ಹಾಂಗಾರೆ, ಎಲ್ಲಾ ಕಂಪನಿಗಳೂ ಮಾಡ್ತಾ ಇಪ್ಪದು "ದರೋಡೆ" ಹೇಳಿದ ಹಾಂಗೆ ಆತು ! ಒಂದು ಕಂಪನಿಂದ ಇನ್ನೊಂದು ಕಂಪನಿಗೆ ಜನಂಗೊ ವಲಸೆ ಹೋಪದು ಸಾಮಾನ್ಯ ಸಂಗತಿಯೇ ಅಲ್ಲದೋ ? ರಾಜಕೀಯವ "ಸೇವೆ" ಹೇಳಿದರೂ ಅದೊಂದು ವೃತ್ತಿ ಅಷ್ಟೆನ್ನೇ ? ಯಾವ ಪಕ್ಷಲ್ಲಿ ಅವಕಾಶ /ಭವಿಷ್ಯ ಒಳ್ಳೆದಿದ್ದೋ, ಅಲ್ಲಿಗೆ ಜನಂಗೊ ಹೋಪದು ಸ್ವಾಭಾವಿಕ. ಮತ್ತೆ, ಯಾವುದೇ ಸಾಮಾಜಿಕ ಬದಲಾವಣೆ ತರೆಕಾದರೆ, ಆಢಳಿತ ಕೈಲಿದ್ದರೆ ಮಾಂತ್ರ ಸಾಧ್ಯ. ಇಲ್ಲದ್ದರೆ, ಅಂತೇ ಬೊಬ್ಬೆ ಹಾಕಲಕ್ಕಷ್ಟೆ. ಎಂತ ಪ್ರಯೋಜನ ಇಲ್ಲೆ. ಭಾರತ ದೇಶಲ್ಲಿ ಎಲ್ಲಾ ರೀತಿಯ ನೈಸರ್ಗಿಕ ಸಂಪತ್ತು ಇದ್ದು. ಆದರೂ, ಸಮರ್ಥ ನಾಯಕತ್ವದ ಕೊರತೆ ಇಪ್ಪ ಕಾರಣ ಕ್ಷಮತೆಯ ಪ್ರಮಾಣಲ್ಲಿ ಮುಂದುವರಿವಲೆ ಸಾಧ್ಯ ಆವುತ್ತಾ ಇಲ್ಲೆ. ಯಾವುದೇ ಸಮಸ್ಯೆಯ ಉನ್ನತ ದೃಷ್ಟಿಕೋನಂದದ ನೋಡುದು ಹಾಂಗಿರಲಿ, ಸಮಸ್ಯೆ ಎಂತದು ಹೇಳಿ ಅರ್ಥ ಮಾಡುವ ಸಾಮರ್ಥ್ಯ ಇಪ್ಪ ವ್ಯಕ್ತಿಗಳೇ ಇಲ್ಲೆ. ಅಥವಾ ಇದ್ದರುದೇ, ಸಮಸ್ಯೆಯ ತಮ್ಮ ಸ್ವಂತ ಲಾಭಕ್ಕೆ ಹೇಂಗೆ ಉಪಯೋಗಿಸಿಗೊಂಬದು ಹೇಳಿ ನೋಡುವವೇ ಜಾಸ್ತಿ. ಈ ದೃಷ್ಟಿಂದ, ನರೇಂದ್ರ ಮೋದಿ ಅಪರೂಪದ ವ್ಯಕ್ತಿ ಆವುತ್ತ. ಅವನ ಹಾಂಗೆ ದೂರದರ್ಶಿತ್ವ ಇಪ್ಪ ರಾಜಕೀಯ ವ್ಯಕ್ತಿ ಇನ್ನೊಬ್ಬ ಸಿಕ್ಕುದು ಕಷ್ಟ.
ಬಾಪಿ
Subscribe to:
Post Comments (Atom)
1 comment:
ಯಾವ ರಾಜಕೀಯ ಪಕ್ಷಲ್ಲಿ ಸಂಬಳ ಸಿಕ್ಕುತ್ತು? ಹಾಂಗೇನಾದರೂ ಇದ್ದರೆ ಆನು ಈ ಕಂಪನಿ ವೈವಾಟು ಬಿಟ್ಟು ಆ ಪಕ್ಷ ಸೇರ್ಲೆ ಈಗಳೇ ಅರ್ಜಿ ಗುಜರಾಯಿಸುತ್ತೆ. ಆರಿಂಗೆ ಬೇಕು ೮ ರಿಂದ ೬ ಕೆಲಸ? ರಾಜಕೀಯಲ್ಲಿ ರಾಜಕೀಯ ಮಾಡುವಷ್ಟು ಸಂತೋಷ ಬೇರೆ ಯಾವುದರಲ್ಲಿ ಸಿಕ್ಕುತ್ತು ! ಎನ್ನ ಲೆಕ್ಕಲ್ಲಿ ರಾಜಕೀಯ - ಕಂಪನಿಗಳ ತುಲನೆ ಮಾಡುದು ಸಮಂಜಸ ಅಲ್ಲ. ರಾಜಕೀಯ ವ್ಯಕ್ತಿಗೆ ಸಮಾಜ ಸೇವೆ ಮಾಡುವುದರೊಟ್ಟಿಂಗೆ ತತ್ವ, ನಿಷ್ಟೆ ಪ್ರಾಮುಖ್ಯ.
ನರೇಂದ್ರ ಮೋದಿಯ ಬಗ್ಗೆ ಎರಡು ಮಾತಿಲ್ಲೆ ! ಎನ್ನ ಕಛೇರಿಲಿ ಒಬ್ಬ ಗುಜರಾತ್ ನವ ಇದ್ದ, ಅವನತ್ರಂದ ಅಲ್ಲಿಯ ಸುದ್ದಿ, ಅಭಿವೃದ್ಧಿ ವಿಚಾರ ಕೇಳಿದರೆ ನಾವು ಪತ್ರಿಕೆಲಿ ಓದುದು ಅತಿಶಯೋಕ್ತಿ ಅಲ್ಲ.
Post a Comment