ಆನು ಹೋದ ರೋಚೆಸ್ಟರ್ ಹೇಳುವ ಪೇಟೆ ನ್ಯೂಯಾರ್ಕ್ ರಾಜ್ಯಲ್ಲಿಪ್ಪದು. ಎಮಿರೇಟ್ಸ್ ವಿಮಾನಸಂಸ್ಥೆಯವರ ಬೆಂಗ್ಳೂರಿಂದ ದುಬೈ ಮೂಲಕ ನ್ಯೂಯಾರ್ಕಿಂಗೆ ಹೋಪ ಮಾರ್ಗ ಸೌಕರ್ಯ ಹೇಳಿ ಕಂಡ ಕಾರಣ ಅದನ್ನೇ ಆಯ್ಕೆ ಮಾಡಿದೆ. ನಮ್ಮ ಭಾರತದ ಹವಾಮಾನಕ್ಕೆ ಒಗ್ಗಿ ಹೋಗಿಪ್ಪ ಎನ್ನ ಹಾಂಗಿಪ್ಪವರ ದೃಷ್ಟಿಂದ, ಅಲ್ಲಿಗೆ ಹೋಪಲೆ ಜೂನ್ ತಿಂಗಳು ಅತ್ಯಂತ ಅನುಕೂಲದ ಸಮಯ - ಹೆಚ್ಚು ಸೆಖೆಯೂ ಇಲ್ಲದ್ದೆ, ವಿಪರೀತ ಛಳಿಯೂ ಇಲ್ಲದ್ದೆ ಹಿತವಾಗಿತ್ತು. ನಯಾಗರಾ ಜಲಪಾತ ಕೇವಲ ೬೦ ಮೈಲು ದೂರಲ್ಲಿತ್ತ ಕಾರಣ ಒಂದು ವಾರಾಂತ್ಯಲ್ಲಿ ಅಲ್ಲಿಗೂ ಹೋಪ ಅವಕಾಶ ಸಿಕ್ಕಿತ್ತು. ಅಂದು ಆದಿತ್ಯವಾರ ಆದ ಕಾರಣ, ನಯಾಗರಾಲ್ಲಿ ತುಂಬ ಜನಸಂದಣಿ ಇತ್ತು - ಮತ್ತೆ, ಅಲ್ಲಿ ಕಂಡ ಪ್ರತಿ ಎರಡನೇ ಮೋರೆ ಭಾರತೀಯನದ್ದಾಗಿತ್ತು ! ಅಮೇರಿಕಾಲ್ಲಿ ನಮ್ಮವು ಎಷ್ಟು ಜನ ತುಂಬಿದ್ದವು ಹೇಳುದಕ್ಕೆ ಇದೇ ಸಾಕ್ಷಿ.
ಭಾರತ, ಅಮೇರಿಕಾ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಂಗೊ. ಹಾಂಗಾರೆ, ಎರಡಕ್ಕೂ ಇಪ್ಪ ವ್ಯತ್ಯಾಸ ಎಂತ ? ವಿಮಾನಂದ ಕೆಳ ನೋಡಿರೆ, ಎರಡೂ ದೇಶಗಳ ವಿಹಂಗಮ ನೋಟ ಒಂದೇ ನಮುನೆ ಸುಂದರ ! ಅದೃಷ್ಟವಶಾತ್, ಮನುಷ್ಯರ ಕಣ್ಣಿಂಗೆ zoom lens ಇಲ್ಲೆ. ಅದೇ ಒಳ್ಳೆದಾತು, ಭಾರತಮಾತೆ ಮೇಲಂದಾದರೂ ಚೆಂದ ಕಾಣಲಿ ! ಕೆಳ ಇಳುದಪ್ಪಗ ವ್ಯತ್ಯಾಸಂಗೊ ಒಂದೊಂದಾಗಿ ಕಾಂಬಲೆ ಸುರು ಆವುತ್ತು. ಅಮೇರಿಕಾ ದೇಶಲ್ಲಿ ನಮ್ಮಂದ ಎಷ್ಟೋ ಹೆಚ್ಚು ಸಂಪತ್ತು ಇಕ್ಕು. ಅಲ್ಯಾಣ ಸಾಮಾಜಿಕ ವ್ಯವಸ್ಥೆಗೊ ನಮ್ಮಂದ ತುಂಬಾ ಮುಂದುವರಿದಿಕ್ಕು. ಅಲ್ಲಿ ತಾಂತ್ರಿಕ ಅವಿಷ್ಕಾರಂಗಳ ಹೆಚ್ಚು ನಿತ್ಯ ಜೀವನದ ಅನುಕೂಲಕ್ಕೆ ಅಳವಡಿಸಿಗೊಂಡಿಕ್ಕು. ಆದರೆ, ಭಾರತಲ್ಲಿ ಇಪ್ಪದನ್ನೂ ಸರಿಯಾಗಿ ನೋಡಿಗೊಂಬಲೆ ಎಡಿಯದ್ದಿಪ್ಪ ನಮ್ಮ ರೋಗಗ್ರಸ್ತ ಮನಸ್ಸಿನ ಅರ್ಥ ಮಾಡಿಗೊಂಬಲೆ ಮತ್ತು ಸಹಿಸಿಗೊಂಬಲೆ ಭಾರೀ ಕಷ್ಟ ಆವುತ್ತು. ನಾವು ನಮ್ಮ ಕುಟುಂಬಕ್ಕಾಗಿ ಭಯಂಕರ ತ್ಯಾಗ ಮಾಡ್ತು, ಮನೆಯ ಆದಷ್ಟು ಸಗಣ ಬಳುಗಿ ಚೆಂದ ಮಡಿಕ್ಕೊಂಡು, ಹೊಸ್ತಿಲಿಂಗೆ ರಂಗೋಲಿ ಎಲ್ಲ ಹಾಕುತ್ತು. ಆದರೆ, ಮನೆಂದ ಹೆರ ಕಾಲು ಮಡಿಗಿದ ಕೂಡ್ಳೇ ನಮ್ಮ ಸೌಂದರ್ಯ ಪ್ರಜ್ಞೆ ಮಾಯ ಆವುತ್ತು. ನಮ್ಮಷ್ಟೂ ಸಾಮಾಜಿಕ ಕಳಕಳಿ ಇಲ್ಲದ್ದ ಅನಾಗರಿಕ ಜೀವನ ಶೈಲಿ ಇನ್ನೊಂದು ದಿಕ್ಕೆ ಕಾಂಬಲೆ ಸಿಕ್ಕ. ಇಂಫೋಸಿಸ ನ ನಾರಾಯಣ ಮೂರ್ತಿ ಬರದ ”better india better world" ಹೇಳುವ ಪುಸ್ತಕಲ್ಲಿ ಈ ವಿಷಯವ ಭಾರೀ ಲಾಯಿಕಲ್ಲಿ ವಿಮರ್ಶೆ ಮಾಡಿದ್ದ.
ಮಾನವೀಯ ಮೌಲ್ಯಂಗೊಕ್ಕೆಲ್ಲಾ ಉಗಮ ಸ್ಥಾನ ಆಗಿತ್ತ ನಮ್ಮ ದೇಶದ ಪುರಾತನ ಸಂಸ್ಕೃತಿಯ ಇಷ್ಟು ಹೀನ ಸ್ಥಿತಿಲಿ ನೋಡ್ಳೆ ಸಂಕಟ ಆವುತ್ತು. ಎಲ್ಲದಕ್ಕೂ ಸರಕಾರ ಖಂಡಿತವಾಗಿ ಹೊಣೆ ಅಲ್ಲ. ಆದರೆ, ಸಮಾಜದ ರೀತಿ ನೀತಿಗಳ ರೂಪಿಸುವ ಅತಿ ಹೆಚ್ಚಿನ ನಿಯಂತ್ರಣ ಮತ್ತು ಜವಾಬ್ದಾರಿ ಸರಕಾರದ ಮೇಲಿದ್ದು. ನಾವು ಎಷ್ಟು ಬುದ್ಧಿಗೇಡಿಗೊ ಹೇಳಿರೆ, ನವಗೆ ಅನುಕೂಲ ಅಪ್ಪ ವಿಷಯಂಗಳಲ್ಲಿ ಮಾತ್ರ (ಹೇಳಿರೆ, ಬೇಡದ್ದದರ) ಪಾಶ್ಚಾತ್ಯರ ನಕಲು ಮಾಡಿ, ನಮ್ಮತ್ರೆ ಇಪ್ಪ ಒಳ್ಳೆಯ ವಿಷಯಂಗಳ ಎಲ್ಲಾ ಮರತು ಅವಸಾನದ ದಾರಿಲಿ ಸಾಗುತ್ತಾ ಇದ್ದು. ಅವು ಮಾತ್ರ ನಮ್ಮತ್ರೆ ಇಪ್ಪ ಒಳ್ಳೆದೆಲ್ಲವನ್ನೂ ಕಲ್ತುಗೊಂಡು, ತಮ್ಮ ಸಂಸ್ಕೃತಿಯ ಇನ್ನೂ ಔನ್ನತ್ಯಕ್ಕೆ ತೆಕ್ಕೊಂಡು ಹೋವುತ್ತಾ ಇದ್ದವು. ನಮ್ಮದು "worst of both worlds" ಹೇಳುವ ಹಾಂಗಿಪ್ಪ ಪರಿವರ್ತನೆ ಆದರೆ, ಅವರದ್ದು "best of both worlds" ಹೇಳ್ಳಕ್ಕು.
