Sunday, December 20, 2009

ತೆಲಂಗಾನ

ಆಂಧ್ರಪ್ರದೇಶವ ಎರಡು ತುಂಡು ಮಾಡಿ ತೆಲಂಗಾನ ಹೇಳುವ ಹೆಸರಿನ ಹೊಸ ರಾಜ್ಯ ಸ್ಥಾಪನೆ ಮಾಡೆಕ್ಕು ಹೇಳುವ ಬೇಡಿಕೆ ಮತ್ತು ಬೊಬ್ಬೆ ಕೆಲವು ದಿನಂದ ತಾರಕಕ್ಕೆ ಏರಿದ್ದು. ಇದರೊಟ್ಟಿಂಗೇ ಮೊದಲಿಂದಲೇ ಇತ್ತ ಇನ್ನೂ ಕೆಲವು ಪ್ರತ್ಯೇಕ ರಾಜ್ಯಂಗಳ ಬೇಡಿಕೆಗೊಕ್ಕೂ ಹೊಸ ಜೀವ ಬಂದು, ಭಾರತದ ಭೂಪಟದ ದೃಶ್ಯವೇ ಸಂಪೂರ್ಣ ಬದಲಪ್ಪ ಸಾಧ್ಯತೆ ಕಾಣ್ತಾ ಇದ್ದು. ಮೊದಲೇ ಧರ್ಮ, ಜಾತಿಗಳ ಬಾಹುಳ್ಯ ಇಪ್ಪ ನಮ್ಮ ದೇಶಲ್ಲಿ ಭಾಷಾವಾರು ಪ್ರಾಂತ್ಯಂಗಳ ನಿರ್ಮಾಣ ಮಾಡಿ ನಮ್ಮ ರಾಜಕೀಯ ನಾಯಕರು ಗೊಂದಲವ ಇನ್ನೂ ಜಾಸ್ತಿ ಮಾಡಿದವು ಹೇಳುವ ಆರೋಪದ ಬಗ್ಗೆ ಚರ್ಚೆ ಯಾವಾಗಳೂ ನಡೆತ್ತಲೇ ಬೈಂದು. ಅಂತೂ, ನಮ್ಮ ದೇಶದ ಭಾಷೆಗೊ ಜನಂಗಳ ಮಧ್ಯೆ ಸಂವಹನದ ಮಾಧ್ಯಮವಾಗಿ ಉಳಿವ ಬದಲು, ಪರಕೀಯತೆಯ ಭಾವನೆಯ ಸೃಷ್ಟಿ ಮಾಡಿದ್ದಂತೂ ಸತ್ಯ. ಕಾಸರಗೋಡು, ಬೆಳಗಾವಿ ಹಾಂಗಿಪ್ಪ ಗಡಿ ಪ್ರದೇಶಂಗಳಲ್ಲಿ ಪರಸ್ಪರ ಭಾಷಾ ವೈಷಮ್ಯ ಯಾವಾಗಳೂ ಹೊಗೆ ಆಡ್ತಾ ಇಪ್ಪದು ಇದರ ಸಣ್ಣ ನಮೂನೆ ಅಷ್ಟೆ. ಸ್ವಾತಂತ್ರ್ಯ ಪೂರ್ವಲ್ಲಿ ಇಡೀ ದೇಶವೇ ಹೆಮ್ಮೆ ಪಟ್ಟ ಯೋಧರ, ನಾಯಕರ ತಾಣವಾಗಿತ್ತ ಮಹಾರಾಷ್ಟ್ರ, ಇಂದು ಕೀಳು ಮಟ್ಟದ ಭಾಷಾ ರಾಜಕಾರಣದ ಮುಂಚೂಣಿಲಿದ್ದು. ಅಮೇರಿಕಾದ ಭೂಪಟದ ಹಾಂಗೆ, ಸರ್ತ ಗೀಟು ಹಾಕಿ ತುಂಡು ಮಾಡಿದ ಹಲ್ವಾದ ತುಂಡುಗಳ ಹಾಂಗೆ ಕಾಂಬ ರಾಜ್ಯಂಗಳ ನಮ್ಮಲ್ಲಿಯೂ ಸೃಷ್ಟಿ ಮಾಡಿದ್ದರೆ ಹೇಂಗಿರ್ತೀತು ?


ತೆಲಂಗಾನದ ವಿಷಯಲ್ಲಿ ಇಪ್ಪ ಒಂದು ವ್ಯತ್ಯಾಸ ಎಂತ ಹೇಳಿರೆ, ಇದು ಭಾಷೆಯ ತಕರಾರು ಅಲ್ಲ. ಹಾಂಗೆ ಹೇಳಿ ದೊಡ್ದ ದೂರದೃಷ್ಟಿಯ ಚಿಂತನೆಯ ಆಧರಿಸಿದ ಆಂದೋಳನವೂ ಅಲ್ಲ. ನಿಜ ಹೇಳ್ತರೆ, ಅವಭಿಜಿತ ಆಂಧ್ರದ ಸರಕಾರಲ್ಲಿ ಪಶು ಸಂಗೋಪನಾ ಸಚಿವ ಅಪ್ಪಲೂ ಯೋಗ್ಯತೆ ಇಲ್ಲದ್ದ ವ್ಯಕ್ತಿ ಒಬ್ಬ ತೆಲಂಗಾನ ಹೇಳುವ ಪ್ರತ್ಯೇಕ ರಾಜ್ಯ ಆದರೆ, ತಾನೇ ಮುಖ್ಯಮಂತ್ರಿ ಅಪ್ಪಲಕ್ಕು ಹೇಳುವ ಸ್ವಾರ್ಥಂದ ಸುರು ಮಾಡಿದ ಗಲಾಟೆಯ ಹಾಂಗೆ ಕಾಣ್ತು. ಆದರೂ, ನಮ್ಮ ದೇಶಲ್ಲಿ ಹೊಸ ಸಣ್ಣ ರಾಜ್ಯಂಗಳ ಸೃಷ್ಟಿ ಮಾಡುವ ವಾದಲ್ಲಿ ಹುರುಳು ಇದ್ದು ಹೇಳಿ ಎನ್ನ ಅಭಿಪ್ರಾಯ. ಒಟ್ಟಾರೆಯಾಗಿ, ನಮ್ಮ ಎಲ್ಲಾ ಸಮಸ್ಯೆಗಳ ತೀವ್ರತೆಯ ಹಿಂದೆಯೂ ನಮ್ಮ ಜನಸಂಖ್ಯೆಯೇ ಒಂದು ಸಾಮಾನ್ಯ ಆಂಶ ಆಗಿಪ್ಪದು ಸ್ಪಷ್ಟವಾಗಿ ಕಾಣ್ತು. ಇನ್ನೊಂದು ರೀತಿಲಿ ಹೇಳ್ತರೆ, ನಮ್ಮ ಮೊದ್ಳಾಣ ಅಜ್ಜಂದ್ರು ಸ್ವಂತಕ್ಕೆ ಇಪ್ಪ ಅರ್ಧ ಎಕ್ರೆ ತೋಟದ ಆಸ್ತಿಗೆ ೧೨ ಜನ ಮಕ್ಕಳ ದೊಡ್ಡ ಸಂತಾನವ ಸೃಷ್ಟಿ ಮಾಡಿ ಹಾಕಿ, ಯಾವ ಮಕ್ಕಳ ಮೇಲುದೇ ವಿಶೇಷ ಗಮನ ಕೊಡದ್ದೆ ಅವರವರಷ್ಟಕೇ ಬೆಳವಲೆ ಬಿಟ್ಟ ಹಾಂಗಿಪ್ಪ ಅ(ವ್ಯ)ವಸ್ಥೆ. ಭಾರತ ದೇಶದ ಭೂಪ್ರದೇಶದ ಒಟ್ಟು ವಿಸ್ತೀರ್ಣ (೧.೨ ಮಿಲಿಯ ಚದರ ಮೈಲು) ಅಮೇರಿಕಾದ ವಿಸ್ತೀರ್ಣ(೩.೫ ಮಿಲಿಯ ಚದರ ಮೈಲು)ದ ಕೇವಲ ೩೦% ಇಪ್ಪದಾದರೂ ನಮ್ಮ ಜನಸಂಖ್ಯೆ ೩.೫ ಪಟ್ಟು ಹೆಚ್ಚಿದ್ದು. ಹೇಳಿರೆ, ಇಲ್ಯಾಣ ಜನಸಾಂದ್ರತೆ ಅಮೇರಿಕಂದ ಸುಮಾರು ೧೦ ಪಟ್ಟು ಹೆಚ್ಚು. ಇನ್ನು ನಮ್ಮ ಮರುಭೂಮಿ, ಕಾಡು, ಗುಡ್ಡ ಪ್ರದೇಶಂಗಳ ಲೆಕ್ಕ ಬಿಟ್ರೆ, ಜನಸಾಂದ್ರತೆಯ ತೀವ್ರತೆ ಇನ್ನೂ ಹೆಚ್ಚಾವುತ್ತು. ಅಮೇರಿಕಾದ ರಾಜ್ಯಂಗಳ ಸರಾಸರಿ ಜನಸಂಖ್ಯೆ ೬೦ ಲಕ್ಷ ಆದರೆ, ನಮ್ಮದು ೩ ಕೋಟಿ ! ಅಲ್ಯಾಣ ಅತಿಹೆಚ್ಚು ಜನಸಂಖ್ಯೆ ಹೇಳಿರೆ ಕ್ಯಾಲಿಫೋರ್ನಿಯಾದ ೩.೫ ಕೋಟಿಯಾದರೆ, ನಮ್ಮ ಉತ್ತರಪ್ರದೇಶಲ್ಲಿ ೧೬ ಕೋಟಿ ಜನ ಇದ್ದವು. ನಮ್ಮ ಹಲವಾರು ಸಮಸ್ಯೆಗೊ ಉಲ್ಬಣ ಅಪ್ಪದು ಇದರಂದಾಗಿಯೇ ಹೇಳಿ ಧಾರಾಳ ಹೇಳ್ಳಕ್ಕು.

ಅಷ್ಟು ಹೆಚ್ಚು ಸಂಖ್ಯೆಯ ಸಾಕ್ಷರರು ಇಪ್ಪ ಮುಂದುವರಿದ ಸಮಾಜದ ವ್ಯವಸ್ಥೆಗೊ ಹೇಂಗೆ ನಡೆತ್ತಾ ಬಂದಿಕ್ಕು ಹೇಳಿ ತಿಳುಕ್ಕೊಂಬ ಉದ್ದೇಶಂದ ಅಮೇರಿಕಾದ ಹೋಲಿಕೆ ಮಾಡೆಕ್ಕಾಗಿ ಬಂತು. ನಮ್ಮಲ್ಲಿ ಅನಕ್ಷರತೆಂದ ಹಿಡುದು ಪ್ರತಿಯೊಂದು ಸಾಮಾಜಿಕ ಸಮಸ್ಯೆಯೂ ದೊಡ್ಡ ಪ್ರಮಾಣಲ್ಲಿ ಇಪ್ಪಗ, ಆದಷ್ಟು ಕಮ್ಮಿ ಜನರ ಮೇಲೆ ಗಮನ ಮತ್ತು ಶಕ್ತಿಗಳ ಕೇಂದ್ರೀಕರಿಸುಲೆ ಎಡಿಗಾದರೆ ಸುಲಭ ಅಕ್ಕು. ಗ್ರಾಮ ಪಂಚಾಯತುಗಳ ಸಬಲೀಕರಣದ ಹಿಂದೆ ಇಪ್ಪ ಚಿಂತನೆ ಇದೇ ಆದರೂ, ಆಯಾ ರಾಜ್ಯಂಗೊ ಆರ್ಥಿಕವಾಗಿ ಸುದೃಢ ಆಗದ್ರೆ, ಸ್ವಂತವಾಗಿ ಒಂದು ಸಣ್ಣ ತೋಡಿಂಗೆ ಸಂಕ ಕಟ್ಟುವ ಸಾಮರ್ಥ್ಯವೂ ಇಲ್ಲದ್ದ ಗ್ರಾಮ ಪಂಚಾಯತುಗೊಕ್ಕೆ ಎಂತ ಮಾಡ್ಳೆಡಿಗು ? ಈ ದೃಷ್ಟಿಂದ ನೋಡಿರೆ, ರಾಜ್ಯಂಗೊ ಸಣ್ಣ ಆದಷ್ಟೂ, ಕ್ಷೇತ್ರೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಪರಿಹಾರ ಕಂಡುಗೊಂಡು ಬೇಗ ಉದ್ಧಾರ ಅಪ್ಪಲೆ ಸಾಧ್ಯ ಅಕ್ಕು ಹೇಳಿ ಕಾಣ್ತು. ಆದರೆ, ಇನ್ನು ಮುಂದೆ ಅಪ್ಪ ಯಾವ ರಾಜ್ಯಂಗಳ ಪುನರ್ವಿಭಜನೆಯೂ ಭಾಷೆ ಅಥವಾ ಜಾತಿಯ ಆಧಾರದ ಮೇಲೆ ಅಪ್ಪದರ ಬದಲು, ಭೌಗೋಳಿಕ ಮತ್ತು ಆರ್ಥಿಕ ಸ್ವಾವಲಂಬನೆಯ ಮಾನದಂಡಂದ ಆದರೆ ದೇಶದ ಭವಿಷ್ಯದ ದೃಷ್ಟಿಂದ ಒಳ್ಳೆದು.

-ಬಾಪಿ/ ದಶಂಬ್ರ ೨೦, ೨೦೦೯

Monday, November 30, 2009

ಚೌ ಚೌ-೦೩

ಲವ್ ಜಿಹಾದ್ : ಕೇರಳ, ಕರ್ನಾಟಕದ ಹಾಂಗಿಪ್ಪ ರಾಜ್ಯಂಗಳಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರಿಂಗೆ ಪ್ರೀತಿಯ ಬಲೆ ಬೀಸಿ, ಮದುವೆ ಆಗಿ, ಮತಾಂತರ ಮಾಡ್ಸುವ ಮುಸ್ಲಿಮರ ವ್ಯವಸ್ಥಿತ ಜಾಲವೇ ಇದ್ದಡ. ಇದಕ್ಕೆ ಲವ್-ಜಿಹಾದ್ ಹೇಳುವ ಹೆಸರಾಡ. ಈ ಹುಡುಗಿಯರಲ್ಲಿ ಹೆಚ್ಚಿನವು ಕಾಣೆ ಅಪ್ಪದು ಅಥವಾ ಬ್ಯಾರಿಗಳ ಒಟ್ಟಿಂಗೆ ಓಡಿ ಹೋಪದು. ನಮ್ಮ ಊರಿಲ್ಲಿಯೇ ಹೀಂಗಿಪ್ಪ ಬೇಕಾದಷ್ಟು ಉದಾಹರಣೆಗೊ ಇದ್ದಡ. "ಪ್ರೀತಿ ಮಾಡಿದ ಮೇಲೆ ಹೆದರಿಕೆ ಎಂತಕೆ” ಎಂಬಿತ್ಯಾದಿ ಸಿನೆಮಾದ ಸಂಭಾಷಣೆಗಳೇ ಆದರ್ಶವಾಗಿಪ್ಪ ಈಗಾಣ ಕೂಸುಗೊಕ್ಕೆ ಅಬ್ಬೆಪ್ಪನ ಮತ್ತು ಸಮಾಜದ ಎಂತ ಗೊಡವೆಯೂ ಇಪ್ಪ ಹಾಂಗೆ ಕಾಣ್ತಿಲ್ಲೆ. ಹೀಂಗೆ ಮೋಸ ಹೋದವರಲ್ಲಿ ಹೆಚ್ಚಿನವು ಜವ್ವನದ ಕಿಚ್ಚು ತಣಿದ ಮೇಲೆ ಬಹುಪತ್ನಿತ್ವದ ವ್ಯವಸ್ಥೆಯ ಸಹಿಸಿಗೊಂಡು, ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟಿಗೊಂಡು ಬದುಕ್ಕುವ ದಯನೀಯ ಸ್ಥಿತಿಲಿದ್ದವಡ. ಇಷ್ಟೆಲ್ಲಾ ಆದ ಮೇಲೆ ಬುದ್ಧಿ ಬಂದರುದೇ ಎಂತ ಸುಖ ? ಇಷ್ಟರವರೆಗೆ ಅದೆಷ್ಟು ಸಾವಿರ ಕೂಸುಗೊ ಹೀಂಗೆ ಕಾಣೆ ಆಗಿ ಹೋಗಿ, ಬೀಡಿ ಉದ್ಯಮವ ಉದ್ಧಾರ ಮಾಡಿಗೊಂಡಿದ್ದವೋ ? ಹಿಂದೂ ಸಮಾಜಲ್ಲಿ ಒಟ್ಟಾರೆಯಾಗಿ ಎಲ್ಲದರ ಬಗ್ಗೆಯೂ ದಿವ್ಯ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆ ಇಪ್ಪ ಕಾರಣವೇ ಮುಸ್ಲಿಮರಿಂಗೆ ಹೀಂಗಿಪ್ಪ ಕುಟಿಲ ತಂತ್ರಂಗಳ ಕಾರ್ಯಗತ ಮಾಡುವ ಧೈರ್ಯ ಬಪ್ಪದು ಹೇಳಿ ಕಾಣ್ತು.

ಇಷ್ಟರ ವರೆಗೆ ಹೀಂಗಿಪ್ಪ ಯಾವ ಪ್ರಕರಣಂಗಳಲ್ಲಿಯೂ ಯಾವುದೇ ಪ್ರತಿಭಟನೆ ಆದ್ದದಾಗಲೀ, ಓಡಿ ಹೋದವರ ರಕ್ಷಿಸಿ ವಾಪಾಸು ಕರಕ್ಕೊಂಡು ಬಂದದಾಗಲೀ ಗೊಂತಾಯಿದಿಲ್ಲೆ. ಈಗ ಇದಕ್ಕೆ ವಿರುದ್ಧವಾದ ಇನ್ನೊಂದು ಘಟನೆಯ ರಜ ವಿಮರ್ಶೆ ಮಾಡುವೊ. ರಜನೀಶ್ ಶರ್ಮ ಹೇಳುವ ಜಮ್ಮುವಿನ ಹಿಂದೂ ಹುಡುಗನುದೇ ಅಮೀನಾ ಹೇಳುವ ಕಾಶ್ಮೀರದ ಮುಸ್ಲಿಮ್ ಹುಡುಗಿಯುದೇ ಪ್ರೀತಿಸಿ ಮದುವೆ ಆದವು. ಅಮೀನಾ ಮದುವೆ ಆದ ಮೇಲೆ ಆಂಚಲ್ ಶರ್ಮ ಹೇಳಿ ಹೆಸರು ಬದಲಾಯಿಸಿಗೊಂಡತ್ತು. ಇವರ ಮದುವೆ ಆಗಿ ಸುಮಾರು ಒಂದು ತಿಂಗಳು ಅಪ್ಪಗ, ಕಾಶ್ಮೀರದ ಪೋಲೀಸುಗೊ ಹುಡುಗನ ವಿಚಾರಣೆಗೆ ಹೇಳಿ ಕರಕ್ಕೊಂಡು ಹೋದವು. ಕೆಲವು ದಿನ ಆದ ಮೇಲೆ ಆ ಹುಡುಗ ಅವನ ಕೂಡಿ ಹಾಕಿದ ಕೋಣೆಲಿ ನೇಣು ಹಾಕಿಗೊಂಡು ಸತ್ತ ಹೇಳುವ ಶುದ್ದಿಯ ಪೋಲೀಸಿನವು ಬಿಡುಗಡೆ ಮಾಡಿದವು. ಸದ್ರಿ ಮುಸ್ಲಿಮ್ ಹುಡುಗಿಯ ಅಪ್ಪ ಕಾಶ್ಮೀರದ ಪೋಲೀಸು ಇಲಾಖೆಲಿ ಕೆಲಸ ಮಾಡಿಗೊಂಡಿತ್ತದು ಕೇವಲ ಕಾಕತಾಳೀಯ ! ಈ ವಿಷಯದ ಬಗ್ಗೆ ಮಾನವ ಹಕ್ಕು ಹಿತರಕ್ಷಣೆಯವಾಗಲೀ, ಮಾಧ್ಯಮದವಾಗಲೀ ಇಷ್ಟರವರೆಗೆ ಚಕಾರ ಎತ್ತಿದ್ದವಿಲ್ಲೆ. ಅದೇ, ಕಲ್ಕತ್ತಾಲ್ಲಿ ಆದ ರಿಝ್ವಾನ್ ಹೇಳುವ ಮುಸ್ಲಿಮ್ ಹುಡುಗನೊಟ್ಟಿಂಗೆ ಆದ ಪ್ರಿಯಾಂಕಾ ತೋಡಿ ಹೇಳುವ ಹಿಂದೂ ಹುಡುಗಿಯ ಮದುವೆ ಮತ್ತು ತದನಂತರ ಹುಡುಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಜ್ಯವ ಪ್ರತಿದಿನ ಬಿಡದ್ದೆ ಹಿಂಬಾಲಿಸಿ ದೊಡ್ಡ ಶುದ್ದಿ ಅಪ್ಪ ಹಾಂಗೆ ಮಾಡಿತ್ತಿದ್ದವು. ಹಾಂಗೇ, ಕಾಶ್ಮೀರದ ಶೋಪಿಯಾಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರ ಮೇಲೆ ಸೈನಿಕರು ನಡೆಶಿದವು ಹೇಳಲಾದ ಅತ್ಯಾಚಾರದ ವಿಷಯಲ್ಲಿ ತಕ್ಷಣ ಕಾರ್ಯನಿರತನಾದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಂಗೆ ರಜನೀಶ್ ಶರ್ಮನ ವಿಷಯಲ್ಲಿ ಯಾವ ಹೇಳಿಕೆಯನ್ನೂ ಕೊಡ್ಳೆ ಪುರುಸೊತ್ತು ಆಯಿದಿಲ್ಲೆ. ಇದು ಧರ್ಮ ನಿರಪೇಕ್ಷ, ಸ್ವತಂತ್ರ ಭಾರತಲ್ಲಿ ನಡೆತ್ತಾ ಇಪ್ಪ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದವರ ವೃತ್ತಿಪರ ನಡವಳಿಕೆ.

ಮುಸ್ಲಿಮರು ಬಹು ಸಂಖ್ಯಾತರಾಗಿಪ್ಪ ಕಾಶ್ಮೀರಲ್ಲಿ ಹಿಂದು ಮತ್ತು ಬೌದ್ಧ ಧರ್ಮೀಯರ ಮೇಲಿನ ದಬ್ಬಾಳಿಕೆ ಎಲ್ಲೋರಿಂಗೂ ಗೊಂತಿಪ್ಪದೇ. ಹಾಂಗಾಗಿ, ಆ ರಾಜ್ಯಲ್ಲಿ ಅಪ್ಪ ಶೋಷಣೆಯ ಹೇಂಗಾರು ಅರ್ಥ ಮಾಡಿಗೊಂಬಲಕ್ಕು. ಹಿಂದೂಗಳೇ ಬಹು ಸಂಖ್ಯಾತರಾಗಿಪ್ಪ ದಕ್ಷಿಣದ ಪ್ರದೇಶಂಗಳಲ್ಲಿ ಅಪ್ಪ ದುಷ್ಕೃತ್ಯಂಗಳನ್ನೂ ಎಂತಕೆ ಸಹಿಸಿಗೊಳೆಕ್ಕು ? ಹೀಂಗಿಪ್ಪ ವಿಷಯಂಗಳಲ್ಲಿ ಹಿಂದೂಗಳ ಪೈಕಿ ರಜ ಆದರೂ ಸಕ್ರಿಯವಾಗಿಪ್ಪವು ಹೇಳಿರೆ ಭಜರಂಗ ದಳ ಮತ್ತು ಶ್ರೀರಾಮ ಸೇನೆಯವು. ಆದರೆ ದುರ್ದೈವದ ಸಂಗತಿ ಹೇಳಿರೆ, ಈ ಸಂಸ್ಥೆಗಳ ವಿರುದ್ಧ ಹೆರಾಣವರಿಂದಲೂ ಹೆಚ್ಚು ಹಿಂದೂ ಸಮಾಜದ ಬುದ್ಧಿಜೀವಿಗಳೇ ಟೀಕೆ ಮಾಡ್ತವು. ಪ್ರೀತಿ ಹೇಳುದಕ್ಕೆ ಧರ್ಮದ ಗೋಡೆ ಅಡ್ಡ ಅಪ್ಪಲಾಗ ಹೇಳುವ ವಾದ ಸರಿಯಾಗಿಪ್ಪಲೂ ಸಾಕು. ಆದರೆ, ಅದು ಮುಂದಾಲೋಚನೆ ಇಲ್ಲದ್ದ ಕುರುಡು ಪ್ರೀತಿ ಆದರೆ ಅಥವಾ ಹುಡುಗಿಯರ ಮುಗ್ಧತೆಯ ದುರುಪಯೋಗ ಪಡಿಸಿಗೊಂಬ ನಾಟಕದ ಪ್ರೀತಿ ಆದರೆ, ಅದರ ಬಗ್ಗೆ ಜಾಗ್ರತೆ ಮಾಡೆಕ್ಕಾವುತ್ತು.

ಅಹಿಂಸಾವಾದ : ಜಗತ್ತಿನಾದ್ಯಂತ "ಶಾಂತಿದೂತ” ಹೇಳಿಯೇ ಹೆಸರು ಮಾಡಿದ ಮಹಾತ್ಮ ಗಾಂಧಿಗೆ ನೋಬೆಲ್ ಶಾಂತಿ ಪ್ರಶಸ್ತಿ ಬಾರದ್ದದು ವಿಪರ್ಯಾಸವೇ ಸರಿ. ಈ ಪ್ರಶಸ್ತಿಗಾಗಿ ಒಬಾಮಾ ಅಥವಾ ಮದರ್ ಥೆರೆಸಾನ ಹಾಂಗಿಪ್ಪ ಹೆಚ್ಚು ಅರ್ಹತೆ ಇಪ್ಪವರೊಟ್ಟಿಂಗೆ ಪೈಪೋಟಿ ಮಾಡೆಕ್ಕಾದ ಪರಿಸ್ಥಿತಿ ಇಪ್ಪಗ, ಗಾಂಧಿಗೆ ಪ್ರಶಸ್ತಿ ಸಿಕ್ಕುದಾದರೂ ಹೇಂಗೆ ? ಅದು ಹೇಂಗೂ ಇರಲಿ. ಸದ್ಯದ ಚೋದ್ಯ ಎಂತ ಹೇಳಿರೆ, ಗಾಂಧಿಯ ಅಹಿಂಸಾವಾದ ಈಗಾಣ ಕಾಲಕ್ಕೆ ಎಷ್ಟು ಪ್ರಸ್ತುತ ಹೇಳುವ ವಿಷಯ. ಈ ಚಿಂತನೆಯನ್ನೇ ಆಧರಿಸಿ ಮುನ್ನಾಭಾಯಿ ಹೇಳುವ ಎರಡು ಆವೃತ್ತಿಯ ಸಿನೆಮಾವನ್ನೂ ಮಾಡಿದವು. ಆ ಸಿನೆಮಾ ಒಳ್ಳೆ ಮನರಂಜನೆ ಕೊಟ್ಟು, ಗಾಂಧಿಯ ನೆಂಪು ಮರುಕಳಿಸುವ ಹಾಂಗೆ ಮಾಡಿತ್ತೇ ಹೊರತು ಬೇರೆಂತ ಪ್ರಯೋಜನ ಆಯಿದಿಲ್ಲೆ. ತತ್ಕಾಲದ ಯಾವ ಗಹನವಾದ ಪ್ರಶ್ನೆಗೊಕ್ಕೂ ಅದಲ್ಲಿ ಉತ್ತರ ಸಿಕ್ಕುತ್ತಿಲ್ಲೆ. ಉದಾಹರಣೆಗೆ, ಜಗತ್ತಿನ ಎಲ್ಲೆಡೆ ಹಿಂಸೆ ತಾಂಡವ ಆಡ್ತಾ ಇಪ್ಪ ಈ ಸಂದರ್ಭಲ್ಲಿ ಗಾಂಧಿ ಬದುಕ್ಕಿತ್ತಿದ್ದರೆ ಎಂತ ಮಾಡ್ತೀತ ? ಪಾಕಿಸ್ತಾನದವು ಎಷ್ಟು ಕೆಣಕಿದರೂ ನಮ್ಮ ಸರಕಾರ ತಾಳ್ಮೆ ವಹಿಸಿಗೊಂಡೇ ಬಂದರೂ, ಮತ್ತೆ ಮತ್ತೆ ಕಾಲು ಕೆದರಿ ಜಗಳಕ್ಕೆ ಬಪ್ಪ ಈ ನೆರೆಕರೆಯ ಪೀಡೆಯ ಬಗ್ಗೆ ಬೇರೆ ಯಾವ ನಮುನೆಯ ಧೋರಣೆ ಸಮರ್ಪಕ ಅಕ್ಕು ? ಅಖೇರಿಗೆ ತಡವಲೆಡಿಯದ್ದೆ ಪ್ರತೀಕಾರವಾಗಿ ನಾವುದೇ ಹಿಂಸೆಯನ್ನೇ ಕೈಗೆತ್ತಿಗೊಂಬ ಹಾಂಗೆ ಆದರೆ, ಇಷ್ಟು ದಿನ ಪಾಲಿಸಿದ ಅಹಿಂಸಾವಾದಂದ ಎಂತ ಪುರುಷಾರ್ಥ ದಕ್ಕಿದ ಹಾಂಗಾತು ?

ಅಹಿಂಸೆ ಹೇಳುದು ಒಂದು ಸೈದ್ಧಾಂತಿಕ ಮನೋಭಾವವಾದರೆ, ಹಿಂಸೆ ಹೇಳುದು ಪ್ರವೃತ್ತಿ ಅಥವಾ ಚಟವಾಗಿ ತೋರುತ್ತು. ಅಹಿಂಸೆಯ ಹಿಂದೆ ವಿವೇಕ ಇದ್ದರೆ, ಹಿಂಸೆಯ ಹಿಂದೆ ತಿಳಿಗೇಡಿತನ ಇದ್ದು. ಆದರೆ, ಅಹಿಂಸೆ ಹೇಳುದು ಹೇಡಿತನದ ಮುಖವಾಡವಾಗಿ ಕಂಡರೆ ಅಲ್ಲಿ ಹಿಂಸೆಯ ಕೈ ಮೇಲಾವುತ್ತು. ಹಾಂಗಾರೆ, ನಮ್ಮ ಅಹಿಂಸಾವಾದ ನಿಜವಾಗಿ ಸಾರ್ಥಕ ಅಪ್ಪದು ಯಾವಾಗ ? ನಾವು ಸ್ವಂತ ಬಲಶಾಲಿಗಳಾಗಿದ್ದರೂ ಬೇರೆಯವರ ಮೇಲೆ ನಾವಾಗಿ ಆಕ್ರಮಣ ಮಾಡದ್ದಿಪ್ಪಗ. ಮತ್ತೆ ಸ್ವಂತ ಸ್ಥಿಮಿತವ ಕಳಕೊಳ್ಳದ್ದ ನಮುನೆಯ ಆಕ್ರಾಮಕ ಧೋರಣೆಯ ಮೂಲಕ ಹಿಂಸೆಯ ಪ್ರಚೋದಕರು ನಮ್ಮ ಮುಟ್ಟುವಂದ ಮದಲು ೧೦೦ ಸರ್ತಿ ಆಲೋಚನೆ ಮಾಡುವ ಹಾಂಗಿಪ್ಪ ಎಚ್ಚರಿಕೆಯ ಸಂದೇಶವ ಜಗತ್ತಿಂಗೆ ನಾವು ಕಾಲಕಾಲಕ್ಕೆ ಕೊಟ್ಟುಗೊಂಡು ಬಂದಪ್ಪಗ. ಈ ಸಂದರ್ಭಲ್ಲಿ ಚರಿತ್ರೆಯ ಒಂದು ವಿಷಯವ ಉಲ್ಲೇಖ ಮಾಡ್ತೆ. ಬೌದ್ಧ ಧರ್ಮ ಪ್ರಸಾರ ಆದ ಪ್ರದೇಶದವೆಲ್ಲಾ ತಮ್ಮ ಮೊದಲಾಣ ಸ್ವಾಭಾವಿಕವಾದ ಪ್ರತಿರೋಧ ಮತ್ತು ಹೋರಾಟದ ಮನೋಭಾವವ ಕಳಕ್ಕೊಂಡ ಕಾರಣ ಮೊದಲು ಸುಭದ್ರವಾಗಿತ್ತ ಹಲವು ಸಂಸ್ಥಾನಂಗೊ ಪರಕೀಯರ ಆಕ್ರಮಣಕ್ಕೆ ಬಲಿಯಾಗಿ ನಾಶ ಆದವು ಹೇಳುವ ವಿಷಯವ ಯಾರೋ ಇತಿಹಾಸತಜ್ಞರು ವಿಮರ್ಶೆ ಮಾಡಿದ್ದರ ಓದಿದ ನೆಂಪು ಆವುತ್ತಾ ಇದ್ದು. ಇದಲ್ಲಿ ಎಲ್ಲೋರೂ ಕಲಿಯೆಕ್ಕಾದ ಒಂದು ಪಾಠ ಇದ್ದು ಹೇಳಿ ಎನಗೆ ಕಾಣ್ತು.

ನಮ್ಮ ದೇಶಲ್ಲಿ ಅಸಮರ್ಥ ಸರಕಾರ, ಅದಕ್ಷ ಆರಕ್ಷಕ ಇಲಾಖೆ, ರಾಷ್ಟ್ರೀಯ ಭದ್ರತೆಯ ವಿಷಯಲ್ಲಿಯೂ ಒಗ್ಗಟ್ಟಿಂದ ವರ್ತಿಸಲೆಡಿಯದ್ದ ಸ್ವಾರ್ಥಿ ರಾಜಕಾರಣಿಗೊ, ಛಿದ್ರವಾದ ಗಡಿಪ್ರದೇಶದ ಬೇಲಿ - ಇಷ್ಟೆಲ್ಲಾ ಮಡಿಕ್ಕೊಂಡು ಅಹಿಂಸಾವಾದದ ಮಾತಾಡಿದರೆ ಎಲ್ಲಿಗೆ ಉದ್ಧಾರ ಅಪ್ಪದು ?

- ಬಾಪಿ/ ನವೆಂಬ್ರ ೩೦, ೨೦೦೯

Tuesday, November 24, 2009

ಚೌ ಚೌ - ೦೨

ರಾಹುಲ್ ಉವಾಚ  :  ರಾಹುಲ್ ಗಾಂಧಿಗೆ ಜಾತಿವ್ಯವಸ್ಥೆಲಿ ನಂಬಿಕೆ ಇಲ್ಲೇಡ.  ಇದು ಆಕ್ಸ್ ಫರ್ಡ್  ವಿಶ್ವವಿದ್ಯಾಲಯಲ್ಲಿ ಕಲಿವಿಕೆ ಮಾಡಿದವಂಗೆ ಸಹಜವಾಗಿ ಇರೆಕಾದ ಪ್ರಗತಿಪರ ಚಿಂತನೆ ಮಾಂತ್ರ ಅಲ್ಲ,  ಭಾರತದ ರಾಜಕಾರಣಲ್ಲಿಪ್ಪ  ಢೋಂಗಿ ಜಾತ್ಯತೀತವಾದಿಗಳ ಬಾಯಿಲಿ ಬರಲೇಬೇಕಾದ ಹೇಳಿಕೆ.  ಹಾಂಗಾಗಿ ಮೆಚ್ಚೆಕ್ಕಾದ್ದೇ !   ರಜ ಸಾಮಾನ್ಯ ಜ್ಞಾನ ಇಪ್ಪವುದೇ ಊಹೆ ಮಾಡ್ಳೆಡಿಗಪ್ಪ ವಿಷಯ ಎಂತ ಹೇಳಿರೆ,  ಇವಂಗೆ ಮದುವೆ ಹೇಳಿ ಯಾವಗಾದರೂ ಇದ್ದರೆ,   ಹಿಂದೂ ಅಥವಾ ಬೇರೆ ಯಾವ ಧರ್ಮದ ಹುಡುಗಿಯೂ  ಖಂಡಿತ ಒಪ್ಪಿಗೆ ಆಗ.  ಮದುವೆ ಆವುತ್ತರೆ, ಇವನ ಹಾಂಗೆ  ಹೆರಂದ ಪ್ರಗತಿಪರ ಚಿಂತನೆಯ ತೋರ್ಪಡಿಸಿಗೊಂಡು ಒಳಂದ ಒಳ ಏಸು ಕ್ರಿಸ್ತನ ಭಜನೆ ಮಾಡುವ ತನ್ನ ಇಟೆಲಿಯ ಅಮ್ಮನ ಜಾತಿಯ  ಹುಡುಗಿ (ಮಹಿಳೆ)ಯೇ  ಆಯೆಕ್ಕಕ್ಕು.  ಮದುವೆಯನ್ನೂ ಗುಟ್ಟಿಲ್ಲಿ ಎಲ್ಯಾರೂ ಚರ್ಚಿಲ್ಲಿ ಮಾಡಿಗೊಂಡು ಮಾಧ್ಯಮದವಕ್ಕೆ ಬೇಕಾಗಿ ಒಂದು ಹೋಮದ ಕುಂಡಕ್ಕೆ ಸುತ್ತು ಬಪ್ಪ ನಾಟಕ ಮಾಡುಗು.   ಹೇಂಗೂ ಜಾತಿ ವ್ಯವಸ್ಥೆಲಿಯೇ ನಂಬಿಕೆ  ಇಲ್ಲದ್ದವ ಹೇಳಿ ಆದ ಮೇಲೆ,  ಚರ್ಚಿನ ಪಾದ್ರಿಗೊ ಅಮಾಯಕ ಹಿಂದೂಗಳ ಮತಾಂತರ ಮಾಡ್ತಾ ಇಪ್ಪ ವಿಷಯಲ್ಲಿಯೂ ಇವಂಗೆ ಎಂತ ಚಿಂತೆ ಇರ.  ಮತ್ತೆ, ಬಾಂಗ್ಲಾದೇಶಂದ ಬೇಲಿ ಹಾರಿ ಬಂದ ಮತ್ತು ನಿರಂತರವಾಗಿ ಬತ್ತಾ ಇಪ್ಪ ಕೋಟಿಗಟ್ಳೆ ಬ್ಯಾರಿಗೊ ನಮ್ಮ ದೇಶದ ಭದ್ರತೆಗೆ ಮಾರಕರಾದ ವಲಸಿಗರು ಹೇಳುವ ವಿಷಯವೂ  ಇವಂಗೆ ತುಂಬಾ ದೊಡ್ಡ ಸಮಸ್ಯೆ ಆಗಿ ಹೇಂಗೂ ಕಾಣ.  ಅಂತೂ ನಮ್ಮ ದೇಶದ ಭಾವಿ ಪ್ರಧಾನಿ ಹೇಳಿ ಹೆಸರಿಸಿಗೊಂಡವನ ಚಿಂತನೆ ಮತ್ತು ವರ್ತನೆ ತುಂಬಾ ಸ್ಪೂರ್ತಿದಾಯಕವಾಗಿ ಅಪ್ಪ ಹಾಂಗೆ ಕಾಣ್ತು.  ಇವನ ಕೈಲಿ ನಮ್ಮ ಯುವಪೀಳಿಗೆಯ ಭವಿಷ್ಯ  ಖಂಡಿತವಾಗಿ ಸುರಕ್ಷಿತ -  ಜಾತಿಪದ್ಧತಿಲಿ ನಂಬಿಕೆ ಇಲ್ಲದ್ದವು ಆಗಿದ್ದರೆ ಮಾತ್ರ !  ಇನ್ನೂ ಕೆಲವು  ಕೋಟಿ ಹಿಂದೂಗಳ ಹಿಡುದು ಮತಾಂತರ ಮಾಡಿಸಿಗೊಂಬಲಕ್ಕು  ಹೇಳುವ ಆಶೆಲಿ, ಇಟೆಲಿಯ ಪೋಪ್  ಇವ ಪ್ರಧಾನಿ ಕುರ್ಚಿಲಿ ಕೂಪದರನ್ನೇ ಕಾದುಗೊಂಡಿಕ್ಕು.

ಹೊಣೆಗಾರಿಕೆ : ಕೊಳಕ್ಕುತನಕ್ಕೆ ಎಂತಾರೂ ನೋಬೆಲ್  ಪ್ರಶಸ್ತಿ ಹೇಳಿ ಇತ್ತಿದ್ದರೆ, ಅದು  ಖಂಡಿತ ಭಾರತಕ್ಕೆ ಸಿಕ್ಕುತ್ತೀತು  ಹೇಳುವ  ಹೇಳಿಕೆ ಕೊಟ್ಟು ಕೇಂದ್ರ ಸರಕಾರದ ಮಂತ್ರಿ ಜೈರಾಮ್  ರಮೇಶ್  ಹೇಳುವವ ಇತ್ತೀಚೆಗೆ ರಜ ಶುದ್ದಿ ಮಾಡಿದ.   ಹೀಂಗಿಪ್ಪ ಹೇಳಿಕೆ ಕೊಡೆಕಾರೆ,  ಒಂದು ಜವಾಬ್ದಾರಿ ಸ್ಥಾನಲ್ಲಿ ಇಪ್ಪವಂಗೆ ನಿಜವಾಗಿ  ತುಂಬಾ ಧೈರ್ಯ ಬೇಕು.  ಆದರೆ, ಸಮಸ್ಯೆ ಎಂತ ಹೇಳಿರೆ ಇದು ಆತ್ಮ ನಿವೇದನೆಯೋ, ಹತಾಶೆಯೋ, ಅಸಹಾಯಕತೆಯೋ, ಪ್ರಚಾರಪ್ರಿಯತೆಯೋ, ಹುಂಬತನವೋ ಹೇಳಿ ಅರ್ಥ ಆಗದ್ದ ಹಾಂಗಿಪ್ಪ ಹೇಳಿಕೆಯಾಗಿ ಹೋತು !  ಭಾರತೀಯರ ಕೊಳಕ್ಕುತನ ಎಷ್ಟಾದರೂ ಜಗತ್ಪ್ರಸಿಧ್ಧ ವಿಷಯ. ಆದರೆ, ಇದರ ನಿವಾರಣೆಗೆ ಸರಕಾರ -  ಅದರಲ್ಲೂ ಸುಮಾರು ೫೦ ವರ್ಷ ರಾಜ್ಯಭಾರ ಮಾಡಿದ ಕೋಂಗ್ರೇಸು ಸರಕಾರ - ಏಕೆ ಎಂತದೂ ಕ್ರಮ ಕೈಗೊಂಡಿದಿಲ್ಲೆ  ಹೇಳುವ ಚೋದ್ಯಕ್ಕೆ  ಇವನತ್ರೆ ಎಂತಾರೂ ಸಮಾಧಾನಕರ ಉತ್ತರ ಇದ್ದಾಡವೋ ಹೇಳಿ ದೇವರೇ ಬಲ್ಲ.   ಇದಕ್ಕೆಲ್ಲಾ  ಯಾರು ಹೊಣೆ ಹೇಳಿ ಕೇಳುವಷ್ಟು ದೇಶಪ್ರೇಮ ಯಾವ ಮಾಧ್ಯಮದವರತ್ರುದೇ ಇಪ್ಪ ಹಾಂಗೆ ಕಾಣ್ತಿಲ್ಲೆ.  ಯಾಕೆ ಹೇಳಿರೆ ಅವರ ಶಕ್ತಿ ಎಲ್ಲ ಆರೆಸ್ಸೆಸ್, ಭಾಜಪ, ಶಿವಸೇನೆಗಳ  ಹುಳುಕುಗಳ ದುರ್ಬೀನು ಹಿಡುದು ಹುಡುಕ್ಕುದರಲ್ಲೇ  (ಅಪ)ವ್ಯಯ ಆವುತ್ತು.

ಭಿತ್ತಿ ಚಿತ್ರ : ಬೆಂಗ್ಳೂರು ಪೇಟೆಲಿ ಸರಕಾರೀ ಸ್ವಾಮ್ಯದ ಸಾರ್ವಜನಿಕ  ಗೋಡೆಗಳ ಸಂಪೂರ್ಣ ಕಾಯಕಲ್ಪ ಆಯಿದು.  ಈ ಗೋಡೆಗಳಲ್ಲಿತ್ತ ಸಿನೆಮಾದ ಜಾಹೀರಾತು ಚೀಟಿಗೊ, ರಾಜಕೀಯ ಪ್ರಕಟಣೆಗೊ ಇತ್ಯಾದಿ ಎಲ್ಲಾ ಮಾಯ ಆಯಿದು.  ಅದರ ಜಾಗೆಲಿ, ಕರ್ನಾಟಕದ ಪ್ರವಾಸೀ ಕೇಂದ್ರಂಗಳ ಸುಂದರ ವರ್ಣಚಿತ್ರಂಗಳ ಬರೆಶಿದ್ದವು.   ಇದು ಭರತ್ ಲಾಲ್  ಮೀನಾ ಹೇಳುವ ನಗರಪಾಲಿಕೆಯ ಆಯುಕ್ತನ ಚಿಂತನೆಯ ಮತ್ತು ಪ್ರಯತ್ನದ ಫಲ.   ನಿಜವಾಗಿಯೂ ನಂಬಲಸಾಧ್ಯವಾದ ಬದಲಾವಣೆಯೇ  ಸರಿ.  ಮೇಲೆ ಪ್ರಸ್ತಾಪಿಸಿದ ಕೊಳಕ್ಕುತನದ ನಿವಾರಣೆಗೆ ಒಂದು ಪ್ರಾಮಾಣಿಕ ಪ್ರಯತ್ನ.    ಈ ವಿಷಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಲಿಯವು  ದೊಡ್ಡ ಗಲಾಟೆ ಮಾಡಿದವು.  ಇಷ್ಟರವರೆಗೆ  ಚೀಟಿ ಅಂಟುಸುಲೆ  ಧರ್ಮಕ್ಕೆ ಸಿಕ್ಕಿಗೊಂಡಿತ್ತ  ಇವರ ಪಿತ್ರಾರ್ಜಿತ ದರ್ಖಾಸ್ತಿನ ಸರಕಾರದವು ಆಕ್ರಮಣ ಮಾಡಿದವು  ಹೇಳಿ ಅವರ ಗೋಳು.  ಇಚ್ಛಾ ಶಕ್ತಿ ಇದ್ದರೆ ಎಲ್ಲಾ ಸಮಸ್ಯೆಗೊಕ್ಕೂ ಪರಿಹಾರ ಇದ್ದು ಹೇಳುದರ ಸಾಧಿಸಿ ತೋರಿಸಿದ  ನಗರಪಾಲಿಕೆಯ ಈ ಅಪರೂಪದ ಅಧಿಕಾರಿಗೆ  ಅಭಿನಂದನೆಯ ಪದಗುಚ್ಛದ ನಮನ.

