Tuesday, March 31, 2009

ಯಥಾ ರಾಜಾ ತಥಾ ಪ್ರಜಾ

ನಿನ್ನೆ ಒಬ್ಬ ಪರಿಚಯದವನತ್ರೆ  ಮಾತಾಡ್ತಾ ಇಪ್ಪಗ ಚುನಾವಣೆಯ ವಿಷಯ ಬಂತು. ಅವ,  ಎನ್ನತ್ರೆ ಪರಿಚಯ ಪತ್ರ ಇದ್ದು, ಆದರೆ ಎಲ್ಲರೂ ಸಮಾನವಾಗಿ ಭ್ರಷ್ಟರೇ ಆದ ಕಾರಣ ಆರಿಂಗೂ ಮತ ಹಾಕುತ್ತಿಲ್ಲೆ ಹೇಳಿ ಹೇಳಿದ. ಅವನ ಮಾತಿಲ್ಲಿ ತನ್ನ ನಿರ್ಧಾರದ ಬಗ್ಗೆ  ಅತಿಯಾದ ಹೆಮ್ಮೆ ಎದ್ದು ಕಾಣ್ತಾ ಇತ್ತು !  ಹೀಂಗೆ ಭ್ರಮ ನಿರಸನಗೊಂಡವು, ಅತಿ ಬುದ್ಧಿವಂತರು,  ವಿಚಿತ್ರ ತರ್ಕ ಹಾಗೂ ವಿತಂಡ ವಾದ ಮಾಡುವವರಲ್ಲಿ ಕೆಲವರಿಂಗಾದರೂ ಮುಸ್ಲಿಮರಾಗಿ ಹುಟ್ಟಲಾವುತ್ತೀತಿಲ್ಯಾ ಅಥವಾ ಈಗದರೂ ಮತಾಂತರ ಮಾಡಿಗೊಂಬಲಕ್ಕನ್ನೆ  ಹೇಳಿ ಅನ್ನಿಸುತ್ತು.  Friends of BJPಯವರ  ಸಭೆಲಿ ಒಬ್ಬೊಬ್ಬನೂ ಕನಿಷ್ಟ ೧೦೦ ಜನರ ಹುರಿದುಂಬಿಸೆಕ್ಕು ಹೇಳಿ ತೆಕ್ಕೊಂಡ ಪ್ರತಿಜ್ಞೆ ನೆಂಪಾಗಿ ಅವಂಗೆ ರಜ ಭಾಷಣ ಮಾಡಿದೆ. ಅವನ ಮನಸ್ಸು ಪೂರ್ತಿ ಪರಿವರ್ತನೆ ಆಯಿದೋ ಹೇಳಿ ಗೊಂತಾಯೆಕ್ಕಾದರೆ, ಇನ್ನೂ ಕೆಲವು ಸರ್ತಿ ದೂರವಾಣಿ ಕರೆ ಮಾಡೆಕ್ಕಕ್ಕು !
   
ಕೋಳಿ ಮೊದಲೊ ಅಥವಾ ಮೊಟ್ಟೆ ಮೊದಲೋ ಹೇಳುವ ನಮುನೆಯ ಸಮಸ್ಯೆ  ಬಂದಪ್ಪಗ  ಬೇರೆ ರೀತಿಲಿ ವಿಮರ್ಶೆ ಮಾಡೆಕ್ಕಾವುತ್ತು.  ಪ್ರಪಂಚದ ಕಣ್ಣಿಂಗೆ ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಆದರೂ, ಇಲ್ಲಿಯ ಪ್ರತಿಯೊಂದು ವ್ಯವಸ್ಥೆಯೂ  ಹಾಸ್ಯಾಸ್ಪದವಾಗಿಪ್ಪಲೆ ಆರು ಕಾರಣ ? ಬೇರೆ ದೇಶಕ್ಕೆ ಹೋದ ಭಾರತೀಯರು  ಒಳ್ಳೆಯ ನಾಗರಿಕರಾಗಿ ಬದುಕ್ಕುತ್ತಾ ಇಪ್ಪದರ ನೋಡಿದರೆ, ಇಲ್ಲಿಯ  ನಿಜವಾದ ಕೊರತೆ ಸರಿಯಾದ ನಾಯಕತ್ವ ಇಲ್ಲದ್ದದು ಹೇಳಿ ಸ್ಪಷ್ಟ ಆವುತ್ತು. ಹಾಂಗಾರೆ, ಒಳ್ಳೆಯ ನಾಯಕನ ಗುಣಂಗೊ  ಎಂತದು ? ದೂರದರ್ಶಿತ್ವ ಮತ್ತು ನಿಸ್ಪೃಹತೆ ಹೇಳುವ ಎರಡು ಗುಣಂಗೊ ಸ್ವಂತವಾಗಿ ಇದ್ದರೆ, ಬಾಕಿ ಎಲ್ಲ ಬಾಡಿಗೆಗೆ ಸಿಕ್ಕುತ್ತು. ನಮ್ಮ ನಾಯಕರು ಹೇಳಿಸಿಗೊಂಬವಕ್ಕೆ ಈ ಎರಡು ಬಿಟ್ಟು ಬಾಕಿ ಎಲ್ಲಾ ಧಾರಾಳ ಇದ್ದು. ಗುಜರಾತ್ ಇಂದು ಮಾದರಿ ರಾಜ್ಯವಾಗಿ ಮುಂದೆ ಬಂದಿದ್ದರೆ, ಅದಕ್ಕೆ ಮೋದಿಯ ಆ ಎರಡು ಗುಣಂಗಳೇ ಕಾರಣ. ವ್ಯವಸ್ಥೆಯ ಮೇಲೆ ನಂಬಿಕೆ ಕಳಕ್ಕೊಂಡವಕ್ಕೂ ಅವನೇ ಸ್ಪೂರ್ತಿ ಮತ್ತು ಆಶಾದೀಪ.  

ಇದೇ ವಾದಲ್ಲಿ ಭಾಜಪವೇ ಯಾಕೆ ಹೇಳುವ ಪ್ರಶ್ನೆಗೆ ಉತ್ತರವೂ ಸಿಕ್ಕುತ್ತು. ಆರೆಸ್ಸೆಸ್ ನ ಹಿನ್ನೆಲೆಂದ ಬಂದವಕ್ಕೆ ಮಾತ್ರ ನಿಸ್ವಾರ್ಥ, ಸಮಾಜ ಸೇವೆಯ ದೃಷ್ಟಿಕೋಣ ಇಪ್ಪಲೆ ಸಾಧ್ಯ.  ತಮ್ಮದೇ ಆದ ವಿಶೇಷ ಸಿದ್ಧಾಂತದ   ಎಡಪಂಥೀಯ ರಾಜಕಾರಣ ಇದ್ದು. ಆದರೆ, ಅವರದ್ದು ಹಳಸಲು ತತ್ವ. ಇನ್ನು ಕಾಂಗ್ರೆಸಿಂದು ಎಡೆಬಿಡಂಗಿ ತತ್ವ.   ಧರ್ಮ ನಿರಪೇಕ್ಷತೆ ಹೇಳುವ ಘೋಷವಾಕ್ಯದೊಟ್ಟಿಂಗೆ,  ಅಲ್ಪಸಂಖ್ಯಾತರ ನಿರ್ಲಜ್ಜೆಂದ  ಓಲೈಕೆ  ಮಾಡುವ ಪ್ರಾಣಿಗೊ.   ಭಾಜಪದ ಪ್ರತಿಯೊಂದು ಸಿದ್ಧಾಂತವೂ ರಾಷ್ಟ್ರೀಯವಾದದ ಉತ್ಕಟ ಪ್ರಕಟಣೆ. 

ವಾಜಪೇಯಿ ಇಪ್ಪಗ ಮಾಡಿದ ಸಾಧನೆಗಳ ಸರಿಯಾದ ವಿಮರ್ಶೆ  ಆಯೆಕ್ಕಾದರೆ, ಅವನ ಪ್ರತಿ ನಿರ್ಧಾರವನ್ನೂ  ಎಷ್ಟು ನಮುನೆಯ ಪಕ್ಷಂಗಳ ಸಮತೋಲನವ ಕಾಪಾಡಿಗೊಂಡು ಮಾಡೆಕ್ಕಾಗಿತ್ತು  ಹೇಳುವ ಸತ್ಯವ ನೆಂಪು ಮಾಡಿಗೊಂಬದು ಒಳ್ಳೆದು.  ಅವಂಗೆ ೫ ವರ್ಷದ  ಪ್ರತಿದಿನವೂ ಮುಳ್ಳಿನ ಹಾಸಿಗೆಲಿ ಮನಿಗಿದ ಅನುಭವ ಆಗಿಕ್ಕು.   ಎಂತದೇ  ಮಾಡೆಕ್ಕಾದರೂ ಸ್ವಂತ ಬಹುಮತ ಬೇಕು. ಅಥವಾ,ಸರಕಾರಲ್ಲಿ ಶಿವಸೇನೆಯ ಹಾಂಗಿಪ್ಪ ಆಪ್ತರಾದ  ಮಿತ್ರಪಕ್ಷಂಗಳ ಸಹಭಾಗಿತ್ವ ಮಾತ್ರ ಇರೆಕು. ಹೀಂಗೆ ಆಯೆಕ್ಕಾದರೆ, ಜನರಲ್ಲಿಪ್ಪ ಸಿನಿಕತನ ಹೋಯೆಕ್ಕು. ಭಾಜಪದ ಹಿತೈಷಿಗೊ ಎಲ್ಲೋರೂ ಸಕಾರಾತ್ಮಕವಾಗಿಯೂ ಸಕ್ರಿಯರಾಗಿಯೂ ಇರೆಕು.  ಹೀಂಗೆ ಮಾಡಿದರೆ ಮಾಂತ್ರ, ನಮ್ಮ ಅತಿ ಹತ್ತಿರದ ಬಂಧುಗಳಾಗಿದ್ದು, ರಾಷ್ಟ್ರೀಯವಾದದ ಪ್ರತಿಪಾದನೆಗಾಗಿ ಪ್ರಾಣಕೊಟ್ಟ ಸಾಮೆತ್ತಡ್ಕ ಮಾವನ ಹಾಂಗಿಪ್ಪವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಹಾಂಗೆ ಅಕ್ಕು. 

- ಬಾಪಿ        

Monday, March 30, 2009

Re: ಜಾಗೋರೇ..

ನೀನು ಹೇಳುವ ಈ ಮೂಲಭೂತ ಪ್ರಶ್ನೆ ಮೇಲು ನೋಟಕ್ಕೆ ಸರಿ ಹೇಳಿ ಕಂಡರೂ, ಕಾರ್ಯರೂಪಕ್ಕೆ ತಪ್ಪದು ಅಷ್ಟೇ ಕಷ್ಟಸಾಧ್ಯ. ಅವರ ಇವರ ಬಗ್ಗೆ, ಅವು ಇವಕ್ಕೆ ಕೊಡುಸುವ ಬಗ್ಗೆ ನಾವು ಎಷ್ಟೇ ಮಾತನಾಡ್ಲೆ ಎಡೆ ಇದ್ದರೂ ಎಂತಕೆ ಆಯಿದಿಲ್ಲೆ, ಹೇಂಗೆ ಕಾರ್ಯರೂಪಕ್ಕೆ ತಪ್ಪಲಕ್ಕು ಹೇಳಿ ಆಲೋಚನೆ ಮಾಡುದು ಸೂಕ್ತ ಹೇಳಿ ಎನ್ನ ಅಭಿಪ್ರಾಯ.

೧. ಈ ಕಾರ್ಡು ಓಟು ಬಪ್ಪಗ ಮಾತ್ರ ನೆನಪ್ಪಾವ್ತಷ್ಟೇ.., ಮತ್ತೆ ಇಪ್ಪ ಸಮಯಲ್ಲಿ ಚುನಾವಣೆ ಸಮಿತಿ ವರಗುತ್ತು.
೨. ವರಗದ್ರೂ, ಎಷ್ಟು ಜನಕ್ಕೆ ಅವರದ್ದೇ ಆದ ಸ್ವಂತ ವಿಳಾಸ ಇದ್ದು?
೩. ಒಬ್ಬ ಪ್ರಜೆ ಆಗಿ ಅವನ ಸವಲತ್ತು ಅವಂಗೆ ಗೊಂತಿರೆಡೆದಾ?
೪. ಒಬ್ಬಂಗೆ ಎಷ್ಟು ಕಾರ್ಡ್ ಬೇಕು? ರೇಷನ್, ಪಾನ್, ವೋಟ್... ಇನ್ನೆಂತ..?

ಹೇಳಿದ ಹಾಂಗೆ ವಾಜಪೇಯಿ ಇಪ್ಪಗ ಇದರ ಬಗ್ಗೆ ಎಷ್ಟು ಕೆಲಸ ಆತು? ಯಾವುದಾದಾರೂ ತುಲನೆ ಇದ್ದಾ?

-ರಾಜಣ್ಣ

Saturday, March 28, 2009

ಜಾಗೋರೇ..

೬೦ ವರ್ಷಗಳಿಂದ ಸ್ವತಂತ್ರ ದೇಶವಾಗಿದ್ದುಕೊಂಡು ತನ್ನ ದೇಶದ ಪ್ರಜೆಗಳ ಒಂದು ಪಟ್ಟಿಯಾಗಲೀ, ಪ್ರಜೆಗೊಕ್ಕೆ ಒಂದು ಖಾಯಂ ಗುರುತಿನ ಚೀಟಿಯಾಗಲೀ ಇಲ್ಲದ್ದಿಪ್ಪ ಅಸಹ್ಯ,ಅನಾಗರಿಕ, ದಗಲ್ ಬಾಜಿ ಪ್ರಜಾಪ್ರಭುತ್ವಕ್ಕೆ ಭಾರತ ಹೇಳಿ ಹೆಸರು.  ತಲೆತಲಾಂತರಂದ ಈ ದೇಶಲ್ಲಿಪ್ಪವಕ್ಕೆ  ಸಾವಿರ ಬಗೆಯ,  ವಾಕರಿಕೆ ಬಪ್ಪಷ್ಟು ಕೊಳಕ್ಕು ಸರಕಾರಿ ಅರ್ಜಿ  ನಮೂನೆಗಳ ಭರ್ತಿ ಮಾಡಿದರೂ ವರ್ಷಗಟ್ಳೆ ಮತದಾರರ ಪಟ್ಟಿಲಿ ಹೆಸರು ಸೇರಿಸಿಗೊಂಬಲೆ ಎಡಿಯದ್ದೆ ಒದ್ದಾಡುವ ಪರಿಸ್ಥಿತಿ ಇದ್ದರೆ, ನಡುರಾತ್ರೆ ಬಾಂಗ್ಲಾದೇಶಂದ ಬೇಲಿನುಸುಳಿ ಬಂದವಕ್ಕೆ ಅವು ಮರುದಿನ ಉದಿಯಪ್ಪಗ ಎದ್ದು ಚಾಯ ಕುಡಿವಂದ ಮೊದಲೇ ಅವಿಪ್ಪ  ಕೊಳಚೆಪ್ರದೇಶಕ್ಕೆ  ಹುಡುಕ್ಕಿಗೊಂಡು ಹೋಗಿ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತ್ಯಾದಿ ಸಕಲ ಸವಲತ್ತುಗಳನ್ನೂ   ಕೊಡುದಲ್ಲದ್ದೆ, ಕಾಲು ಹಿಡುದು ನಮಸ್ಕಾರ ಮಾಡಿ ಅಲ್ಲಾಹುವಿನ ಆಶೀರ್ವಾದಕ್ಕೆ ಪಾತ್ರರಪ್ಪ  ಅಸಾಮಾನ್ಯ ಸಾಮಾಜಿಕ ಸೇವೆಯ ದೃಶ್ಯ ಭಾರತ ಬಿಟ್ಟು ಬೇರೆಲ್ಲಿ ನೋಡ್ಳೆ ಸಿಕ್ಕುಗು ?  ಇಂತ ಸೇವೆಯ ಸ್ವೀಕರಿಸುವ  ಬಾಂಗ್ಲಾದೇಶೀ ಅಕ್ರಮ ವಲಸಿಗರು  ಅದೆಂತ ಪುಣ್ಯ ಮಾಡಿರೆಕು !

ಹೀಂಗೆ ನುಸುಳಿ ಬಂದ "ನಿವಾಸಿ ಅ-ಭಾರತೀಯ"ರ ಸಂಖ್ಯೆ  ಈಗಾಗಲೇ ೨ ಕೋಟಿಯಷ್ಟಕ್ಕಡ.  ಗುಂಪಿನಲ್ಲಿ ಗೋವಿಂದ ಹೇಳಿ ನಮ್ಮೊಳಗೊಂದಾದ ಇವು ನಮ್ಮ ವ್ಯವಸ್ಥೆ ಮೇಲೆ ಎಷ್ಟು ಹೊರೆ ಹೇಳುದರ ವಿವರಿಸುದು ಕಷ್ಟ.  ಯಾವುದೇ ವಿದ್ಯಾಭ್ಯಾಸ, ಅರ್ಹತೆ  ಇಲ್ಲದ್ದ ಇವರ ಕೊಡುಗೆ ಆದರೂ ಎಂತದು ?   ಅಂದಂದಿನ ಊಟಕ್ಕೇ ಗತಿ ಇಲ್ಲದ್ದಿಪ್ಪಗ, ಒಂದು ಸಣ್ಣ ಆಮಿಷ ತೋರಿಸಿದರೂ ಭೂಗತದೊರೆಗಳ ಅಥವಾ ಭಯೋತ್ಪಾದಕರ ಸಹವರ್ತಿಗಳಾಗಿ ಸೇರಿಗೊಂಬಲೆ ಒಪ್ಪಿಗೊಂಗು.   "ಬಡವರಾದ ಮುಸ್ಲಿಮರು"  ಹೇಳುವ ಇವರ ಪರಿಚಯವೇ ಒಂದು ಸ್ಪೋಟಕ ವಸ್ತುವಿನ ಹಾಂಗೆ ಕಾಣ್ತು.  ಇನ್ನು,  ಈ ಕಾಟು ಕಾಂಗ್ರೆಸ್ ಮತ್ತು ಕಮ್ಯುನಿಷ್ಟರು  ಇಪ್ಪಲ್ಲಿ ವರೆಗೆ ಹೀಂಗಿಪ್ಪವರ ದೇಶಂದ ಹೆರಹಾಕುದು ಅಸಾಧ್ಯ.

ಭಾರತೀಯ ಪ್ರಜೆಗೊಕ್ಕೆಲ್ಲಾ  ಖಾಯಂ ಗುರುತಿನ ಚೀಟಿ ಮತ್ತು ಬೇಲಿ ನುಗ್ಗಿ ಬಪ್ಪವರ  ಮೇಲೆ ಕಠಿಣ ಕ್ರಮಂಗಳ ಬಗ್ಗೆ ಅಡ್ವಾಣಿ  ಹೇಳಿಕೆ ಕೊಟ್ಟದು ಸ್ವಾಗತಾರ್ಹ. ನಮ್ಮ ನಿರ್ಧಾರಂಗೊ ಯಾವತ್ತೂ ನಿರ್ಣಾಯಕವಾಗಿರಲಿ.  ಯಾವುದೋ ಇಟಲಿ ದೇಶಲ್ಲಿ ತಿಂಬಲೆ ಗತಿ ಇಲ್ಲದ್ದೆ  ತಿರಿಗಿಗೊಂಡಿದ್ದು   ಇಲ್ಲಿಗೆ ಬಂದು ಅನಿರೀಕ್ಷಿತವಾಗಿ ದೊಡ್ಡ ರಾಣಿಯಾದ ವ್ಯಕ್ತಿಯ ಸೂತ್ರದ ಗೊಂಬೆಗಳ ಹಾಂಗೆ ವ್ಯವಹರಿಸುವ ಸ್ವಾಭಿಮಾನ-ಶೂನ್ಯ ಕಾಂಗ್ರೆಸಿಗರಿಂದ ಎಂತ ಅಪೇಕ್ಷೆ ಮಾಡ್ಳೆಡಿಗು ? ಇವು ೬೦ ವರ್ಷ ಮಾಡಿದ ಅನಾಹುತ ಸಾಕು.  ಜಾಗೋರೇ ಇಂಡಿಯಾ !!
-ಬಾಪಿ

Friday, March 27, 2009

ಯುಗಾದಿ

ನಿಮಗೆಲ್ಲ ತರಲಿ ಈ ಸಂವತ್ಸರ ವಿರೋಧಿ
ಸಂಪತ್ತು, ಆಯುರಾರೋಗ್ಯ,ನೆಮ್ಮದಿ
ಇದಾಗಲಿ ಬದಲಾವಣೆಯ ಯುಗಾದಿ
ಸುಗಮವಾಗಿಸಲಿ ಭಾಜಪದ ಹಾದಿ
ಅಡ್ವಾಣಿಯಾಗಲಿ ನಮ್ಮ ಪ್ರವಾದಿ
ಜೊತೆಜೊತೆಗಿರಲಿ ನರೇಂದ್ರ ಮೋದಿ
ಹಾಕಲಿ ಭವಿಷ್ಯದ ಭದ್ರ ಬುನಾದಿ
ಮತಚಲಾವಣೆಯೇ ಎಲ್ಲಕ್ಕೂ ನಾಂದಿ

Saturday, March 21, 2009

Friends of BJP

ಇಂದು  Friends of BJP ಯವು ಆಯೋಜಿಸಿದ ಚುನಾವಣಾ ಸಭೆಗೆ ಹೋಗಿತ್ತಿದ್ದೆ. ಈ ಸಂಸ್ಥೆ  Times of India ದವರ Lead India  campaignಲ್ಲಿ ಪ್ರಥಮ ಸ್ಥಾನ ಗೆದ್ದ   ಆರ್.ಕೆ.ಮಿಶ್ರಾ ಹೇಳುವವನ ಕಲ್ಪನೆಯ ಕೂಸು. ಇಂದು ಅವ ಭಾಜಪಕ್ಕೆ  ಅಧಿಕೃತವಾಗಿ ಸೇರಿದ.   ಇಂದಿನ ಸಭೆಗೆ ಅರುಣ್ ಜೇಟ್ಲಿಯೇ ಮೊದಲಾದ ಭಾಜಪದ ಘಟಾನುಘಟಿಗೊ ಬಂದಿತ್ತಿದ್ದವು. ಸಾವಿರಾರು ಸಂಖ್ಯೆಲಿ ಯುವಕರು ಬಂದು ಸೇರಿದ್ದು ನೋಡಿ  ಖುಷಿ ಆತು.  

Friends of BJPಯವು ಚುನಾವಣೆಂದ ಮೊದಲು ದೇಶದ ಎಲ್ಲಾ ಮುಖ್ಯ ಪಟ್ಟಣಂಗಳಲ್ಲಿಯೂ ಇಂತಹ ಸಭೆ ಆಯೋಜಿಸಿ ಸಾಮಾನ್ಯವಾಗಿ ರಾಜಕೀಯದ ವಿಷಯಲ್ಲಿ ನಿರ್ಲಿಪ್ತವಾಗಿಪ್ಪ ಯುವ ಮತದಾರರ ಬಡಿದೆಬ್ಬಿಸಿ (ಭಾಜಪಕ್ಕೆ) ಮತ ಚಲಾಯಿಸುವ ಪ್ರಜೆಗಳ ಆದ್ಯ ಕರ್ತವ್ಯದ ಬಗ್ಗೆ ನೆನಪಿಸುವ, ಪ್ರಚೋದಿಸುವ, ಹುರಿದುಂಬಿಸುವ ಕೆಲಸವ ಹಮ್ಮಿಗೊಂಡಿದವು.

ಕಾರ್ಯಕ್ರಮ ಲತಾ ಮಂಗೇಶ್ಕರ್ ಹಾಡಿದ "ಏ ಮೇರೆ ವತನ್ ಕೇ ಲೋಗೊ" ಭಕ್ತಿಗೀತೆಯ ಪ್ರಾರ್ಥನೆಂದ ಸುರು ಆಗಿ, ವಂದೇ ಮಾತರಂಲ್ಲಿ ಕೊನೆಗೊಂಡದು ರೋಮಾಂಚನದ ಅನುಭವ ಕೊಟ್ಟತ್ತು.   ಇವರ  ದೇಶಭಕ್ತಿಯ  ಘನ ಕಾರ್ಯ ಸಂಪೂರ್ಣ  ಯಶಸ್ವಿಯಾಗಲಿ ಹೇಳಿ ಹಾರೈಸುವೊ.

-ಬಾಪಿ                   

Thursday, March 19, 2009

ತತ್ವ-ನಿಷ್ಠೆ

ತತ್ವ, ನಿಷ್ಠೆ ಸಮಾಜದ ಎಲ್ಲ ವರ್ಗಂಗೊಕ್ಕೂ ಸಮಾನವಾಗಿ ಅನ್ವಯಿಸೆಕ್ಕಾದ ವಿಷಯ ಹೇಳಿ ಎನ್ನ ನಂಬಿಕೆ. ಜೀವನದ ಮೌಲ್ಯಂಗೊ ಕಾಲ ಕ್ರಮೇಣ ಕಮ್ಮಿ ಆವುತ್ತಾ ಬಂದು ಎಂತ ಮಾಡಿರೂ ಆವುತ್ತು ಹೇಳುವ ಭಾವನೆ ಜನರಲ್ಲಿ ಬಂದು ಹೋಯಿದು. ಇದು ವಿಷಾದನೀಯವೇ ಸರಿ. ವಿಪ್ರೋ / ಇನ್ಫೋಸಿಸ್ ಇತ್ಯಾದಿಯವಕ್ಕೂ ಸತ್ಯಂ, ರಿಲಯೆನ್ಸ್ ಹಾಂಗಿಪ್ಪವಕ್ಕೂ ವ್ಯತ್ಯಾಸ ಇಲ್ಲೆಯೋ ? ಆದರೆ ತಪ್ಪು-ಸರಿಗಳ ವಿವೇಚನೆಯ ಕ್ರಮ ಸಾವಿರ ವರ್ಷ ಮೊದಲು ಹೇಂಗಿತ್ತೋ ಈಗಳೂ ಹಾಂಗೆಯೇ ಇದ್ದು. ಒಳ್ಳೆಯವು ಕೆಟ್ಟವರ ಸಂಖ್ಯೆ ಮತ್ತು ಪ್ರಮಾಣ ಹೆಚ್ಚು- ಕಮ್ಮಿ ಆಗಿಪ್ಪಲೂ ಸಾಕು.
ಗಮನಿಸೆಕ್ಕಾದ ಸಂಗತಿ ಎಂತ ಹೇಳಿರೆ, ಕಂಪೆನಿಗಳಲ್ಲಿ ಕೆಲಸಕ್ಕೆ ಸೇರುವಗ ತತ್ವ-ನಿಷ್ಠೆಯ ವಿಷಯ ಬಾಯಿ ಬಿಟ್ಟು ಕೇಳದ್ದೆ ಇಪ್ಪಲೂ ಸಾಕು. ಪ್ರತಿ ಹೊಸ ವ್ಯಕ್ತಿಯ ಕೆಲಸಕ್ಕೆ ತೆಕ್ಕೊಂಬಗಳೂ ಅವನ ಚರಿತ್ರೆಯ ಗುಪ್ತವಾಗಿ ವಿಚಾರಿಸುವ ಕ್ರಮ ಇದ್ದು - ಸತ್ಯಂನ ಹಾಂಗಿಪ್ಪ ಕಂಪೆನಿಗಳಲ್ಲಿಯೂ ! ಕಂಪೆನಿ ಹೇಳುವ ನಿರ್ಜೀವ ವಸ್ತುವಿನ ಅಸ್ತಿತ್ವ, ಪರಿಚಯ, ಬೆಳವಣಿಗೆ ಅಪ್ಪದು ಅದರ ಗುರಿ, ನಿರ್ದೇಶಕರ ಕ್ಷಮತೆ, ಕೆಲಸಗಾರರ ಶ್ರಮಂಗಳಿಂದ. ವಿಪ್ರೊ ಕಂಪೆನಿಲಿ ಯಾವುದೇ ಗೋಲು-ಮಾಲು ಮಾಡಿರೆ ಸಹಿಸುತ್ತಿಲ್ಲೆ ಹೇಳುವ ಧ್ಯೇಯ ವಾಕ್ಯ ಎಲ್ಲೊರಿಂಗೂ ಸ್ಪಷ್ಟವಾಗಿ ಗೊಂತಿಪ್ಪ ಕಾರಣ, ಅಲ್ಲಿ ಅತ್ಯಂತ ಹೆಚ್ಚಿನ ಪಾರದರ್ಶಕ ವ್ಯವಸ್ಥೆ ಇದ್ದು. ಅಲ್ಲದ್ದೆ, ಆ ಕಂಪೆನಿಗೆ ಹಾಗೂ ಪ್ರೇಮ್ ಜಿಗೆ ಸಮಾಜಲ್ಲಿ ಸ್ಥಾನ ಇದ್ದು. ಇಷ್ಟು ಗೌರವ ಅಂಬಾನಿಗೊಕ್ಕೆ ಇಲ್ಲೆ ಏಕೆ ?

ಎನ್ನ ದೊಂಡೆ ಒಣಗಿದ ಕಾರಣ, ಸದ್ಯಕ್ಕೆ ಎನ್ನ ವಾದ ನಿಲ್ಸುತ್ತೆ ! ಮತ್ತು ಹೆರಾಣ ಕೋಣೆಲಿ ಗುರಿಕ್ಕಾರನ ಹಾಂಗೆ ಕಾಲಿನ ಮೇಲೆ ಕಾಲು ಹಾಕಿ ಕೂದುಗೊಂಡು ದೊಡ್ಡಸ್ವರಲ್ಲಿ "ಒಂದು ಚಾಯ" ಹೇಳಿಕ್ಕಿ ಮೆಲ್ಲಂಗೆ ಒಳ ಹೋಗಿ ಆನೇ ಮಾಡಿ ಕುಡಿತ್ತೆ !
-ಬಾಪಿ

Re: politics vs business

ತತ್ವ,ನಿಷ್ಟೆ ಎನ್ನ ಲೆಕ್ಕಲ್ಲಿ ಮಾತೃಭೂಮಿಗೆ ಬಿಟ್ಟರೆ ರಾಜಕೀಯಕ್ಕೆ ಮಾತ್ರ ಅನ್ವಯಿಸಲಕ್ಕಷ್ಟೇ. ಅದೇ ವೃತ್ತಿಯ ಬಗ್ಗೆ ಮಾತನಾಡ್ತರೆ ವಯಕ್ತಿಕ ನಿಲುವು ಹಾಂಗೂ ಉದ್ದೇಶ ಹೆಚ್ಚಿಗೆ ಬತ್ತು. ಅದಕ್ಕೇ ಕೆಲಸದ ಜಾತಕಲ್ಲಿ career objective ಹೇಳಿ ಹಾಕುದು. ಇಲ್ಲಿ ತತ್ವದ ಅನ್ವಯ ಆವ್ತಿಲ್ಲೆ, ಕೇಳ್ತವೂ ಇಲ್ಲೆ.

ಜನಾರ್ಧನ ಸ್ವಾಮಿಯ ಬಗ್ಗೆ ಕೇಳಿದ್ದೆ. ನಿನಗೆ ನೆನಪಿದ್ದೋ ಇಲ್ಲೆಯೋ.. ಕಳುದ ಸರ್ತಿ ರವಿಕೃಷ್ಣಾ ರೆಡ್ಡಿ ಹೇಳುವ ಪರದೇಸಿ ಕನ್ನಡಿಗ ಜಯನಗರಲ್ಲಿ ಹೀಂಗೆಯೇ ಚುನಾವಣೆಗೆ ನಿಂತಿದ್ದಿದ್ದ. ಅವಂಗೆ ಕೇವಲ ೨೪೪ ಓಟು ಪಕ್ಷೇತರ ಆಗಿ ನಿಂದದಕ್ಕೆ ಸಿಕ್ಕಿತ್ತಿದ್ದು. ಈ ಸರ್ತಿ ಜನಾರ್ಧನ ಸ್ವಾಮಿ ಭಾಜಪಂದ ನಿಲ್ಲುವ ಕಾರಣ ಗೆಲ್ಲುವ ಸಾಧ್ಯತೆ ಇದ್ದು. ಆದರೆ ಗೆದ್ದ ಮತ್ತೆ ಈ ರಾಜಕೀಯದ ಚೋಳಿಲ್ಲಿ ಹೇಂಗೆ ಈಜುತ್ತಾ.., ಅದರ ಮತ್ತೆ ಅವ ಎಷ್ಟು ಪ್ರಭಾವಿ ಆವ್ತ ಹೇಳುವ ಕುತೂಹಲ ಎನಗಿದ್ದು. ಎಂತದೇ ಆದರೂ ಒಳ್ಳೆದಾಗಲಿ ಹೇಳಿ ಎನ್ನ ಹಾರೈಕೆ.

ರವಿಕೃಷ್ಣಾರೆಡ್ಡಿಯ ಬಗ್ಗೆ ಆಸಕ್ತಿ ಇದ್ದರೆ http://www.ravikrishnareddy.com/kannada.html

- ರಾಜಣ್ಣ

Wednesday, March 18, 2009

politics vs business

ರಾಜಕೀಯದವಕ್ಕೆ ಕಂಪೆನಿಲಿ ಕೊಡುವ ಹಾಂಗೇ ಒಳ್ಳೆ ಸಂಬಳ ಕೊಟ್ಟು ಉತ್ತರದಾಯಿತ್ವ ಬಪ್ಪ ಹಾಂಗೆ ಮಾಡಿರೆ, ಸುಮಾರು ಸಮಸ್ಯೆಗೊಕ್ಕೆ ಪರಿಹಾರ ಸಿಕ್ಕುಗು. ಚುನಾವಣೆಯ ಖಡ್ಡಾಯವಾಗಿ ಸಂಪೂರ್ಣ ಸರಕಾರಿ ಖರ್ಚಿಲ್ಲಿಯೇ ನಡೆಶೆಕ್ಕು. ಅಂಬಗ, ಲಂಚ ತಿಂಬದು ತನ್ನಷ್ಟಕ್ಕೇ ಕಮ್ಮಿ ಅಕ್ಕು. ರಾಜಕೀಯವ ವೃತ್ತಿಪರ ದೃಷ್ಟಿಂದ ನೋಡಿದವರಲ್ಲಿ ಚಂದ್ರಬಾಬು ನಾಯ್ಡು ಮೊತ್ತ ಮೊದಲನೆಯವ. ಸದ್ಯಕ್ಕೆ, ಮೋದಿ ಎಲ್ಲೋರಿಂದಲೂ ಮುಂದೆ ಇದ್ದ. ಕ್ರಮೇಣ, ಎಲ್ಲ ರಾಜಕಾರಣಿಗಳ ವರ್ತನೆಯೂ ಇದೇ ರೀತಿ ಬದಲಕ್ಕು ಹೇಳಿ ಎನ್ನ ನಂಬಿಕೆ. ತತ್ವ ಮತ್ತು ನಿಷ್ಠೆಯ ವಿಷಯ ರಾಜಕೀಯದವಕ್ಕೆ ಅನ್ವಯ ಅಪ್ಪಷ್ಟೇ ಕಂಪೆನಿಗೊಕ್ಕೂ ಆವುತ್ತು - ಏಕೆ ಹೇಳಿರೆ, ಎರಡು ವೃತ್ತಿಯವಕ್ಕೂ "ಸಮಾಜ ಸೇವೆ"ಯ ಗುರಿ ಇದ್ದು.

ಅಮೇರಿಕಲ್ಲಿತ್ತ ಜನಾರ್ದನ ಸ್ವಾಮಿ ಹೇಳುವವ ಸಾವಿರಾರು ಡಾಲರು ಸಂಪಾದನೆಯ ಕೆಲಸ ಬಿಟ್ಟು ಬಂದು ಇಲ್ಲಿ ರಾಜಕೀಯಕ್ಕೆ ಸೇರಿ ಚಿತ್ರದುರ್ಗಂದ ಭಾಜಪ ಪರವಾಗಿ ಚುನಾವಣೆಗೆ ಸ್ಪರ್ಧಿಸುತ್ತಾ ಇದ್ದ. ಹೀಂಗಿಪ್ಪವರ ಸಂಖ್ಯೆ ಹೆಚ್ಚಾಗಲಿ. ನಾವೆಲ್ಲ ಮಾತಾಡ್ಳಕ್ಕಷ್ಟೆ, ಕಾರ್ಯಲ್ಲಿ ಸೊನ್ನೆ !
ಬಾಪಿ

ತೃತೀಯ ರಂಗ

ಈ ಸರ್ತಿಯ  ಚುನಾವಣೆಲಿ ಪ್ರಕೃತ ಅತ್ಯಂತ ಹೆಚ್ಚು ಗೌಜಿ ಮಾಡ್ತಾ ಇಪ್ಪ ತೃತೀಯ ರಂಗದ ಬಗ್ಗೆ ರಜ ಮಾತಾಡದ್ರೆ ಹೇಂಗೆ ?

ಕಾಂಗ್ರೆಸು ಮತ್ತು ಭಾಜಪ ಮೈತ್ರಿಕೂಟಂಗೊಕ್ಕೂ ಇವಕ್ಕೂ ಇಪ್ಪ ಮುಖ್ಯ ವ್ಯತ್ಯಾಸ ಹೇಳಿರೆ, ಈ ರಂಗಲ್ಲಿ ಯಾವುದೇ ನಿಜವಾದ ರಾಷ್ಟ್ರೀಯ ಪಕ್ಷಂಗೊ ಇಲ್ಲದ್ದಿಪ್ಪದು.  ನಿಜ ಹೇಳ್ತರೆ,  ಸ್ವಂತವಾಗಿ ತಮ್ಮ ತಮ್ಮ ರಾಜ್ಯಂಗಳ ಬಿಟ್ಟು ಹೊರ ರಾಜ್ಯಂಗಳಲ್ಲಿ ಯಾವುದೇ ಅಸ್ತಿತ್ವ ಇಲ್ಲದ್ದ  ಪಕ್ಷಂಗೊ  ಒಬ್ಬನ ಬೆನ್ನು ಇನ್ನೊಬ್ಬ ತಟ್ಟಿಗೊಂಬಲೆ ಮಾಡಿಗೊಂಡ ವ್ಯವಸ್ಥೆಯೇ ಈ ತೃತೀಯ ರಂಗ.   ಕುಂಟನೂ ಕುರುಡನೂ ಸೇರಿ ಹೊಳೆ ದಾಂಟಿದ ಹಾಂಗೆ.  ಇದರಲ್ಲಿ ಎಷ್ಟು ಪಕ್ಷಂಗೊ ಇದ್ದೋ,  ಅಷ್ಟೇ ಪ್ರಧಾನಿ ಸ್ಥಾನದ ಆಕಾಂಕ್ಷಿಗಳೂ ಇಪ್ಪದು ಇವರ ಹೆಗ್ಗಳಿಕೆಯೂ ಅಪ್ಪು, ದೌರ್ಬಲ್ಯವೂ ಅಪ್ಪು. ಉತ್ತರದ ದೂಮಾವತಿ, ದಕ್ಷಿಣದ ಬೆರ್ಚಪ್ಪ ಗೌಡ, ಪೂರ್ವದ ಕತ್ತಿಮುಟ್ಟಿಗೊ - ಹೀಂಗೆ ಪರಸ್ಪರ ಯಾವುದೇ ಸಂಬಂಧ ಇಲ್ಲದ್ದವೆಲ್ಲ  ಒಟ್ಟಿಂಗೆ  ಸೇರಿದ್ದು ನೋಡಿದರೆ,  ಧರ್ಮಸ್ಥಳದ ಸಾಮೂಹಿಕ ಮದುವೆಯ ಭಾವಚಿತ್ರ ನೋಡಿದ ಅನುಭವ  ಆವುತ್ತು !   

ತೃತೀಯ ರಂಗ ಉದ್ಭವ ಆದ್ದದು ಭಾಜಪಕ್ಕೆ ಶುಭಸೂಚನೆ ಹೇಳಿ ಎನ್ನ ಅನಿಸಿಕೆ.  ಎಂತ ಹೇಳಿದರೆ, ಇಡೀ ಭಾರತದ ಮತದಾರರಲ್ಲಿ  ಎರಡೇ ವಿಧ - ಭಾಜಪ ಪರ ಮತ್ತು ವಿರೋಧ. ಭಾಜಪ ವಿರೋಧಿ ಮತಂಗೊ ಹಂಚಿ ಹೋದಷ್ಟು ಒಳ್ಳೆದೇ !  ಇಷ್ಟರ ವರೆಗೆ ಪ್ರಬಲವಾದ ತೃತೀಯ ರಂಗ ಇಲ್ಲದ್ದೆ, ಕಾಂಗ್ರೆಸು ಮತ್ತು ಭಾಜಪದ ಮಧ್ಯೆ ನೇರ ಸ್ಪರ್ಧೆ ಇಪ್ಪಲ್ಲಿ ಕೆಲವು ಕಡೆ - ಹೇಳಿರೆ, ಅಲ್ಪ ಸಂಖ್ಯಾತರ ಮತ ನಿರ್ಣಾಯಕವಾಗಿಪ್ಪಲ್ಲಿ - ತೊಂದರೆ ಆಯಿಕ್ಕೊಂಡಿತ್ತು.  ಈ ಸರ್ತಿ ಈ ತೊಂದರೆ ಇರ ಹೇಳಿ ಕಾಣ್ತು.  ಮತ್ತೊಂದು ನಿರೀಕ್ಷೆ ಎಂತ ಹೇಳಿರೆ, ತಮಿಳುನಾಡಿಲ್ಲಿ ಜಯಲಲಿತನ ಪಕ್ಷಕ್ಕೆ ಒಳ್ಳೆ ಫಲಿತಾಂಶ ಬಂದು, ಚುನಾವಣೆಯ ನಂತರ ಮೋದಿಯ ಪ್ರಭಾವಂದಾಗಿ ಅದರ ಬೆಂಬಲ ಭಾಜಪಕೂಟಕ್ಕೆ ಸಿಕ್ಕುಗು ಹೇಳಿ. ದೂಮಾವತಿಯ ಪ್ರಧಾನಿ ಮಾಡ್ಳೆ ಜಯಲಲಿತನ ಒಲವು ಇಲ್ಲೆ ಹೇಳುದು ಸ್ಪಷ್ಟ.  ದೇಶದ ಹಿತದೃಷ್ಟಿಂದ ಈ ವಿಮರ್ಶೆಯ ಹಾಂಗೆ ಫಲಿತಾಂಶ ಬರಲಿ ಹೇಳಿ ದೇವರಲ್ಲಿ ಒಂದು ಸಣ್ಣ ಪ್ರಾರ್ಥನೆ.    

-ಬಾಪಿ                   

Tuesday, March 17, 2009

ಸ್ವಾಭಿಮಾನಿಗಳ ಗೋಳು

ಹಾಂಗಾರೆ, ಎಲ್ಲಾ ಕಂಪನಿಗಳೂ ಮಾಡ್ತಾ ಇಪ್ಪದು "ದರೋಡೆ" ಹೇಳಿದ ಹಾಂಗೆ ಆತು ! ಒಂದು ಕಂಪನಿಂದ ಇನ್ನೊಂದು ಕಂಪನಿಗೆ ಜನಂಗೊ ವಲಸೆ ಹೋಪದು ಸಾಮಾನ್ಯ ಸಂಗತಿಯೇ ಅಲ್ಲದೋ ? ರಾಜಕೀಯವ "ಸೇವೆ" ಹೇಳಿದರೂ ಅದೊಂದು ವೃತ್ತಿ ಅಷ್ಟೆನ್ನೇ ? ಯಾವ ಪಕ್ಷಲ್ಲಿ ಅವಕಾಶ /ಭವಿಷ್ಯ ಒಳ್ಳೆದಿದ್ದೋ, ಅಲ್ಲಿಗೆ ಜನಂಗೊ ಹೋಪದು ಸ್ವಾಭಾವಿಕ. ಮತ್ತೆ, ಯಾವುದೇ ಸಾಮಾಜಿಕ ಬದಲಾವಣೆ ತರೆಕಾದರೆ, ಆಢಳಿತ ಕೈಲಿದ್ದರೆ ಮಾಂತ್ರ ಸಾಧ್ಯ. ಇಲ್ಲದ್ದರೆ, ಅಂತೇ ಬೊಬ್ಬೆ ಹಾಕಲಕ್ಕಷ್ಟೆ. ಎಂತ ಪ್ರಯೋಜನ ಇಲ್ಲೆ. ಭಾರತ ದೇಶಲ್ಲಿ ಎಲ್ಲಾ ರೀತಿಯ ನೈಸರ್ಗಿಕ ಸಂಪತ್ತು ಇದ್ದು. ಆದರೂ, ಸಮರ್ಥ ನಾಯಕತ್ವದ ಕೊರತೆ ಇಪ್ಪ ಕಾರಣ ಕ್ಷಮತೆಯ ಪ್ರಮಾಣಲ್ಲಿ ಮುಂದುವರಿವಲೆ ಸಾಧ್ಯ ಆವುತ್ತಾ ಇಲ್ಲೆ. ಯಾವುದೇ ಸಮಸ್ಯೆಯ ಉನ್ನತ ದೃಷ್ಟಿಕೋನಂದದ ನೋಡುದು ಹಾಂಗಿರಲಿ, ಸಮಸ್ಯೆ ಎಂತದು ಹೇಳಿ ಅರ್ಥ ಮಾಡುವ ಸಾಮರ್ಥ್ಯ ಇಪ್ಪ ವ್ಯಕ್ತಿಗಳೇ ಇಲ್ಲೆ. ಅಥವಾ ಇದ್ದರುದೇ, ಸಮಸ್ಯೆಯ ತಮ್ಮ ಸ್ವಂತ ಲಾಭಕ್ಕೆ ಹೇಂಗೆ ಉಪಯೋಗಿಸಿಗೊಂಬದು ಹೇಳಿ ನೋಡುವವೇ ಜಾಸ್ತಿ. ಈ ದೃಷ್ಟಿಂದ, ನರೇಂದ್ರ ಮೋದಿ ಅಪರೂಪದ ವ್ಯಕ್ತಿ ಆವುತ್ತ. ಅವನ ಹಾಂಗೆ ದೂರದರ್ಶಿತ್ವ ಇಪ್ಪ ರಾಜಕೀಯ ವ್ಯಕ್ತಿ ಇನ್ನೊಬ್ಬ ಸಿಕ್ಕುದು ಕಷ್ಟ.

ಬಾಪಿ

ಉ: ಸ್ವಾಭಿಮಾನಿಗಳ ಗೋಳು

ಅಪ್ಪಚ್ಚಿ,

ನೀನು ಬರದ ಈ ನೀತಿಯ ಓದುವಾಗ ನೇರವಾಗಿ ಸಂಬಂಧಿಸಲಾಗದ್ರೂ ’ದರೋಡೆ ಮಾಡಿ ಶ್ರೀಮಂತ ಆಗು’ ಹೇಳಿದ ಹಾಂಗೆ ಆತು. ಊರಿಲ್ಲಿ ಭಾಜಪ ಗೆಲ್ಲುಲೆ ಇನ್ನೊಂದು ಕಾರಣ ಕಾಂಗ್ರೆಸ್ಸಿನವರ ಒಳಜಗಳ. ಕಳುದ ಸರ್ತಿ ಪ್ರಸಾದ ಭಂಡಾರಿಯ ಹೆಂಡತ್ತಿ ಅದು ಮಾಡಿದ ಪೂರ್ವ ಕೆಲಸಂದ ಅಂತೂ ಗೆದ್ದಿದಿಲ್ಲೆ. ಪ್ರಸಾದ ಭಂಡಾರಿಯ ಪ್ರಭಾವ, ಭಾಜಪ , ಕಾಂಗ್ರೆಸ್ಸಿಗರ ಹಳೆಜಗಳ - ಇದರಿಂದ ಗೆದ್ದತ್ತಷ್ಟೇ. ಇನ್ನು ಶಕುಂತಲಾ ಶೆಟ್ಟಿಯ ವಿಷಯ ಹೇಳ್ತರೆ, ರೆಜ್ಜ ಆದರೂ ಕ್ಷೇತ್ರಕ್ಕೆ ಕೆಲಸ ಮಾಡಿದ್ದು. (ಡಿವಿಯ ಸುದ್ದಿ ಬಿಡುವ). ಆದ ಕಾರಣ ರಾಮಜ್ಜ ಅದರ ಹಿಂದೆ ನಿಂದದಾಯ್ಕು ಹೇಳಿ ಎನ್ನ ಅಂಬೋಣ.

ವಿಷಯ ಎಂತದೇ ಇರಲಿ, ಆರು ಸರಿಯೋ ತಪ್ಪೋ, ನೇರವಾಗಿ ಮಾತನಾಡದ್ದೆ ಅವರ ಇವರ ಪತ್ರಿಕೆಲಿ ಮಾತನಾಡಿ ಹಳಸಿ ವಾಸನೆ ಬಪ್ಪ ಪದ್ದತಿ ಸರಿ ಅಲ್ಲ. ದೊಡ್ಡಣ್ಣನ ಹಾಂಗೆ ಭಾಜಪ ವರ್ತುಸೆಕು. ನಳಿನ್ ಕುಮಾರ್ ನ ಆಯ್ಕೆ ಮಾಡುವಾಗ ಈ ಸ್ವಾಭಿಮಾನಿಗಳ ಆಹ್ವಾನಿಸಿ ಮಾತನಾಡಿ ಒಂದು ಸಮ್ಮತಲ್ಲಿ ನಿರ್ಣಯಕ್ಕೆ ಬರೆಕಿತ್ತು. ಈಗಳೂ ಕಾಲ ಮಿಂಚಿದ್ದಿಲ್ಲೆ. ಒಂದು ವಿಷಯವ ದೊಡ್ಡ ಗಾತ್ರಲ್ಲಿ ನೋಡಿದರೆ ಇದೆಲ್ಲ ಕ್ಷುಲ್ಲಕ ಹೇಳಿ ಕಾಣ್ತು ಎನಗೆ.

ರಾಜಣ್ಣ

ಸ್ವಾಭಿಮಾನಿಗಳ ಗೋಳು

ಒಂದು ಹಂತಂದ ಮುಂದೆ ಬೆಳೆಯೆಕ್ಕಾದರೆ, ಸಿದ್ಧಾಂತದ ಒಟ್ಟಿಂಗೆ, ಸದ್ಯದ ರಾಜಕಾರಣದೊಟ್ಟಿಂಗೆ ರಾಜಿ ಮಾಡಿಗೊಳ್ಳೆಕ್ಕಪ್ಪದು ಅವಶ್ಯ ಆವುತ್ತು.  ಭಾಜಪದ್ದುದೆ ಇದೇ ಸಮಸ್ಯೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಸಾಮಾಜಿಕವಾಗಿ ದೊಡ್ಡ ಜನ ಆಗಿ ಗೆಲ್ಲುವ ಅಭ್ಯರ್ಥಿಗಳಾಗಿ ಬೆಳೆವವರೆಗೆ ಕಾಯೆಕ್ಕಾದರೆ, ಶತಮಾನವೇ ಕಳೆದು ಹೋಕು.  ಅಥವಾ, ಇದು ಯಾವಾಗಂಗೂ ಸಾಧ್ಯ ಆಗದ್ದೇ ಇಪ್ಪಲೂ ಸಾಕು !  ಹಾಂಗಾಗಿ ಬೇರೆ ಪಕ್ಷಂಗಳಲ್ಲಿ ತಯಾರಾದ  ಗೆಲ್ಲುವ ಅಭ್ಯರ್ಥಿಗಳ ಆಮದು ಮಾಡಿಗೊಂಬದು ಅನಿವಾರ್ಯ ಆವುತ್ತು.  ಹೀಂಗೆ ಬಪ್ಪವರಲ್ಲಿ ಕೆಲವು ಅಸಭ್ಯರೂ, ತಲೆಹೋಕರೂ ಇಕ್ಕು. ಇಂತಹ ಸಂದರ್ಭಲ್ಲಿ ಮೊದಲಿಂದ ಪಕ್ಷಲ್ಲಿದ್ದವಕ್ಕೆ ತಮ್ಮ ಕಡೆಗಣಿಸಿದ್ದವು ಹೇಳಿ ಕಾಣ್ತು.  ಇದು ಸಹಜವಾದರೂ, ಆಢಳಿತ ಪಕ್ಷ ಆಯೆಕ್ಕಾದರೆ, ಇಂತಹ  ರಾಜಿಗೊಕ್ಕೆ ತಯಾರು ಬೇಕು.  ಇಲ್ಲದ್ದರೆ, ಕಮ್ಯೂನಿಷ್ಟರ ಹಾಂಗೆ ಸಾಮಾನ್ಯ ಮಟ್ಟಿನ ಫಲಿತಾಂಶ ಸಿಕ್ಕುಗಷ್ಟೆ.   ಜನಸಂಘವೇ ಎಷ್ಟೋ ವರ್ಷ  ಸಂಸತ್ತಿಲ್ಲಿ ಏಕವ್ಯಕ್ತಿ ಪ್ರತಿನಿಧಿತ್ವದ ಪಕ್ಷವಾಗಿ ಇತ್ತಿಲ್ಲೆಯೋ ?

ನಮ್ಮ ದೇಶ ಪ್ರಜಾಪ್ರಭುತ್ವ ಆದರುದೇ, ಆಢಳಿತ ಸುಸೂತ್ರವಾಗಿ ಮಾಡೆಕ್ಕಾದರೆ, ನಾಯಕನಾದವಂಗೆ  ಸರ್ವಾಧಿಕಾರ ಇದ್ದರೆ ಮಾಂತ್ರ ಸಾಧ್ಯ ಹೇಳುದು ಯಾವಾಗಲೋ ನಿರ್ಧಾರ ಆದ ಸಂಗತಿ.  ಇಂದಿರಾ ಗಾಂಧಿ, ಸೋನಿಯ ಗಾಂಧಿ ಹಾಂಗಿಪ್ಪವು ಇದರ ದುರುಪಯೋಗ ಮಾಡಿದವು, ಮೋದಿ ಮಾತ್ರ ಸದುಪಯೋಗ ಮಾಡಿಗೊಂಡ . ಯೆಡ್ಯೂರಪ್ಪಂಗೆ ವಿರೋಧ ಪಕ್ಷಲ್ಲಿಪ್ಪಗ ಹೋರಾಟ ಮಾಡಿ ತೋರಿಸಿದ ನಾಯಕತ್ವದ  ಗುಣಂಗಳ ಮುಖ್ಯಮಂತ್ರಿಯಾಗಿ ತೋರುಸುಲೆ ಎಡಿತ್ತಿಲ್ಲೆ ಹೇಳುದು ದಿನ ನಿತ್ಯದ ಗೊಂದಲಂಗಳಿಂದ ಗೊಂತಾವುತ್ತು.   ಮತ್ತೆ, ಗುಜರಾತಿನ ಪರಿಸ್ಥಿತಿಯೇ ಬೇರೆ, ಕರ್ನಾಟಕದ್ದೇ ಬೇರೆ.  ಮೋದಿಯ ಅನುಕರಣೆ ಮಾಡುವವು ಅವನಷ್ಟೇ ವರ್ಚಸ್ಸು, ಯೋಗ್ಯತೆ ತಮಗೂ ಇದ್ದು ಹೇಳಿ  ಮೊದಲು ಸಾಬೀತು ಮಾಡೆಕ್ಕು.   ಈ ಎಲ್ಲಾ ಅನಿಶ್ಚಿತತೆ, ಗೊಂದಲಂಗಳ ಹೊರತಾಗಿಯೂ, ಯೆಡ್ಯೂರಪ್ಪನ ಕೂರಿಸಿದ ಮೇಲೆ ಅವಂಗೆ ಆಢಳಿತದ ಸಂಪೂರ್ಣ ಸ್ವಾತಂತ್ರ್ಯ ಇರೆಕು.  ಇಲ್ಲದ್ರೆ, ಕೆಲಸ ಮಾಡುದಾದರೂ ಹೇಂಗೆ ಪ್ರತಿಯೊಂದಕ್ಕೂ ರಾಮಜ್ಜನ ಹಾಂಗೆ ನಿವೃತ್ತರಾಗಿ ಮನೆಲಿ ಕೂದುಗೊಂಡಿಪ್ಪವರ ತೃಪ್ತಿ ಪಡಿಸೆಕ್ಕು ಹೇಳಿರೆ ಕಷ್ಟದ ಕೆಲಸ.  ನಿಜ ಹೇಳ್ತರೆ, ಬೊಬ್ಬೆ ಹಾಕುವವರಲ್ಲಿ ಹೆಚ್ಚಿನವು ಎಪ್ಪತ್ತು ವರ್ಷ ದಾಂಟಿದ ಜವ್ವನಿಗರೇ !

ಅಂತೂ ಇಂದ್ರಾಣ ಪರಿಸ್ಥಿತಿಲಿ, ಅಧಿಕಾರಕ್ಕೆ ಬರೆಕ್ಕಾದರೆ ಒಂದೊಂದು ಸೀಟುದೇ ಮುಖ್ಯವಾದ ಕಾರಣ, ಗೆಲ್ಲುವ ಸಾಮರ್ಥ್ಯ ಇಪ್ಪ ಅಭ್ಯರ್ಥಿಗೇ ಖಾಯಸ್ಸು.  ಉಳಿದವು ಸುಮ್ಮನೆ ಕೂಪದೇ ನಿಃಸ್ವಾರ್ಥದ ಧೋರಣೆ.  ಹಾಂಗಾಗಿ, ರಾಮಜ್ಜ ವೃದ್ಧಾಪ್ಯಲ್ಲಿ ಮಾಡುವ ಈ ಕಾರುಬಾರು ಸ್ವಾರ್ಥದ ಕೆಲಸ ಹೇಳಿಯೇ ಹೇಳೆಕ್ಕಾವುತ್ತು.  ಶಕುಂತಲಾ ಶೆಟ್ಟಿಗೆ ಅನ್ಯಾಯ ಆಗಿಪ್ಪಲೂ ಸಾಕು. ಆದರೆ, ಇಡೀ ರಾಜ್ಯ ಅಥವಾ ದೇಶಕ್ಕಿಂತ ಒಬ್ಬ ವ್ಯಕ್ತಿಯೇ ಮುಖ್ಯ ಹೇಳುವ ನಮುನೆಯ  ಸ್ವಾಭಿಮಾನಂದ ಆರಿಂಗೂ ಪ್ರಯೊಜನ ಇಲ್ಲೆ.  ಇವು ಗೆಲ್ಲುಲೆ ಇಲ್ಲೆ ಹೇಳುದು ಮೊದಲೇ ಗೊಂತಿಪ್ಪ ವಿಷಯ.  ಹಾಂಗಾರೆಸ್ಪರ್ಧೆ ಮಾಡುದು ಪಕ್ಷದ ಅಭ್ಯರ್ಥಿಯ ಸೋಲುಸುವ  ಉದ್ದೇಶಂದ ಮಾತ್ರ  ಹೇಳುದು ಸ್ಪಷ್ಟ.  ಇದಕ್ಕಾಗಿಯೇ  ಪೆದಂಬು ಹೇಳುವ  ಶಬ್ದ ನಿಘಂಟಿಲ್ಲಿ   ಸೇರಿ ಗೊಂಡದು  ! ಹಿಂದುಗಳಲ್ಲಿಪ್ಪ ಈ ರೀತಿಯ ವಿಭಜನಾತ್ಮಕಆತ್ಮಘಾತಕ ಮತ್ತು ವಿವೇಚನಾಹೀನ ನಡವಳಿಕೆಯೇ ಇಂದು ಮುಸ್ಲಿಮರು ಇಷ್ಟು ಬಾಲ ಬಿಚ್ಚುಲೆ ಕಾರಣ.    ರಾಮಜ್ಜನ ನಿಷ್ಕಳಂಕ ಸಾರ್ವಜನಿಕ ಜೀವನದ  ಕೊನೆ ಹಂತಲ್ಲಿ ಹೀಂಗಿಪ್ಪ ನಿರ್ಧಾರದ ಅಗತ್ಯ ಇತ್ತಿಲ್ಲೆ ಹೇಳುವ ಅಭಿಪ್ರಾಯ ಹೊಂದಿಪ್ಪ ಸುಮಾರು ಜನರಲ್ಲಿ ಆನುದೇ ಒಬ್ಬ.       

-ಬಾಪಿ 

ಉ: ಸ್ವಾಭಿಮಾನಿಗಳ ಗೋಳು

ರಾಮಜ್ಜನ ಬಗ್ಗೆ ನೀನು ಕಳುಹಿಸಿದ ಲೇಖನ ಅದರ ಮರುದಿನ ರಂಗಮೂರ್ತಿಯ ಭಾಜಪದ ಸಭೆಯ ವರದಿಯ ಸುದ್ದಿ ಪತ್ರಿಕೆಲಿ ಓದಿದೆ. ನೀನು ಹೇಳಿದಾಂಗೆ ಎದುರು ನೋಟಕ್ಕೆ ರಾಮಜ್ಜನ ಮರುಳು ಹೇಳಿ ಕಂಡರೂ ರೆಜ್ಜ ಅಸಮಾಧಾನದ ಹೊಗೆ ಇಲ್ಲದ್ದೆ ಇಲ್ಲೆ ಹೇಳಿ ಎನ್ನ ಎಂಬೋಣ. ಶಕುಂತಲಾ ಶೆಟ್ಟಿ ಸರಿ ಮಾಡಿದ್ದೋ ಅಥವಾ ತಪ್ಪು ಮಾಡಿದ್ದೋ, ಭಾಜಪ ಎಲ್ಲರನ್ನೂ ಹೊಂದಿಸಿಗೊಂಡು ಹೋಪಲ್ಲಿ ಸೋತಿದು. ಇದು ಭಾಜಪಕ್ಕೆ ಒಂದು ಹೊಡೆತವೇ. ಇನ್ನು ನಳಿನ್ ಕುಮಾರ್ ಕಟೀಲ್ ಹೇಂಗೆ ಹೇಳಿ ಗೊಂತಿಲ್ಲೆ.

ಇಬ್ಬರ ಜಗಳಂದ ಪ್ರಜಾಪ್ರಭುತ್ವ, ಸಾಮಾಜಿಕ ಬೆಳವಣಿಗೆ ಹಿಂದೆ ಬೀಳ್ತಾ ಇದ್ದು. ಮನೆಯ ಸಮಸ್ಯೆಯನ್ನೇ ಬಗೆಹರುಸಲೆ ಕಷ್ಟ ಬಪ್ಪವು ಇನ್ನು ಯಾವಗ ಸಮಾಜದ ಬಗೆ ತಲೆಕೆಡಿಸಿಗೊಂಬಲೆ ಸಮಯ ಇದ್ದು? ಅಲ್ಲದ್ದೆ, ಗಾಂಧಿ ವಂಶ ಪಾರಂಪರ್ಯದ ಬಗ್ಗೆ ಮಾತಾಡಿಗೊಂಡಿದ್ದ ಯಡಿಯೂರಪ್ಪ ಅವನ ಮಗನ ಕಣಕ್ಕೆ ಇಳಿಸಿದ್ದು ಒಂದು ವಿಪರ್ಯಾಸ.

ಇಲ್ಲಿ ಆರು ಸರಿ ಆರು ತಪ್ಪು ?? ಎನಗಂತೂ ಅರ್ಥ ಆವ್ತಿಲ್ಲೆ.

ತಲೆಕೆಡಿಸಿಗೊಂಡರೆ ಸುಮ್ಮನೆ ತಲೆಬೆಶಿ ಆವ್ತು.

-ರಾಜಣ್ಣ

ಸ್ವಾಭಿಮಾನಿಗಳ ಗೋಳು ..:-)

ಉರಿಮಜಲು ರಾಮಜ್ಜ ಸ್ವಾಭಿಮಾನಿ ಗುಂಪಿನ ಅಭ್ಯರ್ಥಿ ಆಗಿ ಸ್ಪರ್ಧಿಸುತ್ತ ಹೇಳಿ ಶುದ್ದಿ. ನಮ್ಮವಕ್ಕೆ ಪೆದಂಬು ಹೇಳುದು ಬೇಕಾದಷ್ಟು ಮಾಡ್ಳೆ ಎಡಿತ್ತನ್ನೆ ! ಇಡೀ ಜನ್ಮಲ್ಲಿ ಒಟ್ಟಾರೆ ಒಂದರಿಯೇ ಗೆದ್ದದು. ಅದಕ್ಕೆ ಎಷ್ಟು ಸ್ವಾಭಿಮಾ ಇರೆಕೋ ಅಷ್ಟಿದ್ದರೇ ಚೆಂದ ಹೇಳಿ ಈ ಪರಬ್ಬರಿಂಗೆ ಆರು ಹೇಳುದು?

- ಬಾಪಿ