ಭಾರತೀಯರಾದ ನಾವು ಗತವೈಭವದ ಗುಂಗಿಲ್ಲಿ ಎಷ್ಟೋ ಕಾಲ ಜೀವನ ಮಾಡಿ ಆತು. ಈಗ ನಮ್ಮ ನೈಜ ಪರಿಸ್ಥಿತಿಯ ನಾವೇ ಅವಲೋಕನ ಮಾಡಿಗೊಂಡು ಭವಿಷ್ಯದತ್ತ ಹೆಜ್ಜೆ ಹಾಕೆಕ್ಕಾದ ಕಾಲ ಬೈಂದು. ಇಲ್ಲದ್ರೆ, ತೀವ್ರಗತಿಲಿ ಬದಲಾವುತ್ತಾ ಇಪ್ಪ ಕಲಿಯುಗದ ಈ ಕಾಲಲ್ಲಿ ನಾವು ಭಾರೀ ಹಿಂದೆ ಉಳಿದು ಹೋಕು.
ನಮ್ಮ ಸಮಸ್ಯೆಗಳ ಬಗ್ಗೆ ನವಗೆ ಎಷ್ಟು ಅವಜ್ಞೆ ಇದ್ದು ಹೇಳುದಕ್ಕೆ ಒಂದು ಸಣ್ಣ ತುಲನೆ ಮಾಡಿ ನೋಡುವೊ. ತಮ್ಮ ಅಂತರರಾಷ್ಟ್ರೀಯ ವ್ಯವಹಾರಂಗೊಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನ ಇಲ್ಲದ್ದಿಪ್ಪದು ಒಂದು ದೊಡ್ಡ ತೊಡಕು ಹೇಳಿ ಮನಗಂಡ ಚೀನಾ ಸರಕಾರ ಈಗ ಮಕ್ಕೊಗೆಲ್ಲಾ ಈ ಹೊಸ ಭಾಷೆಯ ಕಲಿಶುಲೆ ವ್ಯವಸ್ಥೆ ಮಾಡಿದ್ದಾಡ. ಇನ್ನು ೧೦ ವರ್ಷಲ್ಲಿ ಅಲ್ಲಿ ಈ ಸಮಸ್ಯೆ ಇರ್ತಿಲ್ಲೆ. ನಮ್ಮಲ್ಲಿ ಎಲ್ಲೋರಿಂಗೂ ಗೊಂತಿಪ್ಪ, ಎಲ್ಲೋರೂ ಒಪ್ಪಿಗೊಂಬ ಹೀಂಗಿಪ್ಪ ಸುಮಾರು ಸಮಸ್ಯೆಗೊ ಇದ್ದು. ವ್ಯತ್ಯಾಸ ಎಂತ ಹೇಳಿರೆ, ನಮ್ಮ ಸರಕಾರ ಸಮಸ್ಯೆಗಳ ಪರಿಹಾರಕ್ಕೆ ಎಂತ ಕ್ರಮವನ್ನೂ ತೆಕ್ಕೊಳ್ತಿಲ್ಲೆ. ೫೦ ವರ್ಷ ಮೊದಲು ಎಂತಲ್ಲ ಸಮಸ್ಯೆಗೊ ಇತ್ತೋ, ಇಂದಿಂಗೂ ಅದೇ ಸಮಸ್ಯೆಗಳ ಸಹಿಸಿಗೊಂಡು ನಾವು ಜೀವನ ಮಾಡ್ತಾ ಇದ್ದು. ಇಲ್ಲಿ ಎನಗೆ ಕಂಡ ನಮ್ಮ ದೇಶದ ಕೆಲವು ಸಮಸ್ಯೆಗಳ ಪಟ್ಟಿ ಮಾಡ್ತೆ.
ಹೆಚ್ಚಿನ ಸಮಸ್ಯೆಗಳ ಬೇರು ಬ್ರಿಟಿಷರ ಕಾಲದ್ದಾದ ಕಾರಣ ಅವರ ಗುಣಗಾನ ಮಾಡದ್ದೆ ಸುರು ಮಾಡ್ಳೆ ಎಡಿಯ. ನಮ್ಮ ದೇಶವ ಆಳಿದ ಅಷ್ಟೂ ಪರಕೀಯರ ಪೈಕಿ ನಮ್ಮ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವು ಹೇಳಿರೆ ಬ್ರಿಟಿಷರು. ಭಾರತವ ಆಳಿದ ಹೆಚ್ಚಿನ ಬ್ಯಾರಿ ರಾಜಂಗಳ ಪ್ರಭಾವ ತಾತ್ಕಾಲಿಕವಾದರೆ, ಬ್ರಿಟಿಷರ ಪ್ರಭಾವ ದೂರಗಾಮಿಯಾದ್ದು. ಇದಕ್ಕೆ ಅವರ ಸೀಂತ್ರಿ ಬುದ್ಧಿಯ ಕುತಂತ್ರಂಗಳೂ ಕಾರಣ. ಬ್ರಿಟಿಷ್ ಶಾಸನದ ಕರಾಳ ಛಾಯೆ ನಮ್ಮ ಮೇಲೆ ಇನ್ನೂ ಇಪ್ಪದರ ಮೂಲಲ್ಲಿ ಅವು ನಮ್ಮ ದೇಶೀ ಶಿಕ್ಷಣ ಪದ್ಧತಿಯ ನಾಶ ಮಾಡಿ ಕೋನ್ವೆಂಟ್ ಪದ್ಧತಿಯ ಜ್ಯಾರಿ ಮಾಡಿದ್ದು, ಸ್ವಾತಂತ್ರ್ಯದ ಆಮಿಶಲ್ಲಿ ಭಾರತ-ಪಾಕಿಸ್ತಾನದ ವಿಭಜನೆ ಮಾಡಿದ್ದೇ ಮೊದಲಾದ ಕಾರಣಂಗಳ ಹುಡುಕ್ಕುಲಕ್ಕು.