- ಬಾಪಿ/  ೨೪ ನವೆಂಬ್ರ, ೨೦೦೯

Wednesday, October 28, 2009

ಪರಿವರ್ತನೆಯ ಗಾಳಿ

ನಮ್ಮ ಊರಿಲ್ಲಿ  ಕೆಲವು ಸಮಯಂದ ಕೇಳಿ ಬತ್ತಾ  ಇತ್ತಿದ್ದ  ಸಮಸ್ಯೆ ಹೇಳಿರೆ ಕೃಷಿಕಾರ್ಮಿಕರ ಕೊರತೆ.   ಕೂಲಿ ಆಳುಗಳ ಮಕ್ಕೊ ವಿದ್ಯಾಭ್ಯಾಸ ಪಡಕ್ಕೊಂಡು ಉದ್ಯೋಗ ವಿಕಲ್ಪಂಗಳ  ಹುಡುಕ್ಕಿಗೊಂಡು ಹೋಪಲೆ ಸುರು ಆದ್ದದು  ಹೆಚ್ಚುಕಮ್ಮಿ ಒಂದು ತಲೆಮಾರು ಹಿಂದಾಣ ಪ್ರಕ್ರಿಯೆ.  ಆನು ಶಾಲೆಗೆ ಹೋಪ ಕಾಲಕ್ಕೆ ಬೀಡಿ ಕಟ್ಟುವ ಕೆಲಸ ವ್ಯಾಪಕವಾದ ಗುಡಿ ಕೈಗಾರಿಕೆ ಆದ್ದದು (ಹೆಣ್ಣು)  ಕೃಷಿ ಕಾರ್ಮಿಕರ ಕೊರತೆ ಉಂಟಪ್ಪಲೆ  ದೊಡ್ಡ ಕಾರಣ ಆಗಿತ್ತು.  ಆ ಸಮಯಲ್ಲಿ  ಅಲ್ಪ ಸ್ವಲ್ಪ ಕಲಿವಿಕೆ ಆದ ಗೆಂಡಾಳುಗೊಕ್ಕೆ ಮೀಸಲಾತಿ ಲೆಕ್ಕಲ್ಲಿ ಸರಕಾರೀ ಬ್ಯಾಂಕುಗಳಲ್ಲಿ ಗುಮಾಸ್ತ,  ಪೇದೆಯೇ ಮೊದಲಾದ   ಕೆಲಸ ಸಿಕ್ಕಿಗೊಂಡಿತ್ತು.   ಅಂಬಗ ಕೆಲವರ ಮನೆಗಳಲ್ಲಿ ಮಾತ್ರ ಶಾಲೆಗೆ ಕಳುಸುವ ಅಭ್ಯಾಸ ಇತ್ತದಾದರೆ, ಈಗ ಪ್ರತಿಯೊಂದು ಮನೆಯ ಮಕ್ಕಳೂ ಶಾಲೆಗೆ ಹೋವುತ್ತವು.  ಈ ಬೆಳವಣಿಗೆ ಸರಕಾರದ  ಸಂಪೂರ್ಣ ಸಾಕ್ಷರತಾ ಅಭಿಯಾನವ ಯಶಸ್ವಿ ಮಾಡಿ, ಇನ್ನೊಂದು ಹೊಡೆಂದ ಕೃಷಿ ಕಾರ್ಮಿಕರ ಸಮಸ್ಯೆ ಇನ್ನೂ ಉಲ್ಬಣಿಸುವ ಹಾಂಗೆ ಮಾಡಿದ್ದು.   

ಕಲ್ತ ಮೇಲೆ ಅವರವರ ಯೋಗ್ಯತೆಯ ಮೇಲೆ ಯಾರು ಎಂತ ಬೇಕಾರೂ ಅಪ್ಪಲಕ್ಕನ್ನೆ ? ಅಲ್ಲಿಗೆ, ಜಾತಿ-ವೃತ್ತಿಗಳ ಮಧ್ಯೆ ಇತ್ತ ತಲೆತಲಾಂತರದ ಸಂಬಂಧದ ಕೊಂಡಿ ಹೆಚ್ಚು ಕಮ್ಮಿ ಮುಗುದ ಹಾಂಗೇ ಹೇಳಿ ಕಾಣ್ತು.  ಇನ್ನಾಣ ಕಾಲಲ್ಲಿ   ಭಂಡಾರಿಯ ಮಗ ವೈದ್ಯನೋ, ಕೂಲಿಯವನ ಮಗ ಶಿಕ್ಷಕನೋ ಅಪ್ಪಲಕ್ಕು.  ಹಾಂಗೇ, ಬ್ರಾಹ್ಮಣನ ಮಗ ವಾಹನ ಚಾಲಕನೂ ಅಪ್ಪಲಕ್ಕು.  ಕೆಲಸ ಹೇಳುದು ಜನ್ಮಂದ ಅಥವಾ ಜಾತಿಂದ ನಿರ್ಧಾರ ಅಪ್ಪದರ ಬದಲು ಅವರವರ ಯೋಗ್ಯತೆಯ ಮೇಲೆ ನಿರ್ಧಾರ ಆಯೆಕಾದ್ದದು ನ್ಯಾಯ ಹೇಳಿ ಒಪ್ಪಿಗೊಂಡರೆ,  ವರ್ಣಾಶ್ರಮ ವ್ಯವಸ್ಥೆಯ ಸರಿಯಾದ ವ್ಯಾಖ್ಯಾನ ಮಾಡ್ಳೆ ಎಡಿಗಕ್ಕು.  ಯಾವುದೇ ಸಮಾಜಲ್ಲಿ  ಬ್ರಾಹ್ಮಣ (ಜ್ಞಾನಿಗೊ/ಗುರುಗೊ/ಅರ್ಚಕರು), ಕ್ಷತ್ರಿಯ (ರಾಜರು/ಯೋಧರು),  ವೈಶ್ಯ (ವ್ಯಾಪಾರಿವರ್ಗ/ಕಾರ್ಖಾನೆ ಮಾಲಿಕಂಗೊ),   ಶೂದ್ರ (ಕೂಲಿಯೇ ಮೊದಲಾದ ಸಾಮಾನ್ಯ ಕೆಲಸದವು) -   ಹೀಂಗೆ ನಾಲ್ಕು ಪಂಗಡಂಗೊ ಇರೆಕಾದ್ದದು ಅತಿ ಅವಶ್ಯ.   ಮುಂದುವರಿದ ಸಮಾಜಂಗಳಲ್ಲಿಯೂ ಈ ಪಂಗಡಂಗೊ ಇದ್ದು.  ಆದರೆ, ಅವು ಶೂದ್ರ ವರ್ಗದವಕ್ಕೆ ಅಡ್ಡ ಹಂತಿ ಹಾಕದ್ದೆ ವೃತ್ತಿ ಗೌರವವ ಕಾಪಾಡಿಗೊಂಡು ಬೈಂದವು.   ಅದೇ,  ಎಷ್ಟೆಲ್ಲಾ ಒಳ್ಳೆಯ ಆಂಶಂಗೊ ಇಪ್ಪ ನಮ್ಮ ಪುರಾತನ ಘನ ಸಂಸ್ಕೃತಿಲಿ ಕೆಲವು ಸ್ವಾರ್ಥ ಮತ್ತು  ಸಣ್ಣತನದ ನಡವಳಿಕೆಗೊ  ಸೇರಿಗೊಂಡು ಜನಂಗೊ ಅದನ್ನೇ ತಮ್ಮ ಅನುಕೂಲಕ್ಕೆ ಉಪಯೋಗಿಸಿಗೊಂಬ ಹಾಂಗೆ ಆತು.  ಅಸ್ಪೃಶ್ಯತೆ ಇಂತಹ ಸಣ್ಣತನಕ್ಕೆ ಒಂದು ಉದಾಹರಣೆ.   ಮುಂದಿನ ಸುಶಿಕ್ಷಿತ ಸಮಾಜಲ್ಲಿ ಇಂತಹ ನಡವಳಿಕೆಗೊಕ್ಕೆ ಅವಕಾಶ ಇಲ್ಲದ್ದ ಕಾರಣ ಅದೆಲ್ಲಾ ತನ್ನಷ್ಟಕೇ  ನಿಂದು ಹೋಕು.  ಎಷ್ಟೋ ತಲೆಮಾರಿಂದ ಕೆಳಾಣ ವರ್ಗಲ್ಲಿದ್ದವು ಕಲ್ತು ತಕ್ಷಣ ಮುಂದೆ ಬಂದಪ್ಪಗ  ಅಲ್ಪ ಕಾಲಾವಧಿಲಿ ಗುಣಮಟ್ಟದ ಸಮಸ್ಯೆ ಉಂಟಪ್ಪ ಸಾಧ್ಯತೆ  ಇದ್ದರೂ, ಒಟ್ಟಾರೆ  ಇದೊಂದು ನಮುನೆ ಸಕಾರಾತ್ಮಕವಾದ ಬೆಳವಣಿಗೆ  ಹೇಳಿ ಎನ್ನ ಖಾಸಗಿ ಅಭಿಪ್ರಾಯ.  ಹಾಂಗಾರೆ, ಕೃಷಿಕರ ಸಮಸ್ಯೆಗೆ ಪರಿಹಾರ ಎಂತ ಹೇಳುವ ಪ್ರಶ್ನೆಗೆ ನಿಧಾನಕ್ಕೆ ಸಮಾಧಾನ ಸಿಕ್ಕೆಕ್ಕಷ್ಟೆ ಹೇಳಿ ಕಾಣ್ತು.  ಕೃಷಿಯನ್ನೇ ಇಷ್ಟ ಪಟ್ಟು ಮಾಡುವವು ತಾವೇ ಸ್ವತಃ ಕೆಲಸ ಮಾಡುವ ಸಾಮರ್ಥ್ಯ ಬೆಳೆಶಿಗೊಂಗು. ಅಥವಾ, ಅಡಕ್ಕೆಯಂತಹ ಕಷ್ಟದ ಕೃಷಿ ಬಿಟ್ಟು ಸುಲಭದ ಪರ್ಯಾಯಂಗಳ ಹುಡುಕ್ಕುಗು.  ಇಲ್ಲವೇ, ಸ್ವಂತ ಪ್ರೇರಣೆಂದ ಪರಸ್ಪರ ಸಹಕಾರಕ್ಕಾಗಿ ಕೃಷಿಕರ ಸ್ವ-ಸಹಾಯ ಗುಂಪುಗೊ ಹುಟ್ಟಿಗೊಂಗು.  ಅಂತೂ ಎಲ್ಲವೂ ಸುಖಾಂತ ಅಕ್ಕು ಹೇಳಿ ಗ್ರೇಶಿಗೊಂಬೊ.

ಈಗ ಊರಿಲ್ಲಿ ಆಳುಗಳ ಸಮಸ್ಯೆ ಬಗ್ಗೆ  ಆರೂ ಅಷ್ಟು ಮಾತಾಡ್ತವಿಲ್ಲೆ.  ಸದ್ಯದ ಬಿಸಿ ಸುದ್ದಿ ಹೇಳಿರೆ,  ಜವ್ವನಿಗರಿಂಗೆ ಮದುವೆಗೆ "ಯೋಗ್ಯ"  ಕೂಸುಗೊ ಸಿಕ್ಕದ್ದೆ ಇಪ್ಪದು.  ಅದರಲ್ಲೂ ವಿಶೇಷವಾಗಿ,  ಕೃಷಿಕರ ಮಕ್ಕೊಗೆ.    ಸದ್ಯಕ್ಕೆ ಸಮಾಜಲ್ಲಿ ಮಾಣಿ-ಕೂಸುಗಳ ಸಂಖ್ಯೆಲಿಪ್ಪ ಅಸಮತೋಲನವೇ  ಮೂಲ ಕಾರಣಂಗಳಲ್ಲಿ ಒಂದು ಆಗಿಪ್ಪಲೂ ಸಾಕು.   ಇದರ ದೈವಲೀಲೆ ಹೇಳಿ ಅನುಭವಿಸೆಕ್ಕಷ್ಟೆ.   ಮತ್ತೆ,  ಈಗ ಹೆಚ್ಚು ಹೆಚ್ಚು ಕೂಸುಗೊ ಕಲಿವಿಕೆ ಆಗಿ, ವೃತ್ತಿಜೀವನದ ಸಾಧನೆಗೆ  ಆದ್ಯತೆ ಕೊಟ್ಟುಗೊಂಡು ಆರ್ಥಿಕ ಸ್ವಾವಲಂಬನೆ ಪಡಕ್ಕೊಂಡಿಪ್ಪದುದೇ ಇನ್ನೊಂದು ಪ್ರಬಲ ಕಾರಣ ಹೇಳಿಯೂ ವಿಮರ್ಶೆ ಮಾಡ್ಳಕ್ಕು.   ೧೦ ವರ್ಷದ ಸಣ್ಣ ಪ್ರಾಯಲ್ಲಿ  ಮದುವೆ ಆಗಿ ಗೆಂಡನ ಮನೆಯವರ ಸೇವೆ ಮಾಡ್ಳೆ ಸುರು ಮಾಡಿ, ಹತ್ತತ್ತು ಮಕ್ಕಳ ಹೆತ್ತು ದೊಡ್ದ ಮಾಡಿದ  ಹಿಂದಾಣ ತಲೆಮಾರಿನ  ಎಷ್ಟೋ ಜನರ ಕಥೆ ನವಗೆ ಕೇಳಿ ಅಥವಾ ನೋಡಿ ಗೊಂತಿಕ್ಕು.  ಅದೇ  ಈಗ, ೩೦ ವರ್ಷ ಆದರೂ ಸ್ವ-ಇಚ್ಛೆಂದ ಮದುವೆ ಆಗದ್ದೆ ಇಪ್ಪ ಕೂಸುಗೊ ಎಷ್ಟುದೇ ಇದ್ದವು.   ಆದರೆ, ಕೃಷಿಮಾಡುವ ಮಾಣ್ಯಂಗೊಕ್ಕೆ ಮನೆಲಿ ಅಬ್ಬೆಗೆ ಒಬ್ಬಂಗೇ ಕೆಲಸ ಮಾಡಿಗೊಂಬಲೆ ಪೂರೈಸುತ್ತಿಲ್ಲೆ ಹೇಳಿ  ಮದುವೆ ಅಪ್ಪಲೆ ಅಂಬ್ರೆಪ್ಪು.  ಹೀಂಗೆ ದೃಷ್ಟಿಕೋಣಂಗಳ ಮಧ್ಯೆ ಇಪ್ಪ ಅಂತರಂದಾಗಿ   ಇಂದಿಂಗೆ  ಮದ್ಮಾಳುಗಳ  ತತ್ವಾರ ಕಂಡು ಬತ್ತಾ ಇದ್ದು.   ಮೊದ್ಳಾಣ ಅಜ್ಜಂದ್ರು ಎಲ್ಲಾ ಎರಡೆರಡು ಮದುವೆ ಆಗಿ ಹೆಂಡತ್ತಿಯಕ್ಕಳ ಗಾಣದ ಎತ್ತು (ಎಮ್ಮೆ) ಗಳ ಹಾಂಗೆ ನಡೆಶಿಗೊಂಡ ಪಾಪದ ಫಲವ ಪುಳ್ಯಕ್ಕೊ ಅನುಭವಿಸುತ್ತಾ ಇಪ್ಪದೋ ಏನೋ ?   ಅಂತೂ, ಮಾಣ್ಯಂಗಳ ದೊಡ್ಡಸ್ತಿಕೆಯ "ಸುವರ್ಣ ಯುಗ"  ಮುಗುತ್ತು ಹೇಳ್ಳಕ್ಕು !  ಅದರೊಟ್ಟಿಂಗೇ, ಕೂಸಿನ ಅಬ್ಬೆಪ್ಪಂದ್ರಿಂಗೆ ನಿಜವಾಗಿ ಸಲ್ಲೆಕ್ಕಾದ ಮರ್ಯಾದೆ ಸಿಕ್ಕುವ ಕಾಲವೂ  ಕೂಡಿ ಬಂತು.

ಇದರೊಟ್ಟಿಂಗೆ ಜಾತಿಯ ಬೇಲಿಯೂ ಶಿಥಿಲ ಆಗಿ ಹವ್ಯಕ-ಹವ್ಯಕೇತರರ ಮಧ್ಯೆ ಸಂಬಂಧಂಗೊ ಹೆಚ್ಚು ಸಂಖ್ಯೆಲಿ  ಕಾಂಬಲೆ, ಕೇಳ್ಳೆ  ಸಿಕ್ಕುತ್ತಾ ಇದ್ದು.   ಇಷ್ಟರವರೆಗೆ ನಮ್ಮ ಜೆಂಬ್ರಂಗಳಲ್ಲಿ   ಬರೀ ಕುಂಬ್ಳೆ ಸೀಮೆಯ ಮೇಲಾರ,  ಸುಳ್ಯ ಸೀಮೆಯ ಸೀವು ಇತ್ಯಾದಿಗಳ ವೈವಿಧ್ಯ ಆದರೆ,  ಇನ್ನು ಮುಂದೆ ಕಲ್ಕತ್ತಾದ ರಸಗುಲ್ಲಾ, ಚೆನ್ನೈಯ ಪೊಂಗಲ್, ಮಹಾರಾಷ್ಟ್ರದ ಶ್ರೀಖಂಡ್, ಪಂಜಾಬಿನ  ಜಿಲೇಬಿ ಇತ್ಯಾದಿಗಳನ್ನೂ ಚಪ್ಪರಿಸುವ  ಅವಕಾಶ  ಹೆಚ್ಚು ಹೆಚ್ಚು ಸಿಕ್ಕುಲೂ ಸಾಕು.   ಕೇವಲ  ಮೃಷ್ಟಾನ್ನವ ಅಪೇಕ್ಷೆ ಮಾಡುವ ಇತರರಿಂಗೆ ಇದು ಸುವಾರ್ತೆ  ಆದರೂ, ಆಯಾ ಮಾಣಿ-ಕೂಸುಗಳ ಅಬ್ಬೆಪ್ಪಂದ್ರಿಂಗೆ  ಖಂಡಿತ ಸುಲಭಲ್ಲಿ ಜೀರ್ಣ ಅಪ್ಪ ಸಂಗತಿ ಅಲ್ಲ.  ಸಂಪ್ರದಾಯವನ್ನೇ  ನಂಬಿಗೊಂಡು ಜೀವನ ಮಾಡಿದವಕ್ಕೆ ತಕ್ಷಣ ಯಾರೋ ಇಬ್ರಾಯಿ, ಪಿಂಟೋ, ಸರ್ದಾರ್ಜಿ, ಮೆಹ್ತಾ, ಪಟ್ನಾಯಕ್ ಅಥವಾ ಬ್ಯಾನರ್ಜಿಯ  ಅಳಿಯ ಹೇಳಿ ಸ್ವೀಕಾರ  ಮಾಡ್ಳೆ ಹೇಂಗೆ ಸಾಧ್ಯ ?  ಆದರೆ, ಪರಿವರ್ತನೆಯ ಗಾಳಿ ಪ್ರಬಲವಾಗಿಯೂ, ವ್ಯಾಪಕವಾಗಿಯೂ ಇಪ್ಪಗ  ಹವ್ಯಕ ಸಮಾಜಕ್ಕೆ ಮಾತ್ರ ತಟ್ಟದ್ದೆ ಇಪ್ಪದಾದರೂ ಹೇಂಗೆ ?

ಪರಿವರ್ತನಾಶೀಲವಾಗಿಪ್ಪದು ಸಮಾಜದ ಸಹಜ ಪ್ರವೃತ್ತಿ ಹೇಳಿ ಆದರೆ, ಅದರ ಒಪ್ಪಿಗೊಂಬದೇ ಸುಖವೋ ಏನೋ ?

- ಬಾಪಿ / ಬುಧವಾರ, ೨೮ ಅಕ್ಟೋಬರ ೨೦೦೯

Saturday, October 24, 2009

ಚೌ ಚೌ - ೦೧

ನೋಬೆಲ್ ಪ್ರಶಸ್ತಿ : ಒಬಾಮಂಗೆ ನೋಬೆಲ್ ಶಾಂತಿ ಪ್ರಶಸ್ತಿ ಬಂದ ಬಗ್ಗೆ ಬೇಕಾದಷ್ಟು ಊಹಾಪೋಹಂಗೊ ಚಲಾವಣೆಲಿ ಇದ್ದು. ಎಡಪಂಥವಾದಿಗಳೇ ಬಹುಮತಲ್ಲಿಪ್ಪ ಪ್ರಶಸ್ತಿಯ ಆಯ್ಕೆ ಸಮಿತಿಯವು ಇರಾನ್, ಉತ್ತರ ಕೊರಿಯಾ ಇತ್ಯಾದಿ ದೇಶಂಗಳ ಕುರಿತಾದ ಅಮೇರಿಕಾದ ವಿದೇಶಾಂಗ ನೀತಿಯ ತತ್ಕಾಲೀನ ಧೋರಣೆಯ ಇಕ್ಕಟ್ಟಿಲ್ಲಿ ಸಿಲುಕಿಸಲೆ ಈ ತಂತ್ರ ಹೂಡಿದ್ದದು ಹೇಳಿ ಗುಸುಗುಸು ಶುದ್ದಿ. ಅಂತೂ, ಎನ್ನ ಪ್ರಕಾರ ಇದು ಕ್ಲಾಸಿನ ಅತ್ಯಂತ ಪೋಕರಿ ಮಾಣಿಯ ಲೀಡರು ಮಾಡಿದ ಹಾಂಗಿಪ್ಪ ಕಥೆ. ಒಬಾಮಾ ಅಧಿಕಾರಕ್ಕೆ ಬಂದ ಮೇಲಾಣ ೬ ತಿಂಗಳಿಲ್ಲಿ ಸಾಧನೆ ಮಾಡಿದ್ದದು ಎಂತದೂ ಇಲ್ಲೆ ಹೇಳುದು ಎಲ್ಲೋರಿಂಗೂ ಗೊಂತಿಪ್ಪ ವಿಷಯ. ಬರೀ ಆಶ್ವಾಸನೆಯ ಮೇಲೆ ಪ್ರಶಸ್ತಿ ಕೊಡ್ತರೆ, ನಮ್ಮ ವಾಟಾಳ್ ನಾಗರಾಜಂಗೆ ಪ್ರಪಂಚದ ಎಲ್ಲಾ ಪುರಸ್ಕಾರಂಗಳೂ ಸಿಕ್ಕೆಕ್ಕಿತ್ತು. ಚರಿತ್ರೆಲಿ ಇಷ್ಟರವರೆಗೆ ನಡೆದ ಯುದ್ಧಂಗಳಲ್ಲಿ ಅಣ್ವಸ್ತ್ರ ಪ್ರಯೋಗ ಮಾಡಿದ ಒಂದೇ ಒಂದು ದೇಶವಾದ ಅಮೇರಿಕಾ, ಈಗ ಪ್ರಪಂಚದ ಬೇರೆ ಎಲ್ಲಾ ದೇಶಂಗೊಕ್ಕೆ ಪರಮಾಣು ನೀತಿಯ ಬೋಧನೆ ಮಾಡುವ ಗುರಿಕ್ಕಾರ್ತಿಗೆ ವಹಿಸಿಗೊಂಡಿಪ್ಪದು ದೊಡ್ಡ ವಿಪರ್ಯಾಸ ! ಈ ಅಧಿಕಪ್ರಸಂಗಿಗಳ ಸ್ವಂತ ಚರಿತ್ರೆಯ ಹುಳುಕಿನ ಬೊಟ್ಟು ಮಾಡಿ ತೋರುಸುವ ಧೈರ್ಯ ಯಾರಿಂಗೂ ಇಲ್ಲೆನ್ನೆ ಹೇಳುದು ಭಾರೀ ಬೇಜಾರದ ವಿಷಯ.

ಬೋಫೋರ್ಸ್ : ಕೋತ್ರೋಕಿ ಹೇಳುವ ಮಹಾಶಯನ ಬೋಫೋರ್ಸ್ ಹಗರಣಲ್ಲಿ ದೋಷಮುಕ್ತಿಗೊಳಿಸಿ ಕೇಸಿನ ಬರ್ಖಾಸ್ತು ಮಾಡೆಕ್ಕು ಹೇಳುವ ಅರ್ಜಿಯ CBIಯವು ಉಚ್ಛನ್ಯಾಯಾಲಯಲ್ಲಿ ಸಲ್ಲಿಸಿದ್ದವಡ. ಇದು ಅವಂಗೆ (ಅಕ್ರಮವಾಗಿ) ಸಲ್ಲೆಕ್ಕಾದ ಬಾಕಿ ೨೯ ಮಿಲಿಯ ಡಾಲರುಗಳ ವಿಲೇವಾರಿಯ ವ್ಯವಸ್ಥೆಯ ಸುಗಮ ಮಾಡಿಕೊಡುವ ಹೊಸ ಕಾರ್ಯತಂತ್ರ. ವಾಜಪೇಯಿಯ ಸರಕಾರದ ಅವಧಿಲಿ ಈ ಕೇಸಿನ ಬಗ್ಗೆ ಎಂತಾರು ಇತ್ಯರ್ಥ ಅಕ್ಕು ಹೇಳುವ ಆಶೆ ಎಲ್ಲೋರಿಂಗೂ ಇತ್ತು. ಆದರೆ ನಿಜ ಹೇಳ್ತರೆ, ಆ ಸರಕಾರಂದಲೂ ಹೆಚ್ಚು ಬೋಫೋರ್ಸ್ ಕೇಸಿನ ಮುಂದುವರಿಸಿದ ಹೆಗ್ಗಳಿಕೆ ನರಸಿಂಹ ರಾಯನ ಸರಕಾರಕ್ಕೆ ಸೇರೆಕ್ಕು. ಕೋತ್ರೋಕಿಯ ಹೆಸರಿನ ಅಂಬಗಂಬಗ ಹೇಳಿ ಸೋನಿಯಾ ಗಾಂಧಿಯ ಹೆದರಿಸಿ ಕೂರಿಸಿಗೊಂಡೇ ಅವ ತನ್ನ ೫ ವರ್ಷದ ರಾಜ್ಯಭಾರವ "ಯಶಸ್ವಿಯಾಗಿ" ಪೂರೈಸಿದ. ಮಹಾ ಬುದ್ಧಿವಂತ ! ಎಷ್ಟಾದರೂ ಆಂಧ್ರದ ಖಾರ ಮೆಣಸಿನ ಕಾಯಿ ತಿಂದು ಬೆಳೆದ ಜೀವ ಅಲ್ಲದಾ ?

ನಕ್ಸಲೀಯರು : ಇತ್ತೀಚೆಗೆ ನಮ್ಮ ದೇಶಲ್ಲಿ ಮಾವೋವಾದಿಗಳ ಕಾರುಬಾರು ರಜ ಜೋರು ಆಯಿದು. ನೇಪಾಳಲ್ಲಿ ಅಧಿಕಾರದ ರುಚಿ ಕಂಡ ಮೇಲೆ, ಅವರದ್ದು ಈಗ ಭಾರತದ ಮೇಲೆ ಕಣ್ಣು. ನಮ್ಮ ದೇಶದ ಮಧ್ಯ- ಉತ್ತರ -ಪೂರ್ವ ರಾಜ್ಯಂಗಳಲ್ಲಿಪ್ಪ ಹೇರಳ ಕಾಡುಪ್ರದೇಶಂಗಳ ನೆಲೆಯಾಗಿ ಮಾಡಿಗೊಂಡು, ಹೆಚ್ಚಾಗಿ ಕಾಡಿನ ಹತ್ತರಾಣ ಹಳ್ಳಿಗಳ ಮುಗ್ಧ ಜನಂಗಳ ಅಥವಾ ಪೋಲೀಸರ ಕೊಂದು ತಮ್ಮ ಸಂಸ್ಥೆಯ ಹೆಸರು ಸದಾ ಪತ್ರಿಕೆಗಳಲ್ಲಿ ಚಲಾವಣೆಲಿ ಇಪ್ಪ ಹಾಂಗೆ ನೋಡಿಗೊಳ್ತಾ ಇದ್ದವು. ಇವರ ದುಷ್ಕೃತ್ಯಂಗೊಕ್ಕೆ ಎಡಪಕ್ಷಂಗಳ ಸಹಾನುಭೂತಿ ಇಪ್ಪದಲ್ಲದ್ದೆ, ಅನೇಕ ಬುದ್ಧಿಜೀವಿಗಳದ್ದೂ ಬೆಂಬಲ ಇದ್ದು. ಇದೆಂತ ಆಶ್ಚರ್ಯದ ವಿಷಯ ಅಲ್ಲ. ಏಕೆ ಹೇಳಿರೆ, ಕೈಲಿ ಬೆಡಿ ಹಿಡುಕ್ಕೊಂಡಿಪ್ಪ ವಿಕೃತ ಮನಸ್ಸಿನ ಬುದ್ಧಿಜೀವಿಗಳೇ ನಕ್ಸಲೀಯರು ಅಲ್ಲದಾ ? ಇದೇ ಬುದ್ಧಿಜೀವಿಗೊ, ನಮ್ಮ ದೇಶದ ಸಂಸ್ಕೃತಿಗೆ ಸಂಬಂಧಿಸಿದ ವಿಷಯಲ್ಲಿ ವಿಶ್ವ ಹಿಂದೂ ಪರಿಷತ್ತು ಅಥವಾ ಭಜರಂಗ ದಳದವು ಎಂತಾರೂ ಗಲಾಟೆ ಮಾಡಿರೆ ಅದಕ್ಕೆ ಕೂಡ್ಳೇ ತಕರಾರು ಮಾಡ್ತವು ! ವಿತಂಡವಾದವೇ ಬುದ್ಧಿವಂತಿಕೆಯ ಮಾನದಂಡ ಆಗಿಪ್ಪಗ, ಒಳ್ಳೆಯ ತರ್ಕಕ್ಕೆ ಅವಕಾಶ ಎಲ್ಲಿದ್ದು ?

ಗುರುತು ಚೀಟಿ : ವಿಶಿಷ್ಠ ಗುರುತುಚೀಟಿ ಪ್ರಾಧಿಕಾರ ಹೇಳುವ ಹೊಸ ಸಂಸ್ಥೆಯ ಸುರುಮಾಡಿ, ನಂದನ್ ನೀಲಕೇಣಿಯ ಅದಕ್ಕೆ ಮುಖ್ಯಸ್ಥನಾಗಿ ಮಾಡಿದ ಮನಮೋಹನ ಸಿಂಗನ ಸರಕಾರದ ನಿರ್ಧಾರವ ಸ್ವಾಗತಿಸಿ ಚಪ್ಪಾಳೆ ತಟ್ಟಿದವರಲ್ಲಿ ಆನೂ ಒಬ್ಬ. ಆದರೆ, ಈ ಪ್ರಕ್ರಿಯೆ ಮುಗಿಶುಲೆ ೫ ವರ್ಷ ಬೇಕಕ್ಕು ಹೇಳಿಯೂ, ಈ ಗುರುತು ಚೀಟಿ ಭಾರತ ದೇಶದ ಪೌರತ್ವದ ದೃಢೀಕರಣ ಅಲ್ಲ ಹೇಳಿಯೂ ತಿಳಿಶುವ ಹೊಸ ನಿರಾಶಾದಯಕ ಸುದ್ದಿ ಇತ್ತೀಚೆಗೆ ಕೇಳಿ ಬೈಂದು. ಸದ್ಯಕ್ಕೆ ಲಂಚ ಕೊಡದ್ದೆ, ಧರ್ಮಕ್ಕೆ ಕಿಸೆಲಿ ಮಡಿಕ್ಕೊಂಬಲೆ ಒಂದು ಹೊಸ ಗುರುತು ಚೀಟಿ ಸಿಕ್ಕುಗು ಹೇಳುದಷ್ಟೇ ಭಾರತೀಯರ ಸೌಭಾಗ್ಯ. ದಾರಿಲಿ ಹೋಪವರ ಎಲ್ಲಾ ಹಿಡುದು ನಿಲ್ಲಿಸಿ ಗುರುತು ಚೀಟಿಯ ಹಂಚುವ ಅಭಿಯಾನ ಈಗಾಗಲೇ ಸುರು ಆಗಿರೆಕು. ಹಾಂಗಾರೆ, ಈ ಗುರುತಿನ ಚೀಟಿಯ ಉಪಯೋಗಿಸಿಗೊಂಡು ಬಾಂಗ್ಲಾದೇಶಂದ ಬಂದ ಕೋಟಿಗಟ್ಳೆ ಬ್ಯಾರಿಗೊ ನಿಧಾನಕ್ಕೆ ಭಾರತದ ಪೌರರಪ್ಪಲಕ್ಕು. ಅಲ್ಪ ಸಂಖ್ಯಾತರ ಸಂಖ್ಯೆಯ ಅಧಿಕೃತವಾಗಿ ಹೆಚ್ಚು ಮಾಡ್ಳೆ ಇಪ್ಪ ಸಾವಿರಾರು ಕೋಟಿಯ ಯೋಜನೆ ! ಹೇಂಗಿದ್ದು ?

ಪ್ರಳಯ : ೨೦೧೨ನೇ ಇಸವಿಲಿ ಪ್ರಳಯ ಆವುತ್ತು ಹೇಳಿ ಇತ್ತಿಚೆಗೆ ಒಂದು ಪತ್ರಿಕೆಲಿ ಸುದ್ದಿ ಬಂತು. ಇದರ ಕೇಳಿ ಜನ ಎಂತ ಭಯಂಕರ ತಲೆಬೆಶಿ ಮಾಡಿಗೊಂಡ ಹಾಂಗೆ ಕಾಣ್ತಿಲ್ಲೆ. ಅತ್ಯಂತ ಹೆಚ್ಚು ತಲೆಬೆಶಿ ಮಾಡಿಗೊಳೆಕ್ಕಾದ ಕರಾವಳಿ ಪ್ರದೇಶದ ಜನರಲ್ಲಿ ಹೆಚ್ಚಿನವು ಈಗಾಗಲೇ ಬೆಂಗ್ಳೂರಿಲ್ಯೋ, ಅಮೇರಿಕಲ್ಯೋ ಇಪ್ಪ ಮಕ್ಕಳ ಒಟ್ಟಿಂಗೆ ಬೇಕಾದ ವ್ಯವಸ್ಥೆ ಮಾಡ್ಯೊಂಡಿಕ್ಕು. ಅಂತೂ, ಇದರಿಂದಾಗಿ ಘಟ್ಟದ ಮೇಲೆ ನಿವೇಶನದ ಕ್ರಯ ಏರುದು ಖಂಡಿತ. ಇನ್ನೂ ಹೆಚ್ಚು ಸುರಕ್ಷಿತ ಜೀವನವ ಅಪೇಕ್ಷೆ ಮಾಡುವವು ನಂದಿ ಬೆಟ್ಟದ ಮೇಲೆ ಬಹುಮಹಡಿಯ ಕಟ್ಟೋಣ ಕಟ್ಟಿ, ಅತ್ಯಂತ ಮೇಲಾಣ ಮಾಳಿಗೆಲಿ ವಾಸ ಮಾಡುವ ಕೆಣಿ ಮಾಡ್ಳೂ ಸಾಕು. ಅಂತೂ ಮನುಷ್ಯಂಗೆ ಜೀವಭಯ ಹೇಳುದು ಭಯಂಕರ ದೊಡ್ಡ ಸಂಗತಿ ಅಲ್ಲದಾ ? ಒಟ್ಟಾರೆ, ಇನ್ನು ಮೂರೇ ವರ್ಷ ಇಪ್ಪದು. ಗಮ್ಮತು ಮಾಡುವಷ್ಟು ಮಾಡಿಗೊಂಬಲಕ್ಕು.

- ಬಾಪಿ / ಶನಿವಾರ, ೨೪ ಅಕ್ಟೋಬರ ೨೦೦೯

Saturday, October 10, 2009

ಸ್ವಸ್ಥ ಸಮಾಜ

ಸುಖ ಸಂಸಾರ ನಡೆಶುಲೆ ಸಹಾಯ ಅಪ್ಪ ಹಾಂಗಿಪ್ಪ ೧೨ ಸೂತ್ರಂಗಳ ಯಾರೋ ಪುಣ್ಯಾತ್ಮರು ಬೋಧನೆ ಮಾಡಿದ ವಿಷಯವ ನವಗೆಲ್ಲಾ ಕೇಳಿ ಗೊಂತಿಕ್ಕು.    ಹೀಂಗಿಪ್ಪ ಸಿದ್ಧ ಕೈಪಿಡಿಗಳ  ದಾರಿದೀಪವಾಗಿ ಉಪಯೋಗಿಸಿರೆ,  ಎಷ್ಟೋ ಸರ್ತಿ ನಾವು ಜೀವನಲ್ಲಿ ಸ್ವಂತ ಅನುಭವ ಅಪ್ಪ ವರೆಗೆ ಕಾಯುವ ಅಗತ್ಯ ಇರ್ತಿಲ್ಲೆ.   ಹೀಂಗೆ ಅಲ್ಲಿಲ್ಲಿ  ನೋಡಿ, ಬೇರೆಯವರಿಂದ ಕೇಳಿ ತಿಳುದು ಬುದ್ಧಿವಂತರಪ್ಪ ಅವಕಾಶಂಗೊ ಧಾರಾಳ ಇರ್ತು.  ಇದಕ್ಕೆ ರಜ ವ್ಯಾವಹಾರಿಕ ಜಾಣ್ಮೆ ಬೇಕಪ್ಪದಷ್ಟೆ.  

ಇಪ್ಪದರನ್ನೇ ಅನುಭವಿಸಿಗೊಂಡು  ಸದಾ ಸಂತೋಷಲಿಪ್ಪ ಜನ,  ಜಗತ್ತಿನ ಬೇರೆಲ್ಲಾ ದೇಶಂಗಳಿಂದೆಲ್ಲಾ ಹೆಚ್ಚಿನ ಸುಖೀ ಕುಟುಂಬ ವ್ಯವಸ್ಥೆ ಹೊಂದಿಪ್ಪ ಸಮಾಜ ಇದ್ದರೂ ನಮ್ಮ ದೇಶ ಇಷ್ಟು ಶೋಚನೀಯ ಪರಿಸ್ಥಿತಿಲಿಪ್ಪಲೆ ಎಂತ ಕಾರಣ ಹೇಳುವ  ಚೋದ್ಯಕ್ಕೆ ಸಮಾಧಾನ ಹುಡುಕ್ಕುವ ಕೆಲಸ ಮನಸ್ಸಿನ ತೆರೆಯ ಮರೆಲಿ  ಸದಾ ನಡೆತ್ತಲೇ  ಇರ್ತು.  ಎಂತಾರು ಸಮಸ್ಯೆಯ ಜಾಡು ಹಿಡುಕ್ಕೊಂಡು ಹೋಗಿ, ಅದರ ಉದ್ದ ಅಗಲಂಗಳ ಮಾಪನ ಮಾಡಿ ಅಪ್ಪಗ, ಜನಿವಾರದ ಗೆಂಟು ಬಿಡಿಸಿದಷ್ಟೇ  ಸಮಾಧಾನ ಆವುತ್ತು.    ಹೀಂಗೆ ಈ ವಿಷಯಲ್ಲಿಯೂ  ಕೆಲವು ವಿಚಾರಂಗೊ ಮೂಡಿ ಬಂತು.   ನಿಜವಾದ ಅರ್ಥಲ್ಲಿ  ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಎಂತ ಸೂತ್ರಂಗಳ ಪಾಲಿಸೆಕ್ಕು ?  ಭೂತ ಮತ್ತು ಭವಿಷ್ಯದ ಸರಿಯಾದ ಸಮತೋಲನ ಇದ್ದರೆ,  ಯಾವಾಗಲೂ ವರ್ತಮಾನವ  ಒಳ್ಳೆಯ ರೀತಿಲಿ  ಅನುಭವಿಸಲೆ ಎಡಿಗಾವುತ್ತು ಹೇಳುದು ಜ್ಞಾನಿಗೊ ಹೇಳಿದ ಮಾತು.   ವೈಯಕ್ತಿಕ ನೆಲೆಲಿ ನೋಡಿರೆ, ಗತಜೀವನದ ಕೃತ್ಯಂಗಳ ಪಾಪಭೀತಿಯ ಕರಾಳಛಾಯೆ ಇಲ್ಲದ್ದೆ, ಬಪ್ಪಲಿಪ್ಪ ದಿನಂಗಳ ಅನಿಶ್ಚಿತತೆಯ  ಆತಂಕವೂ ಇಲ್ಲದ್ದೆ ಕಳವ ಇಂದಿನ ದಿನ ಅತ್ಯಂತ ಸುಖಕರವಾಗಿರ್ತಲ್ಲದಾ ? ಹಾಂಗೇ, ಭವ್ಯ ಚರಿತ್ರೆಂದ ಸ್ಪೂರ್ತಿ ಪಡಕ್ಕೊಂಡು,  ಉಜ್ವಲ ಭವಿಷ್ಯದ  ಕನಸಿನ ಹೊತ್ತುಗೊಂಡಿಪ್ಪ ಯುವಪೀಳಿಗೆಯ ಸೃಷ್ಟಿ ಮಾಡ್ಳೆಡಿಗಪ್ಪ ಒಂದು ಸಮಾಜ ಸದಾ  ಸ್ವಸ್ಥವಾಗಿಪ್ಪಲೆ ಸಾಧ್ಯ ಹೇಳಿ  ಎನಗೆ ಕಾಣ್ತು.  

ಈ ದೃಷ್ಟಿಂದ ನೋಡಿರೆ, ಒಂದು  ಸ್ವಸ್ಥ ಸಮಾಜಲ್ಲ್ಲಿ ೩ ವೃತ್ತಿಯವಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯ ಸಿಕ್ಕೆಕ್ಕಾವುತ್ತು ಹೇಳುವ ಎನ್ನ ಅಭಿಪ್ರಾಯವ ಇಲ್ಲಿ ಮಂಡಿಸುತ್ತೆ.  ಈ ೩ ವೃತ್ತಿಲಿಪ್ಪವು  ಅತ್ಯಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದವಾಗಿದ್ದುಗೊಂಡು  ಸಮಾಜದ ಗೌರವಕ್ಕೆ ಪಾತ್ರರಾಗಿಪ್ಪ ಯೋಗ್ಯತಾವಂತರಾಗಿರೆಕಾವುತ್ತು.  ಸಮಾಜದ  ಈ ವಿಶೇಷತ್ರಯರು  ಯಾರು ಹೇಳಿರೆ - ವೈದ್ಯರು, ಶಿಕ್ಷಕರು  ಮತ್ತೆ  ರಾಜಕಾರಣಿಗೊ. ಈಗ  ನಮ್ಮ ದೇಶಲ್ಲಿ ಈ ಮೂರು ಅತಿ ಮುಖ್ಯ ವೃತ್ತಿಯವರ ಅವಸ್ಥೆ ಎಂತದು ಹೇಳಿ ರಜ ವಿಮರ್ಶೆ ಮಾಡುವೊ.   

ವೈದ್ಯರು  :  ಸಮಾಜದ ಜನರ ದೈಹಿಕ ಸ್ವಾಸ್ಥ್ಯ ಕಾಪಾಡುವ ಮಹತ್ವದ ಜವಾಬ್ದಾರಿ ಹೊತ್ತುಗೊಂಡಿಪ್ಪ ಈ ವೃತ್ತಿಕ್ಷೇತ್ರಕ್ಕೆ  ಸೇವಾ ಮನೋಭಾವ ಇಪ್ಪವು ಮಾತ್ರ  ಹೋದರೆ ಎಲ್ಲೋರಿಂಗೂ ಕ್ಷೇಮ.  ಹೊತ್ತೋಪಗ ಪೈಸೆಯ ಪೆಟ್ಟಿಗೆ ಎಷ್ಟು ತುಂಬಿತ್ತು ಹೇಳಿ ಮಾತ್ರ ನೋಡುವವು ಅಥವಾ  ಮೀಸಲಾತಿಯ ಲಾಭ ಪಡಕ್ಕೊಂಡು ವೈದ್ಯರಾದವರಿಂದ ಎಂತ ಸೇವೆಯ ಅಪೇಕ್ಷೆ ಮಾಡ್ಳೆಡಿಗು ? ದೊಡ್ಡ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ವೃತ್ತಿ ಹೇಳುದು ಸೇವೆಯ  ಮಟ್ಟಂದ  ವ್ಯವಹಾರದ ಮಟ್ಟಕ್ಕೆ ಇಳುದು ಎಷ್ಟೋ ಸಮಯವೇ ಆತು.  ಹೆರಿಗೆಗೆ ಹೋದರೂ,  ವಿಮಾಕವಚದ ಮೊತ್ತ ಎಷ್ಟಿದ್ದು ಹೇಳಿ ಕೇಳಿಯೇ  ಕೆಲಸ ಸುರು ಮಾಡುವ ಕ್ರಮ ಈಗ ಮಾಮೂಲು.  ರಸ್ತೆ ಅಪಘಾತಲ್ಲಿ ಜಖಂ ಆಗಿ ಆಸ್ಪತ್ರೆಗೆ ಬಪ್ಪಗಳೇ ಸತ್ತು ಹೋದ ವ್ಯಕ್ತಿಯ ಸರ್ಜರಿ ಮಾಡ್ಳೆ ಹೆರಟು ಅಸಲು ಭಂಡವಾಳ ಬಯಲು ಮಾಡಿಸಿಗೊಂಡ  ಬೆಂಗ್ಳೂರಿನ ಒಂದು ಹೆಸರಾಂತ ಆಸ್ಪತ್ರೆಯ ಹೆಸರು ಹೇಳ್ಳುದೇ ಅಸಹ್ಯ ಆವುತ್ತು.  ಖಾಸಗಿ ವೈದ್ಯಂಗೊ ಆಂತೂ ಸಣ್ಣ ಸೆಮ್ಮ ಇದ್ದರೂ ಬಲವಂತಲ್ಲಿ ಹತ್ತಾರು ನಮುನೆ ಪರೀಕ್ಷೆ ಮಾಡಿಸಿ ರೋಗಿಗೊಕ್ಕೆ ಇಲ್ಲದ್ದ ಗಾಬರಿ ಹುಟ್ಟಿಸುವ ಪ್ರಯತ್ನವ ನಿರಂತರವಾಗಿ ಮಾಡಿಗೊಂಡೇ ಇದ್ದವು.    ವೈದ್ಯರ ತಯಾರು ಮಾಡುವ ಮಹಾವಿದ್ಯಾಲಯಂಗಳ ವಂತಿಗೆ, ವಿದ್ಯಾರ್ಥಿ ಶುಲ್ಕ, ಮತ್ತಿತರ ಖರ್ಚು-ವೆಚ್ಚಂಗಳಿಂದಲೇ ವೃತ್ತಿ ವ್ಯವಹಾರದ ಲೆಕ್ಕಾಚಾರ ಸುರು ಅಪ್ಪದು.  ಇನ್ನು, ವಿವಿಧ ನಮುನೆಯ ಆದ್ಯತೆಗಳ ಆಧಾರದ ಮೇಲೆ ಸುರು ಅಪ್ಪ ಹೆಚ್ಚಿನ  ವೈದ್ಯಕೀಯ ಕೋಲೇಜುಗಳಲ್ಲಿ  ಸುಸಜ್ಜಿತ ವ್ಯವಸ್ಥೆ ಆಗಲೀ, ಕಲಿಶುವ ಗುಣಮಟ್ಟ  ಆಗಲೀ ಇರ್ತಿಲ್ಲೆ.  ಇವುಗಳ ಎಲ್ಲ ಕಾನೂನುಪ್ರಕಾರ ನಿಯಂತ್ರಣ ಮಾಡುವ ಅವಕಾಶ  ಇದ್ದರೂ ಯಾವುದೂ ವ್ಯವಸ್ಥಿತವಾಗಿ ಇಲ್ಲೆ. 