ಇದಿಷ್ಟೂ ನಕಾರಾತ್ಮಕ ಯೋಚನೆಯ ಹಾಂಗೆ ಕಂಡರೆ ಕ್ಷಮೆ ಇರಲಿ. ಎಂತಾರೂ ಬದಲಾವಣೆ ಆಯೆಕ್ಕಾದರೆ, ನಮ್ಮ ಶಿಕ್ಷಣ ವ್ಯನಸ್ಥೆಯೇ ಬದಲಾಯೆಕ್ಕು. ಇಂಗ್ಲಿಷಿನ ಮೇಲಿನ ನಮ್ಮ ಕುರುಡು ವ್ಯಾಮೋಹ ನಿಲ್ಲೆಕ್ಕು. ಮಕ್ಕಳ ಮುಗ್ಧ ಮನಸ್ಸಿನ ಸರಿಯಾಗಿ ರೂಪಿಸುವ ಪ್ರಯತ್ನ ಆಯೆಕ್ಕು. ಸತ್ತು ಮಣ್ಣಾದ ಟಿಪ್ಪು ಸುಲ್ತಾನನ ಹಾಂಗಿಪ್ಪವರ ಜೀವನ ಚರಿತ್ರೆಯ ಮಕ್ಕೊಗೆ ಬಾಯಿ ಪಾಠ ಮಾಡಿಸುವ ಬದಲು ತತ್ಕಾಲದ ವಸ್ತುಸ್ಥಿತಿಯ ಬಗ್ಗೆ ಚಿಂತಿಸಿ ಒಳ್ಳೆಯ ಭವಿಷ್ಯವ ರೂಪಿಸಿಗೊಂಬ ಹಾಂಗೆ ಪ್ರೇರೇಪಿಸುದು ಒಳ್ಳೆದು. ಸ್ವಾಭಿಮಾನದ, ಸ್ವಾವಲಂಬನೆಯ ಹೊಸ ತಲೆಮಾರಿನ ಸೃಷ್ಟಿ ಆಯೆಕ್ಕು. ಕೇವಲ ಹತ್ತು ವರ್ಷಲ್ಲಿ ಭಾರತಮಾತೆಗೆ ಸಂಪೂರ್ಣ ಕಾಯಕಲ್ಪ ಮಾಡಿ, ಫಳಫಳಿಸುವ, ಘಮಘಮಿಸುವ, ಮೊದಲಾಣ ಹಾಂಗಿಪ್ಪ ಸುಂದರ, ಅನುಕರಣೀಯ ಸಮಾಜವ ಸೃಷ್ಟಿ ಮಾಡ್ಳೆಡಿಗು. ದೃಢ ಸಂಕಲ್ಪ ಬೇಕಪ್ಪದಷ್ಟೆ. ಇದು ಶುದ್ಧ ಭಾರತೀಯರಿಂದ ಆಯೆಕ್ಕಾದ ಕೆಲಸ. ಇಟೆಲಿಲಿ ಹುಟ್ಟಿದವರಿಂದ ಈ ಕೆಲಸವ ಅಪೇಕ್ಷೆ ಮಾಡ್ಳೆಡಿಯ.
- ಬಾಪಿ / ೦೩.೦೮.೨೦೦೯
1 comment:
ಅಪ್ಪಚ್ಚಿ,
ಅಮೇರಿಕ ಪ್ರವಾಸದ ಸುದ್ದಿ ಓದಿದೆ. ಎಂತೆಲ್ಲಾ ವಿಷಯಲ್ಲಿ ಭಾರತ ಮೇಲಿದ್ದು ಹೇಳಿ ಒಂದು ಲೇಖನ ಬರವೆಯಾ? ನಿನ್ನ ಲೇಖನಿಂದ ರೆಜ್ಜ ಧನಾತ್ಮಕ ಬರಹ ಓದೆಕು ಹೇಳಿ ಆವ್ತಾ ಇದ್ದು.
ರಾಜಣ್ಣ
Post a Comment