ಬಾಬೂಗಿರಿ : ನಮ್ಮ ಸರಕಾರದ ಯಂತ್ರ ಆಢಳಿತಶಾಹಿ ವ್ಯವಸ್ಥೆಲಿ ನಡವದು ಹೇಳುದು ಗೊಂತಿಪ್ಪ ವಿಷಯ. ಒಂದು ಪ್ರಸಿದ್ಧ ಜೋಕು ಹೇಳಿರೆ, ಬ್ರಿಟಿಷರು ನವಗೆ ಬಾಬೂಗಿರಿ (bureaucracy)ಯ ಬಳುವಳಿ ಕೊಟ್ಟವು. ಅವರ ಈ ಕುಶಾಲಿನ ನಾವು ಭಾರೀ ಗಂಭೀರವಾಗಿ ಪರಿಗಣಿಸಿತ್ತು ಹೇಳುದು. ಅವರ ಕಾಲಕ್ಕೆ, ಅವರ ಅನುಕೂಲಕ್ಕೆ ತಕ್ಕ ಹಾಂಗೆ ಮಾಡಿ ಮಡುಗಿದ ವ್ಯವಸ್ಥೆಗಳ ನಾವು ಇಂದಿಂಗೂ ಚಾಚೂ ತಪ್ಪದ್ದೆ ಪಾಲಿಸುತ್ತಾ ಇಪ್ಪದು ನಮ್ಮ ಬೋದಾಳತನದ ಪರಮಾವಧಿ. ನಾವು ಇಷ್ಟರವರೆಗೆ ಆ ವ್ಯವಸ್ಥೆಗಳ ಸಾಧಕ -ಬಾಧಕಂಗಳ ವಿಮರ್ಶೆ ಮಾಡುದಾಗಲೀ, ಇದರಲ್ಲಿ ಯಾವುದೇ ವ್ಯತ್ಯಾಸ, ಸುಧಾರಣೆ ಮಾಡುವ ಗೋಜಿಂಗಾಗಲೀ ಹೋಯಿದಿಲ್ಲೆ. ಉದಾಹರಣೆಗೆ, ನಮ್ಮ ಪೋಲೀಸರು. ಬ್ರಿಟಿಷರ ಕಾಲಕ್ಕೆ ಅವು ಹೇಳಿದ ಹಾಂಗೆ ಕೇಳಿಗೊಂಡು, ಅವಕ್ಕೆ ನಮ್ಮ ಸಮಾಜದ ಗುಪ್ತ ಮಾಹಿತಿ ಕೊಟ್ಟುಗೊಂಡು ಇಪ್ಪ ಪೋಲೀಸರು ಬೇಕಾಗಿತ್ತು. ಈ ವ್ಯವಸ್ಥೆ ಇಂದಿಂಗೂ ನಡಕ್ಕೊಂಡು ಬತ್ತಾ ಇದ್ದು. ಹಾಂಗಾಗಿಯೇ ಒಂದು ಹೊಸ ಸರಕಾರ ಬಂದಪ್ಪಗ ಹಿಂದಾಣ ಸರಕಾರದವರ ಮೇಲೆ ಕೇಸು ಹಾಕುದು, ತಮ್ಮ ಮೇಲಿಪ್ಪ ಕೇಸುಗಳ ವಜಾ ಮಾಡಿಸಿಗೊಂಬದು ಇತ್ಯಾದಿ ಪ್ರಕರಣಂಗೊ ಅವ್ಯಾಹತವಾಗಿ ನಡವದು. ವಿಪರ್ಯಾಸ ಹೇಳಿರೆ, ಬ್ರಿಟನ್ ಲ್ಲಿಯೇ ಇಂತಹ ವ್ಯವಸ್ಥೆ ಮೊದಲೂ ಇತ್ತಿಲ್ಲೆ, ಈಗಳೂ ಇಲ್ಲೆ ! ಅಲ್ಯಾಣ ಪೋಲೀಸು ವಿಭಾಗಕ್ಕೆ ಪೂರ್ತಿ ಸ್ವಾಯತ್ತತೆ ಇದ್ದು. ನಮ್ಮ ರಾಜಕಾರಣಿಗೊಕ್ಕೆ ಈಗಾಣ ವ್ಯವಸ್ಥೆಯೇ ಅನುಕೂಲ ಆದ್ದರಿಂದ ಇದನ್ನೇ ಮುಂದುವರಿಸಿಗೊಂಡು ಹೋವುತ್ತಾ ಇದ್ದವು. ಇನ್ನು, ನಮ್ಮ ಆಢಳಿತ ಯಂತ್ರದ ಬಗ್ಗೆ ಹೇಳಿಗೊಂಬಲೇ ನಾಚಿಗೆ ಆವುತ್ತು. ಬ್ರಿಟಿಷರ ಕಾಲಲ್ಲಿ, ಯಾವುದೇ ಕೆಲಸಕ್ಕಾದರೂ ಸರಿಯಾದ ಯೋಜನೆ ಮತ್ತೆ ಅದರ ಜ್ಯಾರಿ ಮಾಡುವ ಅಧಿಕಾರಿಗೊಕ್ಕೆ ಅಗತ್ಯವಾದ ಅರ್ಹತೆ, ನಿಯತ್ತು, ಕ್ಷಮತೆ ಎಲ್ಲಾ ಇತ್ತು. ಈಗ ಯೋಜನೆಯೂ ಇಲ್ಲೆ, ಯೋಗ್ಯತೆ ಮತ್ತು ಕ್ಷಮತೆ ಹೇಂಗೂ ಇಲ್ಲೆ. ನಿಯತ್ತು ಮಾಂತ್ರ ಇದ್ದು - ಲಂಚ ಕೊಡುವವರ ಅಥವಾ ರಾಜಕಾರಣಿಗಳ ಪಾದಕ್ಕೆ !
ಕಾನೂನು ವ್ಯವಸ್ಥೆ : ಓಬೀರಾಯನ ಕಾಲದ ನಮ್ಮ ಕಾನೂನುಗೊ ಎಷ್ಟು ಅಸಂಗತ ಹೇಳಿ ಗ್ರೇಶಿರೆ ಬೇಜಾರ ಆವುತ್ತು. ಬ್ರಿಟಿಷರು ಬರದ ಅಷ್ಟೂ ಕಾನೂನಿನ ಗ್ರಂಥಂಗಳ ತಿದ್ದುಪಡಿ ಮಾಡ್ಳೆ ಅಥವಾ ಬದಲಾವಣೆ ಮಾಡ್ಳೆ ನಮ್ಮ ಕಾನೂನು ಪಂಡಿತರಿಂಗೆ ಪುರುಸೊತ್ತೇ ಆಯಿದಿಲ್ಲೆ. ಕೆಲವು ಗ್ರಂಥಂಗಳ ಎಲ್ಲೋರೂ ಪೂರ್ತಿ ಓದಿದ್ದವೋ ಇಲ್ಯಾ ಹೇಳುದೇ ಸಂಶಯ ! ಎಷ್ಟೋ ವರ್ಷಂದ ಕಾನೂನುಗಳ ಸುಧಾರಣೆ ಬಗ್ಗೆ ಚರ್ಚೆ ಆವುತ್ತಾ ಇದ್ದೇ ಹೊರತು ಇನ್ನುದೇ ಎಂತದೂ ಕೆಲಸ ಸುರು ಆಯಿದಿಲ್ಲೆ ! ಸಮಾನ ನಾಗರಿಕ ಕಾಯಿದೆ ಹಾಂಗಿಪ್ಪ ಮೂಲಭೂತವಾಗಿ ಅಗತ್ಯ ಇಪ್ಪ ವಿಷಯಂಗಳಲ್ಲಿ ಬದಲಾವಣೆ ಅಪ್ಪ ವಿಷಯ ಸದ್ಯಕ್ಕೆ ಹೇಂಗೂ ಬಿಡುವೊ. ಇದು ನಮ್ಮ ಜೀವನ ಕಾಲಲ್ಲಿ ಅಪ್ಪಲಿಲ್ಲೆ. ಮುಂದೆ ಯಾವಗಾದರೂ ಆದರೂ, ಭಾರತದ ಹಿಂದೂಗೊ ಎಲ್ಲಾ ಮುಸ್ಲಿಮರ ಶರಿಯತ್ ಕಾನೂನಿನ ಪಾಲಿಸೆಕ್ಕು ಹೇಳುವ ಕಾನೂನು ಬಂದರೂ ಬಕ್ಕು. ಅಲ್ಲಿಗೆ ಸಮಾನತೆ ತಂದ ಹಾಂಗೆ ಆತನ್ನೆ ?
(ಇನ್ನೂ ಇದ್ದು...)

- ಬಾಪಿ / ೦೯.೦೮.೨೦೦೯
No comments:
Post a Comment