ಶಿಕ್ಷಕರು :   ಕೇವಲ ಒಂದು ತಲೆಮಾರು ಮೊದಲು ಇತ್ತ ಶಿಕ್ಷಕರಿಂಗೂ ಈಗಾಣವಕ್ಕೂ ಇಪ್ಪ ವ್ಯತ್ಯಾಸ ನೋಡಿರೆ, ಈ ಅವಧಿಲಿ ನಮ್ಮ ಶಿಕ್ಷಣದ  ಅಧಃಪತನ ಎಷ್ಟಾಯಿದು ಹೇಳಿ ಗೊಂತಾವುತ್ತು.   ತಮಿಳುನಾಡಿನ ಹಳ್ಳಿಯ ಶಾಲೆಲಿ ಕಲ್ತದು ಹೇಳುವ  ಕಾರಣಂದ ವೆಂಕಟರಾಮನ್  ಹೇಳುವ ವ್ಯಕ್ತಿಲಿತ್ತ  ಪ್ರತಿಭೆಯ ಪೋಷಣೆಗೆ ಎಂತ ಕುಂದು ಬೈಂದಿಲ್ಲೆ.  ನೋಬೆಲ್  ಪ್ರಶಸ್ತಿಯೇ ಅವನ ಹುಡುಕ್ಯೊಂಡು  ಬಂತು.  ಈಗಾಣ ಕಲ್ಲಿನ ಗೋಡೆಯ,  ಅತಿ ನವೀನ, ಸಂಪೂರ್ಣ ಗಣಕೀಕೃತ, ಆಂಗ್ಲ ಮಾಧ್ಯಮದ ಮಹಾ ಬೋರ್ಡಿಂಗ್  ಶಾಲೆಗೊಕ್ಕೆ ಎಷ್ಟು ಜನ ನೋಬೆಲ್ ವಿಜ್ಞಾನಿಗಳ ತಯಾರಿಸುವ ಸಾಮರ್ಥ್ಯ ಇದ್ದು ? ಮೊದಲಾಣ ತಲೆಮಾರಿನವು ಮಹಾ ಬುದ್ಧಿವಂತರು,  ಈಗಾಣ ಮಕ್ಕೊ ಬರೀ ಬೋದಾಳಂಗೊ ಹೇಳಿ  ಎಂತ ಅಲ್ಲನ್ನೆ ?  ಹಾಂಗಾರೆ, ಮಕ್ಕೊ ಬೆಳವ ವಾತಾವರಣ ಸಂಪೂರ್ಣ ಬದಲಾಯಿದು, ಮಕ್ಕಳಲ್ಲಿ ಜ್ಞಾನದ ಹಸಿವು ಕಮ್ಮಿ ಆಯಿದು,   ಮಕ್ಕಳ ಧ್ಯಾನ ಅನಗತ್ಯವಾಗಿ ಬೇರೆ ಬೇರೆ  ದಿಕ್ಕುಗಳಲ್ಲಿ ಹೋವುತ್ತಾ ಇದ್ದು ಇತ್ಯಾದಿಯಾದ ಕಾರಣಂಗಳ ಹುಡುಕ್ಕಲಕ್ಕು.   ಎಲ್ಲದಕ್ಕಿಂತ ಹೆಚ್ಚಾಗಿ,   ಕಲಿಶುವ  ಜವಾಬ್ದಾರಿ ವಹಿಸಿಗೊಂಡವರ ಪೈಕಿ   ಮೀಸಲಾತಿಲಿ ಬಂದ  "ಆಸನ-ಹರಸೀಕೆರೆ" ಪಂಡಿತಂಗಳ ಸಂಖ್ಯೆ ಜಾಸ್ತಿ ಇದ್ದು.  ನಮ್ಮ ಸಮಾಜಕ್ಕೆ  ಶಿಕ್ಷೆ ಕೊಡುವ ಶಿಕ್ಷಕರ ಬದಲು, ಶಿಕ್ಷಣ ಕೊಡುವ ಶಿಕ್ಷಕರು ಬೇಕು.

ರಾಜಕಾರಣಿಗೊ :  ಬೇರೆ ಎಂತಕೂ ಆಗದ್ದವು ಮೊದಲು ರೌಡಿಗೊ ಅಪ್ಪದು. ಮತ್ತೆ,  ಖದ್ದರು ಆಂಗಿ ಹಾಕಿ ರಾಜಕಾರಣಿ ಆಗಿ ವೇಶ ಬದಲಾವಣೆ  ಮಾಡಿಗೊಂಬದು.  ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಅತ್ಯಂತ ಕಠೋರ ಸತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಲಿದ್ದುಗೊಂಡು ವಂಶ ಪಾರಂಪರ್ಯದ ಆಢಳಿತಕ್ಕೆ ಸಂಪೂರ್ಣ ಒಗ್ಗಿ ಹೋಗಿಪ್ಪ ಒಂದು ದೊಡ್ಡ ರಾಷ್ಟ್ರೀಯ ಪಕ್ಷವೇ ನಮ್ಮ  ದೇಶಲ್ಲಿದ್ದು.  ಆ ಒಂದು ವಂಶದವು ಹೇಂಗಿಪ್ಪ ಬೋಸ (ಬೋಸಿ)ಗೊ ಆದರೂ, ಅವೇ ಆ ಪಕ್ಷಕ್ಕೆ ನಾಯಕರು.   ನಾಯಕತ್ವ,  ದೂರದರ್ಶಿತ್ವ, ರಾಜಕೀಯ ಪರಿಪಕ್ವತೆ ಇತ್ಯಾದಿ ಸದ್ಗುಣಂಗೊ ಇರೆಕಾದ ರಾಜಕಾರಣಿಗಳಲ್ಲಿ ಸದ್ಯಕ್ಕೆ ನಿಜವಾಗಿ ಇಪ್ಪದು ಪೈಸೆಯ, ತೋಳಿನ (ರೌಡಿಗಳ) ಬಲ ಮಾಂತ್ರ.  ಹಾಂಗಾಗಿ ಯಾವುದೇ ಸಮಸ್ಯೆಗಾದರುದೇ ಮುಂದಾಲೋಚನೆಂದ ಪರಿಹಾರ ಕಂಡುಗೊಂಡ ಇಷ್ಟರವರೆಗಿನ ಉದಾಹರಣೆಗೊ ದೇವರದಯಂದ ಯಾವುದೂ  ನೆಂಪಾವುತ್ತಿಲ್ಲೆ.  ಸಮಸ್ಯೆ ದೊಡ್ಡ ಆಗಿ, ಇನ್ನು ತಡವಲೆಡಿಯ ಹೇಳುವಷ್ಟು ಬೆಳೆದ ಮೇಲೆಯೇ ಅದರ ಬಗ್ಗೆ ಎಂತಾರೂ ತಲೆಕೆಡಿಸಿಗೊಂಬ  ಕೆಲಸ ಸುರು ಅಪ್ಪದು.   ನಮ್ಮ ದೇಶಲ್ಲಿ ಅತ್ಯಂತ ಹೆಚ್ಚಿನ ಅಧಿಕಾರದ ಸವಲತ್ತುಗಳ ಅನುಭವಿಸಿಗೊಂಡಿದ್ದರೂ ಯಾವುದೇ ರೀತಿಯ ಉತ್ತರದಾಯಿತ್ವ ಇಲ್ಲದ್ದ ವೃತ್ತಿ ಹೇಳಿರೆ ರಾಜಕಾರಣಿಗಳದ್ದು.  ಭಾರತಮಾತೆ ಇಷ್ಟು ಬಂಜೆ ಏಕೆ ಆಗಿ ಹೋತು ? ಸಾಮರ್ಥಿಗೆ ಇಪ್ಪ ಒಬ್ಬನೇ ಒಬ್ಬ ಮುತ್ಸದ್ದಿ ಏಕೆ ಹುಟ್ಟಿ ಬತ್ತ ಇಲ್ಲೆ ?

ಇದೊಂದು ವಸ್ತು ಸ್ಥಿತಿಯ ಅವಲೋಕನದ ಪ್ರಯತ್ನ. ಹಾಂಗಾಗಿ ಋಣಾತ್ಮಕ ಆಂಶಂಗೊ ಧಾರಾಳ ಕಾಂಗು.  ಉದ್ಧಾರ ಅಪ್ಪಲೆ ಇದೊಂದೇ ದಾರಿ.  ಸಣ್ಣ ಸಣ್ಣ ನೀರಿನ ಹನಿಗೊ ಸೇರಿ ದೊಡ್ಡ ಹೊಳೆಯೇ ಅಪ್ಪ ಹಾಂಗೆ, ಸಮಾಜದ ಪ್ರತಿಯೊಬ್ಬನ  ಬಯಕೆಗಳೂ ಒಂದೇ ಆಗಿದ್ದರೆ, ಅದರಲ್ಲಿ ದಿವ್ಯ ಚೈತನ್ಯ ಇರ್ತು.  ಸಂವಹನಂದ ಸಂಚಲನ  ಉಂಟಾಗಲಿ ಹೇಳುವ ಸದಾಶಯದೊಂದಿಗೆ ಸದ್ಯಕ್ಕೆ ಅಲ್ಪ ವಿರಾಮ.

- ಬಾಪಿ / ೧೦.೧೦.೨೦೦೯

Wednesday, September 23, 2009

ಕಲ್ಪವೃಕ್ಷ

ಮನೆ ಕಟ್ಟುವ ಆಲೋಚನೆ ತಲೆಗೆ ಹೋದ ಮೇಲೆ, ಪುರುಸೊತ್ತು ಇಪ್ಪಗ ಎಲ್ಲಾ ನಮ್ಮ ಸುತ್ತ ಮುತ್ತ ಇಪ್ಪ ಮನೆಗಳ ಹೊರನೋಟ, ಒಳಾಣ ವಿನ್ಯಾಸ, ಕೋಣೆಗಳ ಗಾತ್ರ, ಗೋಡೆಯ ಬಣ್ಣ ಇತ್ಯಾದಿಗಳ ಗಮನಿಸುವ ಪ್ರಕ್ರಿಯೆ ಅನೈಚ್ಛಿಕವಾಗಿ ಸುರು ಆವುತ್ತು ಹೇಳುದು ಎನ್ನ ಸ್ವಂತ ಅನುಭವ.  ಯಾರಾದರೂ ಮಾರ್ಗಲ್ಲಿ ಹೋಪವು ಯಾವುದಾದರೂ ಮನೆಯ ತಿರುಗಿ ತಿರುಗಿ ನೋಡಿರೆ, ಅವು ಸ್ವಂತ ಮನೆ ಕಟ್ಟುಸುತ್ತಾ ಇದ್ದವು ಹೇಳಿಯೇ ಲೆಕ್ಕ ! ಹೀಂಗೆ ನೋಡಿ ಸಂಗ್ರಹಿಸಿದ, ಓದಿ ತಿಳಿದ ವಿಷಯಂಗಳ ಎಲ್ಲಾ ಕ್ರೋಢೀಕರಿಸಿದ  ಕನಸಿನ ಮನೆಯ ಒಂದು ನೀಲಿನಕ್ಷೆಯ ಕೊನೆಗೂ ನೋಡುವ ಹಾಂಗೆ ಅಪ್ಪಗ ಒಂದು ಸುದೀರ್ಘ ನಿಟ್ಟಿಸುರು ಬಿಡುವಷ್ಟು ಸುಸ್ತು ಆಗಿರುತ್ತು.   ಅಂತೂ,  "ಮನೆ ಕಟ್ಟಿ ನೋಡು" ಹೇಳುವ ಗಾದೆಯ ಅರ್ಥದ ಸರಿಯಾದ ಪರಿಚಯ ಅಪ್ಪದು ಅಂಬಗಳೇ. ಮನೆ ಕಟ್ಟುಸುಲೆ ಹೆರಟ ಗೆಂಡ-ಹೆಂಡತಿ ಆದರ್ಶ ದಂಪತಿ ಅಪ್ಪೋ ಅಲ್ಲದೋ ಹೇಳುವ ವಿಷಯದ ನಿಜವಾದ ಪರೀಕ್ಷೆ ಅಪ್ಪದೂ ಅಂಬಗಳೇ !  ಹೊಸ ಮನೆಗೆ ಸಂಬಂಧಿಸಿದ   ಇಂಚಿಂಚು ವಿವರಂಗಳನ್ನೂ ಕೂಲಂಕುಶ ವಿಮರ್ಶೆ ಮಾಡಿ, ತನ್ಮೂಲಕ  ಉದ್ಭವಿಸುವ ಎಲ್ಲಾ ಚರ್ಚೆ, ಜಗಳ, ಜಟಾಪಟಿ, ವೈಮನಸ್ಯಂಗಳನ್ನೂ ಮೀರಿ ಯಾವ  ದಂಪತಿ ಮುಂದೆ ಸಾಗುತ್ತವೋ, ಅಂಥವರ ಗಾಢವಾದ ಹೊಂದಾಣಿಕೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು.   

ಹೀಂಗೆ ಮನೆ ಬಗ್ಗೆ ಕಲೆಹಾಕಿದ ಮಾಹಿತಿಗಳ ಪೈಕಿ ಅತ್ಯಂತ ರೋಚಕವಾದ್ದು ಹೇಳಿರೆ, ಪೇಟೆಯ ಮನೆಗಳಲ್ಲಿ ಕಾಂಬಲೆ ಸಿಕ್ಕುವ  ತೆಂಗಿನ ಮರಂಗಳ ಕಥೆ.  ಎಷ್ಟು ಸಣ್ಣ ನಿವೇಶನ ಆದರೂ ತೆಂಗಿನ ಸೆಸಿಗೆ ಜಾಗೆ ಬಿಟ್ಟೇ ಹೆಚ್ಚಿನವು ಮನೆ ಕಟ್ಟುತ್ತವು. ಹಾಂಗೂ ಜಾಗೆ ಸಾಲದ್ದೆ ಬಂದರೆ, ಮನೆಂದ ಹೆರ ಮಾರ್ಗದ ಕರೆಲಿ ನೆರಳಿಂಗೆ ಹೇಳಿ ಸೆಸಿ ನೆಡುವ ಬದಲು ತೆಂಗಿನ ಸೆಸಿಯನ್ನೇ ನೆಡುವ ಪುಣ್ಯಾತ್ಮಂಗಳೂ ಇದ್ದವು.  ಮತ್ತೆ ಬೇರೆಯವರಿಂದ ಖಾಲಿ ನಿವೇಶನವ ಖರೀದಿಸಿದ ಅಸಾಮಿಗೊ  ಅಲ್ಲಿ ಮೊದಲೇ ಅಡ್ಡಾದಿಡ್ಡಿ ಬೆಳೆದ ತೆಂಗಿನ ಮರ ಏನಾರೂ ಇದ್ದರೆ, ಅದಕ್ಕೆ ಬೇಕಾಗಿ ಮನೆಯ ವಿನ್ಯಾಸಲ್ಲಿ ವಿಶೇಷ ಹೊಂದಾಣಿಕೆ ಮಾಡಿಗೊಂಬಲೂ ಹಿಂಜರಿತ್ತವಿಲ್ಲೆ    ಕೆಲವು ಕಡೆ,  ತೆಂಗಿನ ಮರ ಮೇಲೆ ಹೋಪಲೆ ಮನೆಯ ಚಾವಣಿಯ ಒಟ್ಟೆ ಮಾಡಿ ವ್ಯವಸ್ಥೆ ಮಾಡಿಕೊಟ್ಟ ಸೃಜನಶೀಲ ಶಿಖಾಮಣಿಗಳೂ ಇದ್ದವು.  ತೆಂಗಿನ ಸೆಸಿ ಬೆಳದು ಮರ  ಅಪ್ಪಗ ಅದರ ಬೇರುಗೊ ಹೊಕ್ಕು ಮನೆಯ ಕಾಂಪೌಂಡು  ಒಡದು ಹೋದ ದಾರುಣ ದೃಶ್ಯ ಸರ್ವೇಸಾಮಾನ್ಯ. ಮತ್ತೆ ಮರಂಗೊಕ್ಕೆ ಬೆಳಕು ಇಪ್ಪ ಹೊಡೆಂಗೆ  ಬೆಳವ ದುರ್ಬುದ್ಧಿ  ಇಪ್ಪ ಕಾರಣ, ಪೇಟೆಯ ಮರಂಗೊ ಸರ್ತ ಬೆಳವದು ಭಾರೀ  ಅಪರೂಪ.  ಹೆಚ್ಚಾಗಿ ಮರಂಗೊ ಅಕ್ಕ ಪಕ್ಕದ ಮನೆಗೊಕ್ಕೋ ಅಥವಾ ಮಾರ್ಗಕ್ಕೋ ಮಾಲಿಗೊಂಡೇ ಇಪ್ಪದು.

ತೆಂಗಿನ ಮರದ ಬಗ್ಗೆ ಇಷ್ಟು ಭ್ರಮೆ ಇಪ್ಪಲೆ ಎಂತ ಕಾರಣ ಆಗಿಕ್ಕು ಹೇಳುವ ಚೋದ್ಯ ಮನಸ್ಸಿನ ಕಾಡುತ್ತಲೇ ಇದ್ದು.  ಭೂಲೋಕಲ್ಲಿಪ್ಪಗ ಕಲ್ಪವೃಕ್ಷವ ಸಾಂಕಿದ ಪುಣ್ಯದ ಫಲಂದ ಸ್ವರ್ಗಕ್ಕೆ ಆದ್ಯತೆಯ  ಟಿಕೇಟು ಸಿಕ್ಕುಗು ಹೇಳುವ ಆಶೆ ಆಗಿಕ್ಕೋ ?  ಹಾಂಗಾರೆ, ಇಷ್ಟು ಧರ್ಮಿಷ್ಠರಾಗಿಪ್ಪವಕ್ಕೆ ತಾವು ನೆಟ್ಟ  ತೆಂಗಿನಮರಂಗಳಿಂದ  ಕಾಲಕಾಲಕ್ಕೆ ಕಸವು ಕೀಳುವ, ಒಣಕ್ಕಟೆ ಮಡಲು/ಕಾಯಿಗಳ   ತೆಗೆಶುವ ವ್ಯವಸ್ಥೆ ಮಾಡೆಕ್ಕು ಹೇಳುವ ಕನಿಷ್ಟ ಪರಿಜ್ಞಾನವೂ ಏಕೆ ಇರ್ತಿಲ್ಯೋ ?  ತೆಂಗಿನ ಕಾಯಿ ತಲಗೆ ಬಿದ್ದು ಸತ್ತರೆ ಸೀದಾ ಸ್ವರ್ಗಕ್ಕೆ ಹೋವುತ್ತು ಹೇಳುವ ಯಾವುದಾದರೂ ಪುರಾಣದ ದೃಷ್ಟಾಂತದ ಮೇಲಾಣ ಕುರುಡು ನಂಬಿಕೆಯೋ ಏನೋ ?  ಹಾಂಗೆ ಹೇಳಿ ಆದರೆ,   ನಡಕ್ಕೊಂದು ಹೋಪಗ ಎರಡು ಸರ್ತಿ  ಕೊಟ್ಟುಕಾಯಿ ತಲೆಯ ಮೇಲೆ ಬೀಳುದು ಸೆಕೆಂಡಿನ ಅಂತರಲ್ಲಿ ತಪ್ಪಿದ್ದದು ಎನ್ನ  ಪುಣ್ಯವೋ  ಅಥವಾ ಗ್ರಹಚಾರವೋ ಹೇಳುದು ಈಗ ದೊಡ್ಡ ಜಿಜ್ಞಾಸೆಯ ವಿಷಯವೇ ಆವುತ್ತು.   ಮತ್ತೆ, ತೆಂಗಿನ ಮರದ ಅಡಿಲಿ ನಿಲ್ಲಿಸಿದ ಎನ್ನ ಹಳತ್ತು ಕಾರಿನ ಗಾಜು ಹೊಡಿ ಆದ ಶುದ್ದಿಯ ಅನಗತ್ಯ ವಿವರಂಗಳ ಹೇಳಿ ಸುಮ್ಮನೆ  ಮರ್ಯಾದೆ ಕಳಕ್ಕೊಂಬ  ದುಃಸಾಹಸಕ್ಕೆ ಆನು ಖಂಡಿತ ಕೈಹಾಕುತ್ತಿಲ್ಲೆ.

ಈ ಸಂದರ್ಭಲ್ಲಿ ಎನ್ನ ಒಬ್ಬ ಗೆಳೆಯ ಬಾಲ್ಯಲ್ಲಿ ತೆಂಗಿನ ಮರದ ಬಗ್ಗೆ ಬರೆದ ಒಂದು ಪ್ರಬಂಧ ನೆಂಪು ಆವುತ್ತಾ ಇದ್ದು.  ಅದರಲ್ಲಿ ಅವ ತನಗಿಪ್ಪ ಸಮಸ್ತ ಜ್ಹಾನವನ್ನೂ ಧಾರೆ ಎರದು  ತೆಂಗಿನಮರದ ಸರ್ವ ಉಪಯೋಗಂಗಳನ್ನೂ ಎಳೆಎಳೆಯಾಗಿ ಬಿಡಿಸಿ ಬರದಿತ್ತಿದ್ದ. ಮಳೆಗಾಲಲ್ಲಿ ಕಾಲುನೀಡಿ ಕೂದುಗೊಂಡು ಸುಟ್ಟು ಹಾಕಿದ ಹಲಸಿನ ಹಪ್ಪಳಕ್ಕೆ ತೆಂಗಿನೆಣ್ಣೆ ಸವರಿ, ಕಾಯಿತುಂಡು ಸೇರಿಸಿ ತಿಂಬ ರುಚಿವಿಶೇಷ,  ಮನೆ ಜೆಂಬ್ರಲ್ಲಿ ತೆಂಗಿನ ಮಡಲು ಹಾಕಿದ ಜಾಲಿನ ಚಪ್ಪರದ ಒಳ ಕಂಬಾಟ ಆಡುವ ವಿಷಯ ಎಲ್ಲಾ ಸೇರಿದ ಅವನ ಬರವಣಿಗೆಯ ಶೈಲಿಗೆ ಮನಸೋತ ಶಾಲೆಯ  ಮಾಷ್ಟ್ರಂಗೆ ಕೆಲವು ಕ್ಷಣಕ್ಕಾದರೂ ತನ್ನ ಸ್ವಂತ ಬಾಲ್ಯಕ್ಕೆ ಮರಳಿದ ಮಧುರ ಅನುಭವ ಆಗಿಪ್ಪಲೇ ಬೇಕು.   ಆದರೆ ಎಷ್ಟೇ ಬರದರೂ ಮಾಷ್ಟ್ರ ಬರಕ್ಕೊಂಡು ಬಪ್ಪಲೆ ಹೇಳಿದ ಒಂದು ಪುಟ  ಭರ್ತಿ ಆಗದ್ದ ಕಾರಣ, ಈ ಮಾಣಿ ಇನ್ನೂ ರಜ ಬುದ್ಧಿವಂತಿಕೆ ಉಪಯೋಗಿಸಿದ.  ಒಳುದ ಅರ್ಧ ಪುಟಲ್ಲಿ ತೆಂಗಿನ ಮರದ ಬುಡಲ್ಲಿ ತಾಡುವ ದನಂಗಳ ಕಟ್ಟಿ ಹಾಕುವ ವಿಷಯ ನೆಂಪಾಗಿ ಅದರ ಬಗ್ಗೆ  (ದನದ ಕೊಂಬಿನ ವರ್ಣನೆಯೂ ಸೇರಿ) ಸುಮಾರು ವಿವರಂಗಳ ಸೇರಿಸಿದ.  ಹಾಂಗೇ ಮುಂದುವರುದು, ದನದ ಹಾಲು ಮತ್ತದರ ವಿವಿಧ ಉತ್ಪನ್ನಂಗೊ,  ಗೊಬ್ಬರ ಮತ್ತು ಸಾವಯವ ಕೃಷಿ ಇತ್ಯಾದಿ ಸಕಲ ವಿಷಯಂಗಳನ್ನೂ ಒಳಗೊಂಡ  ಮಹಾಪ್ರಬಂಧವನ್ನೇ ಮಂಡಿಸಿಬಿಟ್ಟ.  ಕೊನೆಗೂ ಅದರ ಓದಿ ಮುಗಿಶಿ ಅಪ್ಪಗ  ಅರ್ಜುನಂಗೆ ಆದ ವಿಶ್ವ ರೂಪ ದರ್ಶನದ ಅನುಭವವೇ ಎನಗುದೇ ಆತು.   ಎನಗೆ ಕನ್ನಡ ಸಾಹಿತ್ಯ ಪ್ರಪಂಚದ ಮೊತ್ತ ಮೊದಲ ಪರಿಚಯ ಆದ್ದದು ಈ ಪ್ರಬಂಧದ ಮೂಲಕವೇ ಹೇಳಿ ನಿಸ್ಸಂಕೋಚವಾಗಿ ಹೇಳ್ಳಕ್ಕು.

- ಬಾಪಿ / ೨೩.೦೯.೨೦೦೯

Monday, September 21, 2009

ಶ್ವಾನಪ್ರಿಯರು

ಒಂದರಿ ಒಂದು ನಾಯಿ ಉಸುಲು ಕಟ್ಟಿ, ಜೀವ ಬಿಟ್ಟು ಓಡಿಗೊಂಡಿತ್ತಡ.  ಅದರ ಕಂಡು ಇನ್ನೊಂದು ನಾಯಿ, "ಎಂತ ಸಂಗತಿ ? ಎಂತಕೆ ಮರ್ಲು ನಾಯಿ ಕಚ್ಚಿದವರ  ಹಾಂಗೆ ಓಡುತ್ತಾ ಇದ್ದೆ ?" ಹೇಳಿ ಕೇಳಿತ್ತಾಡ. ಅಂಬಗ ಈ ನಾಯಿ, "ಸಂಗತಿ ಎಂತ ಹೇಳಿರೆ, ಹತ್ರಾಣ ಮಾರ್ಗಲ್ಲಿ ಒಂದು ಹೊಸ ಕರೆಂಟಿನ ಕಂಬ ನೆಟ್ಟಿದವಡ. ಅದರ ಉದ್ಘಾಟನೆ ಮಾಡುವೊ ಹೇಳಿ ಹೋವುತ್ತಾ ಇದ್ದೆ.   ಸುಮ್ಮನೆ ಕೊರಪ್ಪಿ, ಗೌಜಿ ಮಾಡಿ ಎಲ್ಲಾ ನಾಯಿಗೊಕ್ಕೂ ಗೊಂತಪ್ಪ ಹಾಂಗೆ ಮಾಡೆಡ, ನೀನು ಬೇಕಾರೆ ಎನ್ನೊಟ್ಟಿಂಗೆ ಬಾ"  ಹೇಳಿತ್ತಾಡ.  

ಇತ್ತೀಚೆಗೆ ಬೆಂಗ್ಳೂರು ಮಹಾನಗರಲ್ಲಿ ಕಾಟು ನಾಯಿಗಳ ಹಾವಳಿ ತಡವಲೆಡಿಯದ್ದೆ ಸಾರ್ವಜನಕರಿಂಗೆ ತೊಂದರೆ ಆಗಿಪ್ಪಗ ಸರಕಾರದವು ನಾಯಿಗಳ ಹಿಡಿವ ಕೆಲಸಲ್ಲಿ ವಿಶೇಷ ತರಬೇತಿ ಇಪ್ಪವರ  ಕೇರಳಂದ  ಬಪ್ಪಲೆ ಮಾಡಿ   ಉಪದ್ರ ಕೊಡುವ ನಾಯಿಗಳ ಹಿಡಿದು ಗೂಡುಗಳಲ್ಲಿ ತುಂಬಿಸಿ ತೆಕ್ಕೊಂಡು ಹೋಪ ವ್ಯವಸ್ಥೆ ಮಾಡಿತ್ತಿದ್ದವು.   "ಕಚ್ಚುದು ನಾಯಿಗಳ ಹುಟ್ಟುಗುಣ" ಹೇಳುವ ಸಾಮಾನ್ಯಜ್ಞಾನವುದೇ ಇಲ್ಲದ್ದೆ ತಮ್ಮ ಮೇಲೆ ದೌರ್ಜನ್ಯ ಎಸಗುತ್ತಾ ಇಪ್ಪ ಸರಕಾರದ ವರ್ತನೆಯ ಖಂಡಿಸಿ ಠರಾವು ಮಂಡನೆ ಮಾಡುದರ ಮೂಲಕ ಅಸಮಾಧಾನ ವ್ಯಕ್ತಪಡಿಸುಲೆ ಹೇಳಿ ಅಖಿಲ ಭಾರತ ಶ್ವಾನ ಹಿತರಕ್ಷಣಾ ಸಮಿತಿ (ನೋಂ) - ಇವು  ಬೆಂಗ್ಳೂರಿಲ್ಲ್ಲಿಒಂದು ಮಹಾಸಭೆಯ  ಏರ್ಪಡಿಸಿದವಡ.  ಸಮ್ಮೇಳನದ ಶುಭದಿನದಂದು ಭಾರತದ ಎಲ್ಲಾ ಪ್ರದೇಶಂಗಳಿಂದ ವಿವಿಧ ರೀತಿಲಿ ಕೊರಪ್ಪುವ, ಬೇರೆ ಬೇರೆ ಬಣ್ಣ, ಗಾತ್ರದ ನಾಯಿಗೊ ಬಂದು ಸೇರಿದವಡ.  ಇಷ್ಟೆಲ್ಲಾ ವಿಭಿನ್ನತೆ ಇದ್ದರೂ ಸೇರಿದ ನಾಯಿಗೊ ಎಲ್ಲಾ ತಮ್ಮ ಸಂಪ್ರದಾಯದ ರೀತಿಲಿ ಬೀಲ ಆಡಿಸಿ ಉಭಯ ಕುಶಲೋಪರಿ ವಿಚಾರಿಸಿಗೊಂಡಿತ್ತಿದವಡ.  ಆದರೆ, ಕೆಲವು ನಾಯಿಗೊ ಮಾತ್ರ ಸಂಪ್ರದಾಯಕ್ಕೆ ಅಪಚಾರ ಹೇಳಿ ಕಾಂಬ ಹಾಂಗೆ ಬೀಲವ ಮೇಲಂದ ಕೆಳಂಗೆ ಆಡಿಸಿಗೊಂಡಿತ್ತಿದ್ದವಡ.  ಇದರ ಕಂಡು ಸಮ್ಮೇಳನದ ಸ್ವಾಗತ ಸಮಿತಿಯವಕ್ಕೆ ಇವು ಬ್ಯಾರಿಗಳ ದೇಶಂದ ಬೇಲಿನುಗ್ಗಿ ಬಂದ  ಗೂಢಚಾರಿಗೊ ಆಗಿಕ್ಕೋ ಹೇಳಿ ರಜ ಅನುಮಾನ ಬಂದು, ಆ ನಾಯಿಗಳ ಸಮ್ಮೇಳನದ ಚಪ್ಪರಂದ ಅತ್ಲಾಗಿ ಕರಕ್ಕೊಂಡು ಹೋಗಿ, "ನಿಂಗೊ ಯಾವ ಸೀಮೆಯವು ? ನಿಂಗಳ ಬೀಲ ಆಡಿಸುವ ಕ್ರಮ ತುಂಬಾ ವಿಚಿತ್ರ ಕಾಣ್ತನ್ನೆ  ?" ಹೇಳಿ ಜೋರಿಲ್ಲಿ ಕೊರಪ್ಪಿ ಕೇಳಿದವಡ. ಅಷ್ಟಪ್ಪಗ ಅವು, "ಎಂಗೊ ಬೊಂಬಾಯಿಂದ ಬಂದವು. ಎಂಗಳದ್ದುದೇ ಮೂಲಲ್ಲಿ ನಿಂಗಳ ಸಂಪ್ರದಾಯದವೇ. ಆದರೆ, ಬೊಂಬಾಯಿಲಿ ಎಂಗೊಗೆ ಜನಸಾಂದ್ರತೆಂದಾಗಿ ಅಡ್ಡಡ್ಡ ಬೀಲ ಆಡಿಸುಲೆ ಜಾಗೆ ಸಾಕವುತ್ತಿಲ್ಲೆ. ಹಾಂಗಾಗಿ ಮೇಲಂದ ಕೆಳಂಗೆ   ಆಡಿಸುತ್ತೆಯೊ. ಎಷ್ಟೋ ತಲೆಮಾರಿಂದ ಅಲ್ಲಿಯೇ ಇಪ್ಪ ಕಾರಣ ಈಗ ಇದುವೇ ಅಭ್ಯಾಸ ಆಗಿ ಹೋಯಿದು.  ಕ್ಷಮಿ ಸೆಕ್ಕು"  ಹೇಳಿದವಡ.

ಈ ಶ್ವಾನ ಕಥಾಪಠನ ಎಂತಕೆ ಮಾಡಿದ್ದದು ಹೇಳಿರೆ, ದಿನಾ ಮಾಡುವ ಕಾಲ್ನಡಿಗೆಯ ವ್ರತಾಚರಣೆಯ ಸಂದರ್ಭಲ್ಲಿ ಸುಮಾರು ಶ್ವಾನಪ್ರಿಯರು ಕಾಂಬಲೆ ಸಿಕ್ಕುತ್ತವು.  ಇವರ ಒಟ್ಟಿಂಗೆ ಇಪ್ಪ ಭಯಂಕರ ಗಾತ್ರದ ನಾಯಿಗೊ ದೊಡ್ಡ ಹೊಟ್ಟೆಯ ತಮ್ಮ ಯಜಮಾನಂಗಳನ್ನೇ ಎಳಕ್ಕೊಂಡು ಹೋವುತ್ತಾ ಇಪ್ಪ ದೃಶ್ಯ ನೋಡ್ಳೆ ಭಾರೀ ಗಮ್ಮತಿರ್ತು.  ಕೆಲವು  ನಾಯಿಗೊಕ್ಕೆ ಸಂಕೋಲೆಯುದೇ ಇರ್ತಿಲ್ಲೆ. ಯಜಮಾನಂಗೊಕ್ಕೆ ತಮ್ಮ ನಾಯಿಗಳ ಮೇಲೆ ಅಷ್ಟುದೇ ಭರವಸೆ ! ಹೀಂಗೆ ಸಂಕೋಲೆ ಇಲ್ಲದ್ದ ನಾಯಿಗೊ ಎದುರು ಸಿಕ್ಕಿದರೆ, ನಿಜವಾಗಿ ವ್ಯಾಯಾಮಕ್ಕೋಸ್ಕರ ಕಾಲ್ನಡಿಗೆ ಮಾಡುವ ಎನ್ನ ಹಾಂಗಿಪ್ಪ ಪಾಪದವಕ್ಕೆ ಪ್ರಾಣಭಯಂದ ಎದೆಬಡಿತ ಜಾಸ್ತಿ ಆವುತ್ತು.  ನಾಯಿಗೊಕ್ಕೆ  ಸ್ವಾಮಿಭಕ್ತಿ ಇಪ್ಪದು ಅಶನ ಹಾಕುವವರ  ಮೇಲೆ ಮಾಂತ್ರ, ದಾರಿಲಿ ಹೋಪವರ ಮೇಲೆ ಎಲ್ಲ ಎಂತ ಪ್ರೀತಿ ಇರ್ತಿಲ್ಲೆ ಹೇಳುವ ಸಾಮಾನ್ಯಜ್ಞಾನ ಇಲ್ಲದ್ದ ಶ್ವಾನಪ್ರಿಯ ಯಜಮಾನಂಗಳ ಮೇಲೆ ವಿಪರೀತ ಕೋಪ ಬತ್ತು. 

ಇನ್ನು, ನಾಯಿಗಳ ಹೆರ ಕರಕ್ಕೊಂಡು ಹೋಗಿ ತಿರುಗುಸುವ ಮೂಲ ಉದ್ದೇಶ ವ್ಯಾಯಾಮ ಅಥವಾ ಸ್ವಚ್ಚ ಹವಾಸೇವನೆ ಆಂತೂ ಖಂಡಿತ ಅಲ್ಲ ಹೇಳುದು ಗುಟ್ಟಿನ ಸಂಗತಿ ಎಂತ ಅಲ್ಲ.  ಈ ನಾಯಿಗೊಕ್ಕೆ  ಎಂತಲ್ಲ ತಿಂಬಲೆ ಕೊಡುತ್ತವು ಹೇಳಿ ಗೊಂತಿಲ್ಲೆ.  ಅವು ಒಂದೊಂದು ಹೆಡಗೆ ಹೇಸಿಗೆ ಮಾಡಿ ಮಡುಗುತ್ತವು. ಇದರ ಮನೆಲಿ ಒತ್ತರೆ ಮಾಡ್ಲೆ ಪುರುಸೊತ್ತು ಆಗದ್ದ ಕಾರಣ, ಮಾರ್ಗದ ಕರೆಲಿ ಗಲೀಜು  ಮಾಡಿಸಿ  ತಮ್ಮ ಕೆಲಸ ಸುಲಭ ಮಾಡಿಗೊಂಬ ಬೇಜವಾಬ್ದಾರಿ ವ್ಯಕ್ತಿಗಳೇ ಇಂತಹ ಯಜಮಾನಂಗೊ.  ಬೇರೆಯವರ ಮನೆಯ ಗೇಟಿನ ಬುಡಲ್ಲಿ, ಅವು ಹಾಕಿದ ರಂಗೋಲಿಯ ಮೇಲೆಯೇ  ತಮ್ಮ ನಾಯಿಗೊ  ಹೇಸಿಗೆ ಮಾಡುದರ ನೋಡಿ ಖುಷಿ ಪಡುವ ವಿಘ್ನ ಸಂತೋಷಿಗಳೂ ಧಾರಾಳ ಇದ್ದವು.   ಎನ್ನ ವಾಹನವ ಮಾರ್ಗದ ಕರೆಲಿ ನಿಲ್ಲಿಸಿಪ್ಪಗ  ಅದರ  ಗಾಲಿಯ ಮೇಲೆ ಶ್ವಾನಮೂತ್ರಸಿಂಚನ ಆಗದ್ದ ದಿನ ಅಪರೂಪ  ಹೇಳ್ಳಕ್ಕು.   ಹೀಂಗಿಪ್ಪ ಮೂರ್ಖ, ಸಮಾಜದ್ರೋಹಿ ಶ್ವಾನಪ್ರಿಯರ  ನಡವಳಿಕೆ ನೋಡಿರೆ, ತಮ್ಮ ಮುಂದಿನ ಜನ್ಮಲ್ಲಿ ನಾಯಿ ಆಗಿ ಹುಟ್ಟುಲೆ ಈಗಲೇ ತಾಲೀಮು ನಡೆಸುತ್ತಾ ಇಪ್ಪ ಹಾಂಗೆ ಕಾಣ್ತು.

ಈ ವಿಷಯಕ್ಕೆ ಸಂಬಂಧ ಪಟ್ಟ ಹಾಂಗೆ, ಅಮೆರಿಕಾಕ್ಕೆ ಹೋಗಿಪ್ಪಗಾಣ ಒಂದು ಅನುಭವವ ಹೇಳಲೇ ಬೇಕು. ಎನ್ನ ನಯಾಗರಾಕ್ಕೆ ಕರಕ್ಕೊಂಡು ಹೋದ ಸಹೋದ್ಯೋಗಿ ಮಿತ್ರ ಒಬ್ಬ ಪರಸ್ಪರರ ಸ್ವಂತ ಜೀವನದ ವಿಷಯ ಪ್ರಸ್ತಾಪ ಮಾಡಿಗೊಂಡಿಪ್ಪಗ, ತನ್ನ ಒಂಟಿ ಜೀವನದ ಸಂಗಾತಿಯಾದ ೧೨ ವರ್ಷದ ನಾಯಿಯ ವಿಷಯವ ಅರ್ಧ ಘಂಟೆಯಷ್ಟು ದೀರ್ಘ ಕಾಲ ಅತ್ಯಂತ ಹೆಮ್ಮೆಂದ ವಿವರಿಸಿದ. ನಾವು ಮನೆಯ ಮಕ್ಕಳ ವಿಷಯಲ್ಲಿ  ವಹಿಸುವಷ್ಟೇ ಕಾಳಜಿ ಅವನ ನಾಯಿಯ ಕುರಿತಾದ ವಿವರಣೆಲಿಯೂ ಕಂಡತ್ತು.    ಆ ನಾಯಿ  ಹೇಂಗೆ ಅವನ ಜೀವನದ ಒಂದು  ಅವಿಭಾಜ್ಯ  ಅಂಗವೇ  ಆಗಿ ಹೋಯಿದು ಹೇಳುದು ಅವನ ಕಥೆಯ ಸಾರಾಂಶ.   ಎಲ್ಲಾ ಶ್ವಾನ ಪ್ರಿಯರಿಂಗೂ ತಮ್ಮ ಸಾಕುಪ್ರಾಣಿಗಳ ಮೇಲೆ ಇಷ್ಟೇ ನೈಜವಾದ ಪ್ರೀತಿ ಇಕ್ಕು.   ಆದರೆ, ಆ ಪ್ರೀತಿಯ ಸಮಾಜಲ್ಲಿಪ್ಪ ಬೇರೆಯವಕ್ಕೆ ತೊಂದರೆ ಆಗದ್ದ ಹಾಂಗೆ ನಿಭಾಯಿಸುವ ಅಭ್ಯಾಸ ಮಾಡೆಕ್ಕು ಹೇಳಿ ಏಕೆ ಗೊಂತಾವುತ್ತಿಲ್ಲೆ ?      

ಶ್ವಾನಂಗಳ ಸ್ವಾಮಿನಿಷ್ಠೆಯನ್ನೇ ತಮ್ಮ ಸಂಸ್ಥೆಯ ಲಾಂಛನವಾಗಿ ಮಾಡಿಗೊಂಡ ಸಿಂಡಿಕೇಟ್ ಬ್ಯಾಂಕಿನ  ಆಢಳಿತವರ್ಗಕ್ಕೆ ಅಭಿನಂದನೆ ಹೇಳಲೇ ಬೇಕು.   ಆದರೆ,  ಸದರಿ ಬ್ಯಾಂಕಿನ ನೌಕರರು ಬ್ಯಾಂಕಿಂಗೆ ಬಂದ ಗ್ರಾಹಕರ ಕಂಡು  ನಾಯಿಗಳ ಹಾಂಗೆ ಕೊರಪ್ಪುತ್ತಾ ಇಪ್ಪದರ ನೋಡಿರೆ, ಇವು ತಮ್ಮ ಬ್ಯಾಂಕಿನ ಲಾಂಛನದ ಮೂಲ ಕಲ್ಪನೆಯ ತಪ್ಪು ಗ್ರಹಿಕೆ ಮಾಡಿಗೊಂಡಿಪ್ಪದು ಸ್ಪಷ್ಟ ಆಪ್ಪದಲ್ಲದ್ದೆ, ಅವರ  ಮುಗ್ಧತೆ ಬಗ್ಗೆ ಕನಿಕರ ಹುಟ್ಟುತ್ತು.  ಕೊನೆಯದಾಗಿ,  ಮೂಕಪ್ರಾಣಿಯಾದ ಶ್ವಾನದ ಪರವಾಗಿ ಒಂದು ಮನವಿ  :  ವಿಶ್ವಾಮಿತ್ರ ನಾಯಿ ಮಾಂಸ ತಿಂದ  ಪುರಾಣದ ಕಥೆಯ ಸತ್ಯಾಸತ್ಯತೆ ಬಗ್ಗೆ  ಒಂದು ನಿಷ್ಪಕ್ಷವಾದ ತನಿಖೆ ಆಯೆಕ್ಕು ಹೇಳಿ ಇತಿಹಾಸಕಾರರ ಆನು ಆಗ್ರಹ ಪೂರ್ವಕವಾಗಿ ಕೇಳಿಗೊಳ್ತೆ.   ಇದರ ಒಟ್ಟಿಂಗೇ, ಶ್ವಾನ ಮಾಂಸ ಭಕ್ಷಣೆಯ ನಂತರ ವಿಶ್ವಾಮಿತ್ರನ ವರ್ತನೆಲಿ ಎಂತಾರೂ ವ್ಯತ್ಯಾಸ ಕಂಡು ಬಂದಿತ್ತೋ, ಶ್ವಾನ ಜ್ವರದ ಬಾಧೆ  ಎಂತಾರೂ ಬಂದಿತ್ತೋ ಹೇಳುವ ವಿಷಯದ ಬಗ್ಗೆಯೂ  ವಿವರಂಗಳ ಬಹಿರಂಗ  ಪಡಿಸೆಕ್ಕು ಹೇಳಿ ವಿನಂತಿ ಮಾಡಿಗೊಳ್ತೆ .

- ಬಾಪಿ / ೨೧.೦೯.೨೦೦೯

Saturday, September 19, 2009

ಭಿನ್ನತೆಲಿಪ್ಪ ಏಕತೆ

ಇತ್ತೀಚೆಗೆ ಬೆಂಗ್ಳೂರಿನ ಹೊರವಲಯಲ್ಲಿ ಇಪ್ಪ ಒಂದು ಚರ್ಚಿನ ಮೇಲೆ ಯಾರೋ ಕಲ್ಲು ಇಡ್ಕಿ ರಜ ಗಲಾಟೆ ಆತು.  ಕಲ್ಲು ಇಡ್ಕಿದವು ಅವರವರ ಮನೆಗೆ ಹೋಗಿ  ಚಿಲಕ ಹಾಕಿ ಮನುಗುವಂದ  ಮೊದಲೇ ಸಿದ್ದರಾಮಯ್ಯ (ಯಾವ ವಿಷಯಕ್ಕೇ ಆದರೂ ಪ್ರತಿಕ್ರಿಯೆ ಎಂತ ಕೊಡೆಕ್ಕು ಹೇಳುದರ ಹುಟ್ಟುವಗಳೇ  "ಸಿದ್ಧ” ಮಾಡಿಗೊಂಡು ಬಂದ ಕಾರಣ ಇವಂಗೆ ಈ  ಹೆಸರು ತುಂಬಾ ಒಂಬುತ್ತು) ಮತ್ತು ದೇವೇಗೌಡನ ಹಾಂಗಿಪ್ಪ ರಾಜಕಾರಣಿಗೊ, ಯೆಡ್ಯೂರಪ್ಪ ರಾಜಿನಾಮೆ ಕೊಡೆಕು ಹೇಳಿ ಬೊಬ್ಬೆ ಹಾಕಿದವು.  ಈ ಘಟನೆಂದ ಕೇವಲ ಎರಡು ದಿನ ಮೊದಲು  ಸುಮಾರು ವರ್ಷ ಇಂದಿರಾಗಾಂಧಿಯ ಮನೆಲಿ ಪರಿಕರ್ಮಿ ಆಗಿ ಸಲ್ಲಿಸಿದ ಸೇವೆಯ ಪ್ರತಿಫಲವಾಗಿ ಕರ್ನಾಟಕದ ರಾಜ್ಯಪಾಲ ಆದ ಹನ್ಸರಾಜ್  ಭಾರದ್ವಾಜ್  ಹೇಳುವ ವ್ಯಕ್ತಿಯುದೇ ಕರ್ನಾಟಕಲ್ಲಿ ಅಲ್ಪಸಂಖ್ಯಾತರಿಂಗೆ ಭದ್ರತೆ ಇಲ್ಲೆ ಹೇಳುವ ಹೇಳಿಕೆ ಕೊಟ್ಟು ಶುದ್ದಿ ಮಾಡಿತ್ತಿದ್ದ.    ಶ್ರೀಕೃಷ್ಣ ಪರಮಾತ್ಮ  ಮತ್ತೆ ಮತ್ತೆ ಹುಟ್ಟಿ ಬತ್ತೆ  ಹೇಳಿದ್ದು  ಧರ್ಮ ಸಂಸ್ಥಾಪನೆಯ ಹಾಂಗಿಪ್ಪ ಘನ ಉದ್ದೇಶಕ್ಕಾದರೆ, ಈ ಮೇಲೆ ಹೆಸರಿಸಿದ ವ್ಯಕ್ತಿಗೊ   (ಇನ್ನು ತಿರುಗ ಹುಟ್ಟಿ ಬಪ್ಪಲಿಲ್ಲೆ ಹೇಳುದು ಖಂಡಿತ ಆದ ಕಾರಣ, ಬಂದರೂ ಮನುಷ್ಯ ಜಾತಿಲಿ ಬಪ್ಪದು ಸಂಶಯ ಆದ ಕಾರಣ) ಈ ಸರ್ತಿಲಿಯೇ  ನಮ್ಮ ಭರತಖಂಡಲ್ಲಿ  ಅಲ್ಪಸಂಖ್ಯಾತರ ಹಿತರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮುಗಿಶಿಕ್ಕಿಯೇ ಹೋಪೊ ಹೇಳಿ ದೃಢ ಸಂಕಲ್ಪ ಮಾಡಿದ ಹಾಂಗೆ ಕಾಣ್ತು. 

ಆಸ್ಟ್ರೇಲಿಯಾದ   ಪ್ರಧಾನ ಮಂತ್ರಿ ತನ್ನ ದೇಶ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯಂಗಳ ಮೇಲೆ   ನಂಬಿಕೆ ಮಡಿಕ್ಕೊಂಡು ಅದರಂತೆ ಆಢಳಿತ ನಡೆಶಿಗೊಂಡು ಹೋಪ ದೇಶ ಹೇಳಿಯೂ, ಬೇರೆ ಧರ್ಮೀಯರಿಂಗೆ ಅಲ್ಲಿ ಇಪ್ಪಲೆ ಮುಕ್ತ ಅವಕಾಶ ಇದ್ದರೂ ಕ್ರಿಶ್ಚಿಯನ್  ನಂಬಿಕೆಗೊಕ್ಕೆ ಧಕ್ಕೆ ಅಥವಾ ಅವಮಾನ ಆಗದ್ದ ಹಾಂಗೆ ಜೀವನ ಮಾಡೆಕ್ಕು ಹೇಳುವ  ಹೇಳಿಕೆ (ಬೆದರಿಕೆ)ಯ ಘಂಟಾಘೋಷವಾಗಿ ಹೇಳಿದ್ದದು ಜಗಜ್ಜಾಹೀರು ಆಯಿದು.   ಒಂದು ದೇಶಲ್ಲಿ ಶಾಂತಿ ಕಾಪಾಡುಲೆ ಇದರಿಂದ ಸುಲಭ ಉಪಾಯ ಬೇರೆ ಎಂತ ಇದ್ದು ? ಹೆರಂದ ಬಂದವು ಹೇಂಗಿರೆಕೋ ಹಾಂಗೇ ಇದ್ದರೆ ಚಂದ.  ಶ್ರೀಲಂಕಲ್ಲಿ ತಮಿಳರು ಬೀಲ ಬಿಚ್ಚಲೆ ಹೋಗಿ ಇದ್ದಷ್ಟು ದಿನ ಊರವಕ್ಕೆಲ್ಲಾ ಉಪದ್ರ ಕೊಟ್ಟು ಅಖೇರಿಗೆ ಕೈಸುಟ್ಟುಗೊಂಡ ಕಥೆ ಎಲ್ಲೋರಿಂಗೂ ಗೊಂತಿಪ್ಪದೇ.  ಭಾರತಲ್ಲಿ ಮಾಂತ್ರ ಬಹುಸಂಖ್ಯಾತರು ಬೇರೆಯವಕ್ಕಾಗಿ ತ್ಯಾಗ ಮಾಡಿಗೊಂಡು, ಎಂತ ಮಾಡಿರೆ ಯಾರಿಂಗೆ ಬೇಜಾರ ಅಕ್ಕೋ ಹೇಳಿ ಜಾಗ್ರತೆ ಮಾಡಿಗೊಂಡು ಹೀನಾಯವಾಗಿ ಬದುಕ್ಕೆಕ್ಕಾದ ಪರಿಸ್ಥಿತಿ ಇಪ್ಪದು.  ಸಮಾಜ, ದೇಶಕ್ಕಿಂತ ಮೊದಲು ತಮ್ಮ ಸ್ವಂತ ಹಿತವ ನೋಡುವ ರಾಜಕಾರಣಿಗೊ ನಮ್ಮಲ್ಲಿ ಇಪ್ಪದೇ ಇದಕ್ಕೆಲ್ಲಾ ಕಾರಣ ಹೇಳುವ ಸತ್ಯ  ಸಂಗತಿಯ ಪದೇ ಪದೇ ಹೇಳಿ ದೊಂಡೆ  ಒಣಗಿಸಿ ಗೊಂಬ ದುರ್ದೆಸೆ ನಮ್ಮದಾಗಿ ಹೋತು. ಎಂತ ಮಾಡುದು ?

ಈಗ ತಿರುಗ ಚರ್ಚಿನ ಮೇಲೆ ಆದ ಧಾಳಿಯ ವಿಷಯಕ್ಕೆ ಬಪ್ಪೊ.  ರಾಜಕಾರಣಿಗೊ ಅಷ್ಟೆಲ್ಲಾ ಬೊಬ್ಬೆ ಹಾಕುತ್ತಾ ಇದ್ದರೂ ಆ ಚರ್ಚಿನ ಪಾದ್ರಿಗೊ ಯಾರೂ ಎಂತದೂ ಬಾಯಿ ಬಿಟ್ಟಿದವಿಲ್ಲೆ. ಅದಾಗಿ ಎರಡು ದಿನಲ್ಲಿ ಆ ಘಟನೆ  ಸದ್ರಿ ಚರ್ಚಿಂಗೆ ಬಪ್ಪ ಎರಡು ಗುಂಪುಗಳ ಮಧ್ಯದ ವೈಮನಸ್ಯಂದ ಆದ ಸಂಗತಿ ಹೇಳುದು ಬಹಿರಂಗ ಆತು.  ನಿಜ ವಿಷಯ ಎಂತ ಹೇಳಿರೆ, ಹಿಂದೂ ಧರ್ಮಲಿಪ್ಪ ಮೂರ್ತಿಪೂಜೆ ಇತ್ಯಾದಿಗಳ  ಮೂದಲಿಸಿಗೊಂಡು  ಒಂದೇ ಏಸು, ಒಂದೇ ಬೈಬಲ್ ಹೇಳಿಗೊಂಡು ತಿರುಗುವ ಕ್ರಿಶ್ಚಿಯನರಲ್ಲಿ ೧೪೬ ವಿವಿಧ "ಜಾತಿಗೊ" (ಅಥವಾ ಪಂಗಡಂಗೊ) ಇದ್ದಾಡ.  (ಇದು ಬರೀ ಕೇರಳದ ಲೆಕ್ಕಾಚಾರ ಮಾತ್ರ. ಬೇರೆ ಪ್ರದೇಶಂಗಳ ಸೇರಿಸಿರೆ  ಇನ್ನುದೇ ಜಾಸ್ತಿ ಇಪ್ಪಲೂ ಸಾಕು.)  ಇವರ ಪ್ರಾರ್ಥನಾ ಮಂದಿರಂಗಳೂ ಪ್ರತ್ಯೇಕ ಆಡ !  ಸಿರಿಯನ್ ಕ್ಯಾಥೊಲಿಕ್, ಲ್ಯಾಟಿನ್ ಕ್ಯಾಥೋಲಿಕ್, ಮಾರ್ಥೋಮಾ, ಪೆಂಟೆಕೋಸ್ಟ್, ಸಾಲ್ವೇಶನ್  ಆರ್ಮಿ, ಸೆವೆಂತ್ ಡೇ ಅಡ್ವೆಂಟಿಸ್ಟ್, ಆರ್ಥೋಡಾಕ್ಸ್, ಜಕೋಬೈಟ್ ಇತ್ಯಾದಿ ವಿವಿಧ ಪಂಗಂಡಂಗಳ ಪ್ರತ್ಯೇಕ ಚರ್ಚುಗೊ ಇಪ್ಪದು ನಮ್ಮ ಬಹುಶೃತ ಮಾಧ್ಯಮದವರ ಅವಗಾಹನೆಗೆ ಬಾರದ್ದೆ ಇಪ್ಪದು ಬೇಜಾರದ ಸಂಗತಿ. ಅಥವಾ ಗೊಂತಿದ್ದರೂ ಜಾಣ ಕುರುಡುತನ ಆಗಿಪ್ಪಲೂ ಸಾಕು.   ಇಂತದೇ ಗುಟ್ಟು ಮುಸ್ಲಿಮರಲ್ಲಿಯೂ ಇಪ್ಪದು ನಮ್ಮಲ್ಲಿ ಹೆಚ್ಚು ಜನಕ್ಕೆ ಗೊಂತಿರ.  ಸುನ್ನಿ, ಶಿಯಾ, ಅಹ್ಮದೀಯ, ಸುಫಿ, ಮುಜಾಹಿದ್ದೀನ್  ಇತ್ಯಾದಿ  ಗುಂಪುಗೊಕ್ಕೆ ಪ್ರತ್ಯೇಕ ಪ್ರತ್ಯೇಕ ೧೩ ನಮುನೆಯ ಮಸೀದಿಗೊ ಇದ್ದಡ.  (ಮುಸ್ಲಿಮರ ಈ ಗುಂಪುಗಾರಿಕೆಯ  ಉಪಯೋಗಿಸಿಗೊಂಡೇ ಅಮೆರಿಕಾದವು ಇರಾಕಿನ ಮೇಲೆ ಧಾಳಿ ಮಾಡಿದ್ದದು !)

ಕ್ರಿಶ್ಚಿಯನರು, ಬ್ಯಾರಿಗಳ ನಿಜ ಪುರಾಣ  ಹೀಂಗಾದರೆ   ಸಾವಿರಗಟ್ಳೆ ಧರ್ಮ ಗ್ರಂಥಂಗೊ, ಭಾಷ್ಯಂಗೊ, ೩೩ ಕೋಟಿ ದೇವರುಗೊ, ಜಾತಿಗೊ ಇತ್ಯಾದಿಗಳ ಒಳಗೊಂಡಿಪ್ಪ ವಿಶಾಲ ಹಿಂದೂ ಸಮಾಜಕ್ಕೆಲ್ಲಾ ಒಂದೇ ನಮುನೆ ದೇವಸ್ಥಾನ !  ಹಾಂಗಿದ್ದರೂ,  ಗುರುವಾಯೂರಿನ ಹಾಂಗಿಪ್ಪ ಸಂಪ್ರದಾಯವಾದಿ ದೇವಸ್ಥಾನಂಗಳಲ್ಲಿ "ಹಿಂದುಗೊ ಅಲ್ಲದ್ದವಕ್ಕೆ" ಪ್ರವೇಶ ನಿಷೇಧಿಸಿದರೆ ಅದು ಮಾಧ್ಯಮದವಕ್ಕೆ ದೊಡ್ಡ ಚರ್ಚೆಯ ವಿಷಯ ಆವುತ್ತು.   ಕಾಟು ರಾಜಕಾರಣಿಗೊ ಇಲ್ಲದ್ರೆ ಹಿಂದೂ ಸಮಾಜ ಯಾವಗಂಗೂ ಬಲಿಷ್ಠ  ಆಗಿ ಇಕ್ಕು.  ಭಾರತಲ್ಲಿ  ಸುಖ, ಶಾಂತಿಯೂ ಇಕ್ಕು.  ನಮ್ಮ ಸನಾತನ ಧರ್ಮಲ್ಲಿ ಬದಲಾದ ತತ್ಕಾಲದ ಪರಿಸ್ಥಿತಿಗೆ ಅನುಗುಣವಾದ  ಸುಧಾರಣೆಗಳ ಅಗತ್ಯ ಖಂಡಿತವಾಗಿ ಇದ್ದರೂ, ಹಿಂದುಗೊಕ್ಕೆ ಹಿಂದೂಗಳಿಂದ  ಯಾವ ಆತಂಕವೂ ಇಲ್ಲೆ.  ಹಿಂದೂಗಳ ನಿಜವಾದ  ವೈರಿಗೊ  ಕೋಂಗ್ರೇಸಿಲಿಪ್ಪ ಹಿಂದೂ ರಾಜಕಾರಣಿಗೊ.  ಇಂತಹ   ಸ್ವಾಭಿಮಾನಹೀನ, ಸಮಯಸಾಧಕರಿಂಗೆ  ಧಿಕ್ಕಾರವಿರಲಿ.

-ಬಾಪಿ  / ೧೯.೦೯.೨೦೦೯        

Monday, August 24, 2009

ಗಣೇಶ ಮಹಿಮೆ

ಎಲ್ಲೋರೂ ಚೌತಿಯ ಕಡುಬು, ಚಕ್ಕುಲಿ, ಪಂಚಕಜ್ಜಾಯ ಇತ್ಯಾದಿ ಭಕ್ಷ್ಯಂಗಳ ಯಥೇಚ್ಛ  ಸೇವಿಸಿ, ಕರಗಿಸಿಗೊಂಡು ಸೌಖ್ಯಲ್ಲಿ ಇದ್ದವು ಹೇಳಿ ಗ್ರೇಶಿಗೊಂಡು, ಎಲ್ಲೋರಿಂಗೂ ಒಳ್ಳೆ ಬುದ್ಧಿ,  ಆಯುರಾರೋಗ್ಯ ಕೊಡು ಹೇಳಿ ಗಣಪತಿಯ ಪ್ರಾರ್ಥನೆ  ಮಾಡ್ತೆ.    
ಗಣಪತಿಯ ದೇಹದ ಅಂಗಂಗಳ ಅನುಪಾತ ವಿಚಿತ್ರವಾಗಿ ಕಂಡರೂ, ಅವನಷ್ಟು ಚಂದದ ದೇವರು ಬೇರೆ ಇಲ್ಲೆ ಹೇಳಿರೆ ತಪ್ಪಾಗ.   ಇಪ್ಪದು ಆನೆಯ ತಲೆ ಆದರೂ  ಹಾಸ್ಯ, ಸಂಗೀತವೇ ಮೊದಲಾದ ವಾಙ್ಮಯ ವಿಷಯಂಗಳಲ್ಲಿ   ವಿಶೇಷ ಆಸಕ್ತಿ ಮತ್ತು ಪ್ರತಿಭೆ ಇಪ್ಪ ದೇವರು ಹೇಳಿಯೇ ಇವ ಹೆಸರುವಾಸಿ.   ವ್ಯಂಗ್ಯಚಿತ್ರಕಾರರಿಂಗಂತೂ  ಇವನ ಕಂಡರೆ ಭಾರಿ ಪ್ರೀತಿ.  ಹಾಂಗಾರೆ, ಚೌತಿಯ ಈ ಶುಭ ಸಂದರ್ಭಲ್ಲಿ ಗಣಪತಿಯ ಮಹಿಮೆಯ ತಿಳ್ಕೊಂಡು, ಅವನ ದೇಹದ  ಅಂಗಂಗಳಿಂದ ಸಿಕ್ಕುವ ಸಂದೇಶಂಗಳಿಂದ  ಸ್ಪೂರ್ತಿ  ಪಡವ ಪ್ರಯತ್ನ ಮಾಡುವೊ.    ಇದಕ್ಕೆ ಅನುಕೂಲ ಅಪ್ಪ ಹಾಂಗಿಪ್ಪ  ಚಿತ್ರ ಒಂದರ  ಇದರೊಟ್ಟಿಂಗೆ ಲಗತ್ತಿಸಿದ್ದೆ. 
- ಬಾಪಿ

Saturday, August 15, 2009

ಶುಭಾಶಯ

ಭೋಜನಕಾಲೇ ಅಂಕಣದ ಸರ್ವ ಸದಸ್ಯರಿಂಗೂ ೬೩ನೇ ಸ್ವಾತಂತ್ರ್ಯೋತ್ಸವದ ಶುಭಾಶಯಂಗೊ.

ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಯಾರಿಂಗೂ ನಮ್ಮ ಹಿರಿಯರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟಿದವು ಹೇಳುದರ ಸರಿಯಾದ ಕಲ್ಪನೆ ಇಪ್ಪಲೆ ಸಾಧ್ಯ ಇಲ್ಲೆ.  ಸ್ವಾತಂತ್ರ್ಯ ಇದ್ದರೂ ಪ್ರಜಾಪ್ರಭುತ್ವ ಅಲ್ಲದ್ದ ದೇಶಂಗಳ ನೋಡಿರೆ, ಭಾರತ ದೇಶದ ಪ್ರಜೆಗಳಾಗಿಪ್ಪಲೆ ನಾವು ಎಷ್ಟು ಪುಣ್ಯ  ಮಾಡಿದ್ದು ಹೇಳಿ ತಿಳ್ಕೊಂಬಲಕ್ಕು.
ಭಾರತಲ್ಲಿ ಇಷ್ಟರ ವರೆಗೆ ಇಪ್ಪದು ರಾಜಕೀಯ ಸ್ವಾತಂತ್ರ್ಯ ಅಷ್ಟೆ.  ಹಸಿವು, ಬಡತನ, ಅನಕ್ಷರತೆ, ಭ್ರಷ್ಟಾಚಾರ, ಉಗ್ರಗಾಮಿಗಳ ಸಮಸ್ಯೆ, ನಕ್ಸಲುವಾದ ಇತ್ಯಾದಿಗಳಿಂದ ಸ್ವಾತಂತ್ರ್ಯ ಸಿಕ್ಕೆಕ್ಕಷ್ಟೆ. ಇದೆಲ್ಲರಿಂದ  ಮುಕ್ತಿ ಸಿಕ್ಕುಲೆ ಇನ್ನೂ   ೬೩ ವರ್ಷ ಕಾವ ಹಾಂಗೆ ಆಗದ್ದಿರಲಿ !

ವಂದೇ ಮಾತರಂ !
- ಬಾಪಿ

Friday, August 14, 2009

ನಮ್ಮ ಸಮಸ್ಯೆಗೊ-೩

(...ಮುಂದುವರುದ್ದು).. 

ಅನಾಗರಿಕ ನಡವಳಿಕೆ : ನಾವು ಬೇರೆ ದೇಶದವರ ಅಪಹಾಸ್ಯಕ್ಕೆ ಗುರಿ ಅಪ್ಪ ಹಾಂಗಿಪ್ಪ ಸುಮಾರು ನಡವಳಿಕೆಗೊ  ನಮ್ಮಲ್ಲಿ ಇದ್ದು.   ಎಷ್ಟೋ ವಿಷಯಲ್ಲಿ ಭಾರತ ಹೇಳಿರೆ ಹೀಂಗೇ  ಹೇಳುವ ಹಣೆಪಟ್ಟಿ ಬಪ್ಪಷ್ಟು ಹದಗೆಟ್ಟ ಅಭ್ಯಾಸಂಗಳ ನಾವು ರೂಢಿಸಿಗೊಂಡಿದು.  ಇವೆಲ್ಲಾ ನಮ್ಮ ಮನೋಧರ್ಮಕ್ಕೆ ಸಂಬಂಧಪಟ್ಟ ವಿಷಯಂಗೊ ಆದ ಕಾರಣ, ಒಂದೊಂದನ್ನೂ ಪ್ರತ್ಯೇಕ ವಿವರಿಸೆಕ್ಕಾದ ಅವಶ್ಯಕತೆ ಇಲ್ಲೆ.  ಎಲ್ಲವನ್ನೂ ಸೇರಿಸಿ ಒಟ್ಟಿಂಗೆ ಬರವದೇ ಸುಲಭ.  ಮತ್ತೆ  ಓದ್ಲುದೇ ಚೆಂದ !   ಇಂತಹ ನಡವಳಿಕೆಗಳ ಎನಗೆ ಕಂಡ ಮಟ್ಟಿಂಗೆ ಪಟ್ಟಿ ಮಾಡ್ತೆ.

ಸಿಕ್ಕಿದಲ್ಲಿ ಪೂರಾ ಕಸವು ಇಡುಕ್ಕಿ ಗಲೀಜು  ಮಾಡುದು, ಸಾರ್ವಜನಿಕ ಜಾಗೆಗಳಲ್ಲಿ ಮೂತ್ರ ವಿಸರ್ಜನೆ, ತುಪ್ಪೊದು (ಕೆಲವು ಜನಕ್ಕೆ ಬರೀ ತುಪ್ಪಿದರೆ ತೃಪ್ತಿ ಆವುತ್ತಿಲ್ಲೆ, ಕ್ಯಾಕರಿಸಿ ತುಪ್ಪಿದರೇ ಸಮಾಧಾನ), ಸಮಯ ಪಾಲನೆ ಮಾಡದ್ದಿಪ್ಪದು, ವಾಹನ ಬಿಡುವಗ ಅನವಶ್ಯಕ ಹಾರ್ನ್ ಹಾಕಿ ಹರಟೆ ಮಾಡುದು ಇತ್ಯಾದಿಗೊ ಈ ಪಟ್ಟಿಲಿ ಸೇರಲೇ ಬೇಕಾದ ಸಂಗತಿಗೊ. ಇನ್ನೂ ಯಾವುದಾದರೂ ಮುಖ್ಯದ್ದು ಬಿಟ್ಟು ಹೋಗಿದ್ದರೆ, ಸೇರಿಸಿಗೊಳೆಕ್ಕಾಗಿ ವಿನಂತಿ.   ಈ ವಿಷಯಂಗಳ ಕೂಲಂಕುಶ ವಿಮರ್ಶೆ ಮಾಡ್ಳೆ ಹೋದರೆ, ಸುಮಾರು ಸಂಗತಿಗೊ ಹೆರ ಬತ್ತು.  ಈ ಯಾವ ನಡವಳಿಕೆಗಳನ್ನೂ ಸಮರ್ಥಿಸಿಗೊಂಬಲೆ ಎಡಿಯದ್ದರೂ, ಯಾವುದರ ತೆಕ್ಕೊಂಡರೂ ಎರಡೂ ನಮುನೆ ವಾದ ಮಾಡ್ಳಕ್ಕು. ಉದಾಹರಣೆಗೆ, ಕಸವು ಇಡುಕ್ಕುವ ಅಭ್ಯಾಸವ ನೋಡುವೊ.  ನಮ್ಮಲ್ಲಿ  ತ್ಯಾಜ್ಯ ವಸ್ತುಗಳ ವಿಲೆವಾರು ಮಾಡ್ಳೆ ಸರಿಯಾದ  ವ್ಯವಸ್ಥೆ ಇಲ್ಲದ್ದಿಪ್ಪದು ಸರಕಾರದ ಬೇಜವಾಬ್ದಾರಿ.  ಹಾಂಗೆ ಹೇಳಿ ಇಪ್ಪ ಕಸವಿಂಗೆ ಇನ್ನೂ ಹೆಚ್ಚು ಕಸವಿನ ಸೇರುಸುದಕ್ಕೆ ನಮ್ಮ ಜನರ ಹಾಂಕಾರವೇ ಕಾರಣ.  ಹೀಂಗಿಪ್ಪ ಎಷ್ಟೊಂದು ಕೆಟ್ಟ ಚಾಳಿಗೊ ನಮ್ಮವಕ್ಕೆ ಜೀವನಕ್ರಮವೇ  ಆಗಿ ಹೋಯಿದು ಹೇಳುದು ದೇಶದ ದುರಂತ.  ಹಿಂದಂದ ಬಂದು ಎಡೆಬಿಡದ್ದೆ  ಹಾರ್ನ್ ಹಾಕುವ ವಾಹನದ ಚಾಲಕರ ಆನು ಎಷ್ಟೋ ಸರ್ತಿ ಗುರಾಯಿಸಿ ನೋಡಿದ್ದದಿದ್ದು.  ಆದರೆ, ಅವಕ್ಕೆ ಎನ್ನ ವರ್ತನೆಯೇ ವಿಚಿತ್ರ ಕಂಡದರ ಸುಮಾರು ಸರ್ತಿ ನೋಡಿ ಅನುಭವಿಸಿದ ಮೇಲೆ ಈ ಪ್ರಾಣಿಗೊ ಜನ್ಮಲ್ಲಿ ಉದ್ಧಾರ ಅಪ್ಪಲಿಲ್ಲೆ ಹೇಳಿ ಈ ವಿಷಯಲ್ಲಿ ಈಗ ತಲೆಕೆಡಿಸಿಗೊಂಬದರ ಸಂಪೂರ್ಣ ಬಿಟ್ಟಿದೆ.  ಒಟ್ಟಾರೆ ಹೇಳ್ತರೆ, ಹೆಚ್ಚಿನವಕ್ಕೆ ಇದೊಂದು ಅನೈಚ್ಛಿಕ  ಕಾರ್ಯ ಹೇಳುದರ ತಿಳ್ಕೊಂಬಲಕ್ಕು.

ಹಾಂಗಾರೆ, ಹೀಂಗಿಪ್ಪ ವಿಷಯಂಗಳಲ್ಲಿ ಬದಲಾವಣೆ ಆಯೆಕ್ಕಾದರೆ, ಮಕ್ಕೊ ಆಗಿಪ್ಪಗಳೇ ತಿಳಿಶಿ ಹೇಳೆಕ್ಕಷ್ಟೆ.  ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಂದ ಇಂತಹ ವಿಷಯಂಗಳಲ್ಲಿ ಬದಲಾವಣೆ ಅವಶ್ಯ ಹೇಳಿ ಸರಕಾರದವಕ್ಕೂ ಕಾಣೆಕ್ಕು. ನಮ್ಮ ಶಾಲೆಗಳ ಪಾಠಪುಸ್ತಕಂಗಳಲ್ಲಿ  civics  ಹೇಳುವ ವಿಷಯಕ್ಕೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟು  ಕಲಿಶಿದರೆ ಒಳ್ಳೆದು.  ಈ ಪಾಠ ಮಾಡ್ಳೆ  ಸಮರ್ಪಕ ಅಧ್ಯಾಪಕರನ್ನೂ ನೇಮಿಸುದು ಅಷ್ಟೇ ಅವಶ್ಯ (ಮೀಸಲಾತಿಯ ಗೌಜಿಲಿ ಮಾಷ್ಟ್ರ ಅಪ್ಪಲೆ  ಪದವಿ ಪರೀಕ್ಷೆಲಿ ಕನಿಷ್ಟ ಅಂಕ ತೆಕ್ಕೊಂಡು ತೇರ್ಗಡೆ ಆದರೂ ಸಾಕಕ್ಕು.  ಆದರೆ, ಕನಿಷ್ಟ ಪಕ್ಷ ದಿನಾಗಳೂ ಮೀವ ಅಭ್ಯಾಸ ಆದರೂ ಇಪ್ಪವರ ಆಯ್ಕೆ ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆ ಮಾರ್ಗದರ್ಶನ ಮಾಡಿದ ಹಾಂಗಕ್ಕು).  ಇದಕ್ಕೆ ಬೇಕಾಗಿ ಒಂದು ಪ್ರತ್ಯೇಕ ನಾಗರಿಕ ನಡವಳಿಕೆಗಳ ಉತ್ತೇಜನ ಮಂತ್ರಾಲಯವನ್ನೇ ಹೊಸತ್ತಾಗಿ  ಸುರು ಮಾಡಿರೆ ಇನ್ನೂ ಒಳ್ಳೆದೇ !  

- ಬಾಪಿ  / ೧೪.೦೮.೨೦೦೯

Thursday, August 13, 2009

ನಮ್ಮ ಸಮಸ್ಯೆಗೊ-೨

 (...ಮುಂದುವರುದ್ದು)..

ಕಾಶ್ಮೀರ :  ಈ ಸಮಸ್ಯೆಯುದೇ  ನವಗೆ ಬ್ರಿಟಿಷರು ಕೊಟ್ಟ ಬಳುವಳಿ.   ಸ್ವಾತಂತ್ರ್ಯದ ಆಮಿಷಲ್ಲಿ  ಭಾರತ-ಪಾಕಿಸ್ತಾನಂಗಳ ಸೃಷ್ಟಿ ಮಾಡಿ ಇಬ್ಬರ ಮಧ್ಯೆ ಒಂದು ಎಡೆಬಿಡಂಗಿ ಕಾಶ್ಮೀರವನ್ನೂ ಮಡುಗಿದವು.  ಈ ವಿಷಯಕ್ಕೆ ಬೇಕಾಗಿ ಈಗಾಗಲೇ ೨ ಸರ್ತಿ ಭಾರತಕ್ಕೂ ಪಾಕಿಸ್ತಾನಕ್ಕೂ ಯುದ್ಧವೂ ಆಯಿದು.  ಯುದ್ಧಂಗಳಲ್ಲಿ ಭಾರತಕ್ಕೆ ಜಯ ಸಿಕ್ಕಿದರೂ ಸಮಸ್ಯೆ ಮಾಂತ್ರ ಬಗೆಹರಿದ್ದಿಲ್ಲೆ.  ಬದಲಾಗಿ, ಇನ್ನೂ ಜಟಿಲ ಆವುತ್ತಾ ಇದ್ದು.   ಎರಡೂ ದೇಶಂಗಳಲ್ಲಿ ರಾಜಕೀಯ ಪ್ರಬುದ್ಧತೆ  ಇಲ್ಲದ್ದದೇ ಇದು ಇಷ್ಟು ಮುಂದುವರಿವಲೆ ಕಾರಣ.  ಎರಡು ಕಡೆಯವುದೇ ರಜ ಹೊಸ ದೃಷ್ಟಿಕೋಣಂದ ಯೋಚನೆ ಮಾಡಿರೆ,  "ನಿಂಗೊ ಇಬ್ರೂ  ಯಾವಾಗಳೂ ಕಚ್ಚಾಡಿಗೊಂಡು ಇರೆಕು, ಉದ್ಧಾರ ಆಪ್ಪಲಾಗ"  ಹೇಳುವ ಬ್ರಿಟಿಶರ ಕನಸಿನ ಭಗ್ನ ಮಾಡ್ಳೆ  ಕಷ್ಟ ಇಲ್ಲೆ. 

ಯಾರೋ ಸ್ವಾಭಿಮಾನ ಹೀನರು  ಕಾಶ್ಮೀರಕ್ಕೆ ಭಾರತದ ಸ್ವಿಝರ್ಲ್ಯಾಂಡ್ ಹೇಳುವ ಹೆಸರಿನ ಒಪ್ಪಿಗೊಂಡಿದವು.   ಉತ್ಕಟ ದೇಶಾಭಿಮಾನ ಇಪ್ಪ ನಮ್ಮ ಹಾಂಗಿಪ್ಪವು ಇದರ ಪ್ರತಿಭಟಿಸಿ,  ಸ್ವಿಝರ್ಲ್ಯಾಂಡಿಂಗೆ ಯುರೋಪಿನ ಕಾಶ್ಮೀರ ಹೇಳಿ ಹೆಸರು ಮಡಿಗಿ ಸೇಡು ತೀರಿಸಿಗೊಂಬಲಕ್ಕು.    ಮೇಲ್ನೋಟಕ್ಕೆ, ಇದು ನಾ ಮೇಲು ತಾ ಮೇಲು ಹೇಳುವ ಮಕ್ಕಳಾಟಿಕೆಯ ವಾದದ ಹಾಂಗೆ ಕಂಡರೂ ಇದಲ್ಲಿ ಒಂದು ಬಹು ಮುಖ್ಯವಾದ ತತ್ವ ಇದ್ದು.    ಸ್ವಿಝರ್ಲ್ಯಾಂಡಿನ ಹಾಂಗಿಪ್ಪ ಸಣ್ಣ ದೇಶದ ಪೂರ್ತಿ ಅರ್ಥವ್ಯವಸ್ಥೆಯೇ ಹೊರದೇಶದ ಪ್ರವಾಸಿಗಳ ಮೇಲೆ ಆಧರಿಸಿಪ್ಪದು.  ಹೇಳಿರೆ, ಕಾಶ್ಮೀರಕ್ಕುದೇ ಈ ದಿಕ್ಕಿಲ್ಲಿ ಬೆಳವಲೆ ಅಷ್ಟೇ ಅವಕಾಶ ಇದ್ದು ಹೇಳುವ ತಾತ್ಪರ್ಯ.   ಇದಕ್ಕಿಪ್ಪ ಸದ್ಯದ ಮೊದಲನೇ ತೊಡಕು ಹೇಳಿರೆ,  ಭಯೋತ್ಪಾದಕರ  ಉಪದ್ರ.

ಜಗತ್ತಿಲ್ಲಿ ಎಲ್ಲಿಯೇ ನೋಡಿದರೂ ಶಾಂತಿ, ನೆಮ್ಮದಿಯ ಲಗಾಡಿ ಕೊಡ್ಳೆ ನೋಡುವ ಜನಂಗಳ ಸಂಖ್ಯೆ ಯಾವಾಗಳೂ ಭಾರೀ ಸಣ್ಣ ಪ್ರಮಾಣದ್ದು.   ಸಣ್ಣ ಸಂಖ್ಯೆಲಿಪ್ಪ ಈ ಜನಂಗೊ  ಬೇರೆಯವರ ಕೊಂದೋ, ಹೆದರಿಸಿಯೋ ತಮ್ಮ ದಾರಿಯ ಸುಗಮ ಮಾಡಿಗೊಂಬದು. ಅಂಬಗ, ಬಹುಸಂಖ್ಯಾತ ಶಾಂತಿಪ್ರಿಯರ  ಇಚ್ಚಾಶಕ್ತಿಯ ಕ್ರೋಢೀಕರಿಸಿದರೆ, ಅವರಲ್ಲಿ ಆಶಾವಾದದ ಹುರುಪು ತುಂಬಿದರೆ, ಅಲ್ಪ ಸಂಖ್ಯೆಲಿಪ್ಪ ಶಾಂತಿಭಂಗ ಮಾಡುವವರ  ಬಗ್ಗು ಬಡಿವಲೆ ಕಷ್ಟ ಇಲ್ಲೆ.  ಇವರೊಟ್ಟಿಂಗೆ, ಸಮಾಜಲ್ಲಿ ಮಟ್ಟ ಹಾಕೆಕ್ಕಾದ ಇನ್ನೊಂದು ವರ್ಗವೂ  ಇದ್ದು -  ಅವು ಆರು  ಹೇಳಿರೆ, ಸ್ವತಃ  ಉಗ್ರವಾದದ ದಾರಿ ಹಿಡಿಯದ್ದರುದೇ  ಆ ಕೆಲಸ ಮಾಡುವವರ ಬಗ್ಗೆ ಅನುಕಂಪ ಇದ್ದುಗೊಂಡು ಅವರ ಸಾಂಕುವವು.  ಇತ್ತೀಚೆಗೆ ಉಪ್ಪಳಲ್ಲಿ ಹುಗ್ಗಿ ಕೂದುಗೊಂಡಿತ್ತ ಉಗ್ರವಾದಿಯ ಪೋಲೀಸಿನವು ಹಿಡಿದು ತಪ್ಪಗ, ಆ ಊರಿನ ಅದೇ ಕೋಮಿನ ಕೆಲವು ಜನ ಆದಷ್ಟು ಉಪದ್ರ ಕೊಟ್ಟು ಆ ವ್ಯಕ್ತಿ ತಪ್ಪಿಸಿಗೊಂಡು ಹೋಪಲೆ ಸಹಾಯ ಅಪ್ಪ ಹಾಂಗೆ ವಿಫಲ ಪ್ರಯತ್ನ ಮಾಡಿದ್ದದು ನವಗೆ ನೆಂಪಿಕ್ಕು.   ಇದುದೇ ಕೇವಲ ಸಣ್ಣ ವಿಷಯ ಅಲ್ಲ.   ಹಾಂಗಾಗಿ, ಇವರನ್ನೂ ಉಪೇಕ್ಷೆ  ಮಾಡ್ಳೆ ಸಾಧ್ಯ ಇಲ್ಲೆ      

ಕಾಶ್ಮೀರದ ಸಮಗ್ರ ಬೆಳವಣಿಗೆಯೇ ಅಲ್ಯಾಣ ಸಮಸ್ಯೆಗೆ ಪರಿಹಾರ ಹೇಳಿ ಎನಗೆ ಕಾಣ್ತು. ಸಮಾಜದ ಬೆಳವಣಿಗೆ ಆಗಿ, ಉದ್ಯೋಗಂಗೊ ಸೃಷ್ಟಿ ಆಗಿ ಅರ್ಥ ವ್ಯವಸ್ಥೆ ಸುಧಾರಣೆ ಆದರೆ,  ಭಯೋತ್ಪಾದಕರು ಮೂಲೆಗುಂಪಾವುತ್ತವು.  ಅಂಬಗ ಮುಖ್ಯವಾಹಿನಿಲಿಪ್ಪವು ಸಮಾಜಲ್ಲಿ ಶಾಂತಿ ಕದಡುವ, ತಮ್ಮ ಸುಭದ್ರ ಜೀವನಕ್ಕೆ ಕಲ್ಲು ಹಾಕುವ ಯಾವ  ಪ್ರಯತ್ನಕ್ಕೂ ಸೊಪ್ಪು ಹಾಕುತ್ತವಿಲ್ಲೆ.  ಅದೇ, ಸಮಾಜಲ್ಲಿ ಕಡುಬಡತನ ಇದ್ದು ಯಾವುದೇ ಸೌಲಭ್ಯ ಇಲ್ಲದ್ದ ಪರಿಸ್ಥಿತಿ ಇದ್ದರೆ, ಸರಕಾರದ ವಿರುದ್ಧ ಜನರಲ್ಲಿ ಇಪ್ಪ ಅಸಮಾಧಾನವ ದುರುಪಯೋಗ ಪಡಿಸಿಗೊಂಬಲೆ ಉಗ್ರವಾದಿಗೊಕ್ಕೆ ಸುಲಭ ಆವುತ್ತು ಹೇಳಿ ಎನ್ನ ಅಭಿಪ್ರಾಯ.

ಭಾರತ ದೇಶದ ಈ ವರ್ಷದ ರಕ್ಷಣಾ ಇಲಾಖೆಯ ಖರ್ಚಿಂಗೆ  ಅನುದಾನ ೧೪೦೦೦೦ ಕೋಟಿ ರುಪಾಯಿ ! ಪಾಕಿಸ್ತಾನಲ್ಲಿ ತಿಂಬಲೆ ಗೆತಿ ಇಲ್ಲದ್ರೂ, ಇದರ ಅರ್ಧದಷ್ಟದರೂ ರಕ್ಷಣಾ ಸಾಮಾಗ್ರಿಗಳ ಖರೀದಿಗೆ ಖರ್ಚು ಮಾಡುಗು.  ಹೇಳಿರೆ, ಎರಡೂ ದೇಶದವು ಸೇರಿ ಯಾವಾಗಳೋ ೫೦ ವರ್ಷಕ್ಕೊಂದರಿ ಮಾಡುವ ಸಾಧ್ಯತೆ ಇಪ್ಪ ಯುದ್ಧಕ್ಕಾಗಿ  ಸುಮಾರು ೨೦೦೦೦೦ ಕೋಟಿ ರುಪಾಯಿ  ನಿರಂತರ ಖರ್ಚು ಮಾಡ್ತಾ ಇದ್ದವು.   ಅಲ್ಲಿಗೆ, ಭಾರತ-ಪಾಕಿಸ್ತಾನ ಸೇರಿ  ಸುಮಾರು ೪೦ ಬಿಲಿಯ ಡಾಲರಿನಷ್ಟು ನಮ್ಮ ಅಮೂಲ್ಯ ಸಂಪತ್ತಿನ  ಪಾಶ್ಚಾತ್ಯರಿಂಗೆ ವರ್ಷಂಪ್ರತಿ ದಾನ ಮಾಡಿದ ಹಾಂಗಾತು.  ಭಾರತ-ಪಾಕಿಸ್ತಾನಂಗಳ  ವಿಭಜಿಸಿದ ಕುತಂತ್ರದ ಮೂಲ ಉದ್ದೇಶ ಇದೇ.  ಇದರ ಅರ್ಥ ಮಾಡಿಗೊಂಬಲೆ ಪ್ರಬುದ್ಧತೆ ಬೇಕು.  ಕೌರವ-ಪಾಂಡವರ ಹಾಂಗಿಪ್ಪ ಬದ್ಧ ವೈರಿಗಳೂ ಈ ವಿಷಯವ ಅರ್ಥ ಮಾಡಿಗೊಂಡಿತ್ತಿದ್ದವು ಹೇಳುದು ಗಮನಿಸೆಕ್ಕಾದ ಸಂಗತಿ. ನಮ್ಮ ನಮ್ಮೊಳವೇ ಆದರೆ, ಎಂಗೊ ೧೦೦ ಜನ, ನಿಂಗೊ ೫  ಜನ.  ಆದರೆ ಹೆರಾಣವು ಬಂದರೆ, ನಾವು ೧೦೫ ಜನ ಹೇಳುವ ಸಾಂಘಿಕ ಸ್ಪೂರ್ತಿ ಅವರತ್ರೆ ಇತ್ತದು ಪುರಾಣದ ಕಥೆಲಿ ಓದಿದ ನೆಂಪು.

ಭಾರತದ ಆರ್ಥಿಕ ಪ್ರಗತಿಯ ನೋಡಿ  ಪಾಕಿಸ್ತಾನದವಕ್ಕೆ ಅಸೂಯೆ ಆವುತ್ತಾ ಇಕ್ಕು.  ಅಲ್ಲಿ  ಮುಖ್ಯ ವಾಹಿನಿಲಿಪ್ಪವಕ್ಕೆ ತಮ್ಮ ಗಡಿಂದ ಇತ್ಲಾಗಿ  ಇಪ್ಪ ಸಂಬಂಧಿಕರ ಕಾಂಬಲೆ ಅತಿಯಾದ ಕಾತರತೆ ಇಕ್ಕು. ನೆರೆಕರೆಯ ಸಂಬಂಧ ಒಳ್ಳೆದಿರೆಕು ಹೇಳುವ ತೀವ್ರ ಆಶೆ ಇಕ್ಕು.   ಸಂಬಂಧ ಸುಧಾರಿಸಿದರೆ ತಮ್ಮ ಉದ್ದೇಶ ಹಾಳಪ್ಪ ಕಾರಣ, ಭಾರತ-ಪಾಕಿಸ್ತಾನಂಗೊ ಹೇಂಗಾರು ಯುದ್ಧದ ಹಾದಿ ಹಿಡಿವ ಹಾಂಗೆ ಮಾಡಿ, ಯುದ್ಧಾನಂತರದ ಕುರುಕ್ಷೇತ್ರಲ್ಲಿ ತಮ್ಮ ಕಾರುಬಾರು ಮಾಡುವ ಉಗ್ರಗಾಮಿ ಗುಂಪುಗಳ ಯೋಜನೆ ಸಫಲ ಆಗದ್ದ ಹಾಂಗೆ ನೋಡಿಗೊಳೆಕ್ಕಾದ್ದು ಅತಿ ಮುಖ್ಯ.  ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಕೋಣಂಗಳಲ್ಲಿ ಅಷ್ಟು ವ್ಯತ್ಯಾಸದ ಧೋರಣೆ ಮಡಿಕ್ಕೊಂಡಿತ್ತ ಪಶ್ಚಿಮ-ಪೂರ್ವ ಜರ್ಮನಿಗೊ ಒಂದಪ್ಪಲೆ ಎಡಿಗಾದರೆ, ಭಾರತ-ಪಾಕಿಸ್ತಾನ ಒಂದಪ್ಪಲೆ ಏಕೆ ಸಾಧ್ಯ ಇಲ್ಲೆ ?  ಹೀಂಗಾದರೆ, ನಮ್ಮ ಮಧ್ಯೆ  ಮೂಗು ತೂರಿಸಿ ಬೇಳೆ ಬೇಯಿಸಿಗೊಂಬ ಚೀನಾದ  ಸೀಂತ್ರಿ ಬುದ್ಧಿಗುದೇ ಕಡಿವಾಣ ಹಾಕ್ಲೆಡಿಗು. ಏನಿದ್ದರೂ ನಮ್ಮದು ರಕ್ತ ಸಂಬಂಧ, ಚೀನಾ ಮತ್ತು ಪಾಶ್ಚಾತ್ಯರು ನವಗೆ ಪರಕೀಯರು ಹೇಳುವ ಸತ್ಯವ ಎರಡೂ ದೇಶದ ಜನರಿಂಗೆ ಅರ್ಥ ಮಾಡಿಸುವ ರಾಜಕೀಯ ಮುತ್ಸದ್ದಿತನ ಬೇಕಪ್ಪದು.  ಭಾರತ-ಪಾಕಿಸ್ತಾನ ವಿಲೀನ ಆಗಿ, ಇಂದಿಸ್ತಾನದ ಉದಯ ಆದರೆ, ನಾವು ಜಗತ್ತಿನ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಮುಂದೆ ಬಪ್ಪಲೆ ಹೆಚ್ಚು ಸಮಯ ಬೇಡ.

(ಇನ್ನೂ ಇದ್ದು...)

- ಬಾಪಿ / ೧೩.೦೮.೨೦೦೯

Sunday, August 9, 2009

ನಮ್ಮ ಸಮಸ್ಯೆಗೊ-೧

ಭಾರತೀಯರಾದ ನಾವು ಗತವೈಭವದ ಗುಂಗಿಲ್ಲಿ ಎಷ್ಟೋ ಕಾಲ ಜೀವನ ಮಾಡಿ ಆತು.  ಈಗ ನಮ್ಮ ನೈಜ ಪರಿಸ್ಥಿತಿಯ ನಾವೇ ಅವಲೋಕನ ಮಾಡಿಗೊಂಡು ಭವಿಷ್ಯದತ್ತ ಹೆಜ್ಜೆ ಹಾಕೆಕ್ಕಾದ ಕಾಲ ಬೈಂದು.  ಇಲ್ಲದ್ರೆ,  ತೀವ್ರಗತಿಲಿ ಬದಲಾವುತ್ತಾ ಇಪ್ಪ ಕಲಿಯುಗದ ಈ ಕಾಲಲ್ಲಿ ನಾವು ಭಾರೀ ಹಿಂದೆ ಉಳಿದು ಹೋಕು. 

ನಮ್ಮ ಸಮಸ್ಯೆಗಳ ಬಗ್ಗೆ ನವಗೆ ಎಷ್ಟು ಅವಜ್ಞೆ ಇದ್ದು ಹೇಳುದಕ್ಕೆ  ಒಂದು ಸಣ್ಣ ತುಲನೆ ಮಾಡಿ ನೋಡುವೊ.   ತಮ್ಮ ಅಂತರರಾಷ್ಟ್ರೀಯ ವ್ಯವಹಾರಂಗೊಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನ ಇಲ್ಲದ್ದಿಪ್ಪದು ಒಂದು ದೊಡ್ಡ ತೊಡಕು ಹೇಳಿ ಮನಗಂಡ ಚೀನಾ ಸರಕಾರ ಈಗ ಮಕ್ಕೊಗೆಲ್ಲಾ ಈ ಹೊಸ ಭಾಷೆಯ ಕಲಿಶುಲೆ ವ್ಯವಸ್ಥೆ ಮಾಡಿದ್ದಾಡ.  ಇನ್ನು ೧೦ ವರ್ಷಲ್ಲಿ ಅಲ್ಲಿ ಈ ಸಮಸ್ಯೆ ಇರ್ತಿಲ್ಲೆ.  ನಮ್ಮಲ್ಲಿ ಎಲ್ಲೋರಿಂಗೂ ಗೊಂತಿಪ್ಪ, ಎಲ್ಲೋರೂ ಒಪ್ಪಿಗೊಂಬ ಹೀಂಗಿಪ್ಪ ಸುಮಾರು ಸಮಸ್ಯೆಗೊ ಇದ್ದು.  ವ್ಯತ್ಯಾಸ ಎಂತ ಹೇಳಿರೆ, ನಮ್ಮ ಸರಕಾರ  ಸಮಸ್ಯೆಗಳ ಪರಿಹಾರಕ್ಕೆ ಎಂತ ಕ್ರಮವನ್ನೂ ತೆಕ್ಕೊಳ್ತಿಲ್ಲೆ.  ೫೦ ವರ್ಷ ಮೊದಲು ಎಂತಲ್ಲ ಸಮಸ್ಯೆಗೊ ಇತ್ತೋ, ಇಂದಿಂಗೂ ಅದೇ ಸಮಸ್ಯೆಗಳ ಸಹಿಸಿಗೊಂಡು ನಾವು  ಜೀವನ ಮಾಡ್ತಾ ಇದ್ದು.  ಇಲ್ಲಿ  ಎನಗೆ ಕಂಡ ನಮ್ಮ ದೇಶದ ಕೆಲವು ಸಮಸ್ಯೆಗಳ ಪಟ್ಟಿ ಮಾಡ್ತೆ.

ಹೆಚ್ಚಿನ ಸಮಸ್ಯೆಗಳ ಬೇರು ಬ್ರಿಟಿಷರ ಕಾಲದ್ದಾದ ಕಾರಣ ಅವರ ಗುಣಗಾನ ಮಾಡದ್ದೆ ಸುರು ಮಾಡ್ಳೆ ಎಡಿಯ.  ನಮ್ಮ ದೇಶವ ಆಳಿದ ಅಷ್ಟೂ ಪರಕೀಯರ ಪೈಕಿ ನಮ್ಮ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವು ಹೇಳಿರೆ ಬ್ರಿಟಿಷರು.  ಭಾರತವ ಆಳಿದ ಹೆಚ್ಚಿನ ಬ್ಯಾರಿ ರಾಜಂಗಳ ಪ್ರಭಾವ ತಾತ್ಕಾಲಿಕವಾದರೆ, ಬ್ರಿಟಿಷರ ಪ್ರಭಾವ ದೂರಗಾಮಿಯಾದ್ದು.  ಇದಕ್ಕೆ ಅವರ ಸೀಂತ್ರಿ ಬುದ್ಧಿಯ ಕುತಂತ್ರಂಗಳೂ ಕಾರಣ.  ಬ್ರಿಟಿಷ್ ಶಾಸನದ ಕರಾಳ ಛಾಯೆ ನಮ್ಮ ಮೇಲೆ ಇನ್ನೂ ಇಪ್ಪದರ ಮೂಲಲ್ಲಿ ಅವು ನಮ್ಮ ದೇಶೀ ಶಿಕ್ಷಣ ಪದ್ಧತಿಯ ನಾಶ ಮಾಡಿ ಕೋನ್ವೆಂಟ್  ಪದ್ಧತಿಯ ಜ್ಯಾರಿ ಮಾಡಿದ್ದು,  ಸ್ವಾತಂತ್ರ್ಯದ ಆಮಿಶಲ್ಲಿ   ಭಾರತ-ಪಾಕಿಸ್ತಾನದ ವಿಭಜನೆ ಮಾಡಿದ್ದೇ ಮೊದಲಾದ ಕಾರಣಂಗಳ ಹುಡುಕ್ಕುಲಕ್ಕು. 

ಬಾಬೂಗಿರಿ : ನಮ್ಮ ಸರಕಾರದ ಯಂತ್ರ  ಆಢಳಿತಶಾಹಿ ವ್ಯವಸ್ಥೆಲಿ ನಡವದು ಹೇಳುದು ಗೊಂತಿಪ್ಪ ವಿಷಯ.  ಒಂದು ಪ್ರಸಿದ್ಧ ಜೋಕು ಹೇಳಿರೆ, ಬ್ರಿಟಿಷರು ನವಗೆ ಬಾಬೂಗಿರಿ (bureaucracy)ಯ  ಬಳುವಳಿ ಕೊಟ್ಟವು. ಅವರ ಈ ಕುಶಾಲಿನ ನಾವು ಭಾರೀ ಗಂಭೀರವಾಗಿ ಪರಿಗಣಿಸಿತ್ತು ಹೇಳುದು.   ಅವರ ಕಾಲಕ್ಕೆ, ಅವರ ಅನುಕೂಲಕ್ಕೆ ತಕ್ಕ ಹಾಂಗೆ ಮಾಡಿ ಮಡುಗಿದ ವ್ಯವಸ್ಥೆಗಳ ನಾವು ಇಂದಿಂಗೂ ಚಾಚೂ ತಪ್ಪದ್ದೆ ಪಾಲಿಸುತ್ತಾ ಇಪ್ಪದು ನಮ್ಮ ಬೋದಾಳತನದ ಪರಮಾವಧಿ.  ನಾವು ಇಷ್ಟರವರೆಗೆ ಆ ವ್ಯವಸ್ಥೆಗಳ ಸಾಧಕ -ಬಾಧಕಂಗಳ ವಿಮರ್ಶೆ ಮಾಡುದಾಗಲೀ,   ಇದರಲ್ಲಿ ಯಾವುದೇ ವ್ಯತ್ಯಾಸ, ಸುಧಾರಣೆ  ಮಾಡುವ ಗೋಜಿಂಗಾಗಲೀ ಹೋಯಿದಿಲ್ಲೆ.  ಉದಾಹರಣೆಗೆ, ನಮ್ಮ ಪೋಲೀಸರು.  ಬ್ರಿಟಿಷರ ಕಾಲಕ್ಕೆ ಅವು ಹೇಳಿದ ಹಾಂಗೆ ಕೇಳಿಗೊಂಡು, ಅವಕ್ಕೆ ನಮ್ಮ ಸಮಾಜದ ಗುಪ್ತ ಮಾಹಿತಿ ಕೊಟ್ಟುಗೊಂಡು ಇಪ್ಪ ಪೋಲೀಸರು ಬೇಕಾಗಿತ್ತು.  ಈ  ವ್ಯವಸ್ಥೆ ಇಂದಿಂಗೂ ನಡಕ್ಕೊಂಡು ಬತ್ತಾ ಇದ್ದು.  ಹಾಂಗಾಗಿಯೇ ಒಂದು ಹೊಸ ಸರಕಾರ ಬಂದಪ್ಪಗ ಹಿಂದಾಣ ಸರಕಾರದವರ ಮೇಲೆ ಕೇಸು ಹಾಕುದು, ತಮ್ಮ ಮೇಲಿಪ್ಪ ಕೇಸುಗಳ ವಜಾ ಮಾಡಿಸಿಗೊಂಬದು ಇತ್ಯಾದಿ ಪ್ರಕರಣಂಗೊ ಅವ್ಯಾಹತವಾಗಿ ನಡವದು.  ವಿಪರ್ಯಾಸ ಹೇಳಿರೆ, ಬ್ರಿಟನ್ ಲ್ಲಿಯೇ  ಇಂತಹ ವ್ಯವಸ್ಥೆ ಮೊದಲೂ ಇತ್ತಿಲ್ಲೆ, ಈಗಳೂ ಇಲ್ಲೆ ! ಅಲ್ಯಾಣ ಪೋಲೀಸು ವಿಭಾಗಕ್ಕೆ ಪೂರ್ತಿ ಸ್ವಾಯತ್ತತೆ ಇದ್ದು.  ನಮ್ಮ ರಾಜಕಾರಣಿಗೊಕ್ಕೆ ಈಗಾಣ ವ್ಯವಸ್ಥೆಯೇ ಅನುಕೂಲ ಆದ್ದರಿಂದ ಇದನ್ನೇ ಮುಂದುವರಿಸಿಗೊಂಡು ಹೋವುತ್ತಾ ಇದ್ದವು.  ಇನ್ನು, ನಮ್ಮ ಆಢಳಿತ ಯಂತ್ರದ ಬಗ್ಗೆ  ಹೇಳಿಗೊಂಬಲೇ ನಾಚಿಗೆ ಆವುತ್ತು.   ಬ್ರಿಟಿಷರ ಕಾಲಲ್ಲಿ, ಯಾವುದೇ ಕೆಲಸಕ್ಕಾದರೂ ಸರಿಯಾದ ಯೋಜನೆ ಮತ್ತೆ ಅದರ ಜ್ಯಾರಿ ಮಾಡುವ ಅಧಿಕಾರಿಗೊಕ್ಕೆ ಅಗತ್ಯವಾದ ಅರ್ಹತೆ, ನಿಯತ್ತು, ಕ್ಷಮತೆ ಎಲ್ಲಾ ಇತ್ತು.  ಈಗ ಯೋಜನೆಯೂ ಇಲ್ಲೆ, ಯೋಗ್ಯತೆ ಮತ್ತು ಕ್ಷಮತೆ ಹೇಂಗೂ ಇಲ್ಲೆ.  ನಿಯತ್ತು ಮಾಂತ್ರ ಇದ್ದು - ಲಂಚ ಕೊಡುವವರ ಅಥವಾ ರಾಜಕಾರಣಿಗಳ ಪಾದಕ್ಕೆ ! 

ಕಾನೂನು ವ್ಯವಸ್ಥೆ :  ಓಬೀರಾಯನ ಕಾಲದ ನಮ್ಮ ಕಾನೂನುಗೊ ಎಷ್ಟು ಅಸಂಗತ ಹೇಳಿ ಗ್ರೇಶಿರೆ ಬೇಜಾರ ಆವುತ್ತು.   ಬ್ರಿಟಿಷರು ಬರದ ಅಷ್ಟೂ ಕಾನೂನಿನ ಗ್ರಂಥಂಗಳ ತಿದ್ದುಪಡಿ ಮಾಡ್ಳೆ ಅಥವಾ ಬದಲಾವಣೆ ಮಾಡ್ಳೆ ನಮ್ಮ ಕಾನೂನು ಪಂಡಿತರಿಂಗೆ ಪುರುಸೊತ್ತೇ ಆಯಿದಿಲ್ಲೆ.   ಕೆಲವು ಗ್ರಂಥಂಗಳ ಎಲ್ಲೋರೂ ಪೂರ್ತಿ ಓದಿದ್ದವೋ ಇಲ್ಯಾ ಹೇಳುದೇ ಸಂಶಯ ! ಎಷ್ಟೋ ವರ್ಷಂದ ಕಾನೂನುಗಳ ಸುಧಾರಣೆ ಬಗ್ಗೆ ಚರ್ಚೆ ಆವುತ್ತಾ ಇದ್ದೇ ಹೊರತು ಇನ್ನುದೇ ಎಂತದೂ ಕೆಲಸ ಸುರು ಆಯಿದಿಲ್ಲೆ ! ಸಮಾನ ನಾಗರಿಕ ಕಾಯಿದೆ ಹಾಂಗಿಪ್ಪ ಮೂಲಭೂತವಾಗಿ ಅಗತ್ಯ ಇಪ್ಪ ವಿಷಯಂಗಳಲ್ಲಿ ಬದಲಾವಣೆ ಅಪ್ಪ ವಿಷಯ ಸದ್ಯಕ್ಕೆ ಹೇಂಗೂ   ಬಿಡುವೊ.  ಇದು ನಮ್ಮ ಜೀವನ ಕಾಲಲ್ಲಿ ಅಪ್ಪಲಿಲ್ಲೆ.  ಮುಂದೆ ಯಾವಗಾದರೂ ಆದರೂ, ಭಾರತದ ಹಿಂದೂಗೊ ಎಲ್ಲಾ  ಮುಸ್ಲಿಮರ ಶರಿಯತ್  ಕಾನೂನಿನ   ಪಾಲಿಸೆಕ್ಕು ಹೇಳುವ  ಕಾನೂನು ಬಂದರೂ ಬಕ್ಕು. ಅಲ್ಲಿಗೆ ಸಮಾನತೆ ತಂದ ಹಾಂಗೆ ಆತನ್ನೆ ? 

(ಇನ್ನೂ ಇದ್ದು...)

- ಬಾಪಿ / ೦೯.೦೮.೨೦೦೯

Monday, August 3, 2009

ಧನಾತ್ಮಕ ಚಿಂತನೆ

ಮನಸ್ಸಿನ ಯಾವಾಗಲೂ ಧನಾತ್ಮಕವಾಗಿ ಯೋಚಿಸುವ ಹಾಂಗೆ ಅಭ್ಯಾಸ ಮಾಡಿಗೊಂಡಿದ್ದರೆ, ಚಿಂತೆ ಕಮ್ಮಿ ಆಗಿ, ಆರೋಗ್ಯ ವೃದ್ಧಿ ಆಗಿ, ಆಯುಷ್ಯ ಹೆಚ್ಚಾವುತ್ತು ಹೇಳಿ ಆಯುರ್ವೇದ ಹೇಳ್ತು.  ಭಾರತೀಯರಿಂಗೆ ಸಾವಿರಾರು ವರ್ಷ ಮೊದಲೇ ಗೊಂತಿತ್ತ  ಈ ವಿಷಯವ ಡೇಲ್ ಕಾರ್ನೆಗೀ ಹಾಂಗಿಪ್ಪವು  ತಮ್ಮ ಜೀವನಪೂರ್ತಿ ಬೋಧಿಸಿ ಮಿಲಿಯಗಟ್ಟಲೆ ಡಾಲರು ಸಂಪಾದಿಸಿದವು.   ಭಾರತ ದೇಶಲ್ಲಿ ಇಂದು ಧನಾತ್ಮಕ ಚಿಂತನೆ ಮತ್ತು  ಆಶಾವಾದ ಇಲ್ಲದ್ರೆ, ಯಾರೂ ಬದುಕ್ಕಿ ಒಳಿವಲೆ ಸಾಧ್ಯವೇ ಇತ್ತಿಲ್ಲೆ.  ಇದು ನಮ್ಮ ನೈಸರ್ಗಿಕ ಸಂಪತ್ತು ಹೇಳಿಯೂ ಹೇಳ್ಳಕ್ಕು ! ಬಡತನ, ನಿರುದ್ಯೋಗ, ಅನಕ್ಷರತೆ, ಹಸಿವು, ಬೆಶಿಲಿನ ತಾಪ, ವಿದ್ಯುತ್  ಕ್ಷಾಮ, ಒಂದೋ ನೆರೆ ಅಥವಾ ಬರಗಾಲ, ಭೂಕಂಪ, ಕೊಳೆರೋಗ, ಹೊಂಡ ಬಿದ್ದ ಮಾರ್ಗಂಗೊ, ಸಂಕ ಇಲ್ಲದ್ದ ತೋಡುಗೊ, ನುಸಿಯ ಉಪದ್ರ  ಇತ್ಯಾದಿಯಾಗಿ  ನಾಗರಿಕ ಸಮಾಜಲ್ಲಿ ಮನುಷ್ಯರಾಗಿ ಬದುಕ್ಕುಲೆ ಭರವಸೆ ಮೂಡಿಸುವ  ಒಂದೇ ಒಂದು ಒಳ್ಳೆಯ ಅಂಶ ಇಲ್ಲಿ ಇಲ್ಲದ್ರೂ ಪ್ರತಿವರ್ಷ ಜನಸಂಖ್ಯೆ ಹೆಚ್ಚಾಯ್ಕೊಂಡೇ  ಹೋದ್ದಲ್ಲದ್ದೆ ಕಮ್ಮಿ ಆಯಿದಿಲ್ಲೆ ! ವೈರಾಗ್ಯದ ಸೋಂಕೇ  ತಟ್ಟದ್ದ, ಅತಿಯಾದ ಜೀವನೋತ್ಸಾಹ ಇಲ್ಲದ್ರೆ ಇದು ಹೇಂಗೆ ಸಾಧ್ಯ ? ಬುದ್ಧಿವಂತಿಕೆಯ ಒಟ್ಟಿಂಗೇ,  ಕಷ್ಟವ ಎದುರಿಸುವ ಧೈರ್ಯ, ಮುಂದಿನ ತಲೆಮಾರಿಂಗಾಗಿ ತಮ್ಮ ಸ್ವಂತ ಜೀವಿತ ಸಮಯಲ್ಲಿ ಮಾಡುವ ತ್ಯಾಗ, ಇಪ್ಪದರಲ್ಲೇ ರಜ ಆದರೂ ಉಳಿತಾಯ ಮಾಡುವ ದೂರದೃಷ್ಟಿ, ತಮ್ಮ ಹೊಟ್ಟೆ ಖಾಲಿ ಇದ್ದರೂ ಮನೆಗೆ ಬಂದ ನೆಂಟರ ಸತ್ಕರಿಸುವ ಉದಾರಗುಣ,  ಕುಟುಂಬದ ಮೇಲಾಣ ಬದ್ಧತೆ, ದೈವಭಕ್ತಿ - ಹೀಂಗಿಪ್ಪ ಹಲವಾರು ಸದ್ಗುಣಂಗಳಿಂದಾಗಿ  ನಮ್ಮ ದೇಶದವಕ್ಕೆ ಸ್ವಾಭಾವಿಕವಾಗಿ ಕಷ್ಟಂಗಳ ಎದುರಿಸಿ, ಗೆಲ್ಲುವ ಶಕ್ತಿ ಹೆಚ್ಚು ಇದ್ದು.  ಹಾಂಗಾಗಿಯೇ ನಮ್ಮವಕ್ಕೆ ಬೇರೆ ಯಾವ ದೇಶಕ್ಕೆ  ಹೋದರೂ ಬೇರೆಯವರಿಂದ ಸುಲಭಲ್ಲಿ ಉದ್ಧಾರ ಅಪ್ಪಲೆ ಎಡಿವದು.  ಎರಡನೇ ಕ್ಲಾಸಿನವಂಗೆ ಒಂದನೇ ಕ್ಲಾಸಿನ ಪರೀಕ್ಷೆ  ಬರವಲೆ ಸುಲಭ ಆವುತ್ತಿಲ್ಯಾ, ಹಾಂಗೇ !  ನಮ್ಮ ದೇಶಲ್ಲಿ ಆರಾದರೂ ರೈತಂಗೊ  ಆತ್ಮಹತ್ಯೆ ಮಾಡಿಗೊಂಡರೆ, ಅದು ಸಾಲ ಮಾಡಿ ತೀರುಸಲೆಡಿಯದ್ದ  ಪಾಪಪ್ರಜ್ಞೆಂದಲೇ ಹೊರತು, ಕಷ್ಟ ಸಹಿಸುಲೆ ಎಡಿಯದ್ದೆ ಅಲ್ಲ.   ಎಷ್ಟೋ ಜನ ಬಹುರಾಷ್ಟ್ರೀಯ ಕಂಪೆನಿಗಳ ವಿದೇಶೀ ಪ್ರಬಂಧಕರು ತಮ್ಮ ತಾಳ್ಮೆಯ ಇನ್ನೂ ಜಾಸ್ತಿ ಮಾಡಿಗೊಂಬಲೆ ಭಾರತಕ್ಕೆ ತಾತ್ಕಾಲಿಕ ವರ್ಗಾವಣೆ ಕೇಳ್ತವಡ ! ಇಲ್ಲಿಯ ವಿಪರೀತ  ಹವೆ, ವಾಹನ ದಟ್ಟಣೆ, ದೂರವಾಣಿ ಸಮಸ್ಯೆ, ಕಾರ್ಮಿಕರ ಹರತಾಳ ಇತ್ಯಾದಿಗಳ ನಡುವೆಯೂ ಉತ್ಪಾದನೆ ಮಾಡಿ, ಕಂಪೆನಿಗೆ  ಲಾಭ ಗಳಿಸುವ ಕೆಲಸ ಹೇಳಿರೆ ದೊಡ್ಡ ಪಂಥಾಹ್ವಾನವೇ ಸರಿ.        

ಗುಡ್ಡೆಯ ಮೇಲಿಪ್ಪ ಒಂದು ಕಾಟು ಮಾವಿನ ಮರ  ಯಾವುದೇ ಗೊಬ್ಬರ, ನೀರು ಇತ್ಯಾದಿಗಳ ಪೋಷಣೆ ಇಲ್ಲದ್ದೆ, ಎಲ್ಲಾ ಪ್ರಕೃತಿ ವಿಕೋಪಂಗಳನ್ನೂ ಸಹಿಸಿಗೊಂಡು ರುಚಿಯಾದ ಫಲ ಕೊಡುವ  ತ್ಯಾಗ ಜೀವನಲ್ಲಿಯೇ ಧನ್ಯತೆ ಕಾಣ್ತು.    ಅದೇ ಯಾವುದಾದರೂ ಹಣ್ಣಿನ ಕೃಷಿ ಮಾಡುವವನ ತೋಟಲ್ಲಿಪ್ಪ ಮಾವಿನ ಮರಕ್ಕೆ ಬೇಕಾದ ಹಾಂಗೆ ನೀರಿನ ವ್ಯವಸ್ಥೆ, ರಸಗೊಬ್ಬರ, ಕೀಟನಾಶಕದ ಸಿಂಚನ ಇತ್ಯಾದಿಗಳ  ಸರ್ವ ಸೌಕರ್ಯವೂ ಸಿಕ್ಕುತ್ತು.   ನಮ್ಮ ದೇಶದವಕ್ಕೂ ಮುಂದುವರಿದ ದೇಶದವಕ್ಕೂ ಇಪ್ಪ ವ್ಯತ್ಯಾಸ ಇಷ್ಟೇ.  ನಮ್ಮ ಇಪ್ಪ ಶಕ್ತಿ ಎಲ್ಲಾ -  ಕಾಟು ಮಾವಿನ ಮರದ ಹಾಂಗೆ - ಉಸುಲು ಹಿಡುಕ್ಕೊಂಡು ಬದುಕ್ಕಿ ಉಳಿಯುವ ಸಂಘರ್ಷಲ್ಲಿಯೇ ವ್ಯಯ ಆವುತ್ತು.  ಬೇರೆ ದೇಶದವರ ಶಕ್ತಿ ಅಪವ್ಯಯ ಆಗದ್ದೆ, ಸರಿಯಾದ ಉದ್ದೇಶಕ್ಕೆ ಬಳಕೆ ಆವುತ್ತು.  ಹಾಂಗಾಗಿ, ಅವರಲ್ಲಿ ಉತ್ಪಾದನಾ ಕ್ಷಮತೆ ಹೆಚ್ಚು.   ಆದರೆ, ಸಣ್ಣ ಕಷ್ಟ ಬಂದರೂ ಅವು (ಕಶಿ ಮಾವಿನ ಮರಂಗಳ ಹಾಂಗೆ) ಜರ್ಜರಿಸಿ ಕಂಗಾಲಾಗಿ ಹೋಪ ಸಾಧ್ಯತೆ ಹೆಚ್ಚು.

ಬೇರೆಯವು ನಮ್ಮ ಟೀಕೆ ಮಾಡಿರೆ ನವಗೆ ಕೋಪ ಬಪ್ಪದು ಸಹಜ.  ಹಾಂಗಾರೆ, ನಮ್ಮ ನಾವೇ ವಿಮರ್ಶೆ ಮಾಡಿಗೊಂಬ ಕ್ರಮವ ಬೆಳೆಶಿಗೊಂಬದು ಸೂಕ್ತ.   ಬುದ್ಧಿಶಕ್ತಿಲಿ ಭಾರತೀಯರು ಯಾರಿಂಗೂ ಕಮ್ಮಿ ಇಲ್ಲದ್ದ ಕಾರಣ, ನಮ್ಮ ದೌರ್ಬಲ್ಯಂಗಳ ಗುರುತಿಸಿ, ಸರಿಪಡಿಸಿಗೊಂಡು  ಮುಂದುವರಿಯುವ ಪ್ರಯತ್ನ ತ್ವರಿತವಾಗಿ ಆಯೆಕ್ಕಾಯಿದು.  ಇಲ್ಲದ್ರೆ,  ಕಾಟು ಮಾವಿನ ಮರದ ಹಾಂಗೆ  ಸಾಧಾರಣ  ಬೆಳವಣಿಗೆ ಮಾಂತ್ರ ಸಾಧ್ಯ ಇದ್ದಷ್ಟೆ.   ನಮ್ಮ  ಪ್ರತಿಭೆಗೆ ಅನುಗುಣವಾದ ಪ್ರಗತಿ  ಆಯೆಕ್ಕಾದರೆ, ನಮ್ಮ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ದೇಶದ ಎಲ್ಲಾ ಪ್ರಜೆಗಳ ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ, ದೇಶಾಭಿಮಾನ ಇಲ್ಲದ್ದೆ ಯಾವ ದೇಶವೂ ಉದ್ಧಾರ ಆದ ಉದಾಹರಣೆ ಇಲ್ಲೆ.  ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ರಾಜಕೀಯ ನಾಯಕತ್ವದ ಗುಣಮಟ್ಟ ಗಣನೀಯವಾಗಿ ಸುಧಾರಣೆ ಆಯೆಕ್ಕು.   ಈ ಸರ್ತಿಯ ಸಂಸತ್ತಿನ  ಚುನಾವಣೆಲಿ ಅತಿ ಹೆಚ್ಚು ಯುವ ಸಂಸದರು ಆಯ್ಕೆ ಆಗಿ ಬೈಂದವು  ಹೇಳುವ ಶುಭ ಶುದ್ದಿಯ ಈ ಮೊದಲೇ ಒಂದರಿ ಬರದ ನೆಂಪು. ಸದ್ಯಕ್ಕೆ, ಇದುವೇ ನಮ್ಮ ದೇಶದ ಮಟ್ಟಿಂಗೆ ದೊಡ್ಡ ಧನಾತ್ಮಕ ಸಂಗತಿ.   

- ಬಾಪಿ /  ೦೩.೦೮.೨೦೦೯

ಪ್ರವಾಸ ಕಥನ


ಈ ಸರ್ತಿ, ಎನ್ನ ಇತ್ತೀಚಿನ ಅಮೇರಿಕಾ ಪ್ರವಾಸದ ಕೆಲವು ಅನುಭವಂಗಳ ಹಂಚಿಗೊಂಬ ಪ್ರಯತ್ನ ಮಾಡ್ತೆ.

ಆನು ಹೋದ ರೋಚೆಸ್ಟರ್ ಹೇಳುವ ಪೇಟೆ ನ್ಯೂಯಾರ್ಕ್ ರಾಜ್ಯಲ್ಲಿಪ್ಪದು. ಎಮಿರೇಟ್ಸ್  ವಿಮಾನಸಂಸ್ಥೆಯವರ ಬೆಂಗ್ಳೂರಿಂದ ದುಬೈ ಮೂಲಕ ನ್ಯೂಯಾರ್ಕಿಂಗೆ ಹೋಪ ಮಾರ್ಗ ಸೌಕರ್ಯ ಹೇಳಿ ಕಂಡ ಕಾರಣ ಅದನ್ನೇ ಆಯ್ಕೆ ಮಾಡಿದೆ. ನಮ್ಮ ಭಾರತದ ಹವಾಮಾನಕ್ಕೆ ಒಗ್ಗಿ ಹೋಗಿಪ್ಪ ಎನ್ನ ಹಾಂಗಿಪ್ಪವರ ದೃಷ್ಟಿಂದ, ಅಲ್ಲಿಗೆ ಹೋಪಲೆ ಜೂನ್ ತಿಂಗಳು ಅತ್ಯಂತ ಅನುಕೂಲದ ಸಮಯ - ಹೆಚ್ಚು ಸೆಖೆಯೂ ಇಲ್ಲದ್ದೆ, ವಿಪರೀತ ಛಳಿಯೂ ಇಲ್ಲದ್ದೆ ಹಿತವಾಗಿತ್ತು. ನಯಾಗರಾ ಜಲಪಾತ ಕೇವಲ ೬೦ ಮೈಲು ದೂರಲ್ಲಿತ್ತ  ಕಾರಣ ಒಂದು ವಾರಾಂತ್ಯಲ್ಲಿ  ಅಲ್ಲಿಗೂ ಹೋಪ ಅವಕಾಶ ಸಿಕ್ಕಿತ್ತು. ಅಂದು ಆದಿತ್ಯವಾರ ಆದ ಕಾರಣ, ನಯಾಗರಾಲ್ಲಿ ತುಂಬ ಜನಸಂದಣಿ ಇತ್ತು - ಮತ್ತೆ, ಅಲ್ಲಿ ಕಂಡ ಪ್ರತಿ ಎರಡನೇ ಮೋರೆ ಭಾರತೀಯನದ್ದಾಗಿತ್ತು ! ಅಮೇರಿಕಾಲ್ಲಿ ನಮ್ಮವು ಎಷ್ಟು ಜನ ತುಂಬಿದ್ದವು ಹೇಳುದಕ್ಕೆ  ಇದೇ ಸಾಕ್ಷಿ.  

ಭಾರತ, ಅಮೇರಿಕಾ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಂಗೊ. ಹಾಂಗಾರೆ, ಎರಡಕ್ಕೂ ಇಪ್ಪ ವ್ಯತ್ಯಾಸ ಎಂತ ? ವಿಮಾನಂದ ಕೆಳ ನೋಡಿರೆ, ಎರಡೂ ದೇಶಗಳ ವಿಹಂಗಮ ನೋಟ ಒಂದೇ ನಮುನೆ ಸುಂದರ ! ಅದೃಷ್ಟವಶಾತ್, ಮನುಷ್ಯರ  ಕಣ್ಣಿಂಗೆ   zoom lens ಇಲ್ಲೆ.  ಅದೇ  ಒಳ್ಳೆದಾತು,  ಭಾರತಮಾತೆ ಮೇಲಂದಾದರೂ ಚೆಂದ ಕಾಣಲಿ !   ಕೆಳ ಇಳುದಪ್ಪಗ ವ್ಯತ್ಯಾಸಂಗೊ ಒಂದೊಂದಾಗಿ ಕಾಂಬಲೆ ಸುರು ಆವುತ್ತು.  ಅಮೇರಿಕಾ ದೇಶಲ್ಲಿ ನಮ್ಮಂದ ಎಷ್ಟೋ ಹೆಚ್ಚು ಸಂಪತ್ತು ಇಕ್ಕು. ಅಲ್ಯಾಣ ಸಾಮಾಜಿಕ ವ್ಯವಸ್ಥೆಗೊ ನಮ್ಮಂದ ತುಂಬಾ ಮುಂದುವರಿದಿಕ್ಕು.  ಅಲ್ಲಿ ತಾಂತ್ರಿಕ ಅವಿಷ್ಕಾರಂಗಳ ಹೆಚ್ಚು ನಿತ್ಯ ಜೀವನದ ಅನುಕೂಲಕ್ಕೆ ಅಳವಡಿಸಿಗೊಂಡಿಕ್ಕು.   ಆದರೆ, ಭಾರತಲ್ಲಿ ಇಪ್ಪದನ್ನೂ ಸರಿಯಾಗಿ ನೋಡಿಗೊಂಬಲೆ ಎಡಿಯದ್ದಿಪ್ಪ ನಮ್ಮ ರೋಗಗ್ರಸ್ತ ಮನಸ್ಸಿನ ಅರ್ಥ ಮಾಡಿಗೊಂಬಲೆ ಮತ್ತು ಸಹಿಸಿಗೊಂಬಲೆ ಭಾರೀ ಕಷ್ಟ ಆವುತ್ತು.  ನಾವು ನಮ್ಮ ಕುಟುಂಬಕ್ಕಾಗಿ ಭಯಂಕರ ತ್ಯಾಗ ಮಾಡ್ತು, ಮನೆಯ ಆದಷ್ಟು ಸಗಣ ಬಳುಗಿ ಚೆಂದ ಮಡಿಕ್ಕೊಂಡು, ಹೊಸ್ತಿಲಿಂಗೆ  ರಂಗೋಲಿ ಎಲ್ಲ ಹಾಕುತ್ತು. ಆದರೆ, ಮನೆಂದ ಹೆರ ಕಾಲು ಮಡಿಗಿದ ಕೂಡ್ಳೇ ನಮ್ಮ ಸೌಂದರ್ಯ ಪ್ರಜ್ಞೆ ಮಾಯ ಆವುತ್ತು.  ನಮ್ಮಷ್ಟೂ  ಸಾಮಾಜಿಕ ಕಳಕಳಿ ಇಲ್ಲದ್ದ  ಅನಾಗರಿಕ  ಜೀವನ ಶೈಲಿ ಇನ್ನೊಂದು ದಿಕ್ಕೆ ಕಾಂಬಲೆ ಸಿಕ್ಕ.  ಇಂಫೋಸಿಸ ನ ನಾರಾಯಣ ಮೂರ್ತಿ ಬರದ  ”better india better world"  ಹೇಳುವ  ಪುಸ್ತಕಲ್ಲಿ  ಈ ವಿಷಯವ ಭಾರೀ ಲಾಯಿಕಲ್ಲಿ ವಿಮರ್ಶೆ ಮಾಡಿದ್ದ. 

ಮಾನವೀಯ ಮೌಲ್ಯಂಗೊಕ್ಕೆಲ್ಲಾ ಉಗಮ ಸ್ಥಾನ ಆಗಿತ್ತ ನಮ್ಮ ದೇಶದ ಪುರಾತನ ಸಂಸ್ಕೃತಿಯ ಇಷ್ಟು ಹೀನ ಸ್ಥಿತಿಲಿ ನೋಡ್ಳೆ ಸಂಕಟ ಆವುತ್ತು.   ಎಲ್ಲದಕ್ಕೂ ಸರಕಾರ ಖಂಡಿತವಾಗಿ ಹೊಣೆ ಅಲ್ಲ.   ಆದರೆ, ಸಮಾಜದ ರೀತಿ ನೀತಿಗಳ ರೂಪಿಸುವ ಅತಿ ಹೆಚ್ಚಿನ  ನಿಯಂತ್ರಣ ಮತ್ತು ಜವಾಬ್ದಾರಿ ಸರಕಾರದ ಮೇಲಿದ್ದು.  ನಾವು ಎಷ್ಟು ಬುದ್ಧಿಗೇಡಿಗೊ ಹೇಳಿರೆ, ನವಗೆ ಅನುಕೂಲ ಅಪ್ಪ ವಿಷಯಂಗಳಲ್ಲಿ ಮಾತ್ರ  (ಹೇಳಿರೆ, ಬೇಡದ್ದದರ)  ಪಾಶ್ಚಾತ್ಯರ ನಕಲು ಮಾಡಿ, ನಮ್ಮತ್ರೆ ಇಪ್ಪ ಒಳ್ಳೆಯ ವಿಷಯಂಗಳ ಎಲ್ಲಾ  ಮರತು ಅವಸಾನದ ದಾರಿಲಿ ಸಾಗುತ್ತಾ ಇದ್ದು.  ಅವು ಮಾತ್ರ ನಮ್ಮತ್ರೆ ಇಪ್ಪ ಒಳ್ಳೆದೆಲ್ಲವನ್ನೂ  ಕಲ್ತುಗೊಂಡು, ತಮ್ಮ ಸಂಸ್ಕೃತಿಯ ಇನ್ನೂ ಔನ್ನತ್ಯಕ್ಕೆ ತೆಕ್ಕೊಂಡು ಹೋವುತ್ತಾ ಇದ್ದವು.  ನಮ್ಮದು "worst of both worlds"  ಹೇಳುವ ಹಾಂಗಿಪ್ಪ ಪರಿವರ್ತನೆ ಆದರೆ, ಅವರದ್ದು  "best of both worlds" ಹೇಳ್ಳಕ್ಕು.    
      
ಇದಿಷ್ಟೂ ನಕಾರಾತ್ಮಕ ಯೋಚನೆಯ ಹಾಂಗೆ ಕಂಡರೆ ಕ್ಷಮೆ ಇರಲಿ.  ಎಂತಾರೂ ಬದಲಾವಣೆ ಆಯೆಕ್ಕಾದರೆ, ನಮ್ಮ ಶಿಕ್ಷಣ ವ್ಯನಸ್ಥೆಯೇ ಬದಲಾಯೆಕ್ಕು.  ಇಂಗ್ಲಿಷಿನ ಮೇಲಿನ ನಮ್ಮ ಕುರುಡು ವ್ಯಾಮೋಹ ನಿಲ್ಲೆಕ್ಕು.  ಮಕ್ಕಳ ಮುಗ್ಧ ಮನಸ್ಸಿನ ಸರಿಯಾಗಿ ರೂಪಿಸುವ ಪ್ರಯತ್ನ ಆಯೆಕ್ಕು.  ಸತ್ತು ಮಣ್ಣಾದ ಟಿಪ್ಪು ಸುಲ್ತಾನನ ಹಾಂಗಿಪ್ಪವರ ಜೀವನ ಚರಿತ್ರೆಯ ಮಕ್ಕೊಗೆ ಬಾಯಿ ಪಾಠ ಮಾಡಿಸುವ ಬದಲು  ತತ್ಕಾಲದ ವಸ್ತುಸ್ಥಿತಿಯ ಬಗ್ಗೆ ಚಿಂತಿಸಿ ಒಳ್ಳೆಯ ಭವಿಷ್ಯವ ರೂಪಿಸಿಗೊಂಬ ಹಾಂಗೆ ಪ್ರೇರೇಪಿಸುದು ಒಳ್ಳೆದು.  ಸ್ವಾಭಿಮಾನದ, ಸ್ವಾವಲಂಬನೆಯ ಹೊಸ ತಲೆಮಾರಿನ ಸೃಷ್ಟಿ ಆಯೆಕ್ಕು.  ಕೇವಲ ಹತ್ತು ವರ್ಷಲ್ಲಿ ಭಾರತಮಾತೆಗೆ ಸಂಪೂರ್ಣ ಕಾಯಕಲ್ಪ ಮಾಡಿ, ಫಳಫಳಿಸುವ, ಘಮಘಮಿಸುವ,  ಮೊದಲಾಣ ಹಾಂಗಿಪ್ಪ ಸುಂದರ, ಅನುಕರಣೀಯ ಸಮಾಜವ ಸೃಷ್ಟಿ ಮಾಡ್ಳೆಡಿಗು.  ದೃಢ  ಸಂಕಲ್ಪ ಬೇಕಪ್ಪದಷ್ಟೆ.    ಇದು ಶುದ್ಧ ಭಾರತೀಯರಿಂದ ಆಯೆಕ್ಕಾದ ಕೆಲಸ. ಇಟೆಲಿಲಿ ಹುಟ್ಟಿದವರಿಂದ ಈ  ಕೆಲಸವ ಅಪೇಕ್ಷೆ ಮಾಡ್ಳೆಡಿಯ. 

- ಬಾಪಿ / ೦೩.೦೮.೨೦೦೯

Tuesday, July 28, 2009

ಕೋಂಗ್ರೇಸು ಎಂತಕೆ ಅಪಥ್ಯ -೫

(...ಮುಂದುವರುದ್ದು)..

೯.  ಹಿಂದೂಗಳಲ್ಲಿ ಒಗ್ಗಟ್ಟು ಹೇಳುದು ಮೊದಲೇ ಕಮ್ಮಿ. ಇನ್ನು, ಕೋಂಗ್ರೇಸಿನವು ನಮ್ಮ ಜಾತಿ ಪದ್ಧತಿಯ ಸಾಧ್ಯ ಆದಷ್ಟೂ  ದುರುಪಯೋಗ ಮಾಡಿಗೊಂಡವು. ಮೀಸಲಾತಿಯೇ ಮೊದಲಾದ ವಿವಿಧ ನೆಪಲ್ಲಿ ಒಳಪಂಗಡಂಗಳ ಸೃಷ್ಟಿ ಮಾಡಿ ಆಯಾ ಜಾತಿಯ ನಾಯಕರುಗೊ ತಮ್ಮ ರಾಜಕೀಯ ಜೀವನವ ಭದ್ರ ಮಾಡಿಗೊಂಡವು.  ಒಟ್ಟಿಲ್ಲಿ, ಬಹುಸಂಖ್ಯಾತರಾಗಿದ್ದರೂ ಈ ಒಳಪಂಗಡಂಗಳ ಗೊಂದಲಂದಾಗಿ, ಹಿಂದೂಗೊ ಯಾವತ್ತೂ ನಿರ್ಣಾಯಕರಾಗಿ ಇಪ್ಪಲೆ ಎಡಿಯದ್ದ ಅಸಹಾಯಕತೆಯ ಸಮಾಜ ವ್ಯವಸ್ಥೆ ಸೃಷ್ಟಿ ಆತು. ಜಾಫರ್ ಶರೀಫ್ ನ ಹಾಂಗಿಪ್ಪ ಬ್ಯಾರಿ ರಾಜಕಾರಣಿಗೊ ಎಲ್ಲಾ  ಮುಸ್ಲಿಂ ನಾಯಕರು ಹೇಳಿಯೇ ಕರೆಶಿಗೊಂಡರೆ, ಹಿಂದೂ ರಾಜಕಾರಣಿಗೊ ಅವರವರ ಪಂಗಡಂಗಳ ನಾಯಕರಾಗಿ ಗುರುತಿಸಿಗೊಳ್ತವೇ ಹೊರತು ಸಮಸ್ತ  ಹಿಂದೂಗಳ ನಾಯಕರು ಹೇಳುವಂತವು ಯಾರೂ ಇಲ್ಲೆ !

ಹೀಂಗಾಗಿಯೇ ಶಿವಸೇನೆ ಮತ್ತು ಭಾಜಪ ಹಿಂದೂಗೊಕ್ಕೆ ಹತ್ತರೆ ಅಪ್ಪದು.   ಶಿವಸೇನೆ ಮಹಾರಾಷ್ಟ್ರದ ಪ್ರಾಂತೀಯ ಪಕ್ಷ ಆದರೂ, ಸಮಗ್ರ ಹಿಂದೂಗಳ ಹಿತಾಸಕ್ತಿಗೆ ಧ್ವನಿ ಎತ್ತುವ ಪಕ್ಷ.  ಇನ್ನು, ಭಾಜಪದ ವ್ಯಾಪ್ತಿ ಈಗ ಇಡೀ ದೇಶಕ್ಕೆ ಹಬ್ಬಿ ಕೋಂಗ್ರೇಸಿಂಗೆ ಪರ್ಯಾಯವಾಗಿ ಬೆಳದ್ದು.  ಬೇರೆಯವೆಲ್ಲಾ ಹಿಂದೂಗಳ ಹೇಂಗೆ ಇನ್ನೂ ಒಡದು ಸ್ವಂತ ಪ್ರಯೋಜನ ಪಡವದು ಹೇಳಿ ಯೋಚನೆ ಮಾಡಿಗೊಂಡಿಪ್ಪಗ,  ರಥ ಯಾತ್ರೆಯ ಮೂಲಕ ದೇಶಾದ್ಯಂತ ಹಿಂದೂಗಳ ಭಾವನಾತ್ಮಕವಾಗಿ ಒಟ್ಟು ಸೇರಿಸುವ ಕೆಲಸ ಮಾಡಿದ ಏಕೈಕ ರಾಜಕಾರಣಿ ಹೇಳಿರೆ ಲಾಲಕೃಷ್ಣ ಅಡ್ವಾನಿ.   ಆದರೆ,  ನಮ್ಮ ಪಾಶ್ಚಾತ್ಯ  ಒಡೆತನದ ಮಾಧ್ಯಮದವು ಇವನ ಯಾತ್ರೆಯ  ಸಮಾಜವ ವಿಭಜಿಸುವ ಪ್ರಯತ್ನ ಹೇಳಿಯೇ ಬಿಂಬಿಸಿದವು.    ಇಂದಿಂಗೂ ರಾಮಜನ್ಮಭೂಮಿ ವಿವಾದವ ಸರಿಯಾಗಿ ವ್ಯಾಖ್ಯಾನ ಮಾಡುವವು ಕಮ್ಮಿ.  ಯಾತ್ರೆಯ  ರಾಜಕೀಯ ಲಾಭ ಭಾಜಪಕ್ಕೆ ಸಿಕ್ಕಿಕ್ಕು. ಆದರೆ, ಇದರಿಂದಾಗಿ ಹಿಂದೂಗಳಲ್ಲಿ ಜಾತಿ-ಪಂಥ ಮೀರಿದ ಅಪರೂಪದ ಒಗ್ಗಟ್ಟು ಕಾಂಬಲೆ ಸಿಕ್ಕಿತ್ತು.   ಅಡ್ವಾನಿಗೆ ಪ್ರಧಾನಿ ಪಟ್ಟ  ದಕ್ಕದ್ದೆ  ಹೋದರೂ, ಭಾಜಪವ  ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿ ಇಡೀ ದೇಶಲ್ಲಿ ಬೆಳೆಶಿದ ಶ್ರೇಯ ಅವಂಗೆ ಯಾವಾಗಳೂ ಸಿಕ್ಕುಗು. 

