂಗೆ ಇತ್ತ ತಥಾಕಥಿತ ರಾಜಕೀಯದ ಮಹತ್ವಾಕಾಂಕ್ಷೆಗೆ ಸಂಬಂಧಿಸಿದ ಅನುಮಾನಂದಾಗಿಯೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದದು ಹೇಳುವ ಶುದ್ದಿ ಒಂದು ಕೆಟ್ಟ ಕಾರ್ಯವ ಸಮರ್ಥಿಸಿಗೊಂಬಲೆ ಹುಟ್ಟುಹಾಕಿದ ಲೊಟ್ಟೆ ಹೇಳಿಯೇ ಎನ್ನ ನಂಬಿಕೆ.

ಚುನಾವಣೆಯ ವಿಷಯ ಬಪ್ಪಗ ಟಿ.ಯನ್.ಶೇಷನ್ ಹೇಳುವ ವ್ಯಂಗ್ಯ ಚಿತ್ರಕಾರರಿಂಗೆ ಸ್ಪೂರ್ತಿ ಕೊಡ್ಳೆ ಹೇಳಿಯೇ ಹುಟ್ಟಿದನೋ ಹೇಳಿ ಕಾಂಬ ಹಾಂಗಿತ್ತ ಡೊಳ್ಳು ಹೊಟ್ಟೆಯ, ಬೋಳು ತಲೆಯ ಭೂತಪೂರ್ವ ಚುನಾವಣಾ ಆಯುಕ್ತನ ಬಗ್ಗೆ ರಜ ಮಾತಾಡದ್ರೆ ಆಗ. ಇವಂದು ಕಾರ್ಯಾಂಗದ ಕುರ್ಚಿಗೆ ಹೇಳಿ ಮಾಡಿಸಿದ ಹಾಂಗಿಪ್ಪ ವ್ಯಕ್ತಿತ್ವ. (ಕುರ್ಚಿಯನ್ನೇ ಇವನ ಅಳತೆಗೆ ಪ್ರತ್ಯೇಕ ತಯಾರಿಸೆಕ್ಕಾಗಿ ಬಂತು ಹೇಳುವ ಕುಚೇಷ್ಟೆಯ ಶುದ್ದಿಯೂ ಇದ್ದು). ಇವಂದಾಗಿ ಚುನಾವಣಾ ಆಯೋಗ ಹೇಳುವ ಒಂದು ಸಂಸ್ಥೆ ಅಸ್ತಿತ್ವಲ್ಲಿ ಇದ್ದು ಹೇಳುದು ಸಾರ್ವಜನಿಕರಿಂಗೆ ಗೊಂತಪ್ಪ ಹಾಂಗೆ ಆತು. ಆಯೋಗದ ಮತ್ತು ಆಯುಕ್ತನ ಅಧಿಕಾರಂಗಳ ಪ್ರಭಾವಶಾಲಿಯಾಗಿ ಉಪಯೋಗಿಸಿದ. ಹೊತ್ತಲ್ಲದ್ದ ಹೊತ್ತಿಲ್ಲಿ ಮೈಕದ ಅಬ್ಬರ, ಸಿಕ್ಕಿದಲ್ಲಿ ಪೂರಾ ಕಾಂಬ ಪೋಸ್ಟರುಗಳ ಹಾವಳಿಗೊಕ್ಕೆ ಸುಮಾರು ಕಡಿವಾಣ ಹಾಕಿದ. ಪ್ರಚಾರದ ಸಮಯಲ್ಲಿ ನೀತಿ ಸಂಹಿತೆಯ ಉಲ್ಲಂಘಿಸಿದವರ ಮೇಲೆ ಎಡಿಗಾದಷ್ಟು ಕ್ರಮ ತೆಕ್ಕೊಂಡ. ಒಟ್ಟಾರೆ ಚುನಾವಣೆಗೊ ತಕ್ಕಮಟ್ಟಿಂಗೆ ನಿಷ್ಪಕ್ಷ, ನಿಯಂತ್ರಿತ ಕಾರ್ಯಕ್ರಮ ಹೇಳಿ ಕಾಂಬ ಹಾಂಗಿಪ್ಪ ವ್ಯವಸ್ಥೆಗಳ ಜ್ಯಾರಿ ಮಾಡಿದ. ಎಲ್ಲಕ್ಕಿಂತ ಹೆಚ್ಚಾಗಿ, ನಂತರ ಬಂದ ಆಯುಕ್ತಂಗೊಕ್ಕೂ ಇವನ ಕಾರ್ಯಕ್ಷಮತೆಯ ಮಾನದಂಡವ ಉಳಿಸಿಗೊಂಬ ಒಂದು ಮುಖ್ಯ ಹೊಣೆಗಾರಿಕೆಯ ವಹಿಸಿಕ್ಕಿ ಹೋದ. ಕೊನೆಗೆ ನಿವೃತ್ತನಾಗಿ ಸುಮಾರು ವರ್ಷ ಮನೆಲೇ ಕೂದುಗೊಂಡಿತ್ತವ ರಾಜಕೀಯವಾಗಿ ಸಕ್ರಿಯನಾಗಿ ಅಡ್ವಾಣಿಯ ಎದುರು ಕೋಂಗ್ರೇಸು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ಇವಂಗೆ ಹೀಂಗಿಪ್ಪ ದುರ್ಬುದ್ಧಿ ಬಾರದ್ದೆ ಇತ್ತಿದ್ದರೆ, ಒಳ್ಳೆಯ ಕೆಲಸ ಮಾಡಿ ಸಂಪಾದಿಸಿದ ವರ್ಚಸ್ಸಿನ ಉಳಿಸಿಗೊಂಬಲೆ ರಜ ಸುಲಭ ಆವುತ್ತೀತು !

ಇನ್ನು ಸದ್ಯಕ್ಕೆ ಚುನಾವಣೆಗೊ ಎಲ್ಲಿಯೂ ಇಲ್ಲೆ. ಆದರೂ, ಈ ವಿಷಯಲ್ಲಿ ಇತ್ತೀಚೆಗೆ ಒಂದು ಸಕಾರತ್ಮಕ ಶುದ್ದಿ ಕೇಳಿ ಬೈಂದು. ಅದೆಂತ ಹೇಳಿರೆ, ಗುಜರಾತಿಲ್ಲಿ ಮತದಾನವ ಖಡ್ಡಾಯ ಮಾಡುವ ವಿಷಯ. ಇದು ಕಳೆದ ಸುಮಾರು ೧೦ ವರ್ಷಂದ ನಮ್ಮ ದೇಶಲ್ಲಿ ಕಂಡು ಬಂದ ಅನುಕರಣೀಯ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗಳ ಕೇಂದ್ರ ಬಿಂದುವಾಗಿಪ್ಪ ನರೇಂದ್ರ ಮೋದಿಯ ಚಿಂತನೆಯ ಫಲ. ನಮ್ಮ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಯಾವಾಗಳೂ ೫೦ ರಿಂದ ೬೦% ಅಷ್ಟೇ ಇರ್ತಷ್ಟೆ. ಇದರಲ್ಲಿ ಎಂತ ವಿಶೇಷ ಇಲ್ಲೆ. ಅಮೇರಿಕಾದ ಚುನಾವಣೆಗಳಲ್ಲಿಯುದೇ ಇಷ್ಟೇ ಮತದಾನ ಅಪ್ಪದು. ಆದರೆ, ಅಲ್ಲಿ ೧೦೦% ಅಕ್ಷರಸ್ಥರು ಇಪ್ಪ ಕಾರಣ, ಉಳಿದವು ಎಲ್ಲೋರೂ ಮತದಾನ ಮಾಡಿರೂ ಫಲಿತಾಂಶಲ್ಲಿ ಎಂತ ವಿಶೇಷ ವ್ಯತ್ಯಾಸ ಆಗ. ಆದರೆ, ನಮ್ಮ ದೇಶಲ್ಲಿಪ್ಪ ೫೦% ಅನಕ್ಷರಸ್ಥಲ್ಲಿ ಹೆಚ್ಚು ಕಮ್ಮಿ ಎಲ್ಲೋರೂ ಮತದಾನ ಮಾಡ್ತವು. ಹೇಳಿರೆ, ಅಕ್ಷರಸ್ಥರಲ್ಲಿ ಕೇವಲ ೧೦% ಮಾಂತ್ರ ಮತದಾನ ಮಾಡುದು