(...ಮುಂದುವರುದ್ದು)..
ಅನಾಗರಿಕ ನಡವಳಿಕೆ : ನಾವು ಬೇರೆ ದೇಶದವರ ಅಪಹಾಸ್ಯಕ್ಕೆ ಗುರಿ ಅಪ್ಪ ಹಾಂಗಿಪ್ಪ ಸುಮಾರು ನಡವಳಿಕೆಗೊ ನಮ್ಮಲ್ಲಿ ಇದ್ದು. ಎಷ್ಟೋ ವಿಷಯಲ್ಲಿ ಭಾರತ ಹೇಳಿರೆ ಹೀಂಗೇ ಹೇಳುವ ಹಣೆಪಟ್ಟಿ ಬಪ್ಪಷ್ಟು ಹದಗೆಟ್ಟ ಅಭ್ಯಾಸಂಗಳ ನಾವು ರೂಢಿಸಿಗೊಂಡಿದು. ಇವೆಲ್ಲಾ ನಮ್ಮ ಮನೋಧರ್ಮಕ್ಕೆ ಸಂಬಂಧಪಟ್ಟ ವಿಷಯಂಗೊ ಆದ ಕಾರಣ, ಒಂದೊಂದನ್ನೂ ಪ್ರತ್ಯೇಕ ವಿವರಿಸೆಕ್ಕಾದ ಅವಶ್ಯಕತೆ ಇಲ್ಲೆ. ಎಲ್ಲವನ್ನೂ ಸೇರಿಸಿ ಒಟ್ಟಿಂಗೆ ಬರವದೇ ಸುಲಭ. ಮತ್ತೆ ಓದ್ಲುದೇ ಚೆಂದ ! ಇಂತಹ ನಡವಳಿಕೆಗಳ ಎನಗೆ ಕಂಡ ಮಟ್ಟಿಂಗೆ ಪಟ್ಟಿ ಮಾಡ್ತೆ.
ಸಿಕ್ಕಿದಲ್ಲಿ ಪೂರಾ ಕಸವು ಇಡುಕ್ಕಿ ಗಲೀಜು ಮಾಡುದು, ಸಾರ್ವಜನಿಕ ಜಾಗೆಗಳಲ್ಲಿ ಮೂತ್ರ ವಿಸರ್ಜನೆ, ತುಪ್ಪೊದು (ಕೆಲವು ಜನಕ್ಕೆ ಬರೀ ತುಪ್ಪಿದರೆ ತೃಪ್ತಿ ಆವುತ್ತಿಲ್ಲೆ, ಕ್ಯಾಕರಿಸಿ ತುಪ್ಪಿದರೇ ಸಮಾಧಾನ), ಸಮಯ ಪಾಲನೆ ಮಾಡದ್ದಿಪ್ಪದು, ವಾಹನ ಬಿಡುವಗ ಅನವಶ್ಯಕ ಹಾರ್ನ್ ಹಾಕಿ ಹರಟೆ ಮಾಡುದು ಇತ್ಯಾದಿಗೊ ಈ ಪಟ್ಟಿಲಿ ಸೇರಲೇ ಬೇಕಾದ ಸಂಗತಿಗೊ. ಇನ್ನೂ ಯಾವುದಾದರೂ ಮುಖ್ಯದ್ದು ಬಿಟ್ಟು ಹೋಗಿದ್ದರೆ, ಸೇರಿಸಿಗೊಳೆಕ್ಕಾಗಿ ವಿನಂತಿ. ಈ ವಿಷಯಂಗಳ ಕೂಲಂಕುಶ ವಿಮರ್ಶೆ ಮಾಡ್ಳೆ ಹೋದರೆ, ಸುಮಾರು ಸಂಗತಿಗೊ ಹೆರ ಬತ್ತು. ಈ ಯಾವ ನಡವಳಿಕೆಗಳನ್ನೂ ಸಮರ್ಥಿಸಿಗೊಂಬಲೆ ಎಡಿಯದ್ದರೂ, ಯಾವುದರ ತೆಕ್ಕೊಂಡರೂ ಎರಡೂ ನಮುನೆ ವಾದ ಮಾಡ್ಳಕ್ಕು. ಉದಾಹರಣೆಗೆ, ಕಸವು ಇಡುಕ್ಕುವ ಅಭ್ಯಾಸವ ನೋಡುವೊ. ನಮ್ಮಲ್ಲಿ ತ್ಯಾಜ್ಯ ವಸ್ತುಗಳ ವಿಲೆವಾರು ಮಾಡ್ಳೆ ಸರಿಯಾದ ವ್ಯವಸ್ಥೆ ಇಲ್ಲದ್ದಿಪ್ಪದು ಸರಕಾರದ ಬೇಜವಾಬ್ದಾರಿ. ಹಾಂಗೆ ಹೇಳಿ ಇಪ್ಪ ಕಸವಿಂಗೆ ಇನ್ನೂ ಹೆಚ್ಚು ಕಸವಿನ ಸೇರುಸುದಕ್ಕೆ ನಮ್ಮ ಜನರ ಹಾಂಕಾರವೇ ಕಾರಣ. ಹೀಂಗಿಪ್ಪ ಎಷ್ಟೊಂದು ಕೆಟ್ಟ ಚಾಳಿಗೊ ನಮ್ಮವಕ್ಕೆ ಜೀವನಕ್ರಮವೇ ಆಗಿ ಹೋಯಿದು ಹೇಳುದು ದೇಶದ ದುರಂತ. ಹಿಂದಂದ ಬಂದು ಎಡೆಬಿಡದ್ದೆ ಹಾರ್ನ್ ಹಾಕುವ ವಾಹನದ ಚಾಲಕರ ಆನು ಎಷ್ಟೋ ಸರ್ತಿ ಗುರಾಯಿಸಿ ನೋಡಿದ್ದದಿದ್ದು. ಆದರೆ, ಅವಕ್ಕೆ ಎನ್ನ ವರ್ತನೆಯೇ ವಿಚಿತ್ರ ಕಂಡದರ ಸುಮಾರು ಸರ್ತಿ ನೋಡಿ ಅನುಭವಿಸಿದ ಮೇಲೆ ಈ ಪ್ರಾಣಿಗೊ ಜನ್ಮಲ್ಲಿ ಉದ್ಧಾರ ಅಪ್ಪಲಿಲ್ಲೆ ಹೇಳಿ ಈ ವಿಷಯಲ್ಲಿ ಈಗ ತಲೆಕೆಡಿಸಿಗೊಂಬದರ ಸಂಪೂರ್ಣ ಬಿಟ್ಟಿದೆ. ಒಟ್ಟಾರೆ ಹೇಳ್ತರೆ, ಹೆಚ್ಚಿನವಕ್ಕೆ ಇದೊಂದು ಅನೈಚ್ಛಿಕ ಕಾರ್ಯ ಹೇಳುದರ ತಿಳ್ಕೊಂಬಲಕ್ಕು.
ಹಾಂಗಾರೆ, ಹೀಂಗಿಪ್ಪ ವಿಷಯಂಗಳಲ್ಲಿ ಬದಲಾವಣೆ ಆಯೆಕ್ಕಾದರೆ, ಮಕ್ಕೊ ಆಗಿಪ್ಪಗಳೇ ತಿಳಿಶಿ ಹೇಳೆಕ್ಕಷ್ಟೆ. ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಂದ ಇಂತಹ ವಿಷಯಂಗಳಲ್ಲಿ ಬದಲಾವಣೆ ಅವಶ್ಯ ಹೇಳಿ ಸರಕಾರದವಕ್ಕೂ ಕಾಣೆಕ್ಕು. ನಮ್ಮ ಶಾಲೆಗಳ ಪಾಠಪುಸ್ತಕಂಗಳಲ್ಲಿ civics ಹೇಳುವ ವಿಷಯಕ್ಕೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಕಲಿಶಿದರೆ ಒಳ್ಳೆದು. ಈ ಪಾಠ ಮಾಡ್ಳೆ ಸಮರ್ಪಕ ಅಧ್ಯಾಪಕರನ್ನೂ ನೇಮಿಸುದು ಅಷ್ಟೇ ಅವಶ್ಯ (ಮೀಸಲಾತಿಯ ಗೌಜಿಲಿ ಮಾಷ್ಟ್ರ ಅಪ್ಪಲೆ ಪದವಿ ಪರೀಕ್ಷೆಲಿ ಕನಿಷ್ಟ ಅಂಕ ತೆಕ್ಕೊಂಡು ತೇರ್ಗಡೆ ಆದರೂ ಸಾಕಕ್ಕು. ಆದರೆ, ಕನಿಷ್ಟ ಪಕ್ಷ ದಿನಾಗಳೂ ಮೀವ ಅಭ್ಯಾಸ ಆದರೂ ಇಪ್ಪವರ ಆಯ್ಕೆ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆ ಮಾರ್ಗದರ್ಶನ ಮಾಡಿದ ಹಾಂಗಕ್ಕು). ಇದಕ್ಕೆ ಬೇಕಾಗಿ ಒಂದು ಪ್ರತ್ಯೇಕ ನಾಗರಿಕ ನಡವಳಿಕೆಗಳ ಉತ್ತೇಜನ ಮಂತ್ರಾಲಯವನ್ನೇ ಹೊಸತ್ತಾಗಿ ಸುರು ಮಾಡಿರೆ ಇನ್ನೂ ಒಳ್ಳೆದೇ !

- ಬಾಪಿ / ೧೪.೦೮.೨೦೦೯
No comments:
Post a Comment