ಅಡ್ವಾನಿ - ಸರ್ದಾರ್ ಪಟೇಲರ ಪರಸ್ಪರ ಹೋಲಿಕೆ ಸುಮಾರು  ರೀತಿಲಿ ಅರ್ಥಪೂರ್ಣ ಹೇಳಿ ಕಾಣ್ತು.  ಅಸಲು ಲೋಹಪುರುಷಂಗೂ  ಅರ್ಹತೆ ಇದ್ದರೂ  ಪ್ರಧಾನಿ  ಅಪ್ಪ ಅವಕಾಶ ಸಿಕ್ಕಿತ್ತಿಲ್ಲೆ.    ಹಾಂಗೆ ನೋಡಿರೆ, ನೆಹರೂ ಕುಟುಂಬದ ಹೆರಾಣವು ಪ್ರಧಾನಿ ಆದ್ದದು ಆಕಸ್ಮಿಕವಾಗಿ ಅಥವಾ ಉತ್ಸವ ಮೂರ್ತಿಗಳಾಗಿ ಮಾತ್ರ.  ಲಾಲಬಹಾದುರ್  ಶಾಸ್ತ್ರಿ,  ನರಸಿಂಹ ರಾವ್ ಮತ್ತೆ ಮನಮೋಹನ ಸಿಂಗ್  ಇಂತಹ ಉದಾಹರಣೆಗೊ.    ನೆಹರೂವಿನ ನಂತರ ಬಂದ ಲಾಲಬಹಾದುರ್  ಶಾಸ್ತ್ರಿಯ ಹೆಚ್ಚು ಸಮಯ ಬದುಕ್ಕುಲೆ ಬಿಟ್ಟಿದವಿಲ್ಲೆ.   ದುರಾದೃಷ್ಟ ಹೇಳಿರೆ,  ಹೀಂಗೆ  ಅರ್ಹತೆ, ಕ್ಷಮತೆ ಇದ್ದುಗೊಂಡು ಸದ್ಗುಣಿಗಳಾಗಿದ್ದವರ ರಾಜಕೀಯ ಜೀವನ ಒಂದೇ ತಲೆಮಾರಿಂಗೆ ಮುಗುದು  ಹೋತು.   ನೆಹರೂ ಕುಟುಂಬದವು ಮಾಂತ್ರ ಕೇವಲ ನಾಮದ ಬಲಲ್ಲಿ  ಮತ್ತೆ ಮತ್ತೆ ಪ್ರಧಾನಿ  ಆಯ್ಕೊಂಡೇ ಬಂದವು.  ಈ ಒಂದು ವಿಷಯಲ್ಲಿ  ಕೋಂಗ್ರೇಸಿಲ್ಲಿ ಯಾವತ್ತೂ ಗೊಂದಲ ಇತ್ತೇ ಇಲ್ಲೆ !   ಕೋಂಗ್ರೇಸಿನ ವಂಶಪಾರಂಪರ್ಯದ ರಾಜಕಾರಣ ಇಲ್ಲದ್ರೆ, ನಮ್ಮ ದೇಶ ಹೇಂಗಿರ್ತೀತು ಹೇಳುವ ಕಲ್ಪನೆಯೇ ರೋಮಾಂಚನ ಕೊಡ್ತು. 

೧೦.   ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ.  ನಮ್ಮಲ್ಲಿ ಧರ್ಮ, ಭಾಷೆ, ಜಾತಿಯೇ ಮೊದಲಾದ  ವೈವಿಧ್ಯಂಗಳ ಹೊರತಾಗಿಯೂ ಪ್ರಜಾಪ್ರಭುತ್ವ ಜೀವಂತವಾಗಿದ್ದು.  ಇಷ್ಟು ಹೆಗ್ಗಳಿಕೆ ಇದ್ದರೆ ಹೇಂಗೆ ಸಾಕಪ್ಪದು, ನಾವು ಬೇರೆಯವರಿಂದ ಭಿನ್ನ ಹೇಳಿ ತೋರಿಸಿಗೊಂಬದು ಬೇಡದೋ ?  ನೂರು ಕೋಟಿ ಜನಸಂಖ್ಯೆಯ ಈ ದೇಶಲ್ಲಿ ಕೆಲವು ಅಸಂಬದ್ಧ  ವ್ಯವಸ್ಥೆಗೊ ಯಾವ ಮಟ್ಟದ್ದು  ಹೇಳಿರೆ, ಇಲ್ಲಿ ಅಲ್ಪ-ಸಂಖ್ಯಾತರಾಗಿಪ್ಪದೇ ಹೆಚ್ಚು ಸುಖ ಹೇಳಿ ಯಾರಿಂಗಾರೂ ಕಾಂಗು. ಪೂರ್ತಿ ಮುಸ್ಲಿಮರೇ ಇಪ್ಪ ದೇಶಲ್ಲಿಯೂ ಇಲ್ಲದಷ್ಟು ಸವಲತ್ತು ಮತ್ತು ಸ್ವಾತಂತ್ರ್ಯ ಇಲ್ಲಿಯ ಮುಸ್ಲಿಮರಿಂಗೆ ಇದ್ದು.  ಇಲ್ಯಾಣ ಬ್ಯಾರಿಗೊ ದೇಶಭಕ್ತಿಗೀತೆಯಾದ "ವಂದೇ ಮಾತರಂ"ನ ಹಾಡುತ್ತಿಲ್ಲೆ ಹೇಳಿರೆ ಬಾಕಿ ೮೦ ಕೋಟಿ ಜನ   ಬಾಯಿ ಮುಚ್ಚಿಗೊಂಡು ಕೂರ್ತವು, ಎಲ್ಯಾರೂ ಅವಕ್ಕೆ ಬೇಜಾರಕ್ಕು ಹೇಳಿ !  ನೂರು ಕೋಟಿ ಪ್ರಜೆಗಳಲ್ಲಿ ಪ್ರತಿಯೊಬ್ಬಂಗೂ ನೂರು ಪ್ರತಿಶತ  ರಾಷ್ಟ್ರೀಯ ಬದ್ಧತೆ ಇದ್ದರೆ, ಒಂದು ದೇಶಕ್ಕೆ ಉದ್ಧಾರ ಅಪ್ಪಲೆ ಎಷ್ಟು ಸಮಯ ಬೇಕು ? ಹೆಸರಿಂಗೆ ಜಾತ್ಯತೀತ ರಾಷ್ಟ್ರ, ಆದರೆ ಹಿಂದೂಗೊಕ್ಕೆ ಒಂದು ಕಾನೂನು, ಬ್ಯಾರಿಗೊಕ್ಕೆ ಇನ್ನೊಂದು.   ಬ್ಯಾರಿಗಳ ವಿಷಯ  ಬಂದರೆ, ಎಲ್ಲವೂ ಅಪವಾದ.  ಅವಕ್ಕೆ ಮಾಂತ್ರ ಎಲ್ಲದಕ್ಕೂ ವಿನಾಯತಿ !   ಈ ದೇಶಲ್ಲಿ ಸಮಾನ ನಾಗರಿಕ ಸಂಹಿತೆ ಹೇಳುದೇ ಇಲ್ಲೆ.   ಹೀಂಗಿಪ್ಪ ಕಾನೂನು ಬೇಕು ಹೇಳುವ ರಾಜಕೀಯ ಪಕ್ಷ ಭಾಜಪ ಮಾಂತ್ರ.  ಭಾರತ ದೇಶಲ್ಲಿ ಖಾಯಂ ವಾಸ ಇಪ್ಪ ಜನಂಗೊಕ್ಕೆ  ಒಂದು ಗುರುತಿನ ಚೀಟಿ ಇರೆಕು ಹೇಳುವ ಸಾಮಾನ್ಯ ಜ್ಞಾನದ ವಿಷಯಲ್ಲಿಯುದೇ  ೫೦ ವರ್ಷ ಕೋಂಗ್ರೇಸಿನವು ಯಾವುದೇ ಕ್ರಮ ತೆಕ್ಕೊಂಡಿದವಿಲ್ಲೆ.  ಹೀಂಗೆ ಮಾಡ್ಳೆ ಹೋಗಿ, ಎಲ್ಯಾರೂ ಬೇಲಿ ನುಗ್ಗಿ ಬಂದ ಬ್ಯಾರಿಗಳ ಓಡಿಸೆಕ್ಕಾಗಿ ಬಂದರೆ, ಮಾನವ ಹಕ್ಕು ಉಲ್ಲಂಘನೆ ಮಾಡಿದ ಹಾಂಗಾವುತ್ತಿಲ್ಯಾ  ?  ಇಂಥಾ ದಗಲ್ಬಾಜಿ, ದೇಶದ್ರೋಹಿ ಜನಂಗೊ ಕೋಂಗ್ರೇಸಿನವು.  ಕೊನೆಗೂ,  ವಾಜಪೇಯಿ ಪ್ರಧಾನಿ ಆದಪ್ಪಗ ಈ ಕೆಲಸ ಸುರು ಆತು.   ಈಗ  ನಂದನ್  ನೀಲಕೇಣಿ ಹಾಂಗಿಪ್ಪ ದಕ್ಷ ವ್ಯಕ್ತಿಗೆ ಈ ಕೆಲಸವ ವಹಿಸಿದ ಕಾರಣ, ಸಾವಂದ ಮೊದಲು ಭಾರತ ದೇಶದ ಪ್ರಜೆ ಹೇಳಿ ಧೈರ್ಯಂದ ಹೇಳಿಗೊಂಬಲೆ ಗುರುತಿನ ಚೀಟಿ ಒಂದು ಸಿಕ್ಕುಗು ಹೇಳುವ ಸಣ್ಣ ಭರವಸೆ ಕಾಣ್ತು.   

(ಸದ್ಯಕ್ಕೆ ಮುಗುತ್ತು)

- ಬಾಪಿ

Saturday, July 25, 2009

ಕೋಂಗ್ರೇಸು ಎಂತಕೆ ಅಪಥ್ಯ -೪

(...ಮುಂದುವರುದ್ದು)..

೭. ನೆಹರೂ ಕುಟುಂಬದ ಸದ್ಯದ ಪರಿಸ್ಥಿತಿ ನೋಡಿರೆ, ನಮ್ಮ ದೇಶದ ಇಡೀ ಚರಿತ್ರೆಯ ಒಂದು ಸಣ್ಣ ಅವಲೋಕನ ಮಾಡಿದ ಹಾಂಗೆ ಆವುತ್ತು.  ನಮ್ಮ ದೇಶವ ಪರಕೀಯರು ಆಕ್ರಮಣ ಮಾಡಿ ಆಳಿದ  ಹಾಂಗೆ,  ನೆಹರೂಗಳ  ಒಂದು ಅಪ್ಪಟ ಹಿಂದೂ ಕುಟುಂಬದ ಮೇಲೆ ಆದ ಆಕ್ರಮಣಲ್ಲಿ, ಇಂದಿಂಗೆ ಅವರಲ್ಲಿ ಯಾರೂ ಹಿಂದೂಗಳೇ ಒಳಿದ್ದವಿಲ್ಲೆ ! ಜವಾಹರಲಾಲನ ಏಕೈಕ ಸಂತಾನವಾದ ಇಂದಿರಾ, ಘಂದಿ ಹೇಳುವ ಪಾರ್ಸಿ/ಬ್ಯಾರಿ ಯ ಮದುವೆ ಆಗಿ ರಾಜಕೀಯದ  ಅನುಕೂಲಕ್ಕಾಗಿ ನಮ್ಮ ದೇಶಲ್ಲಿ ಧರ್ಮಕ್ಕೆ ಸಿಕ್ಕುವ  "ಗಾಂಧಿ" ಹೇಳುವ ಹೆಸರು ಮಡಿಕ್ಕೊಂಡತ್ತು.  ಬ್ರಿಟಿಷರ ಬಾಯಿಲಿ ಬೊಂಬಾಯಿ ಹೇಳಿ ಇಪ್ಪದು ಬಾಂಬೇ ಆದ ಹಾಂಗಿಪ್ಪ ಕಥೆ.   ಇಂದಿರಾ ಗಾಂಧಿಯ ಈ ಪುನರ್ನಾಮಕರಣ ನಮ್ಮ ದೇಶದ ಚರಿತ್ರೆಲಿ ಆದ ನೆಹರೂ-ಗಾಂಧಿಗಳ ಅಪೂರ್ವ ಸಮ್ಮಿಲನ !  ಇನ್ನು, ರಾಜೀವ ಗಾಂಧಿ - ಮೊದಲೇ ಅರ್ಧ ಬ್ಯಾರಿ - ಮುಂದೆ  ಪ್ರೀತಿಗೋಸ್ಕರ ತಾನೇ ಕ್ರಿಶ್ಚಿಯನ್ ಆಗಿ ಬಿಟ್ಟ.  ಇವನ ಸಂತಾನದವು ಎಲ್ಲಾ ಹೇಂಗಾರೂ ಕಾನೂನು ಪ್ರಕಾರ ಏಸು ಕ್ರಿಸ್ತನ ಅನುಯಾಯಿಗಳೇ. ಹಿಂದುತ್ವ ಒಳಿಶಿಗೊಂಡ ಮೇನಕಾ ಗಾಂಧಿಯ  ಪರಿವಾರವ ಮನೆಂದಲೇ ಹೆರ ಹಾಕಿದ್ದವು.   ನಿಜವಾಗಿಯೂ, ಇವರದ್ದು ವಸುಧೈವ ಕುಟುಂಬಕಂ ಹೇಳುದರ ಅಕ್ಷರಶಃ ಪಾಲಿಸುವ ಅಪರೂಪದ,  ಆದರ್ಶ ಜಾತ್ಯತೀತ ಪರಿವಾರ.  ಮೋತಿಲಾಲ್  ನೆಹರೂವಿನ ಆತ್ಮ ಇವರ ಧರ್ಮ ನಿರಪೇಕ್ಷತೆ ಕಂಡು  ಎಷ್ಟು ಹೆಮ್ಮೆ ಪಟ್ಟುಗೊಂಡಿದ್ದೋ  !       

ಇವು ಎಂತಹ ಢೋಂಗಿಗೊ  ಹೇಳಿರೆ, ಪ್ರಿಯಾಂಕಂಗೂ ಮದುವೆ ಅಪ್ಪಲೆ ಕ್ರಿಶ್ಚಿಯನ್ ಹುಡುಗನೇ ಬೇಕಾತು. ಇನ್ನು, ರಾಹುಲ್ ದೇ  ಇದೇ ದಾರಿ ಹಿಡಿವದು ಖಂಡಿತ.  ಹೇಳಿರೆ, ಇವರ ಜಾತ್ಯತೀತವಾದ ಎಷ್ಟು ಏಕಮುಖವಾದ್ದು ಹೇಳುದು ತಿಳಿವಲೆ ಕಷ್ಟ ಇಲ್ಲೆ.   ಇವಕ್ಕೆಲ್ಲಾ ಜಗತ್ತಿಂಗೆ ತೋರಿಸಿಗೊಂಬಲೆ ಹಿಂದೂಗೊಕ್ಕೆ ಸಾಮ್ಯ ಇಪ್ಪ ಹೆಸರುಗೊ ಬೇಕು.  ಇವರ ಸುತ್ತ ಮುತ್ತ  ಇಪ್ಪವರದ್ದೂ ಇದೇ ಕಥೆ - ಅಂಬಿಕಾ ಸೋನಿ, ಜೈಪಾಲ್  ರೆಡ್ಡಿ, ಅಜಿತ್ ಜೋಗಿ, ಜಗದೀಶ್ ಟೈಟ್ಲರ್, ಸಚಿನ್ ಪೈಲೆಟ್, ಆಸ್ಕರ್ ಫೆರ್ನಾಂಡಿಸ್, ಮಾರ್ಗರೆಟ್ ಆಳ್ವ,   ವೈಯಲಾರ್  ರವಿ,   ರಾಜಶೇಖರ ರೆಡ್ಡಿ - ಎಂತಕೆ ಇಷ್ಟೂ ಜನ ಆಂತಃಪುರದ ಪರಿಚಾರಕರು ಕೇವಲ ಕ್ರಿಶ್ಚಿನರು ? ಸೋನಿಯಾ ಗಾಂಧಿಯ ಕಚೇರಿಯ ಆಪ್ತ ಸಹಾಯಕರು ಅಹ್ಮದ್ ಪಟೇಲ್ ಮತ್ತು  ಸಿ.ಟಿ.ಜಾರ್ಜ್ ! ಇದು ಕೇವಲ ಕಾಕತಾಳೀಯ ಹೇಳುವ ಉದಾರ ಮನಸ್ಸಿನ ಪ್ರಜೆಗೊ ಇಪ್ಪನ್ನಾರ ಇವರ ಕಾರುಬಾರಿಂಗೆ ಎಂತ ತೊಂದರೆ ಆಗ.

೮.  ಮೊದಲಿಂದಲೂ ಸಮಾಜವಾದವ ಪ್ರತಿಪಾದಿಸಿಗೊಂಡು ಬಂದ ಪಕ್ಷ  ಕೋಂಗ್ರೇಸು. ಇದು ಬಲ ಮತ್ತು ಎಡ ಪಂಥೀಯರಿಂದ ಸಮಾನ ದೂರಲ್ಲಿಪ್ಪ ಮಧ್ಯದ, ತಟಸ್ಥ ಧೋರಣೆ ಹೇಳಿ ಲೆಕ್ಕ.  ಆದರೆ, ನಿಜವಾಗಿ ನೋಡಿರೆ, ನರಸಿಂಹ ರಾವ್  ಪ್ರಧಾನಿ ಅಪ್ಪಲ್ಲಿ ವರೆಗೂ ಥೇಟು ಎಡ ಪಂಥೀಯ ನೀತಿಯ ಕೋಂಗ್ರೇಸು ಸರಕಾರಂಗೊ ಪಾಲಿಸಿಗೊಂಡು ಬಂದದು  ಎಲ್ಲೋರಿಂಗೂ ಗೊಂತಿದ್ದು.  ದ್ವಿಪಕ್ಷೀಯ ಜಾಗತಿಕ ವ್ಯವಸ್ಥೆಲಿ ರಶ್ಯಾದ ಪರವಾಗಿ ನಿಂದದು, ಶಾಲೆ ಪಾಠ ಪುಸ್ತಕಂಗಳಲ್ಲಿ ಇದನ್ನೇ ಬೋಧಿಸಿದ್ದು ನಮ್ಮ ಸ್ವಾತಂತ್ರ್ಯಾನಂತರದ ತಲೆಮಾರುಗೊ ಇದೇ ಗುಂಗಿಲ್ಲಿ ಬೆಳೆವ ಹಾಂಗೆ ಮಾಡಿತ್ತು.  ಜರ್ಮನಿಯ ಹಾಂಗೆ, ಖಾಸಗಿ ಭಂಡವಾಳಕ್ಕೆ ಪ್ರೋತ್ಸಾಹ ಕೊಟ್ಟು, ಸರಕಾರದ ವತಿಂದ ಬಡತನದ ರೇಖೆಂದ ಕೆಳ ಇಪ್ಪವಕ್ಕೆ ಸಹಾಯ ಮಾಡಿದ್ದರೆ, ನಮ್ಮ ದೇಶ  ಈಗ ಎಷ್ಟೋ ಮುಂದೆ ಹೋವುತೀತು. ಕೋಂಗ್ರೇಸಿನ ಎಡೆಬಿಡಂಗಿ ಧೋರಣೆಂದಾಗಿ ಸಮಾಜಲ್ಲಿ ಕೇವಲ ಬಡತನವನ್ನೇ ಸೃಷ್ಟಿ ಮಾಡಿ ಹಂಚುವ ಹಾಂಗೆ ಆತು.   ಶ್ರೀಮಂತರ ಮತ್ತು ಬಡವರ ಮಧ್ಯದ ಅಂತರ ಹೆಚ್ಚಾಯ್ಕೊಂದೇ ಹೋತು.  ತಡವಾಗಿಯಾದರೂ ಭಾಜಪ ಪ್ರತಿಪಾದಿಸಿಗೊಂಡು ಬಂದ ಬಲಪಂಥೀಯ ವಾದವ  ಕೋಂಗ್ರೇಸು ಒಪ್ಪಿಗೊಂಡದು ಸಂತೋಷದ ವಿಷಯ.  ಆದರೂ, ಈ ಮಧ್ಯೆ ಎರಡು ತಲೆಮಾರಿನವು ನರಕ್ಕ ಬಪ್ಪ ಹಾಂಗೆ ಮಾಡಿದ್ದರ ಹೊಣೆಯ ಕೋಂಗ್ರೇಸಿನ   ಮೇಲೆ ಹೊರಿಸದ್ದೆ ಇಪ್ಪದು ಹೇಂಗೆ ?

(ಇನ್ನೂ ಇದ್ದು...)

- ಬಾಪಿ


Tuesday, June 9, 2009

ಕೋಂಗ್ರೇಸು ಎಂತಕೆ ಅಪಥ್ಯ -೩

(...ಮುಂದುವರುದ್ದು)..

೫. ಶಾಲೆಯ ಸಮಾಜ ಪಾಠಲ್ಲಿ ನಮ್ಮ ಸಂವಿಧಾನದ ಬಗ್ಗೆ ಕಲಿವಗ ಜಾತ್ಯತೀತ ಹೇಳುವ ಶಬ್ದ ಇತ್ತದು ನೆಂಪಿದ್ದು.   ಅಂಬಗ, ಈ ಶಬ್ದ ಯಣ್ ಸಂಧಿಗೆ ಒಂದು ಒಳ್ಳೆಯ ಉದಾಹರಣೆ ಹೇಳಿ ಗ್ರೇಶಿಗೊಂಡಿತ್ತದಷ್ಟೇ ಹೊರತು, ಕೋಂಗೇಸಿನವಕ್ಕೆ (ಮತ್ತೆ ದೇವೇಗೌಡನ ಹಾಂಗಿಪ್ಪವಕ್ಕೂ)  ಉಪಯೋಗ ಅಪ್ಪಷ್ಟು ದೊಡ್ಡ ಅರ್ಥವ್ಯಾಪ್ತಿ ಇದಕ್ಕೆ ಇದ್ದು ಹೇಳುವ ಕಲ್ಪನೆಯೇ ಬಂದಿತ್ತಿಲ್ಲೆ !   ಈ ಶಬ್ದದ ವ್ಯಾಖ್ಯಾನ ನೋಡಿರೆ, ಜಾತಿಗಳ ಮೀರಿದ ನಡವಳಿಕೆ ಹೇಳುವ ಅರ್ಥ ಇಪ್ಪದು ಗೊಂತಾವುತ್ತು. ಇಂದ್ರಾಣ ಕೋಂಗ್ರೇಸಿನ ಹಿಂದೂ ರಾಜಕಾರಣಿಗೊ ಈ ಅರ್ಥವ ಚಾಚೂ ತಪ್ಪದ್ದೆ ತಮ್ಮ ಜೀವನಲ್ಲಿ ಅನುಷ್ಠಾನ ಮಾಡ್ತಾ ಇಪ್ಪದರ ಕಂಡು ಇವರ ಬೋದಾಳತನದ ಬಗ್ಗೆ ಕನಿಕರ ಹುಟ್ಟುತ್ತು.  ಇವೆಲ್ಲಾ ತಮ್ಮ ಸ್ವಂತ ಹಿಂದೂತ್ವವ ಮರದು ಮುಸ್ಲಿಮರ, ಕ್ರಿಶ್ಚಿಯನ್ನರ ಖುಶಿ ಪಡುಸುಲೆ ಇರುಳು ಹಗಲು ಶ್ರಮಿಸುವ ಹೃದಯ ವೈಶಾಲ್ಯ ಪ್ರದರ್ಶಿಸುತ್ತಾ ಇಪ್ಪದರ  ನೋಡಿರೆ ಹೇಸಿಗೆ ಆವುತ್ತು.   ಮತ್ತೆ, ಇಂತಹ ಉದಾರ ಹೃದಯ ಹಿಂದೂಗೊಕ್ಕೆ  ಮಾತ್ರ ಇಪ್ಪದು, ಆಚ ಹೊಡೆಂದ ಇದಕ್ಕೆ ಯಾವ ಪ್ರತಿಕ್ರಿಯೆಯಾಗಲಿ, ಕೃತಜ್ಞತೆಯಾಗಲಿ ಇಲ್ಲೆ ಹೇಳುವ ಮೂಲಭೂತ ಸತ್ಯವ ತಿಳುಕ್ಕೊಂಬ ಗೋಜಿಂಗೆ ಹೋಗದ್ದ ಮುಗ್ಧತೆ ಕಂಡು ಮರುಕ ಆವುತ್ತು.  ಅಪ್ಪಟ ಬ್ಯಾರಿಗಳ ಪಕ್ಷವಾದ ಮುಸ್ಲಿಮ್ ಲೀಗಿಂಗೂ ಜಾತ್ಯತೀತ ಹೇಳುವ ಬಿರುದು ಕೊಟ್ಟು ಅವರ ಹೆಗಲಿಂಗೆ ಕೈ ಹಾಕಿಗೊಂಡು ಓಡಾಡುದರ ನೋಡಿರೆ ಜಿಗುಪ್ಸೆ ಹುಟ್ಟುತ್ತು.  

ಕೋಂಗ್ರೇಸಿನ ಹೀಂಗಿಪ್ಪ ಆಷಾಢಭೂತಿ ರಾಜಕಾರಣಿಗೊ ಇಷ್ಟು ವರ್ಷ ಮಾಡಿದ ಅಮೋಘ ಸಮಾಜ ಸೇವೆಯ ಕಾಣಿಕೆ ಎಂತ ಹೇಳಿರೆ,  ನಮ್ಮ ದೇಶಲ್ಲಿ ಅಲ್ಪ ಸಂಖ್ಯಾತರ ಹಿಂದೂಗಳ ಭವಿಷ್ಯವನ್ನೇ ನಿರ್ಧಾರ ಮಾಡುವಷ್ಟು  ನಿರ್ಣಾಯಕರಾಗಿ ಬೆಳೆಶಿ ನಿಲ್ಸಿದ್ದದು.  ನಮ್ಮ ದೇಶಲ್ಲಿಪ್ಪ ಜೈನರು, ಬೌದ್ಧರು, ಪಾರ್ಸಿಗೊ, ಸಿಖ್ ಇತ್ಯಾದಿಯವಕ್ಕೆ ಸಮಾಜಲ್ಲಿ ಸಹಜೀವನದ ಧರ್ಮವ ಪಾಲಿಸಿಗೊಂಡು ಶಾಂತಿಂದ ಬದುಕ್ಕುಲೆ ಎಡಿಗಪ್ಪಗ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಂದು ಮಾತ್ರ ಎಂತಕೆ ಯಾವಾಗಳೂ ತಕರಾರು ?  ಇವರ ಅಸಲು ಕುಟಿಲ ಕಾರ್ಯತಂತ್ರವ ಅರ್ಥ ಮಾಡಿಗೊಂಡು ಅವರ ಸರಿಯಾದ ಜಾಗೆಲಿ ಕೂರುಸುಲೆ ನವಗೆ ಏಕೆ ಎಡಿತ್ತಿಲ್ಲೆ ?  ಧರ್ಮದ್ರೋಹಿಗಳಾದ ಕೋಂಗ್ರೇಸಿನವು ಕಿರೀಟ ಕಟ್ಟಿಗೊಂಡು ತಿರುಗಿಗೊಂಡಿಪ್ಪಗ,  ಭಾಜಪ ಮತ್ತು ಶಿವಸೇನೆ  ಹಾಂಗಿಪ್ಪ ನಿಜವಾಗಿ ಅರ್ಥಲ್ಲಿ ಜಾತ್ಯತೀತರಾಗಿದ್ದು ದೇಶಪ್ರೇಮ ಮೆರೆವ ಪಕ್ಷಂಗೊ  ಜಾತಿವಾದಿ ಹೇಳುವ ಹಣೆಪಟ್ಟಿ ಕಟ್ಟಿಗೊಳೆಕ್ಕಾಗಿ ಬಂದಿಪ್ಪದು ಇಂದ್ರಾಣ ರಾಜಕೀಯದ ವಿಪರ್ಯಾಸ ಅಲ್ಲದೋ ?  

೬.   ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್  ಪತ್ರಿಕೆಲಿ  ಸ್ವಿಝರ್ಲ್ಯಾಂಡಿನ ನಿಯತಕಾಲಿಕ ಒಂದರಲ್ಲಿ ಮೊದಲೇ (೧೯೯೧ಲ್ಲಿ) ಪ್ರಕಟವಾದ  ಸುದ್ದಿಯ ಉದ್ಧರಿಸಿ ಒಂದು ಲೇಖನ ಬಂದಿತ್ತು. ಇದಲ್ಲಿ ಜಗತ್ತಿನ ಬೇರೆ ಬೇರೆ ದೇಶಂಗಳ ಕುಖ್ಯಾತ  ರಾಜಕಾರಣಿಗಳದ್ದು ಸ್ವಿಸ್ ಬ್ಯಾಂಕಿನ ಖಾತೆಗಳಲ್ಲಿ ಎಷ್ಟು ಹಣ ಇದ್ದು ಹೇಳುವ ವಿವರ ಇತ್ತು.  ಈ ಪಟ್ಟಿಲಿ ನಮ್ಮ ದೇಶವ ಪ್ರತಿನಿಧಿಸಿದ ಹೆಗ್ಗಳಿಕೆ ರಾಜೀವ್ ಗಾಂಧಿದು.   ವಿಮಾನದ ಪೈಲೆಟ್ ಆಗಿತ್ತವಂಗೆ ಇಷ್ಟು ಪೈಸೆ ಎಲ್ಲಿಂದ ಬಂತು ?  ಅಕಸ್ಮಾತ್ ಈ ಶುದ್ದಿ ಸುಳ್ಳಾಗಿದ್ದರೆ, ಅದರ ಖಂಡಿಸುದಾಗಲಿ, ಆ ಪತ್ರಿಕೆಯ ಮೇಲೆ  ಯಾವುದಾದರೂ ಕಾನೂನು ಕ್ರಮ ತೆಕ್ಕೊಂಬದಾಗಲಿ ಏಕೆ ಮಾಡಿದ್ದವಿಲ್ಲೆ ?  ಮರ್ಯಾದೆ ಇದ್ದರಲ್ದಾ ಹೋಪದು ಹೇಳುವ  ಮಿಜಾರು ಅಣ್ಣಪ್ಪನ ತರ್ಕಕ್ಕೆ ಇವರಷ್ಟು ಒಳ್ಳೆ ಉದಾಹರಣೆ ಬೇರೆ ಸಿಕ್ಕ.   ಚುನಾವಣಾ ಪ್ರಚಾರಲ್ಲಿ ಭಾಜಪ ಈ ವಿಷಯವ ಪ್ರಸ್ತಾಪ  ಮಾಡಿತ್ತು. ಭ್ರಷ್ಟಾಚಾರ ಹೇಳುದು ಜೀವನ ಶೈಲಿಯೇ ಆಗಿಪ್ಪ ನಮ್ಮ ದೇಶಲ್ಲಿ ಇದೊಂದು ದೊಡ್ಡ ವಿಷಯ ಆಯಿದೇ ಇಲ್ಲೆ.  ಈಗ ಭಾಜಪದ ಬೇಡಿಕೆಗೆ ಸ್ಪಂದಿಸಿ  ಇದೇ ರಾಜೀವ್ ಗಾಂಧಿಯ ಸುಪುತ್ರ ಈ ವಿಷಯವ ತನಿಖೆ ಮಾಡ್ಸುತ್ತೆ ಹೇಳಿದ್ದ.  ಕಳ್ಳನ ಮಗ ಸುಳ್ಳ ಹೇಳುದರ ನೆಂಪು ಮಾಡಿಗೊಂಡರೆ ಈ ಭರವಸೆಗೆ ಎಷ್ಟು ಮಹತ್ವ ಕೊಡ್ಳಕ್ಕು ಹೇಳುದು ಗೊಂತಾವುತ್ತು.

(ಇನ್ನೂ ಇದ್ದು...)   - ಬಾಪಿ

Friday, June 5, 2009

ಕೋಂಗ್ರೇಸು ಎಂತಕೆ ಅಪಥ್ಯ -೨

(...ಮುಂದುವರುದ್ದು)..

೩.  ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೬೨ ವರ್ಷ ಆತು.  ಇಷ್ಟೇ ಕಾಲಾವಧಿಲಿ ೨ನೇ ಜಾಗತಿಕ ಯುದ್ಧಲ್ಲಿ ಸಂಪೂರ್ಣ ಸೋತು ಸುಣ್ಣ ಆಗಿತ್ತ ದಯನೀಯ ಪರಿಸ್ಥಿತಿಂದ  ಜರ್ಮನಿ, ಜಪಾನಿನ ಹಾಂಗಿಪ್ಪವು ತಮ್ಮ  ದೇಶಂಗಳ ಸಂಪೂರ್ಣ ಪುನರ್ನಿಮಾಣ  ಮಾಡಿ ತೋರಿಸಿದವು.  ಆದರೆ, ನಮ್ಮ ದೇಶಲ್ಲಿ ಇನ್ನೂ ಏಕೆ ಇಷ್ಟು ಬಡತನ ಇದ್ದು ? ಎಂತಕೆ ಇಷ್ಟು ದೊಡ್ಡ ಪ್ರಮಾಣದ ಅನಕ್ಷರತೆ ಇದ್ದು ? ಭಾರತೀಯರು ಹೇಳಿರೆ ಭ್ರಷ್ಟಾಚಾರ, ಅದಕ್ಷತೆಗಳ ಅಪರಾವತಾರ ಹೇಳಿ ಬೇರೆ ದೇಶದವರಿಂದ ಅಪಹಾಸ್ಯ ಮಾಡಿಸಿಗೊಂಬಷ್ಟು ನಮ್ಮ ಸಾಮಾಜಿಕ ಅವನತಿ ಹೇಂಗಾತು ? ನರೇಂದ್ರ ಮೋದಿಗೆ ಕೇವಲ ೫ ವರ್ಷಲ್ಲಿ ಗುಜರಾತಿನ ನಂಬರ್ ೧ ಸ್ಥಾನಕ್ಕೆ ತೆಕ್ಕೊಂಡು  ಹೋಪಲೆ ಎಡಿಗಾದಿಪ್ಪಗ,  ಸ್ವಾತಂತ್ರ್ಯಾನಂತರ  ೫೦ ವರ್ಷದಷ್ಟು ಕಾಲವೂ ಕೇಂದ್ರಲ್ಲಿ ಮತ್ತು ವಿವಿಧ ಪ್ರಮುಖ ರಾಜ್ಯಂಗಳಲ್ಲಿ   ಆಢಳಿತ ಮಾಡಿಗೊಂಡಿತ್ತ  ಕೋಂಗ್ರೇಸಿನ ಸಾಧನೆ ಎಂತದು ? .ಈ ೫೦ ವರ್ಷಂಗಳಲ್ಲಿ ನಮ್ಮ ದೇಶದ ಎರಡು ತಲೆಮಾರಿನವು ತಮ್ಮ ಅಮೂಲ್ಯ ಜೀವನವ ನರಕ್ಕ ಬಂದು ಅಂಧಕಾರಲ್ಲಿ ಕಳೆವ ಹಾಂಗಾದ್ದಕ್ಕೆ ಆರು ಹೊಣೆ ? ಈ ಅದಕ್ಷ ಮತ್ತು ದುರಾಢಳಿತದ ನೈತಿಕ ಜವಾಬ್ದಾರಿಯ ಕೋಂಗ್ರೇಸು ಪಕ್ಷಕ್ಕಲ್ಲದ್ದೆ ಇನ್ಯಾರಿಂಗೆ ವಹಿಸೆಕ್ಕು ?

೪. ಪ್ರಪಂಚದ ಎಲ್ಲಾ ದೇಶಂಗಳಲ್ಲಿಯೂ ಉನ್ನತ ರಾಜನೈತಿಕ ಹುದ್ದೆಗೊ ಆಯಾ ದೇಶಂಗಳಲ್ಲಿ ಜನಿಸಿದ ಮೂಲ ನಾಗರಿಕರಿಂಗೆ ಮಾತ್ರ  ಮೀಸಲಾಗಿಪ್ಪದು ಸಾಮಾನ್ಯ ವಿಷಯ. ಯಾವಗಾಣ ಹಾಂಗೆ, ಭಾರತ ಮಾಂತ್ರ ಇದಕ್ಕೆ ಅಪವಾದ !  ಎಷ್ಟಾದರೂ ಅತಿಥಿ ದೇವೋ ಭವ ಹೇಳುವ  ನಮ್ಮ ಸಂಸ್ಕೃತಿಯ ಧ್ಯೇಯ ವಾಕ್ಯವ ಪಾಲಿಸದ್ದೆ ಇಪ್ಪದು  ಹೇಂಗೆ ?  ಇದು ಆರ ಬಗ್ಗೆ  ಹೇಳುಲೆ ಮಾಡ್ತಾ ಇಪ್ಪ ಪೀಠಿಕೆ ಹೇಳಿ ಇರುಳು ಒರಕ್ಕಿಂದ ಎಬ್ಬಿಸಿ ಕೇಳಿರೂ ಆರು ಬೇಕಾರೂ ಹೇಳುಗು.  ಸೋನಿಯಾ ಗಾಂಧಿ ಕೈಗೆ ಬಂದ ಪ್ರಧಾನ ಮಂತ್ರಿ ಹುದ್ದೆಯ ತಿರಸ್ಕರಿಸಿದ್ದೆ  ಹೇಳಿ ಮೇಲ್ನೋಟಕ್ಕೆ ತಪ್ಪಿಸಿಗೊಂಬಲಕ್ಕು. ಆದರೆ, ಕೋಂಗ್ರೇಸಿಲ್ಲಿ  ಮತ್ತು  UPAಲಿ  ನಿರ್ಧಾರ ತೆಕ್ಕೊಂಬದು ಆರು ಹೇಳುದು ಕುಂಙಿ ಮಕ್ಕೊಗೂ ಗೊಂತಿಪ್ಪ ವಿಷಯ.  ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಇಷ್ಟು ಮುಖ್ಯ ಸ್ಥಾನವ ವಹಿಸಿಗೊಂಬಲೆ ಸೋನಿಯಾ ಗಾಂಧಿಯ ಯೋಗ್ಯತೆ ಎಂತದು ? ತನ್ನ ಮೂರ್ಖತನದ ನಿರ್ಧಾರಂಗಳಿಂದ  ಸೃಷ್ಟಿಯಾದ ಸಮಸ್ಯೆಗಳ ಫಲವಾಗಿ  ಹೊಟ್ಟಿದ ಬಾಂಬಿಂಗೆ ಬಲಿಯಾದ ಗೆಂಡನ ವಿಧವೆ ಆಗಿಪ್ಪದೊಂದೇ ದೊಡ್ಡ ಅರ್ಹತೆಯೋ ?  ಅಥವಾ ಸ್ವಿಝರ್ಲ್ಯಾಂಡಿಲ್ಲಿ ಹುಗ್ಗಿಸಿ ಮಡುಗಿದ ಕಪ್ಪು ಹಣ ಇಪ್ಪ ಪೆಟ್ಟಿಗೆಯ ಬೀಗದ ಕೈ ಇದರತ್ರೆ ಇಪ್ಪ ಕಾರಣವೋ ?  ಮದುವೆ ಆಗಿ ಎಷ್ಟೋ ವರ್ಷ ವರೆಗೂ ಭಾರತದ ಪೌರತ್ವವನ್ನೇ ತೆಕ್ಕೊಳದ್ದೆ ಇತ್ತ ಈ ವ್ಯಕ್ತಿಯ ದೇಶ ನಿಷ್ಠೆ  ಎಂತದು ? ಇವರ ಕುಟುಂಬಕ್ಕೂ ಇಟೆಲಿಯ ಕೋತ್ರೋಕಿ ಹೇಳುವ ಕುಖ್ಯಾತ ಮಧ್ಯವರ್ತಿಗೂ ಇಪ್ಪ ಸಂಬಂಧ ಎಂತದು ? ಎಲ್ಲಾ ವಿಷಯಂಗಳಲ್ಲಿಯೂ ಜಾಣ ಮೌನ, ಗೌಪ್ಯತೆ ಮತ್ತು ಸಂಶಯಾತ್ಮಕ ನಡವಳಿಕೆಯೇ ಚಾಳಿ ಆಗಿಪ್ಪ ಕೋಂಗ್ರೇಸಿನ ಸದ್ಯದ ಅಧ್ಯಕ್ಷೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬಪ್ಪದಾದರೂ ಹೇಂಗೆ ? 

(ಇನ್ನೂ ಇದ್ದು...) - ಬಾಪಿ

Tuesday, June 2, 2009

ಕೋಂಗ್ರೇಸು ಎಂತಕೆ ಅಪಥ್ಯ -೧

ರಾಜಕಾರಣ ಹೇಳುದು  ಸಮಾಜಸೇವೆ ಮಾಡ್ಳಿಪ್ಪ ಕ್ಷೇತ್ರ ಹೇಳುವ ಕಾಲ ಒಂದಿತ್ತು ಹೇಳುದರ  ನವಗೆ ಕೇಳಿ ಗೊಂತಿಕ್ಕು.  ನಮ್ಮ ಕಾಲಕ್ಕಪ್ಪಗ  ರಾಜಕೀಯ ಒಂದು ದಂಧೆಯಾಗಿ ಬದಲಾಯಿದು.  ಯಾಕೆ ಹೀಂಗಾತು ಹೇಳುದರ ಗಹನವಾಗಿ ವಿಮರ್ಶೆ ಮಾಡುವ ಅಗತ್ಯ ಇದ್ದು.  ನಾವೇ ಚುನಾವಣೆಲಿ ಒಂದು ಕೈ ನೋಡುವೋ ಹೇಳಿ  ಸ್ಪರ್ಧಿಸಿ ಪ್ರಯತ್ನ ಮಾಡ್ಳುದೇ ಅಕ್ಕು. ಆದರೆ, ಇದು  ತುಂಬಾ ದೀರ್ಘ ಪಯಣ ಮತ್ತು ಕಠಿಣ ಹಾದಿ.  ಹಾಂಗಾಗಿ, ಪರಿಸ್ಥಿತಿಯ ಬದಲಾಯಿಸುವ ಹಂಬಲ ಇದ್ದರೆ, ಸುಲಭ ವಿಧಾನ ಹೇಳಿರೆ ಚುನಾವಣೆಲಿ ತಪ್ಪದ್ದೆ ಮತ ಹಾಕುದು. ಇಷ್ಟು ಪರ್ಯಾಯಂಗೊ ಇಪ್ಪಗ, ಯಾವ ಪಕ್ಷವ ಬೆಂಬಲಿಸುದು ಹೇಳುವ ಪ್ರಶ್ನೆ ಸ್ವಾಭಾವಿಕ.  ಇಂದ್ರಾಣ ಪರಿಸ್ಥಿತಿಲಿ ಪೂರ್ಣ ಪ್ರಮಾಣದ ಆದರ್ಶವ ಪ್ರತಿಪಾದಿಸುವ ಪಕ್ಷ ಆಗಲಿ, ಅಭ್ಯರ್ಥಿ ಆಗಲೀ ಸಿಕ್ಕುದು ಕಷ್ಟ.  ಮತ್ತೆ, ಬದಲಾದ  ಜಾಗತಿಕ ವ್ಯವಸ್ಥೆಲಿ  ಪಕ್ಷಂಗಳ ಮಧ್ಯೆ ಇಪ್ಪ ಸೈದ್ಧಾಂತಿಕ ವ್ಯತ್ಯಾಸ  (ಬಹು ಮುಖ್ಯವಾದ ಆರ್ಥವ್ಯವಸ್ಥೆಗೆ ಸಂಬಂಧಿಸಿದ)  ಕಮ್ಮಿ ಆವುತ್ತಾ ಇದ್ದು.   ಹಾಂಗಾರೆ,  ಹೆಚ್ಚು ಸರ್ತಿಯೂ "ಕುರುಡಂದ ಕೋಸು ಕಣ್ಣ ಅಕ್ಕು" ಹೇಳುವ ಗಾದೆಯ ಮೊರೆ ಹೋಯೆಕ್ಕಾವುತ್ತು.  ಆದರುದೇ ಕೋಂಗ್ರೇಸು ಪಕ್ಷ ಎಷ್ಟಕ್ಕೂ ಅಪಥ್ಯ ಹೇಳುವ ಮನಃಸ್ಥಿತಿಯ ಯಾಕೋ ಬದಲಾಯಿಸುಲೆ ಎಡಿತ್ತೇ ಇಲ್ಲೆ. ಇದಕ್ಕೆ ಕಾರಣಂಗಳ ಹುಡುಕ್ಕಿ ವಿವರಿಸದ್ರೆ  ಪೂರ್ವಾಗ್ರಹದ ಚಿಂತನೆ ಹೇಳಿ ಕಾಂಗು.  ಎನ್ನ ತಲೆಮಾರಿನವು ವಿದ್ಯಾರ್ಥಿ ಜೀವನಲ್ಲಿಪ್ಪಗಾಣ ಸಮಕಾಲೀನ ಕೋಂಗ್ರೇಸಿನ  ಚರಿತ್ರೆಯ ಭೂತದ ಛಾಯೆ ಮನಸ್ಸಿನ ಮೇಲೆ  ಗಾಢವಾಗಿಪ್ಪದು ಒಂದು ಬಹು ಮುಖ್ಯ ವಿಷಯ.  ಈಗ, ಈ ಅಪಥ್ಯಕ್ಕೆ ಕಾರಣವಾದ ಸಂಗತಿಗಳ ಒಂದೊಂದಾಗಿ ನೋಡುವೋ.

೧    ಕೋಂಗ್ರೇಸು ಹೇಳುದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಹಾಕಿದ ಒಂದು ಸಂಸ್ಥೆಯ ಹೆಸರು. ಗಾಂಧೀಜಿಯ ನೇತೃತ್ವಲ್ಲಿ ಇದು ಒಂದು ಜನಾಂದೋಲನವಾಗಿ, ಹೋರಾಟದ ಕೇಂದ್ರ ಬಿಂದುವಾಗಿ ರೂಪುಗೊಂಡತ್ತು. ಉದ್ದೇಶ ಸಾಧನೆ ಆದ ಮೇಲೆ ಈ ಸಂಸ್ಥೆಯ  ವಿಸರ್ಜಿಸಿದವಡ. ಸ್ವಾತಂತ್ರ್ಯಾನಂತರ ಗಾಂಧೀಜಿಯೇ ಮೊದಲಾದವು ನಿವೃತ್ತರಾದರೆ, ನೆಹರೂ ಹಾಂಗಿಪ್ಪ ಸುಮಾರು ಜನ  ನವಭಾರತದ ರಾಜಕಾರಣಲ್ಲಿ ಸಕ್ರಿಯರಾದವು. ಕೋಂಗ್ರೇಸು ಹೇಳುವ ಹೆಸರಿಲ್ಲಿ  ಒಂದು ರಾಜಕೀಯ ಪಕ್ಷ  ಮುಂದುವರಿಕ್ಕೊಂಡು ಬಂತು.    

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಂದ ರಾಜಕಾರಣಿಗಳಾದ ಜನಂಗೊ ಜೀವಲ್ಲಿ ಇಪ್ಪವರೆಗೆ ಕೋಂಗ್ರೇಸು ಪಕ್ಷ ಆದರ್ಶ, ಸಿದ್ಧಾಂತ, ರಾಷ್ಟ್ರಪ್ರೇಮ ಇತ್ಯಾದಿಗಳ ಎತ್ತಿಹಿಡುದ ಹೆಗ್ಗಳಿಕೆ ಪಡಕ್ಕೊಂಡಿತ್ತು.   ಆದರೆ, ಸದ್ಯಕ್ಕೆ ಈ ಪಕ್ಷ ಇದರ ಪೂರ್ವಾಶ್ರಮದ ಲಕ್ಷಣಂಗೊಕ್ಕೆ ಯಾವುದೇ ಸಾಮ್ಯ ಇಲ್ಲದ್ದ ಒಂದು ಸ್ವಾರ್ಥಿಗಳ ಗುಂಪಾಗಿ ಕಾಣ್ತು.  ವಿಶೇಷತಃ, ಇದು ಇಂದಿರಾ ಗಾಂಧಿಯ ಆಗಮನದ ನಂತರ ಆದ ಪರಿವರ್ತನೆ.   ಯಾವ ಸ್ವಾತಂತ್ರ್ಯಕ್ಕಾಗಿ ಹಳೆ ತಲೆಮಾರಿನವು ಹೋರಾಟ ಮಾಡಿದವೋ, ಅದೇ ಅಮೂಲ್ಯ ಸ್ವಾತಂತ್ರ್ಯವ ಪ್ರಜೆಗಳಿಂಗೆ  ಇಲ್ಲದ್ದ ಹಾಂಗೆ ಮಾಡಿದ ತುರ್ತು ಪರಿಸ್ಥಿತಿಯ ಕರಾಳ ಶಾಸನವ ದೇಶದ ಮೇಲೆ ವಿಧಿಸಿದ ಕ್ರೂರಿಗಳ  ಪಕ್ಷ ಇಂದ್ರಾಣ ಕೋಂಗ್ರೇಸು.   

೨.೦  ಈ ಪಕ್ಷ ಕೊಂಗ್ರೇಸು (ಐ) ಹೇಳಿ ಪುನರ್ನಾಮಕರಣಗೊಂಡದು ಅತ್ಯಂತ ಹಾಸ್ಯಾಸ್ಪದ ವಿಷಯ.  ಈ ಬೆಳವಣಿಗೆಯ  ಇಂದಿರಾ ಗಾಂಧಿ ಹೇಳುವ ದುಷ್ಟ ಮಹಿಳೆಯ ದುರ್ಬುದ್ಧಿಯ, ದುರಹಂಕಾರದ ಸಂಕೇತವಾಗಿ ಮತ್ತು ಸಾವಿರಾರು ಜನ ನಿಃಸ್ವಾರ್ಥಿಗೊ ಕಟ್ಟಿಬೆಳೆಶಿದ ಪಕ್ಷವ ತನ್ನ ಅಪ್ಪನ ಮನೆಯ ಆಸ್ತಿಯೋ ಹೇಳುವ ಹಾಂಗೆ ಸರ್ವಾಧಿಕಾರಿ ಧೋರಣೆಲಿ ನಡೆಶಿಗೊಂಡ ಪ್ರವೃತ್ತಿಯ ಪ್ರತೀಕವಾಗಿ ಜನ ನೆಂಪು ಮಾಡಿಗೊಳ್ತವು.   ನೆಹರೂವಿನ ವಂಶದ ನಾಲ್ಕನೇ ತಲೆಮಾರಿನವರ ವಂಶಪಾರಂಪರ್ಯದ  ಆಢಳಿತ ನಡೆತ್ತಾ ಇಪ್ಪ ಸದ್ಯದ ಪರಿಸ್ಥಿತಿಲಿ, ಪಕ್ಷದ ಹೆಸರಿನ ಇಟೆಲಿಯ ಹೊಸ ನೆಂಟಸ್ತನದ ಕೊಡುಗೆಯುದೇ  ನೆಂಪು ಉಳಿವ ಹಾಂಗೆ ಇನ್ನೊಂದು ಸರ್ತಿ ಬದಲಿಸಿರೆ ಸಮರ್ಪಕ ಅಕ್ಕೋ ಹೇಳುವ ಆಲೋಚನೆ ಬತ್ತಾ ಇದ್ದು.  ಹಾಂಗಾರೆ, "ಐ"  ಬದಲು "ವಿ" ಹೇಳಿ (we ಹೇಳಿರೆ ಎಂಗೊಗೆ ಮಾತ್ರ ಸೇರಿದ್ದು  ಹೇಳುವ ಅರ್ಥಲ್ಲಿ)  ಬದಲಿಸಿದರೆ ಸರಿ ಅಕ್ಕೋ ? 

(ಇನ್ನೂ ಇದ್ದು...) - ಬಾಪಿ

Thursday, May 28, 2009

ಶುಭಾಶಯ

ರಾಜಕೀಯ ಸಿದ್ಧಾಂತದ ವಿರೋಧಂಗಳ ಮರದು, ಇಂದು ಪೂರ್ಣ ಪ್ರಮಾಣಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಕೇಂದ್ರ ಸಚಿವ ಸಂಪುಟಕ್ಕೆ ಶುಭ ಹಾರೈಸುತ್ತೆ.  ಮೊದಲೇ ಹೇಳಿ ಬಿಡ್ತೆ,  ಇಂದ್ರಾಣ ಶೈಲಿ ರಜ ಬೇರೆ - ಯಾವಾಗಳೂ ಕೌರವನ ಅರ್ಥ ಹೇಳುವ ಪ್ರಭಾಕರ ಜೋಷಿಯ ರಾಮನ ಪಾತ್ರದ ಅರ್ಥ ಕೇಳಿ ಅಪ್ಪಗ ಯಾಕೋ ಇದು ಒಂಬುತ್ತಿಲ್ಲೆನ್ನೇ   ಹೇಳಿದ ಹಾಂಗೆ ಕಾಂಬಲೂ ಸಾಕು ! ಸಂಗತಿಯೇ ಹಾಗಿದ್ದು.  ಇಂದಿನ ಬದಲಾದ ಪರಿಸ್ಥಿತಿಲಿ, ರಾಷ್ಟ್ರೀಯವಾದದ ಹಾಂಗಿಪ್ಪ  ಕೆಲವು ಸೂಕ್ಷ್ಮ ವಿಷಯಂಗಳ ಬಿಟ್ಟರೆ,  ಕೋಂಗ್ರೇಸಿಂಗೂ ಭಾಜಪಕ್ಕೂ ಎಂತ ವ್ಯತ್ಯಾಸವೂ ಕಾಣ್ತಿಲ್ಲೆ.  ಸಮಾಜವಾದದ ಮಂತ್ರ ಹೇಳಿಗೊಂಡಿತ್ತ  ಕೋಂಗ್ರೇಸು ಇಂದು ಭಾಜಪದಷ್ಟೇ ಅಪ್ಪಟ ಬಲಪಂಥೀಯ ಪಕ್ಷ.  ಹಾಂಗಾಗಿ, ಎನ್ನ ಒಳ ಹುಗ್ಗಿ ಕೂದುಗೊಂಡಿಪ್ಪ ಕೈಗಾರಿಕೋದ್ಯಮಿಗೆ  ಕೋಂಗ್ರೇಸು ಪಕ್ಷ - ಕಮ್ಯುನಿಷ್ಟರ ರಹಿತವಾಗಿ -  ಅಧಿಕಾರ ಮಾಡಿರೆ, ಯಾವ ತಕರಾರೂ ಇಲ್ಲೆ.   (ಆದರೆ, ಎನ್ನ ಒಳವೇ ಇನ್ನೊಂದು ಹೊಡೆಲಿಪ್ಪ ಸ್ವಾಭಿಮಾನಿ ಭಾರತೀಯಂಗೆ  ಇವರ ಸಹಿಸಿಗೊಂಬಲೆ ಕಷ್ಟ ಆವುತ್ತು.)    

ಸಮ್ಮಿಶ್ರ ಸರಕಾರಲ್ಲಿ ಪ್ರಧಾನಿ ಆಗಿತ್ತರೂ ವಾಜಪೇಯಿಗೆ ಸ್ವಂತ ವರ್ಚಸ್ಸಿನ ಬಲಲ್ಲಿ ಕೆಲವು ಮುಖ್ಯ ನಿರ್ಧಾರಂಗಳ ತೆಕ್ಕೊಂಬ ಸಾಮರ್ಥ್ಯ ಇತ್ತು.  ಹೆಚ್ಚು ಕಮ್ಮಿ ಇದೇ ಪರಿಸ್ಥಿತಿಲಿತ್ತ ಈ ಮೊದಲಿನ ಸರಕಾರದ ಮುಖ್ಯಸ್ಥನಾಗಿ ಮನಮೋಹನ ಸಿಂಗಂಗೆ ಸೋನಿಯಾ ಗಾಂಧಿಯ ಸೆರಗು ಹಿಡುದು ನೇಲದ್ದೆ  ಯಾವ ನಿರ್ಧಾರ ತೆಕ್ಕೊಂಬಲೂ ಸಾಧ್ಯ ಆಯಿದಿಲ್ಲೆ.   ಈ ಕಾರಣಂದ ಮನಮೋಹನಂಗೆ ದುರ್ಬಲ ಪ್ರಧಾನಿ ಹೇಳುವ ಬಿರುದು ಅಂಟಿತ್ತು.  ಆದರೆ,  ಮನಮೋಹನಂಗೆ  ವಾಜಪೇಯಿಯಷ್ಟು ರಾಜಕೀಯ ಅನುಭವ ಇಲ್ಲದ್ರೂ  ಆಢಳಿತಾನುಭವ ಬೇಕಾದಷ್ಟಿದ್ದು.  ಮತ್ತೆ ಈ ಸಂಸತ್ತಿಲ್ಲಿ ಸದಸ್ಯರ ಸಂಖ್ಯೆ ಕೋಂಗ್ರೇಸಿನ ಪರವಾಗಿಪ್ಪ ಕಾರಣ, ಇವನ ಹೆಗಲು ಮೊದಲಿಂದ ಎತ್ತರ ಆದ ಹಾಂಗೆ ಕಾಣ್ತು.  ಹೊಸ ಸಂಪುಟ ರಚನೆಯ ಸರ್ಕಸ್ಸಿಲ್ಲಿಯೇ ಇವ ಈಗ ಮೊದಲಿನ ಹಾಂಗಲ್ಲ, ರಜ ಉಷಾರಿ ಆಯಿದ ಹೇಳಿ ಗೊಂತಾವುತ್ತು. 

ಬೆನ್ನಿಂಗೆ ಸಲಕ್ಕೆ ಕಟ್ಟಿರೂ ಎದ್ದು ನಿಂಬಲೆಡಿಯದ್ದಷ್ಟು ಪ್ರಾಯ ಆದರೂ ಕುರ್ಚಿ ಬಿಡುವ ಆಲೋಚನೆಲಿಲ್ಲದ್ದ ಕೆಲವು ಮುದುಕರ,  ಮತ್ತೆ  ಕೆಲವು  ಮಹಾ ಪೆದಂಬಂಗಳ ಹಾಂಗೂ ಅದಕ್ಷರ  ಸಚಿವ ಸಂಪುಟಂದ ಕೈಬಿಟ್ಟದು ಮೆಚ್ಚೆಕ್ಕಾದ ನಿರ್ಧಾರ.  ಹೀಂಗೆ ಮಂತ್ರಿ ಸ್ಥಾನ ಕಳಕ್ಕೊಂಡವರ ಬಗ್ಗೆ ರಜ ಮಾತಾಡದ್ದೆ ಇಂದ್ರಾಣ ಮಂತ್ರ ಪಠನ ಮುಗಿಶುಲೆಡಿಯ. ಇವರಲ್ಲಿ ಒಬ್ಬ ಶಿವರಾಜ್ ಪಾಟೀಲ್ ಹೇಳುವ ಸನ್ಮಾನ್ಯ ಮಾಜಿ ಗೃಹ ಮಂತ್ರಿ.  ಮುಂಬೈಯ ತಾಜ್ ಹೋಟೇಲಿಲ್ಲಿ ಉಗ್ರಗಾಮಿಗೊ ಹೊಕ್ಕು ದಾಂಧಲೆ ಮಾಡ್ತಾ ಇಪ್ಪಗ ಪಿಟೀಲು ಬಾರಿಸಿಗೊಂಡಿತ್ತ  ೨೧ನೇ ಶತಮಾನದ ನೀರೋ.  ಗುಜರಾತಿನ ಸ್ಫೋಟ ಆದ ಮೇಲೆ ನರೇಂದ್ರ ಮೋದಿ ಘಟನೆಗಳ ವಿವರ ಕೊಡ್ಳೆ ಹೇಳಿ ಈ ಅಸಾಮಿಯ ಹತ್ರೆ ಹೋದರೆ,   "ಎನಗೆ ಉಂಬಲೆ ಹೋಪಲೆ ಇದ್ದು, ಎಂತ ಹೇಳ್ತರೂ ೫ ನಿಮಿಷಲ್ಲಿ ಹೇಳಿ ಮುಗಿಶು"  ಹೇಳಿದ ತಿಮ್ರಾಂಡಿ.  ಅಮಿತಾಭ್ ಬಚ್ಚನಿಂಗೂ ನಾಚಿಕೆ ಅಪ್ಪ ಹಾಂಗೆ ದಿನಕ್ಕೆ ಹತ್ತು ಸರ್ತಿ ಡ್ರೆಸ್ಸು ಬದಲಿಸಿಗೊಂಬ ಅಭ್ಯಾಸದ  ಶೋಕಿಲಾಲ.  ಇನ್ನೊಬ್ಬ,  ಭಾರತ ದೇಶದ ಮಾನವ ಸಂಪನ್ಮೂಲವ ಲಗಾಡಿ ತೆಗವಲೆ ಹೇಳಿ ಮಾಡಿಸಿದ ಹಾಂಗಿಪ್ಪ  ಅರ್ಜುನ ಸಿಂಗ್  ಹೇಳುವ ಕೇಂದ್ರ ಮಂತ್ರಿಮಂಡಲದ ಖಾಯಂ ಗಿರಾಕಿ.  ಜಗತ್ತಿಲ್ಲೇ ಅತ್ಯಂತ ಹೆಚ್ಚು ಸಂಖ್ಯೆಯ ಯುವಪೀಳಿಗೆಯ ಜನ ಇಪ್ಪದು ನಮ್ಮ ದೇಶಲ್ಲಿ ಹೇಳುವ  ಅತಿ ಮುಖ್ಯ ವಿಷಯ  ಕುಂಭಕರ್ಣ ಗೋತ್ರದ ಮಂತ್ರಿಗೊ ಇಪ್ಪ ನಮ್ಮ ಘನ ಸರಕಾರದ ಗಮನಕ್ಕೆ ಬಂದಿಪ್ಪದು ಸಂಶಯ ! ಯುವಜನರ ಭವಿಷ್ಯವ ರೂಪಿಸಿ, ಅವರ ಆಶೋತ್ತರಂಗಳ ಈಡೇರಿಸಿ, ಜಾಗತಿಕ ಪೈಪೋಟಿಲಿ  ಬೇರೆ ದೇಶಂಗಳಿಂದ ಸ್ಪರ್ಧಾತ್ಮಕ ಮುನ್ನಡೆ  ಪಡಕ್ಕೊಂಬ ಅಪುರ್ವ ಅವಕಾಶ ಈಗ ನಮ್ಮ ದೇಶಕ್ಕಿದ್ದು.  ಈ  ಹೊಣೆ ಮಾನವ ಸಂಪನ್ಮೂಲ ಮಂತ್ರಾಲಯದ್ದು.  ವಿಪರ್ಯಾಸ ಹೇಳಿರೆ, ಈ ಮಂತ್ರಾಲಯದ ಜವಾಬ್ದಾರಿಯ ಇಷ್ಟು ದಿನ ಅರ್ಜುನ್ ಸಿಂಗನ ಹಾಂಗಿಪ್ಪ ಗಾಲಿಕುರ್ಚಿಲಿ ಓಡಾಡುವ ಪರಬ್ಬಂಗೆ ವಹಿಸಿದ್ದದು. ಇವ ತೊಲಗಿದ್ದದು ನಮ್ಮ ದೇಶದ ದೊಡ್ಡ ಸೌಭಾಗ್ಯವೇ ಸರಿ.   ಇನ್ನು,  ಬಾಲು ಹೇಳುವ ಸಾರಿಗೆ ಮಂತ್ರಿಯ  ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಕಾರಣಕ್ಕಾಗಿ ತಿರುಗ ಮಂತ್ರಿ ಮಾಡಿದ್ದವಿಲ್ಲೆಡ.   ಮತ್ತೊಬ್ಬ ಸೈಫುದ್ದೀನ್ ಸೋಜ್  ಹೇಳುವ  ಉಗ್ರಗಾಮಿಯೋ ಹೇಳಿ ಸಂಶಯ ಬಪ್ಪ ಹಾಂಗಿಪ್ಪ ಕಾಶ್ಮೀರದ ಬಾಯಿ ಬಡುಕ.

ಹಾಂಗಾಗಿ ಕಳೆದ ಸರ್ತಿಲಿ ದುರ್ಬಲ ಪ್ರಧಾನಿ ಹೇಳಿಯೇ ಹೆಚ್ಚು ಪ್ರಸಿದ್ಧಿ ಪಡೆದ ಮನಮೋಹನ ಸಿಂಗ್ ರಜ್ಜ ಮಟ್ಟಿಂಗೆ ಸಬಲ ಆದ್ದದು ಈ ಚುನಾವಣೆಯ ಒಂದು ಧನಾತ್ಮಕ ಅಂಶ ಹೇಳಿ ಧಾರಾಳ ಹೇಳ್ಳಕ್ಕು. ಹೊಸ ಸಂಪುಟಲ್ಲಿ ಆದಷ್ಟು ಹೊಸ ಮುಖಂಗಳ ಪರಿಚಯಿಸುವ ಪ್ರಯತ್ನ ಮಾಡಿದ್ದ.  ರಾಹುಲ್ ಗಾಂಧಿಯ ಯುವಪಡೆಯ ಸದಸ್ಯರಾದ ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್, ಸಚಿನ್ ಪೈಲೆಟ್ , ಜಿತೇನ್ ಪ್ರಸಾದ್ ಮುಂತಾದವು ರಾಜ್ಯ ಮಂತ್ರಿಗಳಾದರೂ ಸಂಪುಟಲ್ಲಿಪ್ಪದು ಭವಿಷ್ಯದ ದೃಷ್ಟಿಂದ ಉತ್ತಮ.  ಬೆಂಗ್ಳೂರಿಲ್ಲಿ  ಕೃಷ್ನಬೈರೇಗೌಡ ಚುನಾವಣೆಲಿ ಸೋತ ಕಾರಣ ಅವಕಾಶ ಕಳಕ್ಕೊಂಡ.   ಈ ಸರ್ತಿ ಸಂಪುಟಲ್ಲಿಪ್ಪ  ಮಂತ್ರಿಗಳ ಸರಾಸರಿ ಪ್ರಾಯ ೫೭ ವರ್ಷ ಹೇಳಿ ವರದಿ ಆಯಿದು.  ಹೊಸ  ಚಿಗುರು, ಹಳೆ ಬೇರುಗೊ ಸೇರಿ ದೇಶದ ಸೊಬಗಿನ ಹೆಚ್ಚು ಮಾಡುವ ಸುವರ್ಣ ಅವಕಾಶ.  ಇದರಲ್ಲಿ ಅತಿ ಸಣ್ಣ ಪ್ರಾಯದ  ೨೮ರ ಅಗಥಾ ಸಂಗ್ಮಾಂದ ಹಿಡುದು ೭೭ ವರ್ಷ ಪ್ರಾಯದ ಎಸ್ಸೆಂ ಕೃಷ್ಣನ ವರೆಗೆ  ೩ ತಲೆಮಾರಿನ ವ್ಯಕ್ತಿಗೊ ಇಪ್ಪದು ನೋಡಿರೆ ನಮ್ಮ ಅಪ್ಪಟ ಭಾರತೀಯ ಶೈಲಿಯ  ದೊಡ್ಡ ಅವಿಭಕ್ತ ಕುಟುಂಬವ ನೋಡಿದ ಹಾಂಗಾವುತ್ತು.   

ಆದರೂ ನಮ್ಮ ದೇಶಲ್ಲಿ ಬೊಬ್ಬೆ ಹಾಕುವವೇ ಬೇರೆ, ವೋಟು ಹಾಕುವವೇ ಬೇರೆ ಹೇಳುವ ಸಾಮಾಜಿಕ ದ್ವಂದ್ವ ಇಪ್ಪ ಕಾರಣ, ಹೊಸ ಸರಕಾರದ ಕಾರ್ಯಕ್ರಮಂಗೊ ಹೇಂಗಿಕ್ಕು  ಹೇಳುವ ಬಗ್ಗೆ ತೀವ್ರ ಕುತೂಹಲ ಇದ್ದು.  ಸಂಸತ್ತಿಲ್ಲಿ ಮತ್ತು ಮಂತ್ರಿಮಂಡಲಲ್ಲಿ ತರುಣರ ಸೇರ್ಪಡೆಂದ ಸಮಾಜದ ಯುವಜನರು ಇನ್ನು ಮುಂದೆ  ಮತದಾನದ ಪ್ರಕ್ರಿಯೆಲಿ  ಹೆಚ್ಚು ಸಕ್ರಿಯರಾಗಿ ಭಾಗವಹಿಸುಲೆ ಪ್ರೇರಣೆ ಸಿಕ್ಕುವ ಹಾಂಗಾದರೆ,  ರಾಹುಲ್ ಗಾಂಧಿಯ ರಾಜಕೀಯ ಪ್ರವೇಶ ಮತ್ತು ಪ್ರಯತ್ನ ಸಾರ್ಥಕ.

- ಬಾಪಿ

Saturday, May 23, 2009

ವಂಶ ವೃಕ್ಷ


ಈ ದೇಶದ  ಮಕ್ಕಳಲ್ಲಿ ಎಷ್ಟು ಜನಕ್ಕೆ  ರಾಮ, ಕೃಷ್ಣ, ಬುದ್ಧ, ಶಂಕರಾಚಾರ್ಯ, ವಿವೇಕಾನಂದರಂತಹ  ನಮ್ಮ ಇತಿಹಾಸ ಮತ್ತು ಪುರಾಣದ ಪ್ರಸಿದ್ಧ ವ್ಯಕ್ತಿಗಳ ಹೆಸರು ಗೊಂತಿಕ್ಕು ? ಆದರೆ ಇದೇ ಮಕ್ಕೊಗೆ ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಕಮಲಾ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇತ್ಯಾದಿಯವರ ಹೆಸರು ಖಂಡಿತ ಬಾಯಿಪಾಠ ಆಗಿರ್ತು !  ನಮ್ಮ ರಾಜಕೀಯದ ಈ ಅಭಿನವ ಪ್ರಾತಃಸ್ಮರಣೀಯರ ಹೆಸರುಗೊ ಶಾಲೆಯ ಪಾಠಪುಸ್ತಕಂಗಳಲ್ಲಿ ಮಾಂತ್ರ ಅಲ್ಲದ್ದೆ,   ಪೇಟೆಗಳ ಬಡಾವಣೆಗೊ, ರಾಜ ಮಾರ್ಗಂಗೊ, ಬಸ್ ಯಾ ವಿಮಾನ ನಿಲ್ದಾಣಂಗೊ,  ಸರಕಾರದ ಸಾರ್ವಜನಿಕ ಯೋಜನೆಗೊ -  ಹೀಂಗೆ ಅವಕಾಶ ಇಪ್ಪಲ್ಲಿ  ಪೂರಾ ಪುನರಾವರ್ತನೆ ಆಗಿ  ಸಮಾಜದ ಎಲ್ಲಾ ವರ್ಗದ ಜನರ ಬಾಯಿಲಿ  ಅಜರಾಮರವಾಗಿ ಉಳಿವ ಹಾಂಗೆ ಕೋಂಗ್ರೇಸಿನವು ವಿಶೇಷ ಕಾಳಜಿ ವಹಿಸಿ ವ್ಯವಸ್ಥೆ ಮಾಡಿಗೊಂಡಿದವು. 

ಎಲ್ಲಾ ದಿಕ್ಕಿಲ್ಯೂ  ನೆಹರೂ ಕುಟುಂಬಸ್ಥರ ಹೆಸರುಗಳ ಉಪಯೋಗಿಸುದರ ಕಂಡು ಬೇರೆ ದೇಶದವಕ್ಕೆ ಇವರದ್ದೆಂತ ಭಯಂಕರ ದೊಡ್ಡ ರಾಜ ಮನೆತನವೋ ಹೇಳಿ ಸಂಶಯ ಬಪ್ಪಲೂ ಸಾಕು.  ದೇಶದ ಮುಗ್ಧ ಜನರ ಇಷ್ಟೊಂದು ಅಗಾಧವಾದ  ವಿಶ್ವಾಸ, ಪ್ರೀತಿ, ಅಭಿಮಾನಕ್ಕೆ ಪ್ರತಿಯಾಗಿ ಸಮಾಜಕ್ಕೆ ಇವರ ನಿಜವಾದ ಕೊಡುಗೆ ಎಂತದು ? ಮಾಡಿದ್ದೆಲ್ಲಾ  ತ್ಯಾಗ, ಸೇವೆ ಹೇಳಿಗೊಂಡು ತಿರುಗುವ ಇವರ ಅಸಲು ಚರಿತ್ರೆ ಎಂತದು ?  ಕಾಲಚಕ್ರ ಉರುಳಿ ನೆಹರೂವಿನ ಪ್ರಪೌತ್ರನ ದರ್ಬಾರಿನ ಹೊಸ್ತಿಲಿಂಗೆ ಬಂದು ನಿಂದಿಪ್ಪಗ, ಈ ವಿಷಯದ ಬಗ್ಗೆ ರಜ ಚರ್ಚೆ ಮಾಡಿರೆ ಸಕಾಲಿಕ ಅಕ್ಕಲ್ಲದಾ ?

ನೆಹರೂವಿನ ತಟಸ್ಥ ಕೂಟನೀತಿ, ಸ್ವಾತಂತ್ರ್ಯಾನಂತರ ಬೃಹತ್ ಕೈಗಾರಿಕೆಗಳ ಸರಕಾರಿ ವಲಯಲ್ಲಿ ಮಾತ್ರ ಮಾಡ್ಳೆ ಆದ್ಯತೆ ಕೊಟ್ಟದೇ ಮೊದಲಾದ ವಿಷಯಂಗಳ  ಬಗ್ಗೆ ಪರ-ವಿರೋಧವಾಗಿ ಎಷ್ಟುದೇ ವಾದ ಮಾಡ್ಳಕ್ಕು. ಚರಿತ್ರೆಯ ಘಟನೆಗಳ  ಭವಿಷ್ಯದ ಒಂದು ಬಿಂದುವಿಲ್ಲಿ ನಿಂದು ನೋಡುವಗ ಸುಮಾರು ಗೊಂದಲ ಅಪ್ಪ ಸಾಧ್ಯತೆ ಇದ್ದು. ಆಯಾ ತೀರ್ಮಾನ ತೆಕ್ಕೊಂಬ ಸಮಯಲ್ಲಿ ಇತ್ತ  ಅನಿವಾರ್ಯತೆಗಳ ಗಮನಕ್ಕೆ ತೆಕ್ಕೊಳದ್ದೆ ಮಾಡುವ ಚರ್ಚೆ ವ್ಯರ್ಥ ಆವುತ್ತು. ಹಾಂಗಾಗಿ, ಇಂತಹ  ವಿದೇಶ ವ್ಯವಹಾರ ಅಥವಾ ಅರ್ಥವ್ಯವಸ್ಥೆಗೆ ಸಂಬಂಧಪಟ್ಟ strategy ಯಾ policy ವಿಷಯಂಗಳ  (ಸದ್ಯಕ್ಕೆ) ಬದಿಗಿಟ್ಟು ಸಾಮಾಜಿಕ ಪರಿಸ್ಥಿತಿಯ  ಬಗ್ಗೆ ಮಾತ್ರ ವಿಮರ್ಶೆ ಮಾಡಿರೆ ಹೆಚ್ಚು ಸಾರ್ಥಕ ಅಕ್ಕು ಹೇಳಿ ಗ್ರೇಶುತ್ತೆ.  

ಈಗ ನಮ್ಮ ದೇಶದ ಸ್ವಾತಂತ್ರ್ಯಾನಂತರದ ೬೨ ವರ್ಷಂಗಳಲ್ಲಿ ಆದ  ಸಾಮಾಜಿಕ ಬದಲಾವಣೆಗಳ ರಜ ಅವಲೋಕನ ಮಾಡುವೊ.  ಒಟ್ಟಿಂಗೇ,  ಸರಿಸುಮಾರು ಇಷ್ಟೇ ವರ್ಷಂಗಳಲ್ಲಿ  ಬೇರೆ ಕೆಲವು ದೇಶಂಗೊ ನಡೆದು ಬಂದ ದಾರಿಯನ್ನೂ ಗಮನಿಸಿ ತುಲನೆ ಮಾಡುವೊ.  ಉದಾರೀಕರಣದ ನೀತಿ, ದೂರದರ್ಶನದ ಪ್ರಭಾವ,  ಸಂಪರ್ಕ ಕ್ರಾಂತಿ ಇತ್ಯಾದಿಗಳಿಂದಾಗಿ  ಎಲ್ಲಾ ಸಮಾಜಂಗೊ ಕ್ಷಿಪ್ರ ಗತಿಲಿ ಬದಲಾವಣೆ ಆದ್ದದರ ನಾವು ಕಾಣ್ತಾ ಇದ್ದು. ಇದು ಎಲ್ಲಾ ದೇಶಂಗೊಕ್ಕೂ ಸಮಾನವಾಗಿ ಅನ್ವಯಿಸುವ ಬಾಹ್ಯ ಪ್ರಭಾವಂಗೊ.  ಈ ಹಿನ್ನೆಲೆಂದ ನೋಡುವಗ  ಜಪಾನ್, ಕೊರಿಯಾ, ಮಲೇಶ್ಯಾಗಳೇ ಮೊದಲಾದ ದೇಶಂಗೊ ಕೈಗಾರಿಕಾಭಿವೃದ್ಧಿ, ಜಾಗತೀಕರಣಗಳ ಹೊರತಾಗಿಯೂ ತಮ್ಮತನವ ಉಳಿಸಿಗೊಂಡು  ಬಂದಿದ್ದರೆ, ನಮ್ಮ ಸಮಾಜಲ್ಲಿ ಮಾಂತ್ರ ಅನಿಯಂತ್ರಿತ ಬದಲಾವಣೆ ಆದ್ದದರ ಮತ್ತು ಆವುತ್ತಾ ಇಪ್ಪದರ ಕಾಂಬಲಕ್ಕು.   ಹಾಂಗಾರೆ ನಮ್ಮ ಈ ಪರಿಸ್ಥಿತಿಗೆ ಯಾರು ಹೊಣೆ ಹೇಳುವ ಪ್ರಶ್ನೆ ಬಂದರೆ,  ಈ  ಅವಧಿಲಿ ಅತಿ ಹೆಚ್ಚು ಕಾಲ  ಆಢಳಿತ ಮಾಡಿದ ಕೋಂಗ್ರೇಸು ಪಕ್ಷದ ಮೇಲೆ ಕೈ ತೋರುಸೆಕ್ಕಾವುತ್ತು.   ನಮ್ಮಲ್ಯಾಣ ಬದಲಾವಣೆಗಳ ಧಾರ್ಮಿಕ ಮತ್ತು ಸಾಮಾಜಿಕ ಹೇಳಿ ಎರಡು  ಶೀರ್ಷಿಕೆಗಳ ಅಡಿಲಿ ವಿಸ್ತರಿಸುವೊ.

ಧಾರ್ಮಿಕ ಅಧಃಪತನ : ಅನಾದಿ ಕಾಲಂದಲೂ ನಮ್ಮ ಸಮಾಜ ವ್ಯವಸ್ಥೆಗೆ  ಧರ್ಮವೇ ಆಧಾರ ಸ್ತಂಭ.  ರಾಜರ ಆಢಳಿತ ಕಾಲಲ್ಲಿಯೂ ಆಸ್ಥಾನಲ್ಲಿ ಒಬ್ಬ ಧರ್ಮಗುರು ಹೇಳುವವ ಇತ್ತದು ಸಾಮಾನ್ಯ ಪದ್ಧತಿ ಆಗಿತ್ತಡ.  ಗಮನಿಸೆಕ್ಕಾದ ಇನ್ನೊಂದು ಮುಖ್ಯ ವಿಷಯ ಎಂತ ಹೇಳಿರೆ, ಹಿಂದೂ ಧರ್ಮ ಬೇರೆದರ ಹಾಂಗೆ ಹುಟ್ಟುವಾಗಲೇ ಹೆಸರು  ಹಾಕಿಸಿಗೊಂಡು ಸ್ಥಾಪನೆ ಆದ  ಧರ್ಮ ಅಲ್ಲ.   ಇದು ಯಾವಾಗ, ಹೇಂಗೆ ಸುರು ಆತು ಹೇಳುವ ಬಗ್ಗೆ ನಿಖರವಾಗಿ ಹೇಳುಲೆ ಸಾಧ್ಯ ಇಲ್ಲದ್ದ ಕಾರಣ ಇದಕ್ಕೆ ಸನಾತನ ಧರ್ಮ ಹೇಳಿಯೇ ಹೆಸರು.  ಇದಕ್ಕೆ ಧರ್ಮ ಹೇಳುವ ಸಂಕುಚಿತ ಹಣೆಪಟ್ಟಿಗಿಂತಲೂ "ಒಂದು ಜೀವನ ಪದ್ಧತಿ" ಹೇಳುದೇ  ಹೆಚ್ಚು ಸೂಕ್ತ ಹೇಳುವ ವ್ಯಾಖ್ಯಾನ ಇದ್ದು.   ಬೇರೆ ಎಲ್ಲಾ ಧರ್ಮಂಗೊ ಒಬ್ಬ ವ್ಯಕ್ತಿಯ ಮಂಡೆಂದ ಉದುರಿದ ಕೇವಲ ಒಂದು ಗ್ರಂಥವ ಆಧಾರಿಸಿದ ಬೋಧನೆಗಳಾಗಿದ್ದರೆ, ಹಿಂದೂ ಧರ್ಮಲ್ಲಿ ದೇವರುಗೊ, ಗುರುಗೊ, ಗ್ರಂಥಂಗಳ ಬಾಹುಳ್ಯವ ನಾವು ಕಾಣ್ತು.   ಇದರಲ್ಲಿ  ವೇದ, ಉಪನಿಷತ್ತುಗಳ ಉದಾತ್ತ ಆಧ್ಯಾತ್ಮಿಕ  ಚಿಂತನೆಗಳ ಒಟ್ಟಿಂಗೇ, ಸಾಹಿತ್ಯ, ಸಂಗೀತ, ಕಲೆ, ಯೋಗಂಗಳೂ ಹಾಸುಹೊಕ್ಕಾಗಿ ಸೇರಿಗೊಂಡಿದ್ದು.  ಹೇಳಿರೆ, ಇದು ಕೇವಲ ಧಾರ್ಮಿಕ ಆಚರಣೆಗೊಕ್ಕೆ ಸೀಮಿತವಾದ್ದದಲ್ಲ.  ಬೇರೆಯವಕ್ಕೆ  ಆದಿತ್ಯವಾರ, ಶುಕ್ರವಾರ ಇತ್ಯಾದಿಯಾಗಿ ನಿರ್ದಿಷ್ಟ ದಿನದಂದು ಖಡ್ಡಾಯ ಪ್ರಾರ್ಥನೆಯ "ಶಿಕ್ಷೆ" ವಿಧಿಸಿದ್ದರೆ, ನಮ್ಮಲ್ಲಿ ಹೀಂಗಿಪ್ಪ ಬಂಧನ ಎಂತ ಇಲ್ಲೆ. ನಮ್ಮ ಒಟ್ಟು ತಿಳುವಳಿಕೆ ಮತ್ತ್ತು ಆಚರಣೆಗಳ  ಸಮಗ್ರವಾಗಿ  ಕಂಡು, ದೇಹ ಮತ್ತು ಬುದ್ಧಿಗಳ ಸಮತೋಲನವ ಕಾಯ್ದುಗೊಂಬ  ಒಂದು ಅಪೂರ್ವ ಜ್ಞಾನ ಭಂಡಾರದ ಸಂಸ್ಕಾರವ ನಾವು ಬಳುವಳಿಯಾಗಿ ಪಡದ್ದು.   ಈ ಕಾರಣಂದಾಗಿಯೇ, ಭಾರತೀಯರೆಲ್ಲಾ ಹಿಂದೂಗೊ ಹೇಳುವ ವಿಶಾಲ ಮನೋಭಾವ ನವಗೆ ಬಪ್ಪದು.  ಆದರೆ, ನಮ್ಮಲ್ಲಿಪ್ಪ ಬಡತನ, ಅನರಕ್ಷರತೆಯ ದುರುಪಯೋಗ ಮಾಡಿಗೊಂಡು ಹೆರಾಣವು ಮತಾಂತರದಂತಹ ಅನಿಷ್ಟಂಗಳ ಅವ್ಯಾಹತವಾಗಿ ನಡೆಶಿಗೊಂಡು ಬತ್ತಾ ಇದ್ದವು.  ಸರಕಾರ ಇದರ ಮೊದಲಿಂದಲೇ  ಹತೋಟಿಲಿ ಮಡುಗೆಕ್ಕಾಗಿತ್ತು.  ನಮ್ಮ ನಾಯಕರಾದವಕ್ಕೆ ಧರ್ಮ, ಸಂಸ್ಕೃತಿಯ ಬಗ್ಗೆ ರಜ ಆದರೂ ಕಾಳಜಿ ಇತ್ತಿದ್ದರೆ, ಇದರ ತಡವಲೆ ಪ್ರಯತ್ನ ಮಾಡ್ತೀತವು. ಆದರೆ,  ಆರೆಸ್ಸೆಸ್ ಅಥವಾ ಭಜರಂಗ ದಳದವು ಹಿಂದೂಗಳ ರಕ್ಷಣೆಗೆ ಓಡಿ ಬರೆಕಾಗಿ ಬಂತು. ಇಲ್ಲಿಯೇ ನೆಹರೂ ಕುಟುಂಬದ ಕೊಡುಗೆ ಎಂತದು ಹೇಳುದು  ಪ್ರಸ್ತುತ ಅಪ್ಪದು. ಅವರ ಕುಟುಂಬಲ್ಲಿ ನೆಹರೂವಿನ ಅನಂತರ ಯಾರೂ ಹಿಂದೂ ಮತವ ಅನುಸರಿಸುವವು ಒಳುದ್ದವಿಲ್ಲೆ ಹೇಳುವ ಸತ್ಯವೇ ಎಲ್ಲಾ  ಸಮಸ್ಯೆಗೊಕ್ಕೂ  ಮೂಲ ಹೇಳಿರೆ ತಪ್ಪಾಗ.  ಇದರೊಟ್ಟಿಂಗಿಪ್ಪ ಚಿತ್ರಂದ ಇವರ ಪವಿತ್ರ ವಂಶವೃಕ್ಷದ ಸ್ಥೂಲ ಪರಿಚಯ ಆವುತ್ತು. ಚಿತ್ರವೇ ಅಷ್ಟು ಚೆಂದ ಇಪ್ಪ ಕಾರಣ, ಹೆಚ್ಚು ವಿವರಿಸೆಕ್ಕಾದ ಅವಶ್ಯಕತೆ ಬಾರ ಹೇಳಿ ಗ್ರೇಶುತ್ತೆ.  ಇಲ್ಲಿಂದಲೇ ಅಲ್ಪಸಂಖ್ಯಾತರ votebankನ ಹಾಂಗಿಪ್ಪ  ಬೇರೆ ಸಾಮಾಜಿಕ ಸಮಸ್ಯೆಗೊ ಹುಟ್ಟಿಗೊಂಡದು ಹೇಳಿ ಎನ್ನ ಅಭಿಪ್ರಾಯ. 

ನೈತಿಕ ಅಧಃಪತನ : ಧರ್ಮದ ಆಧಾರವೇ ಇಲ್ಲದ್ದ ಮೇಲೆ ನೈತಿಕತೆಗೆ ಎಲ್ಲಿಯ ಬೆಲೆ ? ದೇಶದ ರಾಜಕಾರಣಲ್ಲಿ ಇಂದಿರಾಗಾಂಧಿಯ ಆಗಮನವಾದಲ್ಲಿಂದ (ಸುಮಾರು ೧೯೭೦ರಿಂದ) ಮೊದಲ್ಗೊಂಡು, ನಮ್ಮ ರಾಜಕೀಯದ ವ್ಯಭಿಚಾರೀಕರಣ ಮುಕ್ತವಾಗಿ ನಡೆತ್ತಾ ಇಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಂದ ಭ್ರಷ್ಟಾಚಾರದ ಪಿಡುಗು ಬೆಳಕ್ಕೊಂಡೇ ಬಂತು.  ಕ್ರಮೇಣ, ರಾಜಕಾರಣ ಹೇಳುದು ಕಳ್ಳಕಾಕರಿಂಗೆ, ರೌಡಿಗೊಕ್ಕೆ, ಮೋಸಗಾರರಿಂಗೆ ಮಾಂತ್ರ ಇಪ್ಪ ಕ್ಷೇತ್ರ ಹೇಳಿ ಗುರುತಿಸಿಗೊಂಡತ್ತು.  ಇಂದಿರಾ ಗಾಂಧಿಯೇ ಈ ಎಲ್ಲಾ ಅಧಃಪತನಕ್ಕೆ ನಾಂದಿ ಹಾಡಿದ್ದು ಹೇಳುವಲ್ಲಿಗೆ ಇಂದ್ರಾಣ ಹರಿಕಥೆಯ ಈ ಅಧ್ಯಾಯ ಇಲ್ಲಿಗೆ  ಮುಗುತ್ತು ಮತ್ತು ನೆಹರೂವಿನ ದರಿದ್ರ ಕಥಾಶ್ರವಣ ಮಾಡಿದ ಪಾಪ ನವಗೆ ಆಂಟಿತ್ತು.       

- ಬಾಪಿ

Wednesday, May 20, 2009

ರಾಹುಲ್ ಗಾಂಧಿ !


ಕೋಂಗ್ರೇಸ್ ಪಕ್ಷದ ಯುವ ನೇತಾರ, ೨೧ನೇ ಶತಮಾನದ ಮಹಾನ್ ವಿಶ್ವ ನಾಯಕನಾದ ರಾಹುಲ್ ಗಾಂಧಿಯ ಒಂದು ಸಣ್ಣ ವ್ಯಕ್ತಿ ಪರಿಚಯ ಮಾಡುವ ಪ್ರಯತ್ನ ಮಾಡ್ತೆ. 

ಮೈಲಿ ಹರಿವದು ಇಟೆಲಿಯ pizzaದ ಹೇರಳ ಪೋಷಕಾಂಶಂಗಳ  ಹೀರಿ ತಯಾರಾದ ಸಮೃದ್ಧ ರಕ್ತ ಆದ ಕಾರಣ,  ಇವಂದು ತಿಳಿಗೆಂಪು ಮೈಬಣ್ಣ.   ಇವನ ಹಿಂದಾಣವು   ಕೆಲವು ತಲೆಮಾರಿಂಗೆ ಸಾಕಪ್ಪಷ್ಟು ಸಂಪತ್ತಿನ ಅಕ್ರಮವಾಗಿ ಕೂಡಿ ಮಡುಗಿತ್ತ ಕಾರಣ ಐಶಾರಾಮದ ಜೀವನ ಹುಟ್ಟುವಗಳೇ  ಖಾತ್ರಿ ಮಾಡಿಗೊಂಡ ಅದೃಷ್ಟಶಾಲಿ.  ದುಡಿದು ಸಂಪಾದನೆ ಮಾಡುವ ಅನಿವಾರ್ಯತೆ ಹೇಂಗೂ ಇಲ್ಲದ್ದರಿಂದ, ಯಾವುದೇ ವಿಶೇಷ ವಿದ್ಯಾಭ್ಯಾಸ ಮಾಡುವ ಬಗ್ಗೆ ತಲೆ ಕೆಡಿಸಿಗೊಂಬಲೆ ಹೋಯಿದನೇ  ಇಲ್ಲೆ.   ಆದರೂ, ಸ್ವಿಸ್ ಬ್ಯಾಂಕಿಂಗೆ ಅಂಬಗಂಬಗ ಹೋಯೆಕ್ಕಾಗಿ ಬಪ್ಪ ಕಾರಣ, ದಸ್ಕತ್ತು ಹಾಕುವಷ್ಟು ಕಲಿವಿಕೆ ಮಾಡಿಗೊಂಡಿದ.    ಅಜ್ಜನ ಕಾಲಂದಲೇ ಇವನ ಮನೆಯವು ಎಲ್ಲಾ  ಚೆಂದ ಇತ್ತದಲ್ಲದ್ದೆ  ಹೆಚ್ಚು  ಬೆಶಿಲಿಂಗೆ ಎಲ್ಲ ಹೋಗದ್ದೆ ರಾಜ ಮರ್ಜಿಲಿತ್ತ ಕಾರಣ, ಇವನೂ ಸ್ಫುರದ್ರೂಪಿ.   ಇವನ ಕೆಪ್ಪಟೆಲಿ ಬೀಳುವ  ಗುಳಿ ಸ್ವಾಭಾವಿಕವೋ ಸರ್ಜರಿ ಮಾಡಿಸಿಗೊಂಡದೋ ಹೇಳಿ ಗೊಂತಿಲ್ಲೆ.  ಅಂತೂ ಯುವ ಪೀಳಿಗೆಯ ಕೂಸುಗೊ ಇಷ್ಟು  ಹೆಚ್ಚಿನ ಸಂಖ್ಯೆಲಿ ಕೋಂಗ್ರೇಸಿಂಗೆ ವೋಟು ಹಾಕಿದ್ದಕ್ಕೆ ಇದು ಬಿಟ್ರೆ ಬೇರೆ ಎಂತ ಕಾರಣವೂ ಕಾಣ್ತಿಲ್ಲೆ.   ತನ್ನ ಅಪ್ಪನ ಚಾಳಿಯ ಅಕ್ಷರಶಃ ಅನುಸರಿಸುವ ಅತಿ ವಿಧೇಯ ಮಗನಾದ ಇವ, ನಮ್ಮ ದೇಶದವು ಚೆಂದ ಸಾಲ ಹೇಳಿ ತನ್ನ ಪ್ರತಿಭೆ ಮತ್ತು  ವಿದೇಶೀ ಅಮ್ಮನ ಅಂತಸ್ತಿಂಗೆ ಸರಿದೂಗುವ ಕೊಲಂಬಿಯಾ ದೇಶದ ಕೂಸಿನ ಮದುವೆ ಅಪ್ಪ ಅಂದಾಜಿಲಿದ್ದ ಹೇಳಿ ಗಾಳಿ ಶುದ್ದಿ.  ಕೆಲವು ಜನ ಬದ್ಧ ಎಲ್ಲ ಕಳುದ್ದು ಹೇಳ್ತವು.  ಎಂತ ಸಂಗತಿ ಹೇಳಿ ಅವಂಗೇ ಗೊಂತು.   ಹೇಂಗೂ ಮನೆಲಿ ಹೇಳುವವು ಕೇಳುವವು ಆರೂ ಇಲ್ಲೆ.  ಸ್ವಂತ ಅಪ್ಪಚ್ಚಿ ಮನೆಯವಕ್ಕೂ ಇವಕ್ಕೂ ಹೋಕೋರಕ್ಕೇ ಇಲ್ಲೆ.  ಸಾಲದ್ದಕ್ಕೆ ಇನ್ನು ಮುಂದೆ  ಇವ ಮಾಡಿದ್ದೇ ಫೇಶನು ಆದ ಕಾರಣ, ಹೇಳಿ ಪ್ರಯೋಜನ ಇಲ್ಲೆ.  ಒಟ್ಟಾರೆ ದೇವರೇ ಗೆತಿ.   ಇವನ ಅಪ್ಪ ರಾಜಕೀಯಕ್ಕೆ ಇಳುದ ಮೇಲೆ ಹೆಚ್ಚು ವರ್ಷ ಬದುಕಿತ್ತಿದ್ದ ಇಲ್ಲೆ.  ಅವ ಹೊಲಿಶಿ ಮಡುಗಿದ ಸುಮಾರು ಬೆಳಿ ಜುಬ್ಬಂಗೊ ಮೊನ್ನೆ ಯಾವಾಗಳೋ ಅಟ್ಟದ ಮೇಲೆ ಹುಡುಕ್ಕುವಗ ಅಲ್ಲಿತ್ತ ಪೆಟ್ಟಿಗೆಲಿ  ಸಿಕ್ಕಿತ್ತಡ.  ಅದೆಲ್ಲ  ಕುಂಬು ಅಪ್ಪದು ಬೇಡ ಹೇಳಿ ಇವ ಯಾವಾಗಲೂ ಅದನ್ನೇ ಹಾಕುದಡ. ಈ ಕಾರಣಂದಾಗಿ, ಸದಾ ಶ್ವೇತಾಂಬರಧಾರಿಯಾಗಿ ಕಂಗೊಳಿಸುತ್ತ.   

ಈ ಅಸಾಮಿ  ಮೊನ್ನೇಣ  ಚುನಾವಣೆಯ ಅಭ್ಯರ್ಥಿಯಾಗಿ ಅರ್ಜಿಫೋರ್ಮು ಭರ್ತಿ ಮಾಡುವಗ, ವಿದ್ಯಾರ್ಹತೆಯ ಕೋಲಮ್ಮಿಲ್ಲಿ M.Phil ಹೇಳಿ ಬರದಿತ್ತಿದ್ದಡ.  ಆದರೆ, ಯಾರೋ ಇವಂಗೆ ಆಗದ್ದವು  ಈ ವಿಷಯದ ಬಗ್ಗೆ ಕ್ಯಾಂಬ್ರಿಜ್  ವಿಶ್ವವಿದ್ಯಾಲಯಲ್ಲಿ ತನಿಖೆ ಮಾಡಿ ಅಪ್ಪಗ, ಇವ ಕಲ್ತುಗೊಂಡಿತ್ತದು ಅಪ್ಪಾದರೂ  ಪರೀಕ್ಷೆ ಪಾಸಾಗಿತ್ತಿದ್ದನೇ ಇಲ್ಲೆ ಹೇಳುವ ವಿಷಯ ಹೆರ ಬಿದ್ದು ಇವನ ಗುಟ್ಟು ರಟ್ಟಾತು.  ವಿಶ್ವವಿದ್ಯಾಲಯದವರ ಕಡತಂದ ಸಿಕ್ಕಿದ ಅಂಕಪಟ್ಟಿಯ ನೋಡಿರೆ, ಅದರಲ್ಲಿ ಇವನ  ಇಟೆಲಿಯ ಅಜ್ಜನ ಮನೆಯವು ಮಡುಗಿದ "ರೌಲ್ ವಿಂಕಿ" ಹೇಳುವ  ನಿಜ ನಾಮಧೇಯ ನಮೂದಿಸಲ್ಪಟ್ಟಿಪ್ಪದು ಸ್ಪಷ್ಟವಾಗಿ ಕಾಣ್ತು.  ಅಲ್ಲಿಗೆ,  "ರಾಹುಲ್ ಗಾಂಧಿ"  ಹೇಳುವ ಹೆಸರು ಹೇಳಿಗೊಂಡು ತಿರುಗುದು ಸುಮ್ಮನೆ ಜನರ ಮಂಗ ಮಾಡ್ಳಿಪ್ಪ ಕೆಣಿ ಹೇಳುವ  ಇನ್ನೊಂದು ರಹಸ್ಯವುದೇ ಬಹಿರಂಗ ಆತು.  ಇವನ ಅಪ್ಪ ಮದುವೆ ಅಪ್ಪಂದ ಮೊದಲೇ christianityಗೆ  ಮತಾಂತರಗೊಂಡ ಮೇಲೆ,  ಇವರ ವಂಶಲ್ಲಿ ಈಗ ಹಿಂದೂಗೊ ಯಾರೂ ಉಳಿದ್ದವಿಲ್ಲೆ ಹೇಳುದು  ಗಮನಿಸೆಕ್ಕಾದ ವಿಷಯ.  ಥೇಟು ಪುರ್ಬುವಾದ ರಾಜದೀಪ್ ಸರ್ದೇಸಾಯಿ ಹೇಳುವ ಕಿಸಬಾಯಿದಾಸಂಗೆ ಮೊನ್ನೆ ಚುನಾವಾಣೆಯ ಫಲಿತಾಂಶ ಬಂದಪ್ಪಗ   ಅಷ್ಟು ಖುಷಿ  ಆದ್ದದು ಎಂತಕೆ ಹೇಳಿ ಈಗ ಗೊಂತಾತನ್ನೆ ?

- ಬಾಪಿ

Sunday, May 17, 2009

ಚುನಾವಣೆ ೨೦೦೯

ಅಂತೂ ಮಹಾ ಚುನಾವಣೆಯ ಫಲಿತಾಂಶ ಬಂತು.   ಗೆದ್ದವಕ್ಕೆ ಸಂಭ್ರಮ, ಸೋತವಕ್ಕೆ ಹತಾಶೆ. ದೇವೇಗೌಡನ ಹಾಂಗೆ ಗೆದ್ದೂ ಸೋತವಕ್ಕೆ, ನೆವನದ bed rest !  ಪಟಾಕಿ ಮತ್ತು ಮದ್ಯದ ಅಂಗಡಿಯವಕ್ಕೆ ಒಳ್ಳೆ ವ್ಯಾಪಾರ.  ಅಂತೂ ಒಟ್ಟಿಲ್ಲಿ,  ಮನೆಲಿ ಗೌಜಿಯ ತ್ರಿಕಾಲ ಪೂಜೆ ಕಳುದ ಮೇಲೆ ನೆಂಟ್ರೆಲ್ಲಾ ವಾಪಾಸು ಹೋಗಿ ಅಪ್ಪಗ ಇಪ್ಪ ವಿಚಿತ್ರ ಮೌನದ ವಾತಾವರಣ.

ಎನ್ನ ಪ್ರಕಾರ, ಚುನಾವಣೆಯ ಕೆಲವು ವಿಶೇಷಂಗೊ ಮತ್ತು ಭವಿಷ್ಯದ ಮೇಲೆ ನಿರೀಕ್ಷಿತ ಪರಿಣಾಮಂಗೊ ಹೀಂಗಿದ್ದು  :
 
  • ಅಪ್ಪ ಮಕ್ಕಳ ಭಲೇ ಜೋಡಿಯಾದ ದೇವೇಗೌಡ-ಕುಮಾರಸ್ವಾಮಿಗೊಕ್ಕೆ ಸಂಸತ್ತಿಲ್ಲಿ  bench-mates ಅಪ್ಪ ಸುದೈವ.  ಅದುದೇ ಅತಿ ಹಿಂದಾಣ ಬೆಂಚಿಲ್ಲಿ.
  • ರಾಮಜ್ಜನ ಫಲಿತಾಂಶ ನಿರೀಕ್ಷೆ ಮಾಡಿದ ಹಾಂಗೇ ಇತ್ತು. ಠೇವಣಿ ಹೋತು. ಸೋತವರ ಬಗ್ಗೆ ಇನ್ನೂ ಹೆಚ್ಚು ಮಾತಾಡಿ ಗಾಯಕ್ಕೆ ಬರೆ ಎಳವದು ಒಳ್ಳೆ ಸಂಸ್ಕಾರ ಅಲ್ಲದ್ದ ಕಾರಣ ಈ ವಿಷಯವ ಇಷ್ಟಕ್ಕೇ ಬಿಡುವೊ !
  • ಈ ಸರ್ತಿ, ಭಾಜಪಕ್ಕೆ ಮಿಶ್ರ ಫಲ.  ಕರ್ನಾಟಕಲ್ಲಿ ಜಯಭೇರಿ ಬಾರಿಸಿದ್ದು ಯೆಡ್ಯೂರಪ್ಪಂಗೆ ರಜ ನಿರಾಳ ಅಕ್ಕು.  ಬೆಂಗ್ಳೂರಿನ ಮೂರೂ ಸ್ಥಾನ ಗೆದ್ದದು ಅನಿರೀಕ್ಷಿತ.    ಒಟ್ಟು ಫಲಿತಾಂಶ UPA (Unlimited Possibilities' Alliance) ಪರವಾಗಿಪ್ಪ ಕಾರಣ, ಕರ್ನಾಟಕಲ್ಲಿ ಕೋಂಗ್ರೇಸಿಂಗೆ ಒಳ್ಳೆ ಪರಿಣಾಮ ಸಿಕ್ಕಿತ್ತಿದ್ದರೆ, ಎಂತಾರು ಕಿತಾಪತಿ ಸುರು ಮಾಡ್ತೀತವು.  ತನಗೆ ಆಟ ಆಡ್ಳೆ ಅನುಕೂಲ ಅಪ್ಪ ಹಾಂಗಿಪ್ಪ ಅತಂತ್ರ ಸಂಸತ್ತು ನಿರ್ಮಾಣ ಅಕ್ಕು ಹೇಳುವ ನಿರೀಕ್ಷೆಲಿತ್ತ ಕುಮಾರಸ್ವಾಮಿ, ಹೋದವಾರ  ಗುಟ್ಟಾಗಿ ಸೋನಿಯಾ ಗಾಂಧಿಯ ಭೇಟಿ ಮಾಡಿ ಮುಂದಿನ ಸಂಪುಟಲ್ಲಿ ಗಣಿ ಇಲಾಖೆ ಬೇಕು ಹೇಳುವ ಬೇಡಿಕೆಯ ಮಡಿಗಿತ್ತಿದ್ದ ಹೇಳುವ ಶುದ್ದಿ ಈಗ ಅಷ್ಟೇನೂ ಗುಟ್ಟಾಗಿ ಒಳಿದ್ದಿಲ್ಲೆ.  ಕೇಂದ್ರಲ್ಲಿ ಗಣಿ ಮಂತ್ರಿ ಆಗಿ, ಬಳ್ಳಾರಿಯ ರೆಡ್ಡಿಗೊಕ್ಕೆ ಉಪದ್ರ ಕೊಟ್ಟು, ಯೆಡ್ಯೂರಪ್ಪನ ಸರ್ಕಾರವ ಉರುಳಿಸುವ ಕುತಂತ್ರವ ಈಗ ಮುಂದುವರಿಸುಲೆ ಕಷ್ಟ ಇದ್ದು. 
  • ಇದು ಕ್ಷೇತ್ರಂಗಳ ಮರುವಿಂಗಡಣೆ ಮಾಡಿದ ನಂತ್ರಾಣ ಮೊದಲಾಣ ಚುನಾವಣೆ ಆದ ಕಾರಣ, ಯಾವ ಪಕ್ಷಕ್ಕೂ ಜಾತಿವಾರು ಲೆಕ್ಕಾಚಾರದ ಸಂಪೂರ್ಣ ಹಿಡಿತ ಇತ್ತಿಲ್ಲೆ.  ಒಟ್ಟಾರೆ ಕೋಂಗ್ರೇಸಿಂಗೆ ಅನಿರೀಕ್ಷಿತ ಲಾಭ ಆತು.  ಮೊದಲೇ ಹೃದ್ರೋಗಿ ಆದ ಮನಮೋಹನ ಸಿಂಗಂಗೆ  ಈ ಅನಿರೀಕ್ಷಿತ ಪರಿಣಾಮಂದ ಏನೂ ಆಘಾತ ಆಗದ್ದೆ, ಸೌಖ್ಯಲ್ಲಿ ಇಪ್ಪದು ಅವನ ಕುಟುಂಬದವರ ಭಾಗ್ಯ.  ಖುಶಿಲಿಯೂ ದುಃಖಲ್ಲಿಯೂ ಸಮಚಿತ್ತಂದ ವರ್ತಿಸಿ, ಸ್ಥಿತಪ್ರಜ್ಹನಾಗಿದ್ದು ಹೆಬಗನ ಹಾಂಗಿಪ್ಪ ಮೋರೆ ಇದ್ದರೆ ಹೇಂಗೆ ದೀರ್ಘಾಯುಷ್ಯ ಪಡವಲಕ್ಕು ಹೇಳುದಕ್ಕೆ ಇದು ಜೀವಂತ ಉದಾಹರಣೆ.
  • ಮಳೆಗಾಲಲ್ಲಿ ಪುರುಸೊತ್ತಿಪ್ಪವರೆಲ್ಲ ಸೇರಿಸಿ ಮೇಳ ಕಟ್ಟಿಗೊಂಡು ತಿರುಗುವ ಹವ್ಯಾಸಿ ಕಲಾವಿದರ ಹಾಂಗೆ ತೃತೀಯ ರಂಗ, ಚತುರ್ಥ ರಂಗ ಹೇಳಿ ಎಲ್ಲ ಕಾರುಬಾರು ಸುರು ಮಾಡಿತ್ತ ಕ್ಷೇತ್ರೀಯ ಪಕ್ಷಂಗಳ ಮುಕ್ರಿಗೊಕ್ಕೆ ಎದ್ದು ನಿಂಬಲೆಡಿಯದ್ದಷ್ಟು ಆಘಾತ ಆಯಿದು.  
  • ಇನ್ನು ಮುಂದೆ ಭಾರತಲ್ಲಿ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಸರಕಾರ ಮಾಡ್ಳೆಡಿಯ ಹೇಳುವ ನಂಬಿಕೆ ಸುಳ್ಳಾತು.  ಈಗ, ಕೋಂಗ್ರೇಸಿನವು ಕಾಟು ಕಮ್ಯುನಿಷ್ಟರು ಅಥವಾ ಇತರ ಸುಮಾರು ಲಾಯಿಲೋಟು ಪಕ್ಷಂಗಳ  ಹಂಗು ಇಲ್ಲದ್ದೆ  ಆಢಳಿತ ಮಾಡ್ಳಕ್ಕು.
  • ರಾಹುಲ್ ಗಾಂಧಿಗೆ ಮಂತ್ರಿ ಅಪ್ಪ ಯೋಗ.  ಇದಕ್ಕೆ ಪೂರ್ವಭಾವಿಯಾಗಿ,  ಅರ್ಥ ಮಂತ್ರಾಲಯಕ್ಕೆ ಹೇಳಿ ಯಾವಾಗಲೂ ಕಿಸೆಲಿ ಮಡಿಕ್ಕೊಂಬಲೆ ಹೇಳಿ ಇಟೆಲಿ ದೇಶಂದ ಒಂದು ಇಕ್ಕುಳಿನ  ಆಮದು ಮಾಡಿಗೊಂಬ ವ್ಯವಸ್ಥೆ ಮಾಡ್ತಾ ಇದ್ದಾಡ. ಇನ್ನು ಮುಂದೆ, ಪತ್ರಕರ್ತರು ಬಾಯಿಗೆ ಬಂದ ಹಾಂಗೆ ಎಲ್ಲಾ ಪ್ರಶ್ನೆ ಕೇಳಿ ತಲೆ ತಿಂದಪ್ಪಗ  ನಾಲಗೆ ಹೆರಡದ್ರೆ, ಉಪಯೋಗ ಅಕ್ಕು ಹೇಳುವ ಕಾರಣಕ್ಕಾಡ.  
  • ಚುನಾವಣೆ ಫಲಿತಾಂಶಂಗೊ ಹೆರ ಬೀಳ್ತಾ ಇದ್ದ ಹಾಂಗೇ, ಸುಮಾರು ವಾಹಿನಿಗಳ ಪುರ್ಬು ವಕ್ತಾರರಿಂಗೆ (ರಾಜದೀಪ್ ಸರ್ದೇಸಾಯಿ, ಪ್ರಣೊಯ್ ರೋಯ್ ಹಾಂಗಿಪ್ಪ) ತಡವಲೆಡಿಯದ್ದ ಸಂತೋಶ ಆದ್ದದು ಸ್ಪಷ್ಟ ಗೊಂತಾಯಿಕ್ಕೊಂಡಿತ್ತು.   ಇನ್ನು ಮತಾಂತರದ ಪ್ರಕ್ರಿಯೆ ಅವ್ಯಾಹತವಾಗಿ ಮುಂದುವರಿವಲೆ ಏನೂ ಅಡ್ಡಿ ಇಲ್ಲೆ.    ಸೋನಿಯಾ ಗಾಂಧಿಯ ಆಶೀರ್ವಾದಂದ ಈ ಸಂಸತ್ತಿನ ಅವಧಿ ಮುಗಿವದರೊಳಗೆ, ಭೈರಪ್ಪ ಹೇಳಿದ ಅಂಕೆ ಸಂಖ್ಯೆ ಪ್ರಕಾರ ಲೆಕ್ಕ ಹಾಕಿರೆ ನಮ್ಮ ದೇಶಲ್ಲಿ  ಇನ್ನೊಂದೆರಡು ಕೋಟಿ ಕ್ರಿಶ್ಚಿಯನರು ಹೆಚ್ಚಪ್ಪದು ಖಂಡಿತ.     

-ಬಾಪಿ

Thursday, May 14, 2009

ಜಾತ್ಯತೀತವಾದ

ವಸುಧೈವ ಕುಟುಂಬಕಂ ಹೇಳುವ ಅದ್ಭುತವಾದ, ವ್ಯಾಪಕ ದೃಷ್ಟಿಕೋಣದ ಧ್ಯೇಯವಾಕ್ಯವ ಜಗತ್ತಿಂಗೆ ಸಾರಿದ ಹೆಗ್ಗಳಿಕೆ ಹಿಂದೂಗಳದ್ದು.  ಘೋಷಣೆ ಮಾಡಿದ್ದು ಮಾತ್ರವಲ್ಲ, ನಮ್ಮಲ್ಲಿ ಅಷ್ಟು ಜ್ಞಾನಭಂಡಾರ ಇತ್ತರೂ ಹೆರಂದ ಬಂದದನ್ನೂ ಧಾರಾಳವಾಗಿ ಸ್ವೀಕರಿಸಿ ಬೆಳದ ಅಪೂರ್ವ ಸಮುದಾಯ ಸ್ಪೂರ್ತಿಯ  ನಾಗರಿಕತೆ ನಮ್ಮದು.  ಕೇವಲ ಸ್ವೀಕರಿಸಿದ್ದು ಮಾತ್ರ ಅಲ್ಲದ್ದೆ, ಪೋಷಿಸಿಗೊಂಡು ಕೂಡಾ  ಬೈಂದು.  ಉದಾಹರಣೆಗೆ, ಹಿಂದುಸ್ತಾನಿ ಸಂಗೀತ ಮೂಲ ಭಾರತೀಯ ಪ್ರಕಾರ ಅಲ್ಲದ್ರೂ   ಇದರ  ಶ್ರೋತೃಗೊ ಎಲ್ಲಾ  ಹಿಂದೂಗಳೇ ಹೇಳುದು ವಾಸ್ತವ. ಕರ್ಣಕಠೋರವಾದ  ಪಳ್ಳಿಯ ಬಾಂಕಿನ  ಮಾಧುರ್ಯಕ್ಕೆ ರೋಮಾಂಚನಗೊಳ್ಳುವ  ಬ್ಯಾರಿಗಳಲ್ಲಿ  ಎಷ್ಟು ಜನಕ್ಕೆ ಶಾಸ್ತ್ರೀಯ  ಸಂಗೀತವ ಆಸ್ವಾದಿಸುವ ಸಂಸ್ಕಾರ ಇಕ್ಕು ? "ಹಿಂದೂ" ಹೇಳುವ ಶಬ್ದ ಕೇವಲ ಧರ್ಮವಾಚಕವಾಗದ್ದೆ  "ಭಾರತೀಯ" ಹೇಳುವ   ರಾಷ್ಟ್ರವಾಚಕವಾದ ಪರ್ಯಾಯ ಅರ್ಥಲ್ಲಿ ತಿಳುಕ್ಕೊಂಬ ಹೃದಯ ವೈಶಾಲ್ಯತೆಯ ನಾವು ಬೆಳೆಶಿಗೊಂಡು ಬೈಂದು.  ನಮ್ಮ ಸಂಸ್ಕೃತಿಯ ಪ್ರತಿನಿಧಿಸುವ ಯಾರನ್ನೇ ಆಗಲಿ,  "ನಮ್ಮವು" ಹೇಳಿ ನಾವು ಹೆಮ್ಮೆಂದ ಹೇಳಿಗೊಳ್ತು.  ಹಾಂಗಾಗಿ, ಯೇಸುದಾಸ್ ಕ್ರಿಶ್ಚಿಯನ್ ಹೇಳುವ ಅಥವಾ ಅಬ್ದುಲ್ ಕಲಾಂ ಮುಸ್ಲಿಮ್ ಹೇಳುವ ಭಾವನೆ ನಿಜವಾದ ಹಿಂದೂಗಳಲ್ಲಿ  ಯಾವತ್ತೂ ಬತ್ತೇ ಇಲ್ಲೆ.       

ಆದರೆ,  ಇಂತಹ  ವಿಶಾಲ ಭಾವನೆ ಹಿಂದೂ ಧರ್ಮಾನುಯಾಯಿಗಳಲ್ಲಿ ಮಾತ್ರ ಇಪ್ಪದು ತುಂಬಾ ಶೋಚನೀಯ ಸಂಗತಿ.   ಬೇರೆಯವಲ್ಲಿ ಹೆಚ್ಚಿನವಕ್ಕೆ ತಮ್ಮ ಧರ್ಮ ಮೊದಲು, ದೇಶ ನಂತರ !   ಬ್ಯಾರಿಗೊ ಪಳ್ಳಿಲಿ ಹೊತ್ತಲ್ಲದ್ದ ಹೊತ್ತಿಲ್ಲಿ ಕರ್ಕಶವಾಗಿ ಬಾಂಕು ಹಿಡಿವದಕ್ಕಾಗಲೀ, ಕ್ರಿಶ್ಚಿಯನರು ಸೇವೆಯ ಹೆಸರಿಲ್ಲಿ ದೊಡ್ಡ  ದೊಡ್ಡ ಶಾಲೆ, ಆಸ್ಪತ್ರೆ ಕಟ್ಟಿ ಕಾರುಬಾರು ಮಾಡುದಕ್ಕಾಗಲೀ  ನಮ್ಮದು ಎಂತ ತಕರಾರುದೇ ಇಲ್ಲೆ. ಆದರೆ, ನಮ್ಮ ದೇಶಲ್ಲಿ ಹಿಂದೂಗಳ ಸ್ವಂತ ಆಚರಣೆಗೊಕ್ಕೆ ಎಷ್ಟು ಗಂಡಾಂತರ ಇದ್ದು ಹೇಳುದಕ್ಕೆ  ಈ ಕೆಲವು ಉದಾಹರಣೆಗೊ ಸಾಕು  :

೧.೦  ಯೆಡ್ಯೂರಪ್ಪ  ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಗೊಂಡು ಕೆಲಸ ಸುರು ಮಾಡುವ ಮೊದಲು ಹಿಂದೂ ಪದ್ಧತಿಯ ಪ್ರಕಾರ  ಕಛೇರಿಲಿ ಪೂಜೆ ಮಾಡಿಸಿದ.  ಇದು ಬೇರೆ ಧರ್ಮೀಯರಿಂಗೆ ಮಾಡಿದ ಅವಮಾನ ಹೇಳಿ ಪ್ರಚಾರ ಆತು.   ಹೀಂಗೆ ಬೊಬ್ಬೆ ಹಾಕಿದವರಲ್ಲಿ ಎಲ್ಲೋರಿಂಗಿಂತಲೂ ಮುಂದೆ ಇತ್ತವ ಕೋಗಿಲೆ ಕಂಠದ ಕೋಂಗ್ರೇಸಿನ ಮುಕ್ರಿ ಮಲ್ಲಿಕಾರ್ಜುನ ಖರ್ಗೆ ಹೇಳುವ ವ್ಯಕ್ತಿ. 

೨.೦  ಯಾವುದೇ ಶಾಲೆಲಿ ಅಥವಾ ಸಮಾರಂಭಲ್ಲಿ ವಂದೇ ಮಾತರಂ ಪ್ರಾರ್ಥನೆ ಹೇಳಿದರೆ, ಕೆಲವರ ಧಾರ್ಮಿಕ ಭಾವನೆಗೆ ಧಕ್ಕೆ ಆವುತ್ತಡ.  ಮುಸ್ಲಿಮರ ಈ ಹುರುಳಿಲ್ಲದ್ದ ವಾದಕ್ಕೆ ಕೋಂಗ್ರೇಸ್  ಮತ್ತು ಕಮ್ಯುನಿಷ್ಟರ ಸಂಪೂರ್ಣ ಬೆಂಬಲ ಇದ್ದು.   ಹಾಂಗಾಗಿ,  ಈ ದೇಶಭಕ್ತಿ ಗೀತೆಯ ಯಾರೂ, ಎಲ್ಲಿಯೂ ಹಾಡುತ್ತವಿಲ್ಲೆ !  

೩.೦   ಪ್ರಸಿದ್ಧ ಮತ್ತು/ಅಥವಾ ಶ್ರೀಮಂತ  ಹಿಂದೂ ದೇವಸ್ಥಾನಂಗಳ ರಾಷ್ಟ್ರೀಕರಣ ಮಾಡಿದ್ದವು. ಇಂತಹ ದೇವಾಲಯಗಳ ಹುಂಡಿಗಳಲ್ಲಿ  ಸಂಗ್ರಹ ಅಪ್ಪ ಪೈಸೆಯ ಸರಕಾರದ ಖಜಾನೆಗೆ ತೆಕ್ಕೊಂಡು ಮತ್ತೆ ದೇವಸ್ಥಾನದ ಖರ್ಚಿಗೆ ಬೇಕಾದ ಹಾಂಗೆ ಸರಕಾರಂದ ಭಿಕ್ಷೆ  ಬೇಡೆಕ್ಕು.  ಈ ಅನಿಷ್ಟ (ಅ)ವ್ಯವಸ್ಥೆ ಹಿಂದೂ ದೇವಾಲಯಂಗೊಕ್ಕೆ ಮಾಂತ್ರ ಅನ್ವಯಿಸುತ್ತು !  ಮತ್ತೆ, ಈ ಪೈಸೆಯ ಮುಸ್ಲಿಮರ ಹಜ್ ಯಾತ್ರೆಯ ಸಬ್ಸಿಡಿಗೆ ವಿನಿಯೋಗಿಸುತ್ತವು ಹೇಳಿ ಹೇಳಿರೆ ಆನು ನಮ್ಮ ದೇಶದ ಪವಿತ್ರ ಧರ್ಮ ನಿರಪೇಕ್ಷ ವಾದಕ್ಕೆ ಚ್ಯುತಿ ತಂದ  ಪಾಪಿ ಆವುತ್ತೆ.   ಯೆಡ್ಯೂರಪ್ಪನ ಸರಕಾರದ ಮುಜ್ರಾಯಿ ಮಂತ್ರಿ ಮಠ, ದೇವಸ್ಥಾನಂಗೊಕ್ಕೆ ಸಹಾಯದ ಘೋಷಣೆ ಮಾಡಿರೆ, ಅಥವಾ ಶಿವರಾತ್ರಿಯ ದಿನ ಭಕ್ತರಿಂಗೆ ಗಂಗಾಜಲ ವಿತರಣೆ ಮಾಡಿರೆ, ಅದು  ಅಧಿಕಾರದ ದುರುಪಯೊಗ ಆವುತ್ತು.

೪.೦  ಈ ದೇಶಲ್ಲಿ ಸಾವಿರಾರು ವರ್ಷಂಗಳಿಂದಲೂ ಆಕ್ರಮಣ, ಅತಿಕ್ರಮಣ, ದಬ್ಬಾಳಿಕೆ, ಮತಾಂತರಗಳ ಸಹಿಸಿಗೊಂಡು ಬಂದವು ಹಿಂದೂ ಧರ್ಮದವು. ಪೋರ್ಚುಗೀಸರು ಆಳಿದ ಮಾತ್ರಕ್ಕೆ ಗೋವಾಲ್ಲಿ ಕ್ರಿಶ್ಚಿಯನ್ನರು ಹೇಂಗೆ ಬಹು ಸಂಖ್ಯಾತರಾಗಿ ಹೋದವು ? ಕೇರಳಲ್ಲಿ  ಇಷ್ಟು ಮುಸ್ಲಿಮರು ಎಲ್ಲಿಂದ ಸೃಷ್ಟಿ ಆದವು ?  ಟಿಪ್ಪೂ ಹೇಳುವ ಥೇಟು ಬ್ಯಾರಿಬುದ್ಧಿಯ ಪಿರ್ಕಿ  ಅರಸ  ಶ್ರೀರಂಗಪಟ್ಟಣಂದ ಕೇರಳದ ಮಧೂರಿನ ವರೆಗೂ ಹೋಗಿ, ದೇವಸ್ಥಾನವ ಹೊಡಿ ಮಾಡ್ಳೆ ಪ್ರಯತ್ನ ಮಾಡಿದ್ದು ಬರೀ ಕಥೆ ಅಲ್ಲ, ನಿಜ ಸಂಗತಿ.    ಚರಿತ್ರೆ ಹೀಂಗೆಲ್ಲಾ ಇದ್ದರೂ, ಯಾವುದೋ ಪಾಳುಬಿದ್ದ, ಯಾವ ಮಳೆಗಾಲಲ್ಲಿ ಬೇಕಾರೂ ಬಿದ್ದು ಹೋಕು ಹೇಳುವ ಅವಸ್ಥೆಲಿದ್ದ ಬಾಬ್ರಿ ಮಸೀದಿಯ ಪ್ರಕರಣ   "ಹಿಂದೂ ಮೂಲಭೂತವಾದ" ಹೇಳಿಯೇ ಪ್ರಚಾರ ಆತು.  ಇದು ಮಾತ್ರವಲ್ಲ, ಗೋಧ್ರಾ ಘಟನೆಯ ಸಂದರ್ಭಲ್ಲಿಯೂ, ರಾಜದೀಪ್ ಸರ್ದೇಸಾಯಿ ಹಾಂಗಿಪ್ಪ  ವರದಿಗಾರರು ಅತ್ಯಂತ ಮುತುವರ್ಜಿ ವಹಿಸಿ ಮೋದಿಗೆ  ಕೆಟ್ಟ ಹೆಸರು ಬಪ್ಪ ಹಾಂಗೆ ಆದಷ್ಟು  ಪ್ರಯತ್ನ ಮಾಡಿದವು.  ತಮ್ಮ ವಾಹಿನಿಯ ಪಾಶ್ಚಾತ್ಯ ಒಡೆಯರುಗಳ ಖುಷಿ ಪಡಿಸದ್ರೆ ಜೀವನಲ್ಲಿ ಮುಂದೆ ಬಪ್ಪದಾದರೂ ಹೇಂಗೆ ?

ಈ ಎಲ್ಲಾ ವಿಷಯಂಗಳಲ್ಲಿ ಇಪ್ಪ ಸಾಮಾನ್ಯ ಅಂಶವ ಗಮನಿಸಿರೆ,  ಹಿಂದೂಗಳ  ಅವಸಾನಕ್ಕೆ ಹಿಂದೂಗಳೇ   ಅತ್ಯಂತ ಶ್ರದ್ಧೆಂದ, ಪಣತೊಟ್ಟು, ಕಟಿಬದ್ಧರಾಗಿ ಕೆಲಸ ಮಾಡ್ತಾ ಇಪ್ಪದು ಸ್ಪಷ್ಟ ಆವುತ್ತು.    ಜಗತ್ತಿನ ಒಂದೇ ಒಂದು ಸಂಪೂರ್ಣ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ನಮ್ಮ ಕಣ್ಣ ಮುಂದೆ ಕುಸಿದು ಹೋತು.  ಭಾರತ ದೇಶವುದೇ ಇದೇ ಹಾದಿಲಿ ಹೋವುತ್ತಾ ಇದ್ದು.   ನಮ್ಮ ದೇಶಲ್ಲಿ ಅಲ್ಪಸಂಖ್ಯಾತರ ಓಲೈಕೆ ಎಷ್ಟು ಆವುತ್ತಾ ಇದ್ದು ಹೇಳುದರ ಮೇಲೆ ಬೆಳಕು ಚೆಲ್ಲುವ  ಕೆಳಾಣ ಅಂಕಿ-ಅಂಶವ ನೋಡಿರೆ, ನಿಜಕ್ಕೂ ಗಾಬರಿ  ಆವುತ್ತು.  

                                                                       ೧೯೪೭                        ಈಗ
ಪಾಕಿಸ್ತಾನ   (ಹಿಂದೂ ಜನಸಂಖ್ಯೆ)                               ೨೭%                        ೧%
ಬಾಂಗ್ಲಾದೇಶ (ಹಿಂದೂ ಜನಸಂಖ್ಯೆ)                              ೩೦%                        ೭%
ಭಾರತ   (ಮುಸ್ಲಿಮ್ ಜನಸಂಖ್ಯೆ)                                 ೬%                          ೧೯%

ಸರಿಯಾದ ಜನಗಣತಿ ಮಾಡಿರೆ, ನಮ್ಮ ದೇಶದ "ಅವಿಭಾಜ್ಯ ಅಂಗ"ವಾದ ಕಾಶ್ಮೀರಲ್ಲಿಯೂ  ಮೇಲೆ ಕಂಡು ಬಪ್ಪ ಪರಿಸ್ಥಿತಿಯೇ ಇಕ್ಕು.   ಸದ್ಯಕ್ಕೆ, ಅಲ್ಪಸಂಖ್ಯಾತರ ಸಾಂದ್ರತೆ  ಅತ್ಯಂತ ಹೆಚ್ಚು ಇಪ್ಪ ಕೆಲವೇ ರಾಜ್ಯಂಗಳಲ್ಲಿ   ಇದರ    ಪರಿಣಾಮ ಕಾಣ್ತು.    ಆದರೆ, ಕ್ರಮೇಣ ಇದು ದೇಶವ್ಯಾಪಿಯಾಗಿ ಹರಡಿ ಹಿಂದೂಗೊ ತಮ್ಮ ನಾಡಿಲ್ಲೇ ಪರಕೀಯರಾಗಿ, ಸಂತ್ರಸ್ತರಪ್ಪ ದಿನ ದೂರ ಇಲ್ಲೆ.  ಯಾರೋ ಒಂದಿಬ್ಬರು ಮುಸ್ಲಿಮ್  ಸ್ನೇಹಿತರಿಪ್ಪ ನಮ್ಮವೇ,  ಮುಸ್ಲಿಮರೆಲ್ಲಾ ಉಗ್ರಗಾಮಿಗಳಲ್ಲ ಹೇಳುವ ವಾದವ ಕೂಡ್ಳೇ ಮಂಡಿಸುತ್ತವು.  ಅವರಲ್ಲಿ  ರಾಷ್ಟ್ರೀಯತೆಯ ಭಾವನೆಯ ಕೊರತೆ ಇದ್ದು, ಇದು ಗಂಭೀರ  ವಿಷಯ ಹೇಳುದು ಯಾಕೋ ಇಂತವಕ್ಕೆ ಮನದಟ್ಟು  ಆವುತ್ತೇ ಇಲ್ಲೆ.  

ಯಾವ ದೇಶವೂ ತನ್ನ ಸಮಸ್ತ ಪ್ರಜೆಗಳ  ಪ್ರಶ್ನಾತೀತವಾದ ರಾಷ್ಟ್ರೀಯ ಬದ್ಧತೆ ಇಲ್ಲದ್ದೆ ಮುಂದುವರಿದ ಉದಾಹರಣೆ ಇಲ್ಲೆ. ಸರ್ವ ಧರ್ಮ ಸಹಿಷ್ಣುಗಳಾಗಿ, ಪ್ರಜಾ ತಂತ್ರ ವ್ಯವಸ್ಥೆಯ ಪಾಲಿಸುವ ಎಲ್ಲಾ ಮುಂದುವರಿದ ದೇಶಂಗಳಲ್ಲಿಯೂ, ಒಂದು ಸಮಾನ ನಾಗರಿಕ ಸಂಹಿತೆ ಅನ್ವಯಿಸುತ್ತು. ಹೇಳಿರೆ, ದೇಶದ ಪ್ರಜೆಗೊಕ್ಕೆಲ್ಲಾ ಒಂದೇ ಕಾನೂನು. ಭಾರತ ಮಾತ್ರ ಇದಕ್ಕೆ ಅಪವಾದ. ಇಲ್ಲಿಯ ಪ್ರಧಾನ ಮಂತ್ರಿಯ ಪ್ರಕಾರ,  ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಂಗೆ ಪ್ರಥಮ ಅಧಿಕಾರ ಇಪ್ಪದಡ !  ಹೀಂಗಿಪ್ಪ ಢೋಂಗಿ, ದಂಡ-ಪಿಂಡ ರಾಜಕಾರಣಿಗಳಿಂದ ಸಮಾಜಕ್ಕೆ ಯಾವಾಗ ಮುಕ್ತಿ ? ಬಹುಷಃ ಇಂತಹವರ  ಕುಟುಂಬದ ಮುಂದಿನ  ತಲೆಮಾರಿನವು ಬಲಾತ್ಕಾರದ ಮತಾಂತರಕ್ಕೆ ಬಲಿಯಾಗಿ ತಮ್ಮ ಪೂರ್ವಜರಿಂಗೆ ಶಾಪ ಹಾಕುವ ಕಾಲ ಸೃಷ್ಟಿ ಅಪ್ಪಂದ  ಮೊದಲು ಇವಕ್ಕೆ ಬಹಿಷ್ಕಾರ ಹಾಕೆಕ್ಕಾದ ಅನಿವಾರ್ಯತೆ ಇದ್ದು.  ಮುಲಾಯಮ್, ಕರುಣಾನಿಧಿ, ಲಾಲೂ ಮತ್ತು ಕೋಂಗ್ರೇಸು ಹಾಗೂ ಕಮ್ಯುನಿಷ್ಟಿನ ಎಲ್ಲೋರನ್ನೂ ಸಾಮೂಹಿಕವಾಗಿ ಧಿಕ್ಕರಿಸಿ, ಸಕಾರಾತ್ಮಕವಾದ ಹಿಂದುತ್ವ ಮತ್ತು ರಾಷ್ಟ್ರೀಯವಾದವ ಪ್ರತಿಪಾದಿಸುವ ಮೋದಿ, ಜಯಲಲಿತಾರ ಹಾಂಗಿಪ್ಪ ರಾಜಕಾರಣಿಗೊಕ್ಕೆ ಹೆಚ್ಚಿನ ಬೆಂಬಲ ಸಿಕ್ಕೆಕ್ಕಾದ್ದು ಅತ್ಯಗತ್ಯ. 

ಒಟ್ಟಿಂಗೇ, ಹಿಂದೂಗಳ ಒಟ್ಟಾರೆ ಧೋರಣೆಲಿ ಬದಲಾವಣೆಯ ಅಗತ್ಯ ಇದ್ದು.  ಹಿಂದೂಗಳಲ್ಲಿ ಆಕ್ರಾಮಕ ಮನೋಭಾವ ಇಲ್ಲೆ ಹೇಳುವ ಒಂದು ಅಭಿಪ್ರಾಯ ಮೊದಲಿಂದಲೇ  ಇದ್ದು.  ಇದು ಸತ್ಯವೇ ಆದರೂ, ಇದರ ಬಗ್ಗೆ  ಬೇಜಾರ ಆವುತ್ತಿಲ್ಲೆ.  ಆದರೆ, ನಮ್ಮಲ್ಲಿ  ಸ್ವಾಭಿಮಾನದ ಕೊರತೆ ಇಪ್ಪದು ಅತ್ಯಂತ ಬೇಜಾರದ ಸಂಗತಿ.  ಪುರಾತನ ಕಾಲಂದಲೂ ಸಮೃದ್ಧ, ವೈಜ್ಹಾನಿಕ ಮತ್ತು ಕೆಲವೇ ಶಾಸ್ತ್ರೀಯ ಭಾಷೆಗಳ ಪೈಕಿ ಒಂದು ಹೇಳಿ ಗುರುತಿಸಿಗೊಂಡ ನಮ್ಮ ಹೆಮ್ಮೆಯ ಸಂಸ್ಕೃತ ಸತ್ತು ಹೋದ್ದದು,  ಈ ಭಾಷೆ ಆಧುನಿಕ ಕಾಲಕ್ಕೆ ಅಪ್ರಸ್ತುತ ಹೇಳುವ ಕಾರಣಂದ ಅಲ್ಲ.  ಇದಕ್ಕೆ ನಮ್ಮ ಅವಜ್ಞೆ, ಕೀಳರಿಮೆ ಮತ್ತು ಅಭಿಮಾನಶೂನ್ಯ ನಡವಳಿಕೆಯೇ ಕಾರಣ.   ಹಿಂದೂಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚು ಇಪ್ಪ ಪ್ರಮಾಣಲ್ಲಿಯೇ, ಅತಿ ಬುದ್ಧಿವಂತರೂ, ಕ್ರಾಂತಿಕಾರಿಗಳೂ, ನಿರೀಶ್ವರವಾದಿಗಳೂ, ನಿರ್ಲಿಪ್ತರೂ, ನಿರಾಸಕ್ತರೂ ಜಾಸ್ತಿ ಇದ್ದವು.   ಅಲ್ಲದ್ದೆ, ನಮ್ಮಲ್ಲಿ ಧಾರಾಳವಾಗಿಪ್ಪ ಪರಸ್ಪರರ ಕಾಲು ಎಳೆವ ಸಂಪ್ರದಾಯ ನಮ್ಮ ಅಧೋಗತಿಗೆ ಇನ್ನೊಂದು ಕಾರಣ.  ಈ ಕೆಲವು ಕಾರಣಂಗಳಿಂದಾಗಿಯೇ ಹಿಂದೂಗೊ ಬಹುಸಂಖ್ಯಾತರಾಗಿದ್ದರೂ, ಸದಾ ಬೇರೆಯವರ ಕೃಪೆಲಿ ಬದುಕ್ಕಾಗಿಪ್ಪದು. 

ಚರಿತ್ರೆಯ ಘಟನೆಗಳ ಬಗ್ಗೆ ಒಂದು ದೃಷ್ಟಿ ಹಾಯಿಸಿದರೆ, ಈ ಹಿಂದೆ ನಡೆದ ಯಾವುದೇ ಸಾಮಾಜಿಕ ಕ್ರಾಂತಿಯ ಮೊದಲು ಅಲ್ಲಿಯ ಪರಿಸ್ಥಿತಿ ಅಸಹನೀಯ ಹೇಳುವ ಮಟ್ಟಕ್ಕೆ ಇಳಿದಿತ್ತು ಹೇಳುದು ಕಾಣ್ತು. . ಹಿಂದೂಗಳಲ್ಲಿ ಸಹಜವಾಗಿ ಹೇರಳವಾಗಿಪ್ಪ ಸಹನೆ, ಸಹಜೀವನದ ಸದ್ಭುದ್ದಿಯ ದುರುಪಯೋಗ ಪಡಿಸಿಗೊಂಡು  ವಿಪರೀತ ಪರೀಕ್ಷೆ ಮಾಡಿರೆ,  ಸದ್ಯಕ್ಕೆ  ಸುಪ್ತವಾಗಿಪ್ಪ ಆಕ್ರೋಶ ವಿಪರೀತ  ಕೆರಳಿ ನಮ್ಮ ಸಮಾಜಲ್ಲಿ ಕ್ರಾಂತಿಕಾರಿಯಾದ ಬದಲಾವಣೆ ಆದರೂ ಆಶ್ಚರ್ಯ ಇಲ್ಲೆ. 

- ಬಾಪಿ