ಹೇಳಿದ ಹಾಂಗಾತು ! ಅನಕ್ಷರಸ್ಥರೆಲ್ಲಾ ಬೆಗುಡಂಗೊ ಹೇಳುವ ತಾತ್ಪರ್ಯ ಅಲ್ಲ. ಆದರೆ, ದೈನಂದಿನ ಬವಣೆಂದ ಸೋತು ಹೋದಿಪ್ಪ ಅವರ ಕೇವಲ ತತ್ಕಾಲದ ಪರಿಹಾರಂಗಳಿಂದ ಅಥವಾ ಆಮಿಶಂಗಳಿಂದ ಪ್ರೇರೇಪಿಸಿ ಮತ ಗಿಟ್ಟಿಸಿಗೊಂಬ ಸಾಧ್ಯತೆ ಹೆಚ್ಚಿದ್ದು. ಉದಾಹರಣೆಗೆ, ಉಚಿತ ವಿದ್ಯುತ್ ಅಥವಾ ಕಿಲೋವಿಂಗೆ ೧ ರುಪಾಯಿಗೆ ಅಕ್ಕಿ ಕೊಡ್ತೆಯೋ ಹೇಳುವ ಆಶ್ವಾಸನೆಂದ ಅವು ಬಹುತೇಕ ಪ್ರಭಾವಿತರಕ್ಕು. ಅರ್ಥ ವ್ಯವಸ್ಥೆಯ ಮೇಲೆ ಇದರಿಂದ ಅಪ್ಪ ಕೆಟ್ಟ ಪರಿಣಾಮಂಗಳ ಬಗ್ಗೆ ಯೋಚಿಸುವಷ್ಟು ಅವಕ್ಕೆ ಗೊಂತಿರ್ತಿಲ್ಲೆ. ಅದೇ, ಹೆಚ್ಚು ವಿಷಯಜ್ಞಾನ ಮತ್ತು ಲೋಕಜ್ಞಾನ ಇಪ್ಪ ವಿದ್ಯಾವಂತರಿಂಗಾದರೆ ದೂರದೃಷ್ಟಿಂದ ಯೋಚನೆ ಮಾಡ್ಳೆಡಿತ್ತು. ಆದರೆ, ಸುಶಿಕ್ಷಿತರಿಂಗೆ ಟಿವಿಯ ಚರ್ಚೆಗಳಲ್ಲಿ ಭಾಗವಹಿಸಿ ದೇಶಲ್ಲಿ ಎಂತಲ್ಲಾ ಸರಿ ಇಲ್ಲೆ ಹೇಳಿ ಬೊಬ್ಬೆ ಮಾಡುದು ಬಿಟ್ರೆ, ಮತ ಚಲಾಯಿಸುವ ಕರ್ತವ್ಯದ ಬಗ್ಗೆ ನೆಂಪು ಇರ್ತಿಲ್ಲೆ. ಚುನಾವಣೆಯ ದಿನ ಇಪ್ಪ ಸಾರ್ವಜನಿಕ ರಜೆಯ ಶಾರುಕ್ ಖಾನ್ ನ ಸಿನೆಮ ನೋಡಿ ಸದುಪಯೋಗ ಪಡಿಸಿಗೊಳ್ತವೇ ಹೊರತು, ಮತಗಟ್ಟೆಗೆ ಹೋವುತ್ತವಿಲ್ಲೆ. ಹಾಂಗಾಗಿ ಮತದಾನವ ಖಡ್ಡಾಯ ಹೇಳಿ ಮಾಡುದು ಒಂದು ಒಳ್ಳೆ ಬೆಳವಣಿಗೆ ಹೇಳಿ ಕಾಣ್ತು.

ನರೇಂದ್ರ ಮೋದಿಯ ಚಿಂತನೆಗೆ ಜನರ ಅನಕ್ಷರತೆಯನ್ನೇ ರಾಜಕೀಯ ಭಂಡವಾಳವಾಗಿ ಮಾಡಿಗೊಂಡಿಪ್ಪ ಲಾಲೂವಿನ ಹಾಂಗಿಪ್ಪವರ ಸಮರ್ಥನೆ ಸಿಕ್ಕಿದ್ದು ಪರಮಾಶ್ಚರ್ಯದ ಸಂಗತಿ ! ಹಾಂಗಾಗಿ ಇದು ರಾಷ್ಟ್ರವ್ಯಾಪಿಯಾದ ಬದಲಾವಣೆಗೆ ನಾಂದಿ ಆದರೆ, ಮೋದಿಯ ಪ್ರಯತ್ನ ಸಾರ್ಥಕ.

-ಬಾಪಿ/ ಜನವರಿ ೬, ೨೦೧೦