ಎಲ್ಲೋರೂ ಚೌತಿಯ ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿ ಭಕ್ಷ್ಯಂಗಳ ಯಥೇಚ್ಛ ಸೇವಿಸಿ, ಕರಗಿಸಿಗೊಂಡು ಸೌಖ್ಯಲ್ಲಿ ಇದ್ದವು ಹೇಳಿ ಗ್ರೇಶಿಗೊಂಡು, ಎಲ್ಲೋರಿಂಗೂ ಒಳ್ಳೆ ಬುದ್ಧಿ, ಆಯುರಾರೋಗ್ಯ ಕೊಡು ಹೇಳಿ ಗಣಪತಿಯ ಪ್ರಾರ್ಥನೆ ಮಾಡ್ತೆ.
ಗಣಪತಿಯ ದೇಹದ ಅಂಗಂಗಳ ಅನುಪಾತ ವಿಚಿತ್ರವಾಗಿ ಕಂಡರೂ, ಅವನಷ್ಟು ಚಂದದ ದೇವರು ಬೇರೆ ಇಲ್ಲೆ ಹೇಳಿರೆ ತಪ್ಪಾಗ. ಇಪ್ಪದು ಆನೆಯ ತಲೆ ಆದರೂ ಹಾಸ್ಯ, ಸಂಗೀತವೇ ಮೊದಲಾದ ವಾಙ್ಮಯ ವಿಷಯಂಗಳಲ್ಲಿ ವಿಶೇಷ ಆಸಕ್ತಿ ಮತ್ತು ಪ್ರತಿಭೆ ಇಪ್ಪ ದೇವರು ಹೇಳಿಯೇ ಇವ ಹೆಸರುವಾಸಿ. ವ್ಯಂಗ್ಯಚಿತ್ರಕಾರರಿಂಗಂತೂ ಇವನ ಕಂಡರೆ ಭಾರಿ ಪ್ರೀತಿ. ಹಾಂಗಾರೆ, ಚೌತಿಯ ಈ ಶುಭ ಸಂದರ್ಭಲ್ಲಿ ಗಣಪತಿಯ ಮಹಿಮೆಯ ತಿಳ್ಕೊಂಡು, ಅವನ ದೇಹದ ಅಂಗಂಗಳಿಂದ ಸಿಕ್ಕುವ ಸಂದೇಶಂಗಳಿಂದ ಸ್ಪೂರ್ತಿ ಪಡವ ಪ್ರಯತ್ನ ಮಾಡುವೊ. ಇದಕ್ಕೆ ಅನುಕೂಲ ಅಪ್ಪ ಹಾಂಗಿಪ್ಪ ಚಿತ್ರ ಒಂದರ ಇದರೊಟ್ಟಿಂಗೆ ಲಗತ್ತಿಸಿದ್ದೆ.
- ಬಾಪಿ
No comments:
Post